ಹುಳಿಯಾರು :  ಲಾರಿ ಡಿಕ್ಕಿ ; ರೈತ ಸಾವು!!

ಹುಳಿಯಾರು : 

      ಟಿವಿಎಸ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಸವಾರ ರೈತನೋರ್ವ ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ಮುಕ್ತಿಧಾಮದ ಬಳಿ ಜರುಗಿದೆ.

      ಅಪಘಾತದಲ್ಲಿ ಮೃತನಾದ ದುರ್ಧೈವಿಯನ್ನು ಹುಳಿಯಾರು ಹೋಬಳಿಯ ಕುರಿಹಟ್ಟಿಯ ಮೈಲಾರಪ್ಪ (51) ಎಂದು ಗುರುತಿಸಲಾಗಿದೆ. ಇವರು ಹುಳಿಯಾರಿನಿಂದ ಮಾರ್ನಿಂಗ್ ಮಾರ್ಕೆಟ್‍ನಲ್ಲಿ ಟಮೋಟೊ ಮಾರಿಕೊಂಡು ಸ್ವಗ್ರಾಮ ಕುರಿಹಟ್ಟಿಗೆ ಹಿಂದಿರುಗುವಾಗ ಹಿರಿಯೂರು ಮಾರ್ಗವಾಗಿ ಬಂದ ತಮಿಳುನಾಡು ಮೂಲಕ ಲಾರಿ ಡಿಕ್ಕಿ ಹೊಡೆದು ಆತನ ಎರಡೂ ಕಾಲಿನ ಮೇಲೆ ಹರಿದಿದೆ.

      ಪರಿಣಾಮ ರೈತ ಮೈಲಾರಪ್ಪನ ಎರಡೂ ಕಾಲುಗಳು ನಜ್ಜುಗುಜ್ಜಾಗಿ ತೀರ್ವ ರಕ್ತಸ್ತ್ರಾವ ಆಗಿದೆ. ದಾರಿಹೋಕರು ಹುಳಿಯಾರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದರು. ನಂತರ ಕುಟುಂಬ ವರ್ಗದವರು ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

      ಲಾರಿ ಚಾಲಕ ಪರಾರಿಯಾಗಿದ್ದು ಲಾರಿಯನ್ನು ಹುಳಿಯಾರು ಪೊಲೀಸರು ಸೀಜ್ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಮೃತ ಮೈಲಾರಪ್ಪನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದು ಇವರು ಕುರಿಹಟ್ಟಿಯ ತೋಟದ ಮನೆಯಲ್ಲಿ ವಾಸವಿದ್ದು ತರಕಾರಿ ಸೊಪ್ಪು ಬೆಳೆದು ನಿತ್ಯವೂ ಹುಳಿಯಾರು ಮಾರುಕಟ್ಟೆಗೆ ತಂದು ಮಾರಿ ಜೀವನ ನಡೆಸುತ್ತಿದ್ದರು.

 

(Visited 5 times, 1 visits today)

Related posts

Leave a Comment