ಮದುವೆ ಮಾಡದಕ್ಕೆ ತಂದೆಯನ್ನೇ ಕೊಂದ ಮಗ

ಮದುವೆ ಮಾಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಜನ್ಮ ನೀಡಿದ ತಂದೆಯನ್ನೇ ಕೊಲೆಗೈದ ಘಟನೆ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಇಂದು ಮೃತ ವ್ಯಕ್ತಿ ಸಣ್ಣಯ್ಯ ‌ {65) ವರ್ಷ ಎಂದು ತಿಳಿಯಲಾಗಿದೆ ಮೃತನ ಮಗ 30 ವರ್ಷಗಳಾದರೂ ನನಗೆ ಮದುವೆ ಮಾಡುತ್ತಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕುಡಿದು ಬಂದು ಮನೆಯಲ್ಲಿ ಮಲಗಿದ್ದ ತನ್ನ ತಂದೆಗೆ ಹಿಗ್ಗಾಮುಗ್ಗಾ ಬೈದು ಮನೆಯಲ್ಲಿ ಇದ್ದ ದೊಣ್ಣೆಯಿಂದ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಈ ಸಂಬಂಧ ತಾಯಮ್ಮ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಾಯಮ್ಮನಿಗೆ ಎರಡನೇಯ ಗಂಡ ಎಂದು ತಿಳಿದು ಬಂದಿದೆ ಸ್ಥಳಕ್ಕೆ ತಿಪಟೂರು ಡಿ ವೈ ಎಸ್ ಪಿ ಚಂದನ್ ಕುಮಾರ್ ಹಾಗೂ ಆರಕ್ಷಕ ವೃತ್ತ ನಿರೀಕ್ಷಕ ವೀಣಾ ಬೇಟೆ ನೀಡಿ ಪರಿಶೀಲಿಸಿದರು ಆರೋಪಿ ವೆಂಕಟೇಶ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ

(Visited 10 times, 1 visits today)

Related posts

Leave a Comment