ಕೆಎಸ್‍ಆರ್‍ಟಿಸಿ : ನಕಲಿ ನೇಮಕಾತಿ ಜಾಲದ ಬಗ್ಗೆ ಎಚ್ಚರ

ತುಮಕೂರು:

      ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ತಾಂತ್ರಿಕ ಸಹಾಯಕ, ಭದ್ರತಾ ರಕ್ಷಕ, ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಕೋವಿಡ್-19 ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲಾಗಿದ್ದು, ಪ್ರಸ್ತುತ ನಿಗಮದ ಯಾವುದೇ ನೇಮಕಾತಿ ಆದೇಶವನ್ನು ನೀಡುತ್ತಿಲ್ಲ. ಆದರೂ ವಂಚಕರು ಕೆಲವು ಉದ್ಯೋಗಾಕಾಂಕ್ಷಿಗಳಿಗೆ ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿರುವುದು ನಿಗಮದ ಗಮನಕ್ಕೆ ಬಂದಿದೆ.

      ಉದ್ಯೋಗಾಂಕಾಕ್ಷಿಗಳು ವಂಚಕರು ನೀಡುವ ನಕಲಿ ನೇಮಕಾತಿ ಆದೇಶದ ಆಮಿಷಗೊಳಗಾಗಬಾರದು. ನೇಮಕಾತಿ ಸಂಬಂಧಿತ ವಿಷಯಗಳ ಬಗ್ಗೆ ನಿಗಮದ ಅಧಿಕೃತ ವೆಬ್‍ಸೈಟ್  www.ksrtcjobs.karnataka.gov.in ನಲ್ಲಿ ನೋಡಬಹುದು. ಇಂತಹ ಆಮಿಷಗಳು ಕಂಡುಬಂದಲ್ಲಿ ಹತ್ತಿರದ ಪೆÇಲೀಸ್ ಠಾಣೆಗೆ ದೂರು ದಾಖಲಿಸಬೇಕು ಎಂದು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(Visited 4 times, 1 visits today)

Related posts

Leave a Comment