ಬೈಕ್‍ ಡಿಕ್ಕಿಯಲ್ಲಿದ್ದ 5.30 ಲಕ್ಷ ಹಣ ಹೊತ್ತೊಯ್ದ ಕದೀಮರು

ತಿಪಟೂರು:       ನಗರದ ಬ್ಯಾಂಕ್ ನಲ್ಲಿ ಆಗತಾನೆ ಹಣ ಡ್ರಾ ಮಾಡಿಕೊಂಡು ಬಂದ ವ್ಯಕ್ತಿ ಹಣವನ್ನು ತನ್ನ ಬೈಕ್‍ನ ಡಿಕ್ಕಿಯಲ್ಲಿರಿಸಿ, ಮೆಡಿಕಲ್ ಸ್ಟೋರ್ ಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.        ಆಗ್ರೋ ಇಂಡಸ್ಟ್ರಿ ಮಾಲಿಕ ಪಾರ್ಥಸಾರಥಿ ಎಂಬುವರೇ ಹಣ ಕಳೆದುಕೊಂಡವರು. ಇವರು ಆಗತಾನೆ ವಿಜಯ ಬ್ಯಾಂಕ್ ನಲ್ಲಿ 5.30 ಲಕ್ಷ ಹಣ ಡ್ರಾ ಮಾಡಿ, ಬ್ಯಾಂಕ್ ಎದುರು ತಮ್ಮ ಆಕ್ಟಿವಾ ಹೊಂಡ ಬೈಕ್ ನಿಲ್ಲಿಸಿ, ಡಿಕ್ಕಿಯಲ್ಲಿ ಹಣ ಇಟ್ಟಿದ್ದರು. ಮೆಡಿಕಲ್ ಸ್ಟೋರ್ ಗೆ ಹೋಗಿ ಔಷಧಿ ಸಾಮಗ್ರಿ ತೆಗೆದುಕೊಂಡು ಬರುವಷ್ಟರಲ್ಲಿ, ಪಲ್ಸರ್ ಬೈಕ್ ನಲ್ಲಿ ಬಂದ ಮುಸುಕುದಾರಿ ಕಳ್ಳರು, ಆಕ್ಟಿವಾ ಹೊಂಡ ಡಿಕ್ಕಿ ಮುರಿದು ಹಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ತಿಪಟೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದೆ ಓದಿ...

ಇನ್ನು ಮುಂದೆ ಮಾಧ್ಯಮಗಳ ಜತೆ ಮಾತನಾಡುವುದೇ ಇಲ್ಲ: ಸಿಎಂ ಎಚ್ಡಿಕೆ

ಬೆಂಗಳೂರು:        ನಾನು ಇನ್ನು ಮುಂದೆ ಮಾಧ್ಯಮಗಳ ಜತೆ ಮಾತನಾಡುವುದೇ ಇಲ್ಲ. ನಾನು ವೇದಿಕೆ ಮೇಲೆ ಏನು ಮಾತನಾಡುತ್ತೇನೋ ಅಷ್ಟೆ. ಬೇಕಾದರೆ, ಬರೆದುಕೊಳ್ಳಿ, ಇಲ್ಲದಿದ್ದರೆ ಬಿಡಿ, ಇನ್ಮುಂದೆ ಮಾಧ್ಯಮಗಳ ಜತೆ ಪ್ರತ್ಯೇಕವಾಗಿ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.       ಗುರುವಾರ ಬಡವರ ಬಂಧು ಯೋಜನೆಯನ್ನು ಉದ್ಘಾಟಿಸಿದ ನಂತರ ಮಾತನಾಡಿ, ನಾನು ಏನು ಮಾತನಾಡಿದರೂ ತಪ್ಪಾಗಿ ಭಾವಿಸುತ್ತಾರೆ. ನಾನು ಏನು ಮಾತನಾಡಬೇಕೆಂದು ಮಾಧ್ಯಮಗಳ ನೇತೃತ್ವದಲ್ಲಿ ಒಂದು ಸಮಿತಿ ಮಾಡಿ ಅವರಿಂದ ಸಲಹೆ ಪಡೆದು ಮಾತನಾಡಬೇಕಿದೆ ಎಂದು ವ್ಯಂಗ್ಯವಾಡಿದ್ದಾರೆ.       ಬೀದಿಬದಿ ವ್ಯಾಪಾರಿಗಳಿಗಾಗಿ ಬಡವರ ಬಂಧು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಬಡ್ಡಿ ಇಲ್ಲದೆ ಸಾಲ ಕೊಟ್ಟರೆ ಮರುಪಾವತಿ ಮಾಡಲ್ಲ. ಶೇ.4 ರಷ್ಟಾದರೂ ಬಡ್ಡಿ ವಿಧಿಸಿ ಎಂದು ಅಧಿಕಾರಿಗಳು ಸಲಹೆ ಕೊಟ್ಟಿದ್ದರು. ಆದರೆ, ನಾನು ಒಪ್ಪಲಿಲ್ಲ. ನನಗೆ ನಿಮ್ಮ ಮೇಲೆ ಸಂಪೂರ್ಣ…

ಮುಂದೆ ಓದಿ...

ಆಸ್ಟ್ರೇಲಿಯಾದಲ್ಲಿ ಅನಾವರಣವಾಯ್ತು ಮಹಾತ್ಮ ಗಾಂಧೀ ಪ್ರತಿಮೆ

ಆಸ್ಟ್ರೇಲಿಯಾ:      ಮೂರು ದಿನಗಳ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಎರಡನೇ ದಿನವಾದ ಗುರುವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ಅನಾವರಣಗೊಳಿಸಿದ್ದಾರೆ.       ಆಸ್ಟ್ರೇಲಿಯಾದ ಪರ್ರಮಟ್ಟ ನಗರದ ಜ್ಯುಬಿಲಿ ಪಾರ್ಕ್​ನಲ್ಲಿ ಗಾಂಧೀಜಿ ಅವರ ಪ್ರತಿಮೆ ಇರಿಸಲಾಗಿದೆ. ಭಾರತ ಸರ್ಕಾರ ಈ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದೆ. ಶಿಲ್ಪಿಗಳಾದ ರಾಮ್​ ಮತ್ತು ಅನಿಲ್​ ಸುತಾರ್​ ಅವರು ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಪ್ರತಿಮೆ ಅನಾವರಣಾ ಸಮಾರಂಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕೋಟ್​ ಮೋರ್ರಿಸೋನ್​ ಮತ್ತು ಪರ್ರಮಟ್ಟ ನಗರದ ಮೇಯರ್​ ಆ್ಯಂಡ್ರ್ಯೂ ವಿಲ್ಸನ್​ ಮತ್ತು ರಾಷ್ಟ್ರಪತಿಯವರ ಪತ್ನಿ ಹಾಜರಿದ್ದರು.

ಮುಂದೆ ಓದಿ...

ತಿಪಟೂರು-ಹುಳಿಯಾರು ರಸ್ತೆ ದುರಸ್ಥಿಗೆ ಒತ್ತಾಯ

ತಿಪಟೂರು:      ತಿಪಟೂರಿನಿಂದ ಹಾಲ್ಕುರಿಕೆ ಮಾರ್ಗವಾಗಿ ಹುಳಿಯಾರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಗುಂಡಿ ಗೊಟರುಗಳಿಂದ ಕೂಡಿದ್ದು, ಸಂಬಂಧಪಟ್ಟ ಇಲಾಖೆ ಇತ್ತ ಗಮನಹರಿಸಿ ರಸ್ತೆಯನ್ನು ಸರಿಪಡಿಸಬೇಕೆಂದು ಈ ಭಾಗದ ಹಳ್ಳಿಗಳ ಸಾರ್ವಜನಿಕರು ಹಾಗೂ ವಾಹನ ಸವಾರರು ಲೋಕಪಯೋಗಿ ಇಲಾಖೆ ಹಾಗೂ ಶಾಸಕರನ್ನು ಒತ್ತಾಯಿಸಿದ್ದಾರೆ.       ಈ ರಸ್ತೆಯ ಮೂಲಕ ಟಿ.ಎಂ. ಮಂಜುನಾಥನಗರ, ಬೈರನಾಯ್ಕನಹಳ್ಳಿ, ಗೆದ್ಲೇಹಳ್ಳಿ ಗೊಲ್ಲರಹಟ್ಟಿ, ಆಲೂರು, ಬೈರಾಪುರ ಗೇಟ್, ಹರಿಸಮುದ್ರ, ಹಾಲ್ಕುರಿಕೆ, ಮತ್ತಿಘಟ್ಟ ಮತ್ತಿತರ ಗ್ರಾಮಗಳಿಗೆ ಹೋಗಬೇಕಾದರೆ ಇದೇ ರಸ್ತೆ ಮುಖ್ಯವಾಗಿದೆ. ಆದರೆ ರಸ್ತೆ ಬಹಳಷ್ಟು ಕಡೆಗಳಲ್ಲಿ ಹಾಳಾಗಿದ್ದು, ಉದ್ದುದ್ದ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಹರಸಾಹಸ ಮಾಡಿಕೊಂಡು ವಾಹನಗಳನ್ನು ಚಲಾಯಿಸಬೇಕಾಗಿದೆ. ನೂರಾರು ಲಘು ಹಾಗೂ ಭಾರಿ ವಾಹನಗಳು ಇಲ್ಲಿ ಸಂಚರಿಸುತ್ತಿರುವುದರಿಂದ ಪ್ರತಿನಿತ್ಯ ಒಂದಲ್ಲೊಂದು ಅವಘಡ, ಅಪಘಾತಗಳು ಸಂಭವಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗುತ್ತಿದೆ. ಇದೂ ಸಾಲದೆಂದು ರಸ್ತೆಯ ಎರಡೂ ಬದಿಗಳಲ್ಲಿ ಗಿಡ-ಗೆಂಟೆಗಳಿಂದ ಕೂಡಿದ…

ಮುಂದೆ ಓದಿ...

ಕೈಕೊಟ್ಟ ಮಳೆ : ಒಣಗುತ್ತಿರುವ ರಾಗಿ ಪೈರು : ಬೆಂಕಿಯಿಂದ ಬಾಣಲೆಗೆ ಎಸೆದಂತಾಗಿರುವ ರೈತರ ಬದುಕು

ತಿಪಟೂರು :       ಕಲ್ಪತರು ನಾಡಿನ ರೈತರು ಮಳೆ ಇಲ್ಲದೆ ದಿನವೂ ಬೆಂಕಿಯಂತಹ ಉರಿಬಿಸಿಲು ಕಾರುತ್ತಿರುವ ಆಕಾಶದೆಡೆಗೆ ಹತಾಶಾಭಾವದಿಂದ ನೋಡುತ್ತಾ ಮಳೆರಾಯ ಕೃಪೆ ತೋರುವನೋ ಇಲ್ಲವೋ ಎಂಬ ಚಿಂತೆಯ ಚಿತೆಗೆ ಬಿದ್ದು ಕಾಲ ಕಳೆಯುವಂತಾಗಿದೆ.       ಇತ್ತೀಚಿನ ಹಲವಾರು ವರ್ಷಗಳಲ್ಲಿ ತಾಲ್ಲೂಕಿಗೆ ಸುರಿದಿರುವ ಮಳೆ ಪ್ರಮಾಣ ಲೆಕ್ಕ ಹಾಕಿ ನೋಡಿದರೆ ವರ್ಷ ವರ್ಷವೂ ಇಳಿಕೆಯಾಗುವ ಮೂಲಕ ನಿರಂತರವಾಗಿ ಭೀಕರ ಬರಗಾಲ ಎದುರಾಗುತ್ತಿರುವುದು ಆತಂಕಕ್ಕೆ ಎಡೆಮಾಡಿದೆ. ತಾಲ್ಲೂಕಿನಾದ್ಯಂತ ಭಯಾನಕ ಬರಗಾಲ ಸೃಷ್ಠಿಯಾಗಿದೆ. ಈ ವರ್ಷ ಮೇ, ಜೂನ್ ತಿಂಗಳಲ್ಲಿ ಬಂದ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ರೈತರ ಪಾಲಿಗೆ ನಿರಾಶಾದಾಯಕವಾಗಿತ್ತು. ನಂತರ ಈ ಹಿಂಗಾರಿನವರೆಗೂ ಮಳೆರಾಯ ಸಂಪೂರ್ಣ ಮುನಿಸಿಕೊಂಡಿದ್ದು, ಮಳೆಯನ್ನೇ ನೆಚ್ಚಿ ಬದುಕುತ್ತಿರುವ ತಾಲ್ಲೂಕಿನ ರೈತರು ಕಂಗಾಲಾಗುವಂತೆ ಮಾಡಿದೆ. ಅಲ್ಪಸ್ವಲ್ಪ ಬಿದ್ದಿದ್ದ ಮಳೆಗೆ ರೈತರು ಸಾಲಶೂಲ ಮಾಡಿಕೊಂಡು ರಾಗಿ ಮತ್ತಿತರೆ ಬೆಳೆಗಳನ್ನು…

ಮುಂದೆ ಓದಿ...

ರಾಜ್ಯ ಮಟ್ಟದ ಚೆಸ್ ಪಂದ್ಯಾವಳಿ : ಆಹ್ವಾನ ಪತ್ರಿಕೆಯಲ್ಲಿನ ಮುಖ್ಯಸ್ಥರೆಲ್ಲಾ ಗೈರುಹಾಜರ್

ಮಧುಗಿರಿ :       ಪಟ್ಟಣದ ಎಪಿಎಂಸಿ ಆವರಣದಲ್ಲಿ ಜಿ.ಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಉಪನಿರ್ದೇಶಕರ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಚೆಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಕ್ರೀಡಾಕೂಟಕ್ಕೆ ಡಿಸಿಎಂ, ತುಮಕೂರು ಜಿಲ್ಲೆಯ ಇಬ್ಬರು ಸಚಿವರು, ಇಬ್ಬರು ಸಂಸದರು, ಸ್ಥಳೀಯ ಶಾಸಕರು, ಜಿಲ್ಲೆಯ ಶಾಸಕರುಗಳು, ಎಂ.ಎಲ್.ಸಿ ಗಳು ಜಿ.ಪಂ.ಸದಸ್ಯರುಗಳು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಒ, ಮಧುಗಿರಿ ಉಪವಿಭಾಗಾಧಿಕಾರಿ ಹಾಗೂ ಜನ ಪ್ರತಿನಿಧಿಗಳ ಹೆಸರುಗಳು ಆಹ್ವಾನ ಪತ್ರಿಕೆಯಲ್ಲಿ ಪ್ರೋಟೋ ಕಾಲ್ ಅಡಿಯಲ್ಲಿ ಮುದ್ರಿಸಿದ್ದರು ಯಾರೊಬ್ಬರು ಕಾರ್ಯಕ್ರಮಕ್ಕೆ ಹಾಜರಾಗದೆ ಅಚ್ಚರಿ ಮೂಡಿಸಿದರು. ಈ ಕಾರ್ಯಕ್ರಮವು ಹೋಬಳಿ ಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಂತೆ ಬಾಸವಾಗುತ್ತಿತ್ತು.       ರಾಜ್ಯ ರಾಜಕಾರಣದ ಚದುರಂಗದಾಟದಲ್ಲಿ ಬಿಜಿಯಾಗಿರುವ ರಾಜ್ಯ ಮಟ್ಟದ ರಾಜಕಾರಣಿಗಳಿಗೆ ರಾಜ್ಯ ಮಟ್ಟದ ಚೆಸ್ ಕ್ರೀಡಾಕೂಟಕ್ಕೆ ಭಾಗವಹಿಸದೆ ಅಪಮಾನ ಮಾಡಿದ್ದಾರೆಂದು…

ಮುಂದೆ ಓದಿ...

ಮತದಾರರ ಪಟ್ಟಿ ಪರಿಷ್ಕರಣೆ: ನಗರದಲ್ಲಿ ನಾಳೆಯಿಂದ ವಿಶೇಷ ನೋಂದಣಿ

 ತುಮಕೂರು :       ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2019ಕ್ಕೆ ಸಂಬಂಧಿಸಿದಂತೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 23 ರಿಂದ 25ರವರೆಗೆ 3 ದಿನಗಳ ಕಾಲ “ವಿಶೇಷ ನೋಂದಣಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.       ಈ ಕಾರ್ಯಕ್ರಮದಡಿ ನವೆಂಬರ್ 23 ರಿಂದ 25ರವರೆಗಿನ ಎಲ್ಲಾ ದಿನಗಳಂದು ಅರ್ಹ ಮತದಾರರು ಭರ್ತಿ ಮಾಡಿದ ನಮೂನೆಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸುವ ಮೂಲಕ ಭಾವಚಿತ್ರವುಳ್ಳ ಮತದಾರರ ಪಟ್ಟಿಯ ತಯಾರಿಕೆಗೆ ಸಹಕರಿಸಬೇಕು. ತುಮಕೂರು ನಗರದ ನಾಗರಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ಮುಂದೆ ಓದಿ...

ನರಭಕ್ಷಕ ಚಿರತೆಯನ್ನು ಹಿಡಿಯದಿದ್ದರೆ, ಅರಣ್ಯ ಕಛೇರಿಗೆ ಮುತ್ತಿಗೆ..!

ಚಿಕ್ಕನಾಯಕನಹಳ್ಳಿ:       ನರಭಕ್ಷಕ ಚಿರತೆಯನ್ನು ಹಿಡಿದು ಜನ ಹಾಗೂ ಜಾನುವಾರಗಳ ಜೀವ ಉಳಿಸದಿದ್ದರೆ ಅರಣ್ಯ ಇಲಾಖೆಯ ಕಛೇರಿ ಮುಂದೆ ತೀವ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್‍ಕುಮಾರ್ ಎಚ್ಚರಿಕೆ ನೀಡಿದ್ದಾರೆ.       ತಾಲೂಕಿನ ಮದಲಿಂಗನ ಕಣಿವೆ ಭಾಗದಲ್ಲಿ ನರಭಕ್ಷಕ ಚಿರತೆಯೊಂದು ಗ್ರಾಮಗಳಿಗೆ ನುಗ್ಗಿ ಮನುಷ್ಯರ ಮೇಲೆ ದಾಳಿ ಮಾಡುವುದು, ಕುರಿ-ಮೇಕೆ, ಜಾನುವಾರಗಳನ್ನು ತಿನ್ನುವುದು ಸೇರಿದಂತೆ ಆ ಭಾಗದ ಗ್ರಾಮಸ್ಥರ ನೆಮ್ಮದಿಗೆ ಭಂಗ ತಂದಿದ್ದು, ಜನರು ಸಂಜೆ ಮೇಲೆ ಹೊಲ ತೋಟಗಳಿಗೆ ಹೋಗುವುದಕ್ಕೆ ಹೆದರುವಂತಾಗಿದೆ.       ಇದೇ ತಿಂಗಳ 2ರಂದು ಆಶ್ರೀಹಾಲ್‍ನ ಮೂರ್ತಿ ಎಂಬುವವರ ಮೇಲೆ ದಾಳಿ ಮಾಡಿದೆ, ಅವರಿನ್ನೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇದಕ್ಕೂ ಹದಿನೈದು ದಿನಗಳ ಮುಂಚೆ ಆ ಭಾಗದಲ್ಲೇ ಮಹಿಳೆಯೊಬ್ಬರ ಮೇಲೆ ದಾಳಿಮಾಡಿದೆ, ಕಳೆದ ಮೂರು ತಿಂಗಳ ಈಚೆಗೆ ಸುಮಾರು ನಾಲ್ಕೈದು…

ಮುಂದೆ ಓದಿ...

ವ್ಯಕ್ತಿಯ ಅನುಮಾನಸ್ಪದ ಸಾವು

  ಚಿಕ್ಕನಾಯಕನಹಳ್ಳಿ:       ಬೈಕ್‍ನಲ್ಲಿ ಮನೆಗೆ ತೆರಳುತ್ತಿದ್ದ ವ್ಯಕ್ತಿ ರಸ್ತೆಯಲ್ಲಿ ಅನುಮಾನಸ್ಪದವಾಗಿ ಸತ್ತಿದ್ದು, ಇದು ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.       ತಾಲ್ಲೂಕಿನ ಹಂದನಕೆರೆ ಹೋಬಳಿ ಹುಚ್ಚನಹಳ್ಳಿ ನಿವಾಸಿ ಧನಂಜಯ್ (26) ಎಂಬುವವರೇ ಸಾವಿಗೀಡಾಗಿರುವ ವ್ಯಕ್ತಿ. ಹಂದನಕೆರೆ ಹುಚ್ಚನಹಳ್ಳಿ ಸಮೀಪದ ಅರಳಿಮರದ ಬಳಿ ಬೈಕ್‍ನಲ್ಲಿ ಬರುತ್ತಿದ್ದ ಮೃತ ಧನಂಜಯ್ ಬಿದ್ದು ಸಂಶಯಾಸ್ಪದ ಸಾವು ಸಂಭವಿಸಿದೆ.       ಸುದ್ದಿ ತಿಳಿದೊಡನೆ ಹಂದನಕೆರೆ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಸ್ಥಳದಲ್ಲಿದ್ದ ಹಿಡಿಕೋಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಮೃತ ಧನಂಜಯ್ ಕೆ.ಇ.ಬಿ ವ್ಯಾನ್ ಡ್ರೈವರ್‍ಯಾಗಿ ಕೆಲಸ ನಿರ್ವಹಿಸುತ್ತಿದ್ದ ತಂದೆ ವೀರಭದ್ರಯ್ಯ ಸಾವನ್ನಪ್ಪಿದ ನಂತರ ಕುಟುಂಬದ ಜವಬ್ದಾರಿ ಇವನದ್ದಾಗಿತ್ತು ಮೃತನಿಗೆ ತಾಯಿ ಮತ್ತು ಅಕ್ಕ ಇದ್ದಾರೆ ಎಂದು ತಿಳಿದುಬಂದಿದೆ.

ಮುಂದೆ ಓದಿ...

ಪೊಲೀಸರೇ ಎಚ್ಚರ..! ವರ್ಗಾವಣೆ ಕೇಳಿದರೆ ಸಿಗಲಿದೆ ಕಡ್ಡಾಯ ನಿವೃತ್ತಿ!

ಬೆಂಗಳೂರು :       ಅನಾರೋಗ್ಯದ ಕಾರಣ ನೀಡಿ ವರ್ಗಾವಣೆಗೆ ಕೋರುವ ಪೊಲೀಸರನ್ನು ಕಡ್ಡಾಯವಾಗಿ ಸೇವೆಯಿಂದ ನಿವೃತ್ತಿಗೊಳಿಸಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕ ಸುತ್ತೋಲೆ ಹೊರಡಿಸಿದ್ದಾರೆ.       ಅನಾರೋಗ್ಯದ ನಿಮಿತ್ತ ಬೇರೆ ಠಾಣೆಗಳಿಗೆ ವರ್ಗಾವಣೆ ಕೋರಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌, ಹೆಡ್‌ ಕಾನ್‌ಸ್ಟೇಬಲ್‌ ಹಾಗೂ ಕಾನ್‌ಸ್ಟೇಬಲ್‌ಗಳು ಅರ್ಜಿ ಸಲ್ಲಿಸಿದ್ದಾರೆ. ಇದರ ಜತೆ ವೈದ್ಯಕೀಯ ದಾಖಲೆಗಳನ್ನು ಸಹ ಲಗತ್ತಿಸಲಾಗಿದೆ. ಈ ದಾಖಲೆಗಳನ್ನು ಪರಿಶೀಲಿಸಿದಾಗ ರಕ್ತದೊತ್ತಡ, ಸಕ್ಕರೆ ಖಾಯಿಲೆ ಹಾಗೂ ಇನ್ನಿತರೆ ಗುರುತರವಲ್ಲದ ಆರೋಗ್ಯ ಸಮಸ್ಯೆಯನ್ನು ನೀಡಿ ಪೊಲೀಸರು ವರ್ಗಾವಣೆ ಬಯಸಿರುವುದಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.        ವೈಯಕ್ತಿಕ ಹಾಗೂ ವೈದ್ಯಕೀಯ ಕಾರಣಗಳಿಗಾಗಿ ನಿಯುಕ್ತಗೊಳಿಸಿರುವ ಠಾಣೆಗಳಲ್ಲಿ ಕನಿಷ್ಠ ವರ್ಗಾವಣೆ ಅವಧಿಯನ್ನು ಪೂರ್ಣಗೊಳಿಸದ ಎಎಸ್‌ಐ, ಎಚ್‌ಸಿ ಹಾಗೂ ಪಿಸಿ…

ಮುಂದೆ ಓದಿ...