ಮೆಡಿಕಲ್ ಸ್ಟೋರ್ ಆಕಸ್ಮಿಕ ಬೆಂಕಿ : ಲಕ್ಷಾಂತರ ರೂ ನಷ್ಟ

ತುಮಕೂರು:          ಮೆಡಿಕಲ್ ಸ್ಟೋರೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಔಷಧಿಗಳು ಹಾಗೂ ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ.       ಜಿಲ್ಲೆಯ ಯಲ್ಲಾಪುರದ ಬಾಲಾಜಿ ಮೆಡಿಕಲ್ ಸ್ಟೋರ್‍ನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದ್ದರ ಪರಿಣಾಮ ಸ್ಟೋರ್ ನಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಸುಮಾರು 5 ಲಕ್ಷ ರೂ. ಮೌಲ್ಯದ ಔಷಧಿಗಳು ಸೇರಿದಂತೆ 10 ಲಕ್ಷ ರೂಪಾಯಿಗೂ ಹೆಚ್ಚು ಬೆಲೆಬಾಳುವ ಪೀಠೋಪಕರಣಗಳು ಸುಟ್ಟು ಕರಕಲಾಗಿದೆ.       ಮೆಡಿಕಲ್‍ಗೆ ಹೊತ್ತಿಕೊಂಡಿದ್ದ ಬೆಂಕಿ ತೀವ್ರಗೊಂಡ ಪರಿಣಾಮ ಪಕ್ಕದಲ್ಲಿದ್ದ ಕ್ಲಿನಿಕ್‍ಗೂ ಬೆಂಕಿ ತಗುಲಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.       ಘಟನೆ ಕುರಿತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಅನಾಹುತಕ್ಕೆ ಕಾರಣವೇನು ಎಂದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಮುಂದೆ ಓದಿ...

ಎಂಪ್ರೆಸ್ ಶಾಲೆಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆ ದಿನ

ತುಮಕೂರು:       ನಗರದ ಅಶೋಕ ರಸ್ತೆಯಲ್ಲಿರುವ ಎಂಪ್ರೆಸ್ ಸರಕಾರಿ ಬಾಲಕೀಯರ ಪ್ರೌಢಶಾಲೆಯಲ್ಲಿ ಇನ್ಸ್‍ಪೈರ್ ರೌಂಡ್ ಟೇಬಲ್-327 ಸಂಸ್ಥೆ ವತಿಯಿಂದ ಮಕ್ಕಳ ಮೇಲೆ ನಡೆಯುವ ಲೈಂಗಿಕ ಕಿರುಕುಳ ಹಾಗೂ ಹೆಣ್ಣು ಮಕ್ಕಳ ಸುರಕ್ಷತೆ ಕುರಿತಂತೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.       ಎಂಪ್ರೆಸ್ ಸರಕಾರಿ ಬಾಲಕೀಯರ ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ಪದ್ಮಾವತಿ ಅವರ ಅಧ್ಯಕ್ಷತೆ ನಡೆದ ಕಾರ್ಯಕ್ರಮದಲ್ಲಿ ಮೊದಲಿಗೆ ಪ್ರಸ್ತಾವಿಕ ನುಡಿಗಳನ್ನಾಡಿದ ಇನ್ಸ್‍ಪೈರ್ ರೌಂಡ್ ಟೇಬಲ್-327ನ ತುಮಕೂರು ಜಿಲ್ಲಾ ಅಧ್ಯಕ್ಷ ಸಂದೇಶಕುಮಾರ್,ರೌಂಡ್‍ಟೇಬಲ್ ರಾಜಕೀಯ ರಹಿತ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು,ಸಮಾನ ಮನಸ್ಕ ಗೆಳೆಯರು ಸೇರಿ ಸಮಾಜ ಸೇವೆಯ ಉದ್ದೇಶದಿಂದ ಹಲವು ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಇದರಲ್ಲಿ ಪ್ರಮುಖವಾಗಿ ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಸುರಕ್ಷತೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಹೆಣ್ಣು ಮಕ್ಕಳು ಕಲಿಯುತ್ತಿರುವ ಸರಕಾರಿ ಶಾಲೆಗಳನ್ನು ಗುರುತಿಸಿ, ಆ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ,…

ಮುಂದೆ ಓದಿ...

ದೋಷರಹಿತ ಮತದಾರರ ಪಟ್ಟಿ ತಯಾರಿಕೆಗೆ ಜಿಲ್ಲಾಡಳಿತ ಕ್ರಮ: ಡೀಸಿ

 ತುಮಕೂರು :       ತುಮಕೂರು ಜಿಲ್ಲೆಯಲ್ಲಿ ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್‍ಕುಮಾರ್ ತಿಳಿಸಿದರು.       ನಗರದಲ್ಲಿಂದು ಸ್ವೀಪ್ ಕಾರ್ಯಕ್ರಮದಡಿ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಿಂದ ಆಯೋಜಿಸಿದ್ದ ಸಾರ್ವಜನಿಕರಿಗೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2019 ಕುರಿತು ಜಾಗೃತಿ ಮೂಡಿಸುವ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.       ಈ ಹಿಂದೆ ನಡೆದ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆ ಚುನಾವಣೆಗಳ ಸಮಯದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿರುವುದು, ಒಂದು ಮತಗಟ್ಟೆಯಿಂದ ಮತ್ತೊಂದು ಮತಗಟ್ಟೆಗೆ ವರ್ಗಾವಣೆಗೊಂಡಿರುವುದು ಮತ್ತಿತರ ಲೋಪದೋಷಗಳಿಂದ ಮತದಾರರಲ್ಲಿ ತೀವ್ರ ಗೊಂದಲಗಳು ಉಂಟಾಗಿತ್ತು. ಇದನ್ನು ಸರಿಪಡಿಸಲು ಮತದಾರರಲ್ಲಿ ಜಾಗೃತಿ ಮೂಡಿಸಿ, ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸುವ ಉದ್ದೇಶದಿಂದ ಈ ಸೈಕಲ್ ಜಾಥಾವನ್ನು ಆಯೋಜಿಸಲಾಗಿದೆ ಎಂದರು.    …

ಮುಂದೆ ಓದಿ...

ಹಾಲುಗಲ್ಲದ ಹಸುಗೂಸನ್ನ ಪೊದೆಯಲ್ಲಿಟ್ಟಿದ್ಯಾರು ಗೊತ್ತಾ..?

ತುಮಕೂರು:       ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ದೊಡ್ಡಮಲ್ಲಿಗೆರೆ ಗ್ರಾಮದ ಹೊರವಲದ ಪೊದೆಯೊಂದರಲ್ಲಿ ಹಾಲುಗಲ್ಲದ ಹಸುಗೂಸೊಂದು ಪತ್ತೆಯಾಗಿದೆ. ಅದೇ ಗ್ರಾಮದ ಶಿವಮ್ಮ ಎಂಬ ಮಹಿಳೆ ಎಂದಿನಂತೆ ತನ್ನ ಹೊಲದಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದಾಗ ತನ್ನ ಹೊಲದ ಪೊದೆಯೊಂದರಲ್ಲಿ ಹಸುಳೆಯ ಅರ್ಥನಾದ ಕೇಳಿಬರುತ್ತಿತ್ತು. ಪುಟ್ಟ ಶಿಶುವಿನ ಅಳುವನ್ನು ಕಂಡು ಸಹಿಸದ ಶಿವಮ್ಮ ತನ್ನ ಹೊಲವನ್ನೆಲ್ಲಾ ಹುಡುಕಿದ್ದಾಳೆ. ಹೊಲದ ಮೂಲೆಯಲ್ಲಿದ್ದ ಪೊದೆಯೊಂದರಲ್ಲಿ ಹಸುಳೆಯ ಅಳುವನ್ನು ಕೇಳಿ ಕಕ್ಕಾಬಿಕ್ಕಿಯಾದರು.       ಲೌಕಿಕ ಪ್ರಪಂಚದ ಅರಿವಿರದ ಹಸುಗೂಸು ಗೋಣಿಚೀಲದ ಮಧ್ಯದಲ್ಲಿ ಕಿರುಚಾಡುತ್ತಿತ್ತು. ಹೆತ್ತ ತಾಯಿಯ ಮುಖವನ್ನು ಕಾಣದೆ ಜನನದ ದಿನವೇ ತಬ್ಬಲಿಯಾಗಿ ಅಮ್ಮನ ಮಮಕಾರವಿಲ್ಲದೇ ಹಸಿವಿನಿಂದ ಕಂಗಾಲಾಗಿ ಅಳುತ್ತಿದ್ದ ಮಗುವನ್ನು ಕಂಡು ಕಣ್ಣೀರಿಟ್ಟ ಆ ಹೊಲದೊಡತಿ ಶಿವಮ್ಮ ಆ ಮಗುವನ್ನು ತಂದು ಸಂರಕ್ಷಿಸಿ ಆರೈಕೆ ಮಾಡಿದರು. ಈ ವಿಷಯ ತಿಳಿದ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿಗಳು ಸ್ಥಳಕ್ಕಾಗಮಿಸಿ ಪುಟ್ಟ ಕಂದಮ್ಮನನ್ನು…

ಮುಂದೆ ಓದಿ...

ಸಂಜೀವಿನಿ ತಾಣ ಸಿದ್ದರಬೆಟ್ಟಕ್ಕೆ ಮೂಲಸೌಕರ್ಯ ಒದಗಿಸುವಂತೆ ಭಕ್ತಾಧಿಗಳ ಆಗ್ರಹ

ಕೊರಟಗೆರೆ:       ಸಂಜೀವಿನಿ ತಾಣ ಮತ್ತು ಸಾಧುಸಂತರ ತಪೋಭೂಮಿ ಎಂದೇ ಪ್ರಸಿದ್ದಿ ಪಡೆದಿರುವ ಸಿದ್ದರಬೇಟ್ಟದ ಶ್ರೀಸಿದ್ದೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಕಾರ್ತಿಕ ಮಾಸದ ಲಕ್ಷದಿಪೋತ್ಸವ ಕಾರ್ಯಕ್ರಮವನ್ನು ಡಿ.3ರ ಸೋಮವಾರ ಏರ್ಪಡಿಸಲಾಗಿದೆ ಎಂದು ಸಿದ್ದರಬೇಟ್ಟ ಮಠದ ಶ್ರೀವೀರಭದ್ರ ಶಿವಚಾರ್ಯ ಸ್ವಾಮೀಜಿ ತಿಳಿಸಿದರು.       ತಾಲೂಕಿನ ಚನ್ನರಾಯನದುರ್ಗ ಹೋಬಳಿ ಸಿದ್ದರಬೇಟ್ಟ ಕ್ಷೇತ್ರದ ಶ್ರೀಸಿದ್ದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಮುಜರಾಯಿ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಲಾಗಿದ್ದ ಲಕ್ಷದಿಪೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ದಿವ್ಯಾ ಸಾನಿಧ್ಯ ವಹಿಸಿ ಮಾತನಾಡಿದರು.       ಸಿದ್ದರಬೇಟ್ಟ ಪುಣ್ಯಕ್ಷೇತ್ರದಲ್ಲಿ ನಡೆಯುವ ಲಕ್ಷದಿಪೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಮತ್ತು ಹೊರರಾಜ್ಯದಿಂದ ಸಾವಿರಾರು ಭಕ್ತಾಧಿಗಳು ಬರುವ ನೀರಿಕ್ಷೆ ಇದೆ. ಪ್ರವಾಸಿ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸುವಂತೆ ಸೂಚಿಸಿಲಾಗಿದೆ. ಕಾರ್ಯಕ್ರಮ ಯಶಸ್ವಿಗಾಗಿ ಸ್ಥಳೀಯ ಮುಖಂಡರು ಮತ್ತು ಭಕ್ತಾಧಿಗಳ ಸಹಕಾರ ಅಗತ್ಯವಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ…

ಮುಂದೆ ಓದಿ...

ಮಾಜಿ ಮೇಯರ್ ರವಿ ಕೊಲೆ ಹಿಂದಿತ್ತಾ ಸೈಲೆಂಟ್ ಸುನಿಲನ ಕರಿನೆರಳು..?

 ತುಮಕೂರು:         ತುಮಕೂರು ನಗರದ ರೌಡಿ ಶೀಟರ್ ಮಾಜಿ ಮಹಾಪೌರ ರವಿಕುಮಾರ್ ಆಲಿಯಾಸ್ ಗಡ್ಡ ರವಿಯ ಹತ್ಯೆಯ ಹಿಂದೆ ಸೈಲೆಂಟ್ ಸುನಿನ ಅಸೋಸಿಯೇಟ್ ಲಕ್ಷ್ಮೀ ಆಲಿಯಾಸ್ ಲಕ್ಷ್ಮೀನಾರಾಯಣನ ಕೈಚಳಕವಿದೆ ಎಂದು ಪೊಲೀಸರು ಸಂಶಯಿಸಲಾಗಿದ್ದು, ಇಂದು ತುಮಕೂರು ಪೊಲೀಸರು ಸೈಲೆಂಟ್ ಸುನೀಲನನ್ನು ರೌಡಿ ರವಿಯ ಹತ್ಯೆಯ ಕಾರಣಕ್ಕೆ ತನಿಖೆಗೊಳಪಡಿಸಲಿದ್ದಾರೆ. ಮಾಜಿ ಮೇಯರ್ ಕೊಲೆಯ ಹಿಂದಿನ ದಿನ ಸೈಲೆಂಟ್ ಸುನಿಲನ ಸಹಚರರ ಜೊತೆ ಮೀಟಿಂಗ್ ¯ಕ್ಷ್ಮೀ ಸೈಲೆಂಟ್ ಸುನಿಲ್ ಅಸೋಸಿಯೇಟ್ ಸುಜಯ್ ಜೊತೆ ಮೀಟಿಂಗ್ ನಡೆಸಿದ್ದ ಲಕ್ಷ್ಮೀನಾರಾಯಣ ಸೈಲೆಂಟ್ ಸುನಿಲ ಕೋಕಾ ಕಾಯ್ದೆಯ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದಂತೆ ಇನ್ಸ್‍ಪೆಕ್ಟರ್ ಪ್ರಕಾಶ್ ಗೆ ಲಾಕ್‍ಆಗಿದ್ದು ತನಿಖೆಯಲ್ಲಿ ವಿಷಯ ಬಹಿರಂಗಗೊಂಡಿರುವ ಸಾಧ್ಯತೆಗಳಿವೆ.         ಹತ್ಯೆಗೂ ಒಂದು ದಿನ ಮುನ್ನ ಡಾಬಾದಲ್ಲಿ ಮೀಟಿಂಗ್ ನಡೆಸಿದ್ದು, ಸೈಲೆಂಟ್ ಸಹಚರ ಲಕ್ಷ್ಮೀ ಆಲಿಯಾಸ್ ಲಕ್ಷ್ಮೀನಾರಾಯಣ ಈ ಕೊಲೆಯ…

ಮುಂದೆ ಓದಿ...

200 ಕೋಟಿ ರೂ. ಜಿಎಸ್​ಟಿ ವಂಚನೆ : ಆರೋಪಿಗಳ ಬಂಧನ

ಬೆಂಗಳೂರು:        ನಕಲಿ ಉಕ್ಕು ಮತ್ತು ಕಬ್ಬಿಣದ ಕಂಪನಿಯ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ 200 ಕೋಟಿ ರೂಪಾಯಿ ಜಿಎಸ್‌ಟಿ ಕ್ಲೇಮ್‌ ಮಾಡಿಕೊಂಡ ಆರೋಪದ ಮೇಲೆ ಕೇಂದ್ರ ತೆರಿಗೆ ಆಯುಕ್ತಾಲಯದ ಅಧಿಕಾರಿಗಳು ರಾಜ್ಯದಲ್ಲಿ ಮೂವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ. ಇದು ದೇಶದಲ್ಲೇ ಜಿಎಸ್‌ಟಿ ವಂಚನೆಯ ಅತಿದೊಡ್ಡ ಪ್ರಕರಣಗಳಲ್ಲಿ ಒಂದಾಗಿದೆ.       ಸುಹೇಲ್‌, ಬಾಷಾ ಮತ್ತು ಹಫೀಸ್‌ ಬಂಧಿತ ಆರೋಪಿಗಳು. ಇವರು ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಜಿಎಸ್‌ಟಿ ಕ್ಲೇಮ್‌ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರಕಿದ್ದರಿಂದ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ತೆರಿಗೆ ಆಯುಕ್ತಾಲಯದ ಬೆಂಗಳೂರು ವಲಯದ ಆಯುಕ್ತ ಜಿ.ನಾರಾಯಣಸ್ವಾಮಿ ತಿಳಿಸಿದ್ದಾರೆ.       ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ.12ರಂದು ಬೆಂಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ 25 ಕಡೆ ಶೋಧ ಕಾರ್ಯ ನಡೆಸಲಾಯಿತು. ಆರೋಪಿಗಳು ಕಬ್ಬಿಣ ಮತ್ತು ಉಕ್ಕು…

ಮುಂದೆ ಓದಿ...

ಸಿಲಿಂಡರ್ ಸಾಗಾಟದ ಲಾರಿ ಸ್ಫೋಟ : ಚಾಲಕ ಸಜೀವ ದಹನ

ಶಿವಮೊಗ್ಗ:       ಸಿಲಿಂಡರ್ ತುಂಬಿದ್ದ ಲಾರಿಯೊಂದು ಸಾಗರ ತಾಳಗುಪ್ಪ ಮಧ್ಯೆ ಇರುವ ಮುಂಡಿಗೆಹಳ್ಳಿಯ ಬಳಿ ಸ್ಫೋಟಗೊಂಡಿದ್ದು ಚಾಲಕ ಸಜೀವ ದಹನವಾಗಿರುವ ದುರ್ಘಟನೆ ಸಂಭವಿಸಿದೆ.       ಇಂಡಿಯನ್ ಗ್ಯಾಸ್ ಕಂಪೆನಿಯ ಸಿಲಿಂಡರ್‌ಗಳನ್ನು ತುಂಬಿಕೊಂಡಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿದ್ದು, ಬೆಳಗಿನ ಜಾವ ನಾಲ್ಕೂವರೆ ಗಂಟೆ ವೇಳೆ ಈ ಅವಘಡ ನಡೆದಿದೆ ಎನ್ನಲಾಗಿದೆ.       ಸಾಗರದಿಂದ ಕಾರ್ಗಲ್ ಕಡೆಗೆ ಸಿಲಿಂಡರ್ ಹೊತ್ತುಕೊಂಡು ಲಾರಿ ಸಂಚರಿಸುತಿತ್ತು. ಈ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿಬಿದ್ದಿದೆ. ಬಿದ್ದ ರಭಸಕ್ಕೆ 20ಕ್ಕೂ ಹೆಚ್ಚು ಸಿಲಿಂಡರ್ ಗಳು ಸ್ಫೋಟಗೊಂಡಿವೆ. ಸ್ಫೋಟದಿಂದ ಬೆಂಕಿ ಹತ್ತಿಕೊಂಡು ಚಾಲಕ ಸಜೀವವಾಗಿ ದಹನಗೊಂಡಿದ್ದಾನೆ.        ಲಾರಿ ಸಂಪೂರ್ಣ ಭಸ್ಮವಾಗಿದ್ದು, ಚಾಲಕ ಯಾರು, ಲಾರಿಯಲ್ಲಿ ಎಷ್ಟು ಜನರಿದ್ದರು ಎನ್ನುವ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.ಲಾರಿಯ ನಂಬರ್ ಪ್ಲೇಟ್ ಸಹ ಹೊತ್ತಿ ಉರಿದ…

ಮುಂದೆ ಓದಿ...