ರೈತ ಮಹಿಳೆಯನ್ನು ಅವಮಾನಿಸಿದ ಮುಖ್ಯಮಂತ್ರಿ ರಾಜೀನಾಮೆ ನೀಡಲಿ : ಶಾಸಕ ಜಿ.ಬಿ. ಜ್ಯೋತಿಗಣೇಶ್

ತುಮಕೂರು:

       ರೈತ ಮಹಿಳೆಯ ಚಾರಿತ್ರ್ಯವನ್ನು ಪ್ರಶ್ನಿಸಿದ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರಿಗೆ ನೈತಿಕತೆ ಇದ್ದರೆ ಅವರು ಮೊದಲು ರಾಜಿನಾಮೆ ನೀಡಲಿ ಎಂದು ತುಮಕೂರು ನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಬಿ. ಜ್ಯೋತಿ ಗಣೇಶ್‍ರವರು ಕಿಡಿ ಕಾರಿದ್ದಾರೆ.

      ಅವರು ಬಿ.ಜೆ.ಪಿಯಿಂದ ತುಮಕೂರು ಟೌನ್ ಹಾಲ್ ಸರ್ಕಲ್‍ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತ ನಾಡುತ್ತಾ ಕಬ್ಬು ಬೆಳೆಗಾರರ ಹಣವನ್ನು ಕೊಡಿಸುವಂತೆ ಒತ್ತಾಯಿಸಿ ಬೆಳಗಾವಿಯ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿದ ರೈತ ಮಹಿಳೆಯ ಮೇಲೆ ತಮ್ಮ ಪೌರುಷದ ಮಾತನಾಡಿರುವುದು ಖಂಡನೀಯ ಇದನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ ಎಂದು ಕಿಡಿಕಾರಿದರು.

      ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್ ಮಾತನಾಡಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡುವ ಡೋಂಗಿ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ರೈತರನ್ನು ಗುಂಡಾಗಳು ಎಂದು ಕರೆದಿರುವುದು ರಾಜ್ಯದ ರೈತ ಸಮೂಹಕ್ಕೆ ಮಾಡಿದ ಅವಮಾನ ಎಂದು ತಿಳಿಸಿದರು.

      ಮಾಜಿ ವಿಧಾನ ಪರಿಷತ್ ಸದಸ್ಯರಾದ ಡಾ: ಹುಲಿನಾಯ್ಕರ್‍ರವರು ಮಾತನಾಡಿ ಉತ್ತರ ಕರ್ನಾಟಕದ ರೈತರ ಬವಣೆ ಮುಖ್ಯ ಮಂತ್ರಿ ಕುಮಾರಸ್ವಾಮಿಯವರಿಗೆ ಹೇಗೆ ತಿಳಿಯುತ್ತದೆ. ಕೇವಲ 3 ಜಿಲ್ಲೆಗಳಿಗೆ ಸೀಮಿತವಾದ ಮುಖ್ಯ ಮಂತ್ರಿ ರಾಜೀನಾಮೆ ನೀಡಬೇಕೆಂದರು.

      ರಾಜ್ಯ ರೈತ ಮೋಚಾ ಕಾರ್ಯದರ್ಶಿ ಬ್ಯಾಟರಂಗೇಗೌಡ ಮಾತನಾಡಿ ದೇವೇಗೌಡ ಕುಟುಂಬದವರನ್ನು ಯಾರು ಅನುಕರಿಸುತ್ತಾರೆಯೋ ಅವರ ಕುಟುಂಬಕ್ಕೆ ಯಾರು ಜೈಕಾರ ಹಾಕುತ್ತಾರೋ ಅಂತಹವರು ಮಾತ್ರ ರೈತರೆಂದು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿದಿದ್ದಾರೆ ಎಂದರು.

      ಈ ಪ್ರತಿಭಟನೆಯಲ್ಲಿನಗರ ಮಂಡಲು ಪ್ರಧಾನ ಕಾರ್ಯದರ್ಶಿ ಹೆಚ್.ಎಂ. ರವೀಶ್, ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯಕುಮಾರ್, ಟಿ.ಆರ್. ಸದಾಶಿವಯ್ಯ, ರೈತ ಮೋರ್ಚ ಜಿಲ್ಲಾಧ್ಯಕ್ಷ ಸ್ನೇಕ್ ನಂದೀಶ್ ಹಿರಿಯ ಮುಖಂಡರಾದ ಸತ್ಯಮಂಗಲ ಸದಣ್ಣ, ಗಂಗಸಂದ್ರ ಗುರು ಸಿದ್ದೇಗೌಡರು ಕೊಪ್ಪಳ ನಾಗರಾಜ್ ರವರು, ಇಂದ್ರಕುಮಾರ್ ರವರು, ಡಿ.ಆರ್. ಬಸವರಾಜು, ಶ್ರೀನಿವಾಸ್ ಅಣೇತೋಟ, ಮುನಿಯಪ್ಪ, ಜಯಪ್ರಕಾಶ್, ತರಕಾರಿ ಮಹೇಶ್, ಆದ್ಯ, ಶ್ರೀಮತಿಯರಾದ ಶೈಲ, ರಾಧಮ್ಮ, ವರಮಹಾಲಕ್ಷ್ಮೀ, ಭಾರತೀ ರಾಜ್, ಗೀತಾ ಶಿವಣ್ಣ, ವಿಜಯಲಕ್ಷ್ಮೀ, ಗೋಪಿ, ಎಂ.ಪಿ. ರಮೇಶ್, ಹನುಮಂತರಾಯಪ್ಪ, ಪುರುಷೋತ್ತಮ, ಬಸವರಾಜು, ಬಿ.ಜಿ. ಪಾಳ್ಯ, ಅರವಿಂದನಗರ ಮಂಜುನಾಥ, ರವಿಗಗೌಡ, ವೈ.ಟಿ. ರಾಜೇಂದ್ರ, ಟಿ.ಡಿ. ವಿನಯ್, ಮಹೇಶ್ ಬಾಬು, ವಿರುಪಾಕ್ಷಪ್ಪ, ಬಂಬು ಮೋಹನ್, ರಮೇಶ್ ಚಿಕ್ಕಪೇಟೆ, ಮಾರ್ಕೆಟ್ ನಾಗಣ್ಣ, ಶುಭರಮೇಶ್, ಮೂರ್ತಿ ಬಡ್ಡಿಹಳ್ಳಿ, ಲಿಂಗಣ್ಣ, ಎಲ್.ಐ.ಸಿ. ರಮೇಶ್ ಮುಗದುರ್, ವರದರಾಜು, ಶಂಭುಲಿಂಗಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.

(Visited 14 times, 1 visits today)

Related posts

Leave a Comment