ಮೈಸೂರಿನ ಮೃಗಾಲಯದಲ್ಲಿ ಹಾವು ಕಚ್ಚಿ ಚಿರತೆ ಸಾವು

ಮೈಸೂರು:

      ಹಾವು ಕಚ್ಚಿ 13 ವರ್ಷದ ಹೆಣ್ಣು ಚಿರತೆ (ಜಾಗ್ವಾರ್) ಮೃತಪಟ್ಟಿರುವ ಘಟನೆ ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ನಡೆದಿದೆ.

      ಮೃಗಾಲಯದಲ್ಲಿ ಚಿರತೆ (ಜಾಗ್ವಾರ್​) ಇರುವ ಸ್ಥಳಕ್ಕೆ ಹಾವು ನುಗ್ಗಿದೆ. ಆಗ ಆಕ್ರೋಶಗೊಂಡ ಚಿರತೆ ಹಾವಿಗೆ ಕಚ್ಚಿದೆ. ಈ ವೇಳೆ ರೊಚ್ಚಿಗೆದ್ದ ಹಾವು ಕೂಡ ಚಿರತೆಗೆ ಕಚ್ಚಿದೆ. ಹೀಗೆ ಚಿರತೆ ದಾಳಿಯಿಂದ ಗಾಯಗೊಂಡಿದ್ದ ಹಾವು ಮೃತಪಟ್ಟಿದೆ.

      ಇನ್ನು ಹಾವು ಕಡಿದಿದ್ದರಿಂದ ಗಾಯಗೊಂಡಿದ್ದ ಚಿರತೆಗೆ ಮೃಗಾಲಯದ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಚಿರತೆಯೂ ಮೃತಪಟ್ಟಿದೆ. ಈ ಚಿರತೆಯನ್ನು ದೆಹಲಿ ಮೃಗಾಲಯದಿಂದ ತರಲಾಗಿತ್ತು. ಈ ಬಗ್ಗೆ ಮೃಗಾಲಯದ ಸಿಇಓ ಅಜಿತ್ ಕುಲಕರ್ಣಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

(Visited 10 times, 1 visits today)

Related posts