ಮಧ್ಯವರ್ತಿಗಳ ಹಾವಳಿ ತಪ್ಪಿಸುವಂತೆ ಶಾಸಕ ಮಸಾಲ ಜಯರಾಮ್ ಎಚ್ಚರಿಕೆ

ಗುಬ್ಬಿ: 

????????????????????????????????????????????????????????????????????????????????????????????????????????????????????????????????????????????????????????????????????????????????????????????

      ಉಪನೋಂದಾಣಾಧಿಕಾರಿಗಳ ಕಚೇರಿ ಹಾಗೂ ತಾಲ್ಲೂಕು ಕಚೇರಿಯಲ್ಲಿ ನಡೆದಿರುವ ಭ್ರಷ್ಟಾಚಾರಕ್ಕೆ ಮಧ್ಯವರ್ತಿಗಳೇ ಕಾರಣ. ಕಚೇರಿಯಲ್ಲಿ ನಡೆಯಬೇಕಾದ ಕೆಲಸಗಳಿಗೆ ಮಧ್ಯವರ್ತಿಗಳ ಆದೇಶ ಮುಖ್ಯವಾಗಿದೆ. ಉಪನೋಂದಣಾಧಿಕಾರಿಗಳನ್ನು ಹತೋಟಿಯಲ್ಲಿಟ್ಟುಕೊಂಡಿರುವ ಮಧ್ಯವರ್ತಿಗಳ ಹಾವಳಿ ತಪ್ಪಿಸದಿದ್ದಲ್ಲಿ ಕಚೇರಿಗೆ ಬೀಗ ಹಾಕಿ ಉಗ್ರ ಹೋರಾಟ ನಡೆಯಲಿದೆ ಎಂದು ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಎಚ್ಚರಿಕೆ ನೀಡಿದರು.

      ಪಟ್ಟಣದ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದ ಶಾಸಕರು ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪೆಡ್ಡಿಂಗ್ ಇರುವ ಕಡತಗಳ ಪರಿಶೀಲನೆ ಮಾಡಲು ಸೂಚಿಸಿದರು.

      ಕಳೆದ ಎಂಟು ತಿಂಗಳಿಂದ ಸಿ.ಎಸ್.ಪುರ ಹೋಬಳಿಯ ರೈತರ ಕೆಲಸಗಳನ್ನು ಮಾಡದೇ ಮಧ್ಯವರ್ತಿ ಪತ್ರ ಬರಹಗಾರ ವಿಶ್ವಣ್ಣ ಅವರ ಆಣತಿಯಂತೆ ಕಡತವನ್ನು ಸ್ಥಗಿತ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಈ ಜತೆಗೆ ಹೊರಗುತ್ತಿಗೆ ಕೆಲಸಗಾರರು ಮಧ್ಯವರ್ತಿಗಳ ಕೆಲಸವಷ್ಟೇ ಮಾಡುತ್ತಾರೆ. ಇವರ ಮೇಲೆ ಕ್ರಮವಹಿಸಬೇಕು ಜತೆಗೆ ಉಪನೋಂದಣಾಧಿಕಾರಿಗಳ ಅಮಾನತು ಮಾಡಬೇಕು ಎಂದು ಮೇಲಾಧಿಕಾರಿಗಳಿಗೆ ಒತ್ತಾಯಿಸಿದರು.

      ಓರ್ವ ಉನ್ನತ ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಳ್ಳುವ ಮಧ್ಯವರ್ತಿ ವಿಶ್ವಣ್ಣ ಇಡೀ ಉಪನೋಂದಣಾಧಿಕಾರಿಗಳ ಕಚೇರಿ ಮತ್ತು ತಾಲ್ಲೂಕು ಕಚೇರಿಯ ಕೆಲ ಶಾಖೆಗಳಲ್ಲಿನ ಭ್ರಷ್ಟಾಚಾರಕ್ಕೆ ಮೂಲವಾಗಿದ್ದಾರೆ. ಇವರಿಂದ ಕಚೇರಿ ಮುಕ್ತಿಗೊಳಿಸಿ ಬಡವರು, ಮಧ್ಯಮ ವರ್ಗದ ಜನರನ್ನು ರಕ್ಷಿಸಬೇಕು ಎಂದು ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ಅವರಿಗೆ ತರಾಟೆಗೆ ತೆಗೆದುಕೊಂಡರು. ತಾಲ್ಲೂಕು ಕಚೇರಿಯಲ್ಲಿ ಯಾವ ಶಾಖೆಗೆ ಹೋದರು ಲಂಚಮಯವಾಗಿದೆ. ಕಚೇರಿ ಮುಂದೆ ಹೋಟೆಲ್ ದರ ಪಟ್ಟಿಯಂತೆ ಲಂಚ ಪಟ್ಟಿಯನ್ನು ನಿರ್ಮಿಸಿ ಇಂತಿಷ್ಟು ಹಣ ವಸೂಲಿ ಮಾಡಿ ಎಂದು ಗುಡುಗಿದರು.

      ಬಿಜೆಪಿ ಸರ್ಕಾರದಲ್ಲಿ ಇಂತಹ ಭ್ರಷ್ಟಾಚಾರದ ದೂರು ಸಹಿಸಲಾಗದು. ಸಿ.ಎಸ್.ಪುರ ಹೋಬಳಿಯ ಬಹುತೇಕ ಜನರು ತಿಂಗಳುಗಟ್ಟಲೇ ಅಲೆದಾಡಿದ್ದಾರೆ. ಮಧ್ಯ ವರ್ತಿಗಳ ಹಾವಳಿಗೆ ಹೈರಾಣಾದ ರೈತರು ನೇರ ಕಚೇರಿಗೆ ಹೋದಲ್ಲಿ ಕೆಲಸ ನಡೆಯುವುದಿಲ್ಲ. ಈ ಮಟ್ಟದ ಕೀಳು ವರ್ತನೆ ಸಿಬ್ಬಂದಿಗಳಲ್ಲಿ ಕಾಣುತ್ತಿದೆ. ಸ್ವತಃ ನನ್ನ ಜಮೀನು ಮಾರಾಟ ಮಾಡಿದ್ದ ಕಡತ 8 ತಿಂಗಳಿಂದ ಪೆಡ್ಡಿಂಗ್ ಇಟ್ಟಿದ್ದಾರೆ. ಕೇಳಿದರೆ ಮಧ್ಯವರ್ತಿ ವಿಶ್ವಣ್ಣನ ಹೆಸರು ಹೇಳುತ್ತಿರುವ ಅಧಿಕಾರಿಗಳ ವರ್ತನೆಗೆ ಏನೋ ಹೇಳಬೇಕು ತಿಳಿಯುತ್ತಿಲ್ಲ. ದಲ್ಲಾಳಿಯೊಬ್ಬನು ಇಡೀ ಉಪನೋಂದಣಾಧಿಕಾರಿಗಳ ಕಚೇರಿ ನಿಯಂತ್ರಿಸುತ್ತಿರುವುದು ಅಚ್ಚರಿ ಎನಿಸಿದೆ. ಈ ಬಗ್ಗೆ ಸರ್ಕಾರದ ಗಮನೆ ಸೆಳೆಯುತ್ತೇನೆ ಎಂದರು.

      ತಾಲ್ಲೂಕು ಕಚೇರಿಯಲ್ಲಿನ ಲಂಚಾವತಾರದ ಬಗ್ಗೆ ಸಾಕಷ್ಟು ದೂರುಗಳು ನನಗೆ ಮತ್ತು ಗುಬ್ಬಿ ಶಾಸಕರಿಗೆ ಬಂದಿದೆ. ಇಬ್ಬರೂ ಸೇರಿ ಶೀಘ್ರದಲ್ಲಿ ಕ್ರಮವಹಿಸುವಂತೆ ಸರ್ಕಾರಕ್ಕೆ ಆಗ್ರಹಿಸುತ್ತೇನೆ. ಒಂದು ವಾರದಲ್ಲಿ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಮತ್ತು ದಲ್ಲಾಳಿಯಾಗಿರುವ ಹೊರಗುತ್ತಿಗೆ ಸಿಬ್ಬಂದಿಗಳ ಅಮಾನತು ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಸಿ.ಎಸ್.ಪುರ ಹೋಬಳಿಯ ಜನತೆ ಮಾಡಲಿದ್ದಾರೆ ಎಂದು ತಹಸೀಲ್ದಾರ್ ಅವರಿಗೆ ಎಚ್ಚರಿಸಿದ ಶಾಸಕರು ಸರ್ಕಾರದ ಗಮನಕ್ಕೆ ತಂದು ಇಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುತ್ತೇನೆ. ಬಡ ಜನರಿಂದ ಸುಲಿಗೆ ಮಾಡುವ ಮಧ್ಯವರ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.

      ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದಯ್ಯ, ಕಿರಣ್ ಇತರರು ಇದ್ದರು.

(Visited 6 times, 1 visits today)

Related posts

Leave a Comment