ವ್ಯಕ್ತಿಯ ಅನುಮಾನಸ್ಪದ ಸಾವು

  ಚಿಕ್ಕನಾಯಕನಹಳ್ಳಿ:

      ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿ ರಸ್ತೆಯಲ್ಲಿ ಅನುಮಾನಸ್ಪದವಾಗಿ ಸತ್ತಿದ್ದು, ಇದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.

      ತಾಲ್ಲೂಕಿನ ಹಂದನಕೆರೆ ಹೋಬಳಿ ಹುಚ್ಚನಹಳ್ಳಿ ನಿವಾಸಿ ಧನಂಜಯ್ (26) ಎಂಬುವವರೇ ಸಾವಿಗೀಡಾಗಿರುವ ವ್ಯಕ್ತಿ. ಹಂದನಕೆರೆ ಹುಚ್ಚನಹಳ್ಳಿ ಸಮೀಪದ ಅರಳಿಮರದ ಬಳಿ ಬೈಕ್‍ನಲ್ಲಿ ಬರುತ್ತಿದ್ದ ಮೃತ ಧನಂಜಯ್ ಬಿದ್ದು ಸಂಶಯಾಸ್ಪದ ಸಾವು ಸಂಭವಿಸಿದೆ.

      ಸುದ್ದಿ ತಿಳಿದೊಡನೆ ಹಂದನಕೆರೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಸ್ಥಳದಲ್ಲಿದ್ದ ಹಿಡಿಕೋಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮೃತ ಧನಂಜಯ್ ಕೆ.ಇ.ಬಿ ವ್ಯಾನ್ ಡ್ರೈವರ್‍ಯಾಗಿ ಕೆಲಸ ನಿರ್ವಹಿಸುತ್ತಿದ್ದ ತಂದೆ ವೀರಭದ್ರಯ್ಯ ಸಾವನ್ನಪ್ಪಿದ ನಂತರ ಕುಟುಂಬದ ಜವಬ್ದಾರಿ ಇವನದ್ದಾಗಿತ್ತು ಮೃತನಿಗೆ ತಾಯಿ ಮತ್ತು ಅಕ್ಕ ಇದ್ದಾರೆ ಎಂದು ತಿಳಿದುಬಂದಿದೆ.

(Visited 10 times, 1 visits today)

Related posts

Leave a Comment