ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತನ ಸಾವು

 ತುಮಕೂರು : 

      ನಗರ ಪೊಲೀಸ್ ಠಾಣಾ ವ್ಯಾಪ್ತಿ ಬಿ.ಎಸ್.ಎನ್.ಎಲ್. ಕಛೇರಿ ಮುಂಭಾಗ ಅಸ್ವಸ್ಥನಾಗಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಜನವರಿ 13ರಂದು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಜನವರಿ 24ರಂದು ವ್ಯಕ್ತಿಯು ಮೃತಪಟ್ಟಿದ್ದು, ಈತನ ವಾರಸುದಾರರ ಬಗ್ಗೆ ಮಾಹಿತಿಯಿರುವುದಿಲ್ಲ. ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ.

      ಮೃತ ವ್ಯಕ್ತಿಯು ಚಿಕಿತ್ಸೆ ಪಡೆಯುವಾಗ ತನ್ನ ಹೆಸರು ಗುಂಡಪ್ಪ ಬಿನ್ ಬಸವರಾಜು, 70 ವರ್ಷ ವಯಸ್ಸು, ಕಡೂರು ತಾಲೂಕು, ಪಂಚನಹಳ್ಳಿ ಗ್ರಾಮದ ವಾಸಿ ಎಂದು ತಿಳಿಸಿದ್ದಾನೆ.

     ಸುಮಾರು 150 ಸೆ.ಮೀ ಎತ್ತರ, ಬಡಜಕಲು ಶರೀರ, ಎಣ್ಣೆಗೆಂಪು ಮೈಬಣ್ಣ ಹೊಂದಿರುವ ಮೃತನ ಮೈ ಮೇಲೆ ನೀಲಿ ಬಣ್ಣದ ತುಂಬು ತೋಳಿನ ಜೀನ್ಸ್ ಷರ್ಟ್ ಇರುತ್ತದೆ. ಈತನ ವಾರಸುದಾರರು ಯಾರಾದರೂ ಇದ್ದಲ್ಲಿ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮನವಿ ಮಾಡಿದ್ದಾರೆ.

 

(Visited 6 times, 1 visits today)

Related posts

Leave a Comment