ಕೌಟುಂಬಿಕ ಕಲಹ ವ್ಯಕ್ತಿ ಆತ್ಮಹತ್ಯೆ

ಕೊರಟಗೆರೆ:

      ಕೌಟುಂಬಿಕ ಕಲಹದಿಂದ ಮನನೊಂದ ವ್ಯಕ್ತಿಯೊಬ್ಬ ತನ್ನ ತೋಟದ ಮನೆಯ ಮುಂದಿನ ನೀಲಗಿರಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೋಮವಾರ ರಾತ್ರಿ ನಡೆದಿದೆ.

      ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಪಂ ವ್ಯಾಪ್ತಿಯ ಸಿರಿಗೋನಹಳ್ಳಿ ತಾಂಡದ ವಾಸಿಯಾದ ಶ್ಯಾಮನಾಯ್ಕನ ಮಗನಾದ ಪರಮೇಶನಾಯ್ಕ(27) ಆತ್ಮಹತ್ಯೆಗೆ ಶರಣಾದ ದುರ್ದೈವಿ.

      ಮೃತ ಪರಮೇಶ್ ತನ್ನ ಕುಟುಂಬದಲ್ಲಿ ಕಳೆದ ನಾಲ್ಕೈದು ವಾರಗಳಿಂದ ಕೌಟುಂಬಿಕ ಕಲಹ ಉಂಟಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತನ್ನ ಮನೆಯ ಮುಂಭಾಗದ ನಿಲಗಿರಿ ಮರಕ್ಕೆ ಹಗ್ಗ ಹಾಕಿಕೊಂಡು ಆತ್ಮಹತ್ಯೆ ಹಾಕಿಕೊಂಡಿರುವ ಹಿನ್ನಲೆಯ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.  

      ಸ್ಥಳಕ್ಕೆ ಸಿಪಿಐ ಮುನಿರಾಜು ಮತ್ತು ಪಿಎಸೈ ಮಂಜುನಾಥ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ವ್ಯಕ್ತಿಯ ತಾತನ ದೂರಿನ ಮೇಲೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಅನುಮಾನಸ್ಪದ ಸಾವಿನ ಪ್ರಕರಣ ದಾಖಲಾ

(Visited 6 times, 1 visits today)

Related posts