ಮಾರಕ ಕೊರೊನಾ ವೈರಸ್‍ನಿಂದ ತುಮಕೂರು ಸುರಕ್ಷಿತ

ತುಮಕೂರು :

     ಮಾರಕ ಕೊರೊನಾ ವೈರಸ್ ನಿಂದ ತುಮಕೂರು ಸುರಕ್ಷಿತವಾಗಿದ್ದು ಸಾರ್ವಜನಿಕರು ಭಯ ಪಡಬೇಕಿಲ್ಲ ಆದರೆ ಎಚ್ಚರಿಕೆಯಿಂದ ಇರಬೇಕು ಎಂದು ಡಿಹೆಚ್ ಒ ಶಶಿಕಲಾ ಮನವಿ ಮಾಡಿದರು. 

      ಅವರು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗಾಗಿ ತೆರೆದಿರುವ ವಿಶೇಷ ಕೊಠಡಿಗೆ ಭೇಟಿ ನೀಡಿದ ನಂತರ ಮಾತನಾಡಿ ರಾಜ್ಯದಲ್ಲಿ ಬೆರಳಿಕೆಯಷ್ಟು ಪ್ರಕರಣಗಳಲ್ಲಿ ಮಾತ್ರ ಕೊರೊನಾ ವೈರಸ್ ಪತ್ತೆಯಾಗಿದ್ದು ನಮ್ಮ ಜಿಲ್ಲೆಗೆ ಕೊರೊನಾದಿಂದ ಸುರಕ್ಷಿತವಾಗಿದ್ದು ಒಂದುವೇಳೆ ಪತ್ತೆಯಾದಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂದರು.

      ತುಮಕೂರಿನ ಸಿದ್ಧಗಂಗಾ ಆಸ್ಪತ್ರೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸಿದ್ದು ಒಂದುವೇಳೆ ಕೊರಾನಾ ಸೊಂಕಿತರು ಆಸ್ಪತ್ರೆಗೆ ದಾಖಲಾದರೆ ಅವರಿಗೆ ಚಿಕಿತ್ಸೆ ನೀಡಲೆಂದೇ ಐಸೋಲೇಟೆಡ್ ಘಟಕ ತೆರೆದಿರುವುದು ಆಸ್ಪತ್ರೆಯ ಜನತ ಮೇಲಿಟ್ಟಿರುವ ಕಾಳಜಿಯನ್ನ ತೋರಿಸುತ್ತದೆ ಎಂದರು.

      ಸಿದ್ಧಗಂಗಾ ಆಸ್ಪತ್ರೆ ಎಂ.ಡಿ. ಡಾ.ಎಸ್.ಪರಮೇಶ್ ಮಾತನಾಡಿ ಕೊರೊನವೈರಸ್ ವಿರುದ್ಧ ಹೋರಾಡಲು ನಾವು ಸಜ್ಜಾಗಿದ್ದು ನಮ್ಮ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಚಿಕಿತ್ಸಾ ಸೌಕರ್ಯವುಳ್ಳ ಪ್ರತ್ಯೇಕ ಕೊಠಡಿಯನ್ನು ಮೀಸಲಿಟ್ಟಿದ್ದೆವೆ. ಪ್ರಸ್ತುತ ಜಗತ್ತು ಕೊರೊನಾ ವೈರಸ್ ನಿಂದ ತಲ್ಲಣಗೊಂಡಿದೆ ಎಲ್ಲೆಲ್ಲಿಯೂ ಆತಂಕ ಕಂಡು ಬರುತ್ತಿದೆ. ಇತ್ತೀಚಗೆ ರಾಜ್ಯದಲ್ಲಿಯೂ ಕೂಡ ಹಲವರಿಗೆ ಸೋಂಕು ಹರಡಿದೆ. ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡಲು ನಮ್ಮ ಆಸ್ಪತ್ರೆಯಲ್ಲಿ 24 ಗಂಟೆ ಕಾರ್ಯನಿರ್ವಹಿಸುವ ಹೆಲ್ಪ್ ಲೈನ್ ತೆರೆದಿದ್ದು ಜನರ ಆತಂಕವನ್ನು ಕಡಿಮೆಗೊಳಿಸಲು ನಿರಂತರ ಸೇವೆಯನ್ನು ನೀಡಲು ನಾವು ಬದ್ಧರಾಗಿದ್ದೇವೆ ಎಂದರು.

      ಸಿದ್ಧಗಂಗಾ ಆಸ್ಪತ್ರೆ ಸಿಇಓ ಡಾ.ಸಂಜೀವ್ ಕುಮಾರ್ ಮಾತನಾಡಿ ಕೊರೊನಾ ವೈರಸ್ ಕುರಿತು ಅರಿವು ಮೂಡಿಸುವುದು ಕೇವಲ ಸರ್ಕಾರ ಮಾತ್ರ ಕೆಲಸವಲ್ಲ ಖಾಸಗಿ ಆಸ್ಪತ್ರೆಗಳೂ ಕೂಡ ಈ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದ್ದು ನಮ್ಮ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂಧಿಗೆ ಈಗಾಗಲೇ ಕೊರೊನಾ ಕುರಿತು ತರಬೇತಿ ನೀಡಲಾಗಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿ 10 ಹಾಸಿಗೆಯುಳ್ಳ ಪ್ರತ್ಯೇಕ ಕೊಠಡಿಯನ್ನು ಕೊರೊನಾ ಸೋಂಕಿತರ ಚಿಕಿತ್ಸೆಗಾಗಿಯೇ ಮೀಸಲಿಡಲಾಗಿದೆ ಎಂದರು.

      ನಿರಂತರ ಮಾಹಿತಿಗೆ ಲೈನ್: ಸಿದ್ಧಗಂಗಾ ಆಸ್ಪತ್ರೆಯ ಮೈಕ್ರೋ ಬಯಾಲಿಜಿಸ್ಟ್ ಡಾ.ಕಿರಣ್ ನೇತೃತ್ವದಲ್ಲಿ ಆಸ್ಪತ್ರೆಯಲ್ಲಿ ಲೈನ್ ತೆರೆಯಲಾಗಿದೆ. ಸಾರ್ವಜನಿಕರು ಕೊರೊನಾವೈರಸ್ ಕುರಿತಾದ ಯಾವುದೇ ಗೊಂದಲ ಮಾಹಿತಿ ಚಿಕಿತ್ಸೆಗಾಗಿ ಆಸ್ಪತ್ರೆಯ ದೂರವಾಣಿ ಸಂಖ್ಯೆ: 0816-6602222,9148997918 ಕರೆಮಾಡಬಹುದಾಗಿದೆ.

(Visited 9 times, 1 visits today)

Related posts

Leave a Comment