ತುಮಕೂರು: ನಾಳೆ ನಗರಕ್ಕೆ ಸಿಎಂ ಆಗಮನ : ವಾಹನಗಳಿಗೆ ಅಮಾನಿಕೆರೆ ಬಳಿ ಪಾರ್ಕಿಂಗ್ ವ್ಯವಸ್ಥೆ!

ತುಮಕೂರು:

     ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ನವೆಂಬರ್ 14 ರಂದು ಮಧ್ಯಾಹ್ನ 12 ಗಂಟೆಗೆ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿರುವ 66ನೇ ಅಖಿಲ ಭಾರತ ಸಹಕಾರಿ ಸಪ್ತಾಹ 2019ರ ಸಮಾರಂಭಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ವಾಹನಗಳಿಗೆ ನಗರದ ಅಮಾನಿಕೆರೆ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

     ಗುಬ್ಬಿ, ಶಿರಾ, ಕುಣಿಗಲ್, ಕೊರಟಗೆರೆ ತಾಲ್ಲೂಕಿನಿಂದ ಕಾರ್ಯಕ್ರಮಕ್ಕೆ ಆಗಮಿಸುವ ಬಸ್ಸುಗಳು ಹಾಗೂ ಇತರೆ ವಾಹನಗಳು ಸಾರ್ವಜನಿಕರನ್ನು ಜೂನಿಯರ್ ಕಾಲೇಜು ಮೈದಾನದಲ್ಲಿ ಇಳಿಸಿ ನಂತರ ಶಂಕರಮಠ-ಎಸ್.ಎಸ್.ಸರ್ಕಲ್-ಕೋತಿತೋಪು ಮಾರ್ಗವಾಗಿ ಹಾಗೂ ಬೆಂಗಳೂರು ಮಾರ್ಗದಿಂದ ಆಗಮಿಸುವ ಬಸ್ಸುಗಳು ಸಾರ್ವಜನಿಕರನ್ನು ಶಂಕರಮಠದ ಬಳಿ ಇಳಿಸಿ ನಂತರ ಟೌನ್‍ಹಾಲ್-ಅಶೋಕ ರಸ್ತೆ-ಕೋಡಿ ಸರ್ಕಲ್ ಮೂಲಕ ಅಮಾನಿಕೆರೆ ಬಳಿ ಪಾರ್ಕಿಂಗ್ ಮಾಡಬೇಕು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

(Visited 8 times, 1 visits today)

Related posts

Leave a Comment