ವೈಯಕ್ತಿಕ ದ್ವೇಷಕ್ಕೆ ಅಡಿಕೆ ಸಸಿಗಳು ಬಲಿ

ತುರುವೇಕೆರೆ:

      ತಾಲ್ಲೂಕಿನ ಬಾಣಸಂದ್ರ ಗ್ರಾಮದ ಮೂಡಲಗಿರಿಯಪ್ಪ ಎಂಬುವರ ಜಮೀನಿನಲ್ಲಿ ಬೆಳೆದಿದ್ದ 125 ಅಡಿಕೆ ಸಸಿಗಳನ್ನು ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕತ್ತರಿಸಿ ಹಾಕಿರುವ ಅಮಾನವೀಯ ಘಟನೆ ನೆಡೆದಿದೆ. 

      ಘಟನೆಯ ಬಗ್ಗೆ ವಿವರಿಸಿದ ಮೂಡಲಗಿರಿಯಪ್ಪನವರ ಮಕ್ಕಳಾದ ಶಿವಕುಮಾರ್ ಹಾಗೂ ಮಂಜುನಾಥ್ ನಮ್ಮ ತಂದೆ ನಮ್ಮ ಚಿಕ್ಕಪ್ಪಂದಿರ ನೆರವಿನೊಂದಿಗೆ ಪಿತ್ರಾರ್ಜಿ ಆಸ್ತಿಯಲ್ಲಿ ಅಡಿಕೆ ಸಸಿಗಳನ್ನು ಬೆಳೆದಿದ್ದರು. ನನ್ನ ತಂಗಿ ಪದ್ಮಾವತಿ ಗಂಡನ ಕುಮ್ಮಕ್ಕಿನಿಂದ ಅಡಿಕೆ ಸಸಿಗಳನ್ನು ಕತ್ತರಿಸಿ ಹಾಕುವ ಮೂಲಕ ವೈಯಕ್ತಿಕ ದ್ವೇಷ ಸಾಧಿಸಲು ಮುಂದಾಗಿದ್ದಾರೆಂದು ಆರೋಪಿಸಿದ್ದಾರೆ.

      ಘಟನೆ ಸ್ಥಳಕ್ಕೆ ತಂಡೋಪ ತಂಡವಾಗಿ ಆಗಮಿಸುತ್ತಿರುವ ರೈತಾಪಿಗಳು ಅಡಿಕೆ ಸಸಿಗಳನ್ನು ಕತ್ತರಿಸಿ ಹಾಕಿರುವ ಕ್ರಮವನ್ನು ಖಂಡಿಸುತ್ತಿದ್ದಾರೆ.ಈ ಕುರಿತು ದಂಡಿನಶಿವರ ಪೋಲೀಸರಿಗೆ ದೂರು ನೀಡುವುದಾಗಿ ಮೂಡಲಗಿರಿಯಪ್ಪನವರ ಮಕ್ಕಳಾದ ಮಂಜುನಾಥ್ ಹಾಗೂ ಶಿವಕುಮಾರ್ ತಿಳಿಸಿದ್ದಾರೆ,

(Visited 3 times, 1 visits today)

Related posts

Leave a Comment