ತುಮಕೂರು : 37 ಮಂದಿಗೆ ಕೋವಿಡ್-19 ಸೋಂಕು!!

ತುಮಕೂರು

     ಜಿಲ್ಲೆಯಲ್ಲಿ ಇಂದು 37 ಹೊಸ ಕೋವಿಡ್-19 ಪ್ರಕರಣ ದೃಢಪಟ್ಟಿದ್ದು, ಒಟ್ಟು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 813 ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ನಾಗೇಂದ್ರಪ್ಪ ತಿಳಿಸಿದ್ದಾರೆ.

      ಜಿಲ್ಲೆಯಲ್ಲಿ ತುಮಕೂರು ತಾಲ್ಲೂಕಿನಲ್ಲಿ 20, ಪಾವಗಡ-03, ಗುಬ್ಬಿ-3, ಕುಣಿಗಲ್-02 ಮಧುಗಿರಿ-1, ಶಿರಾ-06, ತಿಪಟೂರು-02 ಮಂದಿ ತಾಲೂಕಿನಲ್ಲಿ ಒಟ್ಟು 78 ಜನರಲ್ಲಿ ಕೋವಿಡ್-19 ಸೋಂಕಿರುವುದು ದೃಢಪಟ್ಟಿದೆ.

     ಜಿಲ್ಲಾಸ್ಪತ್ರೆಯಿಂದ 25 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು, ಈವರೆಗೆ 436 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

     ಜಿಲ್ಲೆಯಲ್ಲಿ ಒಟ್ಟು 349 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ 28 ಸಾವನ್ನಪ್ಪಿದ್ದು, ಮಂಗಳವಾರ-02 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.

(Visited 5 times, 1 visits today)

Related posts

Leave a Comment