ಪತ್ರಕರ್ತ ಸಂತೋಷ್ ತಮ್ಮಯ್ಯಗೆ ಫೇಸ್ ಬುಕ್ ನಲ್ಲಿ ಜೀವ ಬೆದರಿಕೆ..!!!

ಬೆಂಗಳೂರು:       ಟಿಪ್ಪು ಜಯಂತಿಗೆ ಮುನ್ನಾ ದಿನ ಪತ್ರಕರ್ತ ಸಂತೋಶ್ ತಮ್ಮಯ್ಯ ಅವರು ಟಿಪ್ಪು ಜಯಂತಿ ವಿರೋಧಿಸಿ ಭಾಷಣ ಮಾಡಿದ್ದರು.ಅದರ ಆಧಾರವಾಗಿಟ್ಟುಕೊಂಡು ಗೊಣಿಕೊಪ್ಪ ಪೊಲೀಸರು ಅವರನ್ನು ಬಂಧಿಸಿದ್ದರು. ಇದರ ಬೆನ್ನಲ್ಲೇ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಲಾಗಿದೆ.       ರಾಜ್ಯ ಸರ್ಕಾರದಿಂದ ಟಿಪ್ಪು ಜಯಂತಿ ಆಚರಿಸುವುದನ್ನು ಖಂಡಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಂತೋಷ್ ತಮ್ಮಯ್ಯ, ಟಿಪ್ಪು ಮತಾಂಧತೆಗೆ ಕಾರಣವಾಗಿದ್ದ ಮನಸ್ಥಿತಿಯನ್ನು ವಿಮರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಧರ್ಮ ನಿಂದನೆ ಪ್ರಕರಣ ದಾಖಲಾಗಿತ್ತು. ಸಂತೋಷ್ ತಮ್ಮಯ್ಯ ಅವರನ್ನು ಇದೇ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಿ ಜಾಮೀನು ನೀಡಿ ಬಿಡುಗಡೆ ಮಾಡಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯೂ ಆಗಿತ್ತು. ಸಂತೋಷ್ ತಮ್ಮಯ್ಯ ಟಿಪ್ಪು ವಿರುದ್ಧ ಮಾತನಾಡಿದ್ದಕ್ಕೆ ಫೇಸ್ ಬುಕ್ ನಲ್ಲಿ ಜೀವ ಬೆದರಿಕೆ ಹಾಕಲಾಗಿದೆ.       ಪೋಸ್ಟ್ ಒಂದಕ್ಕೆ ಕಾಮೆಂಟಿಸಿರುವ…

ಮುಂದೆ ಓದಿ...

ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ..? : ಸಿಎಂ ಸ್ಪಷ್ಟನೆ ..!

ಬೆಂಗಳೂರು:       ಸಚಿವ ರಮೇಶ್ ಜಾರಕಿಹೊಳಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ  ಎಂಬ ವಿಷಯದ ಕುರಿತು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಇಂದು ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಈ ವಿಷಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ರಾಜೀನಾಮೆ ವದಂತಿಯಷ್ಟೇ, ಅವರು ಸಂಪುಟ ಸಭೆಗೆ ಹಾಜರಾಗಿದ್ದರು. ರಮೇಶ್ ರಾಜೀನಾಮೆ ಕೊಟ್ಟಿಲ್ಲ. ಅಲ್ಲದೇ 16 ಮಂದಿ ರಾಜೀನಾಮೆ ನೀಡಲಿದ್ದಾರೆ ಎಂಬುದು ಗಾಳಿಸುದ್ದಿ ಎಂದು ಅವರು ತಿಳಿಸಿದ್ದಾರೆ.        ಇನ್ನೊಂದೆಡೆ, ಬೆಳಗಾವಿಯಲ್ಲಿ ಮಾತನಾಡಿರುವ ಸ್ಪೀಕರ್​ ರಮೇಶ್​ಕುಮಾರ್​, ” ರಮೇಶ್​ ಜಾರಕಿಹೊಳಿ ರಾಜೀನಾಮೆ ನೀಡಿಲ್ಲ. ಅವರಿಂದ ಅಂಥ ಪತ್ರವೂ ನನಗೆ ಬಂದಿಲ್ಲ. ಇದು ವದಂತಿಯಷ್ಟೇ,” ಎಂದು ತಿಳಿಸಿದ್ದಾರೆ.       ಕಬ್ಬು ಬೆಳೆಗಾರರ ಸಮಸ್ಯೆಯನ್ನು ರಮೇಶ್​ ಜಾರಕಿಹೊಳಿ ಅವರು ಅಲಿಸಲಿಲ್ಲ ಎಂಬ ಕಾರಣಕ್ಕೆ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರು ಸಂಪುಟ ಸಭೆ ನಡೆಯುತ್ತಿರುವಾಗಲೇ ಜಾರಕಿಹೊಳಿ…

ಮುಂದೆ ಓದಿ...

ರೈತರ ಆಕ್ರೋಶಕ್ಕೆ ನಡುಗಿತು ರಾಜಧಾನಿ : ಬೇಡಿಕೆ ಈಡೇರಿಕೆಗೆ 15 ದಿನ ಗಡುವು

ಬೆಂಗಳೂರು:       ಕಬ್ಬಿನ ಬಾಕಿ ಬಿಡುಗಡೆ ಹಾಗೂ ಬೆಂಬಲ ಬೆಲೆ ನಿಗದಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕಬ್ಬು ಬೆಳೆಗಾರರು ಸೋಮವಾರ ವಿಧಾನಸೌಧ ಮುತ್ತಿಗೆ ಹಾಕುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಿದರು.       ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಹಾಸನ, ಮಂಡ್ಯ, ಮೈಸೂರು, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿ, ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೃಹತ್ ಮೆರವಣಿಗೆ ನಡೆಸಿದ ನೂರಾರು ರೈತರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ಸ್ವಾತಂತ್ರ ಉದ್ಯಾನವದವರೆಗೂ ಮೆರವಣಿಗೆ ಸಾಗಿ ವಿಧಾನಸೌಧದತ್ತ ತೆರಳಲು ಪ್ರಯತ್ನಿಸಿದರೂ, ಪೊಲೀಸರ ಮಧ್ಯಪ್ರವೇಶದಿಂದಾಗಿ ಅಲ್ಲಿಯೇ ಧರಣಿ ನಡೆಸಿದರು.       ರೈತರು ಬೆಳೆದ ಕಬ್ಬು ಸೇರಿದಂತೆ ಎಲ್ಲ ಬೆಳೆಗಳಿಗೆ ಬೆಂಬಲ ಬೆಲೆ ನೀಡದೇ ರೈತರನ್ನು ವಂಚಿಸಲಾಗುತ್ತಿದೆ. ಈ ಮೂಲಕ ರೈತರ ಬದುಕಿನ ಜತೆ ಚೆಲ್ಲಾಟ ಆಡಲಾಗುತ್ತಿದೆ…

ಮುಂದೆ ಓದಿ...

ಕನಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನ

ಚಿಕ್ಕನಾಯಕನಹಳ್ಳಿ:       ಪಟ್ಟಣದಲ್ಲಿ ನವೆಂಬರ್ 26ರಂದು ಕನಕ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ತೀರ್ಮಾನಿಸಿತು.       ಶಾಸಕ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಪುರಸಭಾ ಮಾಜಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿ ಪ್ರತಿ ಕನಕ ಜಯಂತಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 3 ಜನರನ್ನು ರಾಷ್ಟ್ರೀಯ ಹಬ್ಬಗಳ ಆಚರಣೆಯಲ್ಲಿ ಸನ್ಮಾನ ಮಾಡಲಾಗುತ್ತಿದೆ. ಕನಕ ಜಯಂತಿಯಲ್ಲಿ ಕುರುಬ ಸಮಾಜದ ಮಠಗಳಿಂದ ಒಬ್ಬೋಬ್ಬರಿಗೆ ಸನ್ಮಾನ ಮಾಡಲಾಗುತ್ತದೆ. ಇದೇ ರೀತಿ ಈ ಬಾರಿಯು ಮುಂದುವರೆಸಿಕೊಂಡು ಹೋಗುವಂತೆ ಸಲಹೆ ನೀಡಿದರು.ತಾಲ್ಲೂಕು ಕಛೇರಿಯಲ್ಲಿ 26ರಂದು 10 ಗಂಟೆಗೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ 10.30ಕ್ಕೆ ಪುರಸಭೆಯ ಮುಂಭಾಗದಿಂದ ವಿವಿಧ ಕಲಾ ತಂಡಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಕನ್ನಡ ಸಂಘದ ವೇದಿಕೆಯಲ್ಲಿ ಜಯಂತಿ ನಡೆಸಲು ಸಭೆ ತೀರ್ಮಾನಿಸಿತು ನಂತರ…

ಮುಂದೆ ಓದಿ...

ಕುಂಚಿಗ ಸಮುದಾಯವನ್ನು ಕೇಂದ್ರದಲ್ಲಿ ಒಬಿಸಿಗೆ ಸೇರಿಸಬೇಕು : ಶಾಸಕ ವೀರಭದ್ರಯ್ಯ

ಕೊರಟಗೆರೆ:       ದೇವಾಲಯ ಮನುಷ್ಯನ ನೆಮ್ಮದಿಯ ಕೇಂದ್ರಗಳಾಗಿ ಜಾತಿ-ಬೇದವಿಲ್ಲದೇ ಪ್ರತಿಯೊಬ್ಬರಿಗೆ ಮುಕ್ತ ಅವಕಾಶ ನೀಡವಂತಾಗಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.       ತಾಲೂಕಿನ ಕಸಬಾ ಹೋಬಳಿ ವಡ್ಡಗೆರೆ ಗ್ರಾಮದ ಪುರಾತನ ಇತಿಹಾಸವುಳ್ಳ ಶ್ರೀವೀರನಾಗಮ್ಮ ದೇವಾಲಯಕ್ಕೆ 2.5ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ವಾಗಿರುವ ರಾಜಗೂಪುರ, ತಾಯಿಮುದ್ದಮ್ಮ ಮತ್ತು ಸಿದ್ದರಾಮೇಶ್ವರಸ್ವಾಮಿ ದೇವಾಲಯದ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೋಮವಾರ ವಹಿಸಿ ಮಾತನಾಡಿದರು.       ಕುಂಚಿಟಿಗರು ಒಟ್ಟಾಗಿ ನಮ್ಮ 48ಕುಲ ದೇವಾಲಯಗಳ ರಕ್ಷಣೆಗೆ ಪಣ ತೋಡಬೇಕು. ಮೊದಲನೇ ಹಂತವಾಗಿ ಕೇವಲ ಬಸಲೇನೋರ ಬುಡಕಟ್ಟಿನ 33ಬಂಡಿಗಳನ್ನು ಈ ಭಾರಿ ಸೇರಿಸಲಾಗಿದೆ. ಮುಂದಿನ ದಿನಗಳಲ್ಲಿ 48ಕುಲಗಳ ಬಂಡಿಗಳನ್ನು ತಂದು ಕಾರ್ಯಕ್ರಮ ಆಯೋಜಿಸುವ ಯೋಜನೆ ಇದೆ ಎಂದರು.       ದೇವಾಲಯದಲ್ಲಿ ಗಂಡಿಗೆ ಅವಕಾಶ ಹೆಣ್ಣಿಗೆ ಅವಕಾಶ ನೀಡದಿರುವಂತಹ…

ಮುಂದೆ ಓದಿ...

ವಾಹನ ತೊಟ್ಟಿಗೆ ಡಿಕ್ಕಿ: ಸವಾರ ಸಾವು

 ಕೊರಟಗೆರೆ:       ದ್ವಿಚಕ್ರ ವಾಹನ ಸವಾರನೋರ್ವ ನಸುಕಿನ ವೇಳೆಯಲ್ಲಿ ಆಯ ತಪ್ಪಿ ರಸ್ತೆಯ ಬದಿಯ ತೋಟ್ಟಿಗೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತ ಪಟ್ಟಿರುವ ಘಟನೆ ಸೋಮವಾರ ಮುಂಜಾನೆ ಜರುಗಿದೆ.       ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ವಡ್ಡಗೆರೆ-ಕೊರಟಗೆರೆ ರಸ್ತೆಯ ಹುಂಜನಹಳ್ಳಕ್ಕೆ ಹೊಂದಿಕೊಂಡ ನೀರಿನ ತೊಟ್ಟಿಗೆ ಡಿಕ್ಕಿ ಹೊಡೆದು ಮಡಕಸಿರಾ ತಾಲೂಕಿನ ಮದ್ದಲಕುಂಟ ಗ್ರಾಮದ ವಾಸಿಯಾದ ತಿಪ್ಪೆಸ್ವಾಮಿಯ ಮಗ ಆನಂದಕುಮಾರ್(27) ಮೃತ ದುರ್ದೈವಿ ಎಂದು ತಿಳಿದುಬಂದಿದೆ.       ವಡ್ಡಗೆರೆ ವೀರನಾಗಮ್ಮ ದೇವಿ ದರ್ಶನಕ್ಕೆ ಬಂದ ಮೃತ ಆನಂದ ಬೆಂಗಳೂರಿನಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತೀದ್ದಾನೆ ಎನ್ನಲಾಗಿದೆ. ವಡ್ಡಗೆರೆ ಗ್ರಾಮದಿಂದ ಬೆಂಗಳೂರಿಗೆ ತೆರಳುವಾಗ ಅಪಘಾತವಾಗಿದೆ ಎನ್ನಲಾಗಿದೆ. ಪಿಎಸೈ ಮಂಜುನಾಥ ಅಪಘಾತ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೆ ಓದಿ...

ತುಮಕೂರು : ನವಜಾತ ಹೆಣ್ಣು ಶಿಶು ಪತ್ತೆ!

 ತುಮಕೂರು:      ಗ್ರಾಮಸ್ಥರೊಬ್ಬರು ಹೊಲದ ಬಳಿ ಹೋಗುತ್ತಿದ್ದಾಗ ಮಗು ಅಳುವ ಶಬ್ದ ಕೇಳಿದ್ದಾರೆ. ಆಗ ಸಮೀಪ ಹೋಗಿ ನೋಡಿದ ಅವರಿಗೆ ಆಗ ತಾನೆ ಹುಟ್ಟಿರೋ ಹೆಣ್ಣುಮಗು ಪತ್ತೆಯಾಗಿದೆ       ತಕ್ಷಣವೇ ಮಗುವನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಅನಂತರ ಮಹದೆವಮ್ಮ ಎಂಬುವರು ಮಗುವಿಗೆ ಆರೈಕೆ ಮಾಡಿದ್ದಾರೆ. ವೈದ್ಯರ ಪ್ರಕಾರ ಶಿಶು ಇಂದು ಬೆಳಿಗ್ಗೆ ಜನಿಸಿರಬಹುದು ಎಂದು ಹೇಳಲಾಗಿದೆ. ಶಿಶು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿರುವ ವಿಶೇಷ ನವಜಾತ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.       ಇಂದು ಬೆಳಗ್ಗೆ ಸುಮಾರು 6 ಗಂಟೆಯಲ್ಲಿ ಮಗು ಜನಿಸಿದ್ದು, ಮಗುವನ್ನ ಹಾಗೇ ಬೀಸಾಡಿ ಹೋಗಿರುವುದರಿಂದ ತೀವ್ರ ಶೀತಕ್ಕೆ ರಕ್ತ ಹೆಪ್ಪುಗಟ್ಟಿದೆ. ಅಲ್ಲದೇ ಮಗುವಿನ ಉಸಿರಾಟದಲ್ಲೂ ತೀವ್ರ ತೊಂದರೆ ಇದೆ ಎಂದು ಆರೈಕೆ ಮಾಡುತ್ತಿರುವ ನರ್ಸ್ ಹೇಳುತ್ತಿದ್ದಾರೆ.      ಶಿಶುವಿನ ಹೊಕ್ಕುಳ ಬಳ್ಳಿಯಲ್ಲಿ…

ಮುಂದೆ ಓದಿ...

ಮನೆಗೆ ಬಂದ ‘ಮಗ’ಳು, ಧರ್ಮ ಸಂಕಟದಲ್ಲಿ ಪರಮೇಶ್ವರ್ ಕುಟುಂಬ

                 ದೇಹ ಪುರುಷನಾಗಿದ್ದರೂ ಮಾನಸಿಕವಾಗಿ ಮತ್ತು ಹಾರ್ಮೋನಲ್ ಎಫೆಕ್ಟ್​ನಿಂದಾಗಿ ಹೆಣ್ಣಾಗಿರೋರನ್ನ, ದೇಹ ಹೆಣ್ಣಾಗಿದ್ದರೂ ಭಾವನೆಯಿಂದ ಗಂಡಾಗಿದ್ದು ನಿತ್ಯ ತಮ್ಮಲ್ಲೇ ಸೆಣಸಾಡುವಂಥ ಹಲವರನ್ನು ನೋಡೇ ನೋಡಿರ್ತೀರಿ. ಆದ್ರೆ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಲಿಂಗ ಪರಿವರ್ತನೆಯಂಥ ಸರ್ಜರಿ ಮಾಡಿಸಿಕೊಳ್ಳೋದು ಎಲ್ಲರಿಂದಲೂ ಸಾಧ್ಯವಿಲ್ಲ. ಆದ್ರೆ, ಪರಮೇಶ್ವರ್ ಪುತ್ರನಾಗಿದ್ದ ಶಶಾಂಕ್ ಪರಮೇಶ್ವರ್ ದಿಟ್ಟ ನಿರ್ಧಾರ ಕೈಗೊಂಡು ಕಳೆದ ವರ್ಷ ಲಿಂಗಪರಿವರ್ತನೆ ಸರ್ಜರಿ ಮಾಡಿಸಿಕೊಂಡು ಶನಾ ಆಗಿ ಬದಲಾಗಿದ್ದರು. ಆದ್ರೆ ಈ ಪರಿವರ್ತನೆಯನ್ನು ಪರಮೇಶ್ವರ್ ಆಗಲೀ ಅಥವಾ ಅವರ ಕುಟುಂಬವಾಗಲೀ ಇನ್ನೂ ಸಂಪೂರ್ಣವಾಗಿ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ ರಾಜ್ಯ ಸರ್ಕಾರದಲ್ಲಿ ಮೋಸ್ಟ್ ಪವರ್​​ಫುಲ್ ಪೊಲಿಟಿಶಿಯನ್ ಡಿಸಿಎಂ, ಅವರಿಗೆ ಮತ್ತು ಅವರ ಕುಟುಂಬಕ್ಕೆ ಇಂದು ಧರ್ಮ ಸಂಕಟವನ್ನು ತಂದಿಟ್ಟಿದೆ. ಅಷ್ಟಕ್ಕೂ ಆಗ್ತಿರೋದು ಏನು?       ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿ, ಗೃಹ…

ಮುಂದೆ ಓದಿ...

ಇಬ್ಬರು ಮಕ್ಕಳನ್ನು ಬಲಿ ಪಡೆದ ನೀರಿನ ತೊಟ್ಟಿ

ತುಮಕೂರು:        ನೀರಿನ ತೊಟ್ಟಿಗೆ‌ ಬಿದ್ದು‌ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುಣಿಗಲ್​ ತಾಲೂಕಿನ ಜಿವಾಜಿಹಟ್ಟಿಯಲ್ಲಿ ನಡೆದಿದೆ. ಹಡವನಹಳ್ಳಿಯ ಶಂಕ್ರಪ್ಪ-ವನಿತಾ ದಂಪತಿ ಮಗ ಭರತ್(3) ಮತ್ತು ಗೊಲ್ಲರಹಟ್ಟಿಯ ಲಕ್ಷ್ಮೀ-ಪರಮೇಶ್ ದಂಪತಿ ಮಗು ಭರತ್(2) ಮೃತ ದುರ್ದೈವಿಗಳು. ಅಜ್ಜಿ ಮನೆಗೆ ಬಂದಿದ್ದ ಇಬ್ಬರು ಮಕ್ಕಳು ಮನೆ ನಿರ್ಮಾಣಕ್ಕೆ ನಿರ್ಮಿಸಿದ್ದ ತೊಟ್ಟಿ ಬಳಿ ಆಟವಾಡುವಾಗ ಒಳಗೆ ಬಿದ್ದು ಮೃತಪಟ್ಟಿದ್ದಾರೆ. ಕುಣಿಗಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೆ ಓದಿ...