ಸಿಲಿಂಡರ್ ಸಾಗಾಟದ ಲಾರಿ ಸ್ಫೋಟ : ಚಾಲಕ ಸಜೀವ ದಹನ

ಶಿವಮೊಗ್ಗ:

      ಸಿಲಿಂಡರ್ ತುಂಬಿದ್ದ ಲಾರಿಯೊಂದು ಸಾಗರ ತಾಳಗುಪ್ಪ ಮಧ್ಯೆ ಇರುವ ಮುಂಡಿಗೆಹಳ್ಳಿಯ ಬಳಿ ಸ್ಫೋಟಗೊಂಡಿದ್ದು ಚಾಲಕ ಸಜೀವ ದಹನವಾಗಿರುವ ದುರ್ಘಟನೆ ಸಂಭವಿಸಿದೆ.

      ಇಂಡಿಯನ್ ಗ್ಯಾಸ್ ಕಂಪೆನಿಯ ಸಿಲಿಂಡರ್‌ಗಳನ್ನು ತುಂಬಿಕೊಂಡಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿದ್ದು, ಬೆಳಗಿನ ಜಾವ ನಾಲ್ಕೂವರೆ ಗಂಟೆ ವೇಳೆ ಈ ಅವಘಡ ನಡೆದಿದೆ ಎನ್ನಲಾಗಿದೆ.

      ಸಾಗರದಿಂದ ಕಾರ್ಗಲ್ ಕಡೆಗೆ ಸಿಲಿಂಡರ್ ಹೊತ್ತುಕೊಂಡು ಲಾರಿ ಸಂಚರಿಸುತಿತ್ತು. ಈ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿಬಿದ್ದಿದೆ. ಬಿದ್ದ ರಭಸಕ್ಕೆ 20ಕ್ಕೂ ಹೆಚ್ಚು ಸಿಲಿಂಡರ್ ಗಳು ಸ್ಫೋಟಗೊಂಡಿವೆ. ಸ್ಫೋಟದಿಂದ ಬೆಂಕಿ ಹತ್ತಿಕೊಂಡು ಚಾಲಕ ಸಜೀವವಾಗಿ ದಹನಗೊಂಡಿದ್ದಾನೆ.

       ಲಾರಿ ಸಂಪೂರ್ಣ ಭಸ್ಮವಾಗಿದ್ದು, ಚಾಲಕ ಯಾರು, ಲಾರಿಯಲ್ಲಿ ಎಷ್ಟು ಜನರಿದ್ದರು ಎನ್ನುವ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.ಲಾರಿಯ ನಂಬರ್ ಪ್ಲೇಟ್ ಸಹ ಹೊತ್ತಿ ಉರಿದ ಪರಿಣಾಮ ಮಾಲಕರು ಯಾರು ಎನ್ನುವುದು ತಿಳಿದು ಬಂದಿಲ್ಲ. ಚಾಲಕನ ಒಂದು ಮೃತದೇಹ ಮಾತ್ರ ಸದ್ಯ ಪತ್ತೆಯಾಗಿದೆ. ಸ್ಫೋಟದಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

(Visited 7 times, 1 visits today)

Related posts

Leave a Comment