ಪಾವಗಡ ಪುರಸಭೆಯ 2020-21ನೇ ಸಾಲಿನ ಆಯ-ವ್ಯಯ ಮಂಡನೆ

ಪಾವಗಡ :

      ಪಟ್ಟಣದ ಪುರಸಭೆಯ 2020-21 ನೇ ಸಾಲಿನ ಆಯ-ವ್ಯಯ ಮಂಡನೆಯಾಗಿದ್ದು, 58 ಲಕ್ಷದ 87 ಸಾವಿರದ ಉಳಿತಾಯ ಬಜೆಟ್‍ನ್ನು ಪುರಸಭಾ ಆಡಳಿತಾಧಿಕಾರಿ ಹಾಗೂ ಮಧುಗಿರಿ ಉಪ ವಿಭಾಗಾಧಿಕಾರಿ ಡಾ.ನಂದಿನಿ ದೇವಿ ಮಂಡಿಸಿದರು.

      ಗುರುವಾರ ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ವಾರ್ಷಿಕವಾಗಿ 569.72 ಕೋಟಿ ಬಜೆಡ್ ಮಂಡಿಸಿ, ಇದರಲ್ಲಿ 510.85 ಕೋಟಿ ವೆಚ್ಚವಾಗಿ 58.87 ಲಕ್ಷ ಪುರಸಭೆಯ ಉಳಿತಾಯವಾಗಿದೆ ಎಂದು ತಿಳಿಸಿ ಮಾತನಾಡಿದ ಅವರು, ಸ್ವಯಂ ಘೋಷಿತ ಆಸ್ತಿ, ಕಟ್ಟಡ ಬಾಡಿಗೆ, ನೀರಿನ ತೆರಿಗೆ, ದಿನವಹಿ, ಮಾರ್ಕೆಟ್‍ವಹಿ ಲೇಔಟ್‍ಗಳ ಅಭಿವೃದ್ಧಿ ಸೇರಿದಂತೆ ಪುರಭೆಗೆ ವಿವಿಧ ಆದಾಯ ಮೂಲಗಳಿಂದ 5.ಕೋಟಿ 69 ಲಕ್ಷ್ಮ 72 ಸಾವಿರ ಆದಾಯ ಬಂದಿದ್ದು, ಕಚೇರಿ ನಿರ್ವಹಣಿ, ಆರೋಗ್ಯ, ಶುದ್ಧ ಕುಡಿಯುವ ನೀರು, ವಿದ್ಯುತ್, ಬೀದಿ ದ್ವೀಪ ನಿರ್ವಹಣಿ, ಅದ್ಯಕ್ಷ ಉಪಾಧ್ಯಕ್ಷರ ಗೌರವಧನ, ವಾಹನ ಬಾಡಿಗೆ, ಪೌರ ಕಾರ್ಮಿಕರ ವಿಶೇಷ ಭತ್ಯೆ, ಕಛೇರಿಯ ವೆಚ್ಚ, ಪರಿಶಿಷ್ಠ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ, ಅಂಗವಿಕಲರ ಕ್ಷೇಮಾಭಿವೃದ್ದಿ ನಿಧಿ, ಕ್ರೀಡಾ ಕ್ಷೇಮಾಭಿವೃದ್ದಿ ನಿಧಿ ಸೇರಿದಂತೆ 5ಕೋಟಿ 10 ಲಕ್ಷ್ಮ 85 ಸಾವಿರ ವಾರ್ಷಿಕ ವೆಚ್ಚವಾಗಲಿದೆ ಎಂದರು.

      ಮುಖ್ಯಾಧಿಕಾರಿ ಜಿ.ನವೀನ್ ಚಂದ್ರ ಮಾತನಾಡಿ, ಪಟ್ಟಣದಲ್ಲಿನ ಐತಿಹಾಸಿಕ ಕಟ್ಟಡಗಳ ರಕ್ಷಣೆ, ಹೊಸ ಬಸ್ ನಿಲ್ದಾಣದಲ್ಲಿ ಸ್ವಚ್ಚತೆ ಕಾಪಾಡುವುದು, ಪ್ರಮುಖ ರಸ್ತೆಗಳಲ್ಲಿ ಬೀದಿ ದ್ವೀಪ ಅಳವಡಿಸುವುದು, ಸರ್ಕಾರಿ ಆಸ್ಪತ್ರೆ ಆವರಣದ ಮುಂಭಾಗದಲ್ಲಿನ ಶೌಚಾಲಯ ಹಾಗೂ ಮುಖ್ಯ ರಸ್ತೆಗಳಲ್ಲಿ ನಿರ್ಮಾಣ ಮಾಡಲಾಗುವ ಅಂಗಡಿ ಮಳಿಗೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಮಾಡಿದರೆ ಮಾತ್ರ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗುವುದು ಎಂದು ತಿಳೀಸಿದರು.

      ಈ ಸಂದರ್ಭದಲ್ಲಿ ತಹಶೀಲ್ದಾರ್ ವರದರಾಜು, ಪುರಸಭೆ ಆರೋಗ್ಯಾಧಿಕಾರಿ ಷಂಶುದ್ದಾಹ, ಲೆಕ್ಕಾಧಿಕಾರಿ ಹರೀಶ್, ಉಪಸ್ಥಿತರಿದ್ದರು.

(Visited 9 times, 1 visits today)

Related posts

Leave a Comment