ಪ್ಲಾಸ್ಟಿಕ್ ಹಾಗೂ ರಟ್ಟು ತುಂಬಿದ್ದ ಕೊಠಡಿಗೆ ಬೆಂಕಿ : ಸಂಪೂರ್ಣ ಭಸ್ಮ!!

ಮಧುಗಿರಿ:

      ಇಲ್ಲಿನ ಪುರಸಭಾ ಆವರಣದಲ್ಲಿರುವ ಈಜುಕೊಳ ಪಕ್ಕದಲ್ಲಿದ್ದ ಕೊಠಡಿಯಲ್ಲಿ ಪ್ಲಾಸ್ಟಿಕ್ ಮತ್ತು ರಟ್ಟುಗಳನ್ನು ತುಂಬಿದ ರೂಂನಲ್ಲಿ ಆಕಸ್ಮಿಕ ಬೆಂಕಿ ತಗಲಿ ಸಂಪೂರ್ಣ ಭಸ್ಮವಾಗಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ.

      ಈ ಅಗ್ನಿ ದುರಂತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಮುಖ್ಯಾಧಿಕಾರಿ ಅಮರನಾರಾಯಣ ಅಗ್ನಿಶಾಮಕ ಠಾಣೆಗೆ ದೂರವಾಣಿ ಕರೆ ಮಾಡಿದ್ದರಿಂದ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ವಾರಕ್ಕೊಮ್ಮೆ ಈ ತ್ಯಾಜ್ಯವನ್ನು ಖರೀದಿ ಮಾಡಿಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿತ್ತು. ವಿಲೇವಾರಿ ಮಾಡಬೇಕಾದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

(Visited 14 times, 1 visits today)

Related posts