ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿಗೆ ಬೆಂಕಿ ಹಚ್ಚಿದ ದು‍ಷ್ಟರು

ವಿಜಯಪುರ :

       ಪ್ರೀತಿ ನಿರಾಕರಿಸಿದ್ದಕ್ಕೆ ಹಾಗೂ ಆ ವಿಷಯವನ್ನು ಪೋಷಕರಿಗೆ ತಿಳಿಸಿದ ಕಾರಣ ಅಪ್ರಾಪ್ತ ಬಾಲಕಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಧಾರುಣ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

      ಕೊಲೆಯಾದ ಬಾಲಕಿಯನ್ನು ರತ್ನಾಪುರ ಗ್ರಾಮದ ಪ್ರಾಜಕ್ತಾ ಬಲಭೀಮ ನರಳೆ (14) ಎಂದು ಗುರುತಿಸಲಾಗಿದೆ. ಶಂಕರ್ ಹಿಪ್ಪರಕರ, ಮೋಹನ್ ಎಡವೆ ಎಂಬ ಇಬ್ಬರು ಅಪ್ರಾಪ್ತೆಗೆ ಪ್ರೀತಿಸು ಎಂದು ಬೆನ್ನು ಬಿದ್ದಿದ್ದರು. ಶುಕ್ರವಾರ ಹೀಗೆ ಆಕೆಗೆ ಇಬ್ಬರೂ ಕಿರುಕುಳ ನೀಡಿದ್ದಾರೆ. ಮನೆಯಲ್ಲಿ ವಿಷಯ ತಿಳಿಸದಂತೆ ಬೆದರಿಕೆ ಹಾಕಿದ್ದರು. ಆದರೆ ಅಪ್ರಾಪ್ತೆ ಇವರ ಪ್ರೀತಿಯನ್ನು ನಿರಾಕರಿಸಿ ತನ್ನ ಪೋಷಕರಿಗೆ ಈ ವಿಷಯವನ್ನು ತಿಳಿಸಿದ್ದಳು.

       ಬಾಲಕಿ ಪೋಷಕರು ಪ್ರಾಜಕ್ತಳನ್ನು ಮರುದಿನ ಅಂದರೆ ಶನಿವಾರ ಶಾಲೆ ಬಿಡಿಸಿ ಮನೆಯಲ್ಲಿ ಇರಿಸಿಕೊಂಡಿದ್ದರು. ಇಬ್ಬರಿಗೂ ಮದುವೆಯಾಗಿದ್ರೂ, ಪ್ರಾಜಕ್ತ ಹಿಂದೆ ಬಿದ್ದಿದ್ದರು. ಪ್ರಾಜಕ್ತಾ ಶನಿವಾರ ಶಾಲೆಗೆ ಹೋಗದಿದ್ದಾಗ ಮನೆಯಲ್ಲಿ ವಿಷಯ ತಿಳಿಸಿದ್ದಾಳೆ ಎಂದು ತಿಳಿದ ಇಬ್ಬರು ಆರೋಪಿಗಳು ನಮ್ಮ ಮಗಳಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಬಾಲಕಿಯ ಪೋಷಕರು ಆರೋಪಿಸುತ್ತಿದ್ದಾರೆ.

      ಭಾನುವಾರ ಸಂಜೆ ಯಾರೂ ಇಲ್ಲದ ಸಮಯದಲ್ಲಿ ಬಾಲಕಿ ಮನೆಗೆ ಬಂದ ದುಷ್ಕರ್ಮಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆಕೆಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಸೋಮವಾರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

      ಶಂಕರ್ ಹಿಪ್ಪರಕರ, ಮೋಹನ್ ಎಡವೆ ಇಬ್ಬರಿಗೂ ಮದುವೆಯಾಗಿತ್ತು. ಆದರೂ ಪ್ರೀತಿಸುವಂತೆ ಬಾಲಕಿಯನ್ನು ಪೀಡಿಸುತ್ತಿದ್ದರು.  ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

 

(Visited 16 times, 1 visits today)

Related posts

Leave a Comment