ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕೊಲೆ : ಆರೋಪಿಗಳ ಮೇಲೆ ಫೈರಿಂಗ್

ರಾಮನಗರ :

      ಜೆಡಿಎಸ್ ನ ರಾಜ್ಯ ಎಸ್ಸಿ, ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ಕೊಲೆ ಪ್ರಕರಣದ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಕನಕಪುರ ತಾಲೂಕಿನ ಸಾತನೂರು ಬಳಿ ನಡೆದಿದೆ. 

       ಕೊಲೆ ಆರೋಪಿಗಳಾದ ರಾಮ (21) ಮತ್ತು ದೀಪು (27) ಎಂಬುವರ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದು, ಇಬ್ಬರು ಆರೋಪಿಗಳ ಕಾಲಿನ ಭಾಗಕ್ಕೆ ಪೊಲೀಸರು ಗುಂಡು ಹಾರಿಸಿದ್ದಾರೆ.

      ಪೊಲೀಸರ ನಿದ್ದೆಗೆಡಿಸಿದ್ದ ಆರೋಪಿಗಳ ಸುಳಿವಿನ ಮಾಹಿತಿ ಮೇರೆಗೆ ತಡರಾತ್ರಿ ಪೊಲೀಸರು ತೋಟಹಳ್ಳಿ ಬಳಿಯ ಪೈಪ್​ಲೈನ್​ನಲ್ಲಿ ಕಾರ್ಯಾಚರಣೆ ಮಾಡಿದ್ದಾರೆ. ಈ ವೇಳೆ ಸಿಕ್ಕಿಬಿದ್ದ ಆರೋಪಿಗಳು ಮತ್ತೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ. ವಿಧಿಯಿಲ್ಲದೇ ಪೊಲೀಸರು ಫೈರ್​ ಮಾಡಿದ್ದಾರೆ. 

     ನವೆಂಬರ್ 11 ರಂದು ಕನಕಪುರದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ತೋಟಹಳ್ಳಿ ಬಳಿ  ಮುಸ್ಲಿಂ ಬ್ಲಾಕ್ ನಲ್ಲಿ ರಾಜ್ಯ ಜೆಡಿಎಸ್ ಎಸ್ಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್ ರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಡ್ಯಾಗರ್ ನಿಂದ ಇರಿದು ಕೊಲೆ ಮಾಡಿ ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದರು.

(Visited 14 times, 1 visits today)

Related posts