ಕಸಾಯಿಖಾನೆಗೆ ಸಾಗಿಸುತ್ತಿದ್ದ 74 ಎಮ್ಮೆ ಹಾಗೂ ಹಸುಗಳ ರಕ್ಷಣೆ

ತುರುವೇಕೆರೆ: 

     ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಸುಮಾರು 74 ಎಮ್ಮೆ ಹಾಗೂ ಹಸುಗಳನ್ನು ಪಟ್ಟಣದ ಪೊಲೀಸರು ರಕ್ಷಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ತಾಲೂಕಿನ ಚಿಕ್ಕೋನಹಳ್ಳಿ ಗೇಟ್ ಬಳಿಯಲ್ಲಿ 3 ಕಂಟೈನರ್‍ನಲ್ಲಿ ತುಂಬಿದ್ದ ಎಮ್ಮೆ, ಹಸುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿಯನ್ನದಾರಿಸಿ ಪಟ್ಟಣದ ಪೊಲೀಸರು ಮೂರು ಲಾರಿಗಳನ್ನು ತಡದು ತಪಾಸಣೆ ಮಾಡಿದ್ದಾಗ ಅಕ್ರಮವಾಗಿ ಸುಮಾರು 74 ಎಮ್ಮೆ, ಹಸುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕೂಡಲೇ ಮೂರು ಲಾರಿಗಳನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ಎಮ್ಮೆ , ಹಸುಗಳನ್ನು ಮೈಸೂರಿನ ಗೋ ಶಾಲೆಗೆ ಸುರಕ್ಷಿತವಾಗಿ ಸಾಗಿಸಲಾಗಿದೆ.

 

(Visited 13 times, 1 visits today)

Related posts

Leave a Comment