ಬಿಜೆಪಿ ಪಾಲಾದ ಶಿವಮೊಗ್ಗ ಮಹಾನಗರ ಪಾಲಿಕೆ

ಶಿವಮೊಗ್ಗ:       ಮಹಾನಗರ ಪಾಲಿಕೆಗೆ ಇಂದು ನಡೆದ ಚುನಾವಣೆಯಲ್ಲಿ ನೂತನ ಮೇಯರ್ ಆಗಿ ಲತಾ ಗಣೇಶ್, ಉಪ ಮೇಯರ್ ಆಗಿ ಚನ್ನಬಸಪ್ಪ ಆಯ್ಕೆಯಾಗುವ ಮೂಲಕ ಬಿಜೆಪಿ ತೆಕ್ಕೆಗೆ ಶಿವಮೊಗ್ಗ ಮಹಾನಗರ ಪಾಲಿಕೆ ಒಲಿದಿದೆ.       ಒಟ್ಟು 35 ಸದಸ್ಯ ಬಲದ ಪಾಲಿಕೆಯಲ್ಲಿ ಬಿಜೆಪಿ 20, ಕಾಂಗ್ರೆಸ್ 7, ಜೆಡಿಎಸ್ 2, ಪಕ್ಷೇತರರು 5, ಎಸ್.ಡಿ.ಪಿ.ಐ 1 ಸ್ಥಾನ ಗಳಿಸಿತ್ತು. ಇದಲ್ಲದೆ ಇಬ್ಬರು ಬಿಜೆಪಿಯ ಶಾಸಕರು ಹಾಗೂ ಇಬ್ಬರು ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ಹಾಗೂ ಒರ್ವ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 40 ಸದಸ್ಯರಿಗೆ ಮತ ಚಲಾವಣೆಗೆ ಅವಕಾಶವಿದ್ದು ಪಾಲಿಕೆ ಅಧಿಕಾರ ಹಿಡಿಯಲು ಕನಿಷ್ಟ 21 ಸದಸ್ಯರ ಬೆಂಬಲ ಬೇಕಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ 20 ಪಾಲಿಕೆ ಸದಸ್ಯರ ಜೊತೆಗೆ ನಾಲ್ವರು ಬಿಜೆಪಿಯ ಶಾಸಕರು, ಮೂವರು ಪಕ್ಷೇತರ ಸದಸ್ಯರ…

ಮುಂದೆ ಓದಿ...

ಡಿ.02 ರಿಂದ ಕನಿಷ್ಠವೇತನ ,ಸೇವೆ ಖಾಯಂಗೆ ಒತ್ತಾಯಿಸಿ ಬಿಸಿಯೂಟ ನೌಕರರ ಮುಷ್ಕರ

 ತುಮಕೂರು:       ಅಕ್ಷರ ದಾಸೋಹ ಬಿಸಿಯೂಟ ನೌಕರರಿಗೆ ಕನಿಷ್ಠ 10500 ರೂ ವೇತನ ನೀಡಬೇಕು,ಕೆಲಸದ ಭದ್ರತೆ, ಪಿ.ಎಫ್ ಮತ್ತು ಇಎಸ್‍ಐ ಹಾಗೂ 3000 ಮಾಸಿಕ ಪಿಂಚಿಣಿಗೆ ಆಗ್ರಹಿಸಿ ಡಿಸೆಂಬರ್ 2 ರಿಂದ ಅಕ್ಷರ ದಾಸೋಹ ನೌಕರರು ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುತ್ತಿರುವುದಾಗಿ ನೌಕರರ ಸಂಘದ ಜಿಲ್ಲಾ ಸಂಚಾಲಕಿ ರಾಧಮ್ಮ ತಿಳಿಸಿದ್ದಾರೆ.       ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,2002ರಿಂದ ಸರಕಾರದ ಈ ಯೋಜನೆಯಲ್ಲಿ ಮಹಿಳೆಯರು ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಿದ್ದು, ಇಂದು ಸಹ ಮುಖ್ಯ ಅಡುಗೆಯವರಿಗೆ ಮಾಸಿಕ 2700 ಮತ್ತು ಅಡುಗೆ ಸಹಾಯಕರಿಗೆ 2600 ರೂ ನೀಡಲಾಗುತ್ತಿದೆ. ಇಂದಿನ ಬೆಲೆ ಹೆಚ್ಚಳದಲ್ಲಿ ಕೇವಲ 2700 ರೂಗಳಿಗೆ ಜೀವನ ನಡೆಸುವುದು ದುಸ್ತರವಾಗಿದೆ. ಮಕ್ಕಳು ಓದು, ಮನೆಯ ಖರ್ಚು ಸೇರಿದಂತೆ ಮನೆ ನಿಭಾಯಿಸುವುದು ಕಷ್ಟವಾಗಿದೆ.ಆದ್ದರಿಂದ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಸರಕಾರವೇ ನಿಗಧಿಪಡಿಸಿರುವಂತೆ ಮಾಸಿಕ 10500 ರೂ ಕನಿಷ್ಠ ವೇತನ…

ಮುಂದೆ ಓದಿ...

ವೀರಶೈವ ಸಮಾಜದ ಏಳಿಗೆಗೆ ಶಿವನಂಜಪ್ಪ, ಮಲ್ಲಿಕಾರ್ಜುನಯ್ಯ ಕಾರಣರು :ಮಾಜಿ ಸಂಸದ ಜಿ.ಎಸ್.ಬಸವರಾಜು

 ತುಮಕೂರು:       ಜಿಲ್ಲೆಯಲ್ಲಿ ವೀರಶೈವ ಸಮುದಾಯ ಇಷ್ಟು ಉತ್ತುಂಗಕ್ಕೆರಲು ಕಾರಣರಾದವರು ದಿವಂಗತರಾದ ಜಿ.ಎಸ್.ಶಿವನಂಜಪ್ಪ ಮತ್ತು ಮಲ್ಲಿಕಾರ್ಜುನಯ್ಯ ಅವರುಗಳನ್ನು ಸಮುದಾಯ ಎಂದಿಗೂ ಮರೆಯುವಂತಿಲ್ಲ ಎಂದು ಮಾಜಿ ಸಂಸದ ಜಿ.ಎಸ್.ಬಸವರಾಜು ತಿಳಿಸಿದ್ದಾರೆ.        ನಗರದ ವೀರಶೈವ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ಮಾಜಿ ಶಾಸಕ ಜಿ.ಎಸ್.ಶಿವನಂಜಪ್ಪ ಅವರು 90ನೇ ಹುಟ್ಟು ಹಬ್ಬದ ಅಂಗವಾಗಿ ಸಿದ್ದರಾಮೇಶ್ವರ್ ಸಹಕಾರಿ ಬ್ಯಾಂಕು, ಗುರುಕುಲ ವಿದ್ಯಾರ್ಥಿನಿಲಯ ಹಾಗೂ ಗುರುಕುಲ ವಿವಿದೋದ್ದೇಶ ಸಹಕಾರಿ ಸಂಘ,ಬೆಂಗಳೂರಿನ ಅಪಲೋ ಆಸ್ಪತ್ರೆಯ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಹಳ್ಳಿಗಾಡಿನಿಂದ ನಗರಕ್ಕೆ ಬಂದಂತಹ ವೀರಶೈವ ಸಮುದಾಯ ಜನರು, ನಗರದಲ್ಲಿ ನೆಲೆಗೊಳ್ಳಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಯನ್ನು ಅಂದಿನ ಕಾಲದಲ್ಲಿ ಈ ಇಬ್ಬರು ಮಹನೀಯರು ಮಾಡಿದ ಪರಿಣಾಮ, ಇಂದು ನಗರದಲ್ಲಿ ವೀರ ಶೈವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಲು ಸಾಧ್ಯವಾಗಿದೆ ಎಂದರು.       ಆರೋಗ್ಯ ಇಂದು…

ಮುಂದೆ ಓದಿ...

ಮೋರಿಗೆ ಬಿದ್ದ ಟಾಟ ಏಸ್ : 20 ಜನರಿಗೆ ಗಾಯ

ದೊಡ್ಡೇರಿ:       ಟಾಟಾ ಏಸ್ ವಾಹನವೊಂದು ಆಕಸ್ಮಿಕವಾಗಿ ಮೋರಿಗೆ ಬಿದ್ದ ಪರಿಣಾಮ 20 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ   ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕೃಷ್ಣರಾಜ ಸಾಗರ ಗ್ರಾಮದಲ್ಲಿ ನಡೆದಿದೆ.         ಸಿಡದರಲ್ಲು ಗ್ರಾಮದ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಸಭೆ ಮುಗಿಸಿಕೊಂಡು ದಂಡಿನದಿಬ್ಬ ಗ್ರಾಮಕ್ಕೆ ವಾಪಸ್ ತೆರಳುತ್ತಿದ್ದ  20 ಜನ ಅಡುಗೆ ಸಹಾಯಕರಿದ್ದ ವಾಹನವು ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದಿದ್ದು, ಇದರಿಂದಾಗಿ ಅವರಿಗೆ ಗಂಭೀರ ಗಾಯಗಳಾಗಿವೆ.         ಗಾಯಗೊಂಡವರನ್ನು ಕೂಡಲೆ 108 ವಾಹನದಲ್ಲಿ ಮಧುಗಿರಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ ಎಂದು ತಿಳಿಸಲಾಗಿದೆ. ಈ ಪ್ರಕರಣ ಸಂಬಂಧ ಬಡವನಹಳ್ಳಿ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಮುಂದೆ ಓದಿ...

ದೌರ್ಜನ್ಯ ಮುಕ್ತ ಬಾಲ್ಯ: ಮಕ್ಕಳ ಭವಿಷ್ಯ ಉಜ್ವಲ

  ತುಮಕೂರು:       ದೌರ್ಜನ್ಯ ಮುಕ್ತ ಬಾಲ್ಯದಿಂದ ಮಕ್ಕಳ ಭವಿಷ್ಯ ಉಜ್ವಲವಾಗಿರುತ್ತದೆ ಎಂದು ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬದಾಮಿಕರ್ ಅಭಿಪ್ರಾಯಪಟ್ಟರು.       ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ನರಸಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ ಬಾಲನ್ಯಾಯ ಕಾಯ್ದೆ ಹಾಗೂ ಮಕ್ಕಳ ಹಕ್ಕುಗಳನ್ನು ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಮಕ್ಕಳು ತಮ್ಮ ಹಕ್ಕುಗಳನ್ನು ಅನುಭವಿಸುವಲ್ಲಿ ಪೋಷಕರು, ಶಿಕ್ಷಕರು ಹಾಗೂ ಅಧಿಕಾರಿಗಳು ಅನುವು ಮಾಡಿಕೊಡಬೇಕು. ಬಾಲ್ಯದಲ್ಲಿ ಮಕ್ಕಳ ಹಕ್ಕುಗಳು ಸದುಪಯೋಗವಾಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.        ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಬಿ.ಎಲ್. ಜಿನರಾಳ್ಕರ್ ಮಾತನಾಡಿ, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪದ್ದತಿಯಂತಹ ಅನಿಷ್ಟ ಆಚರಣೆಗಳು ಮಕ್ಕಳ ಮೇಲೆ…

ಮುಂದೆ ಓದಿ...

ಗುರುಭವನದಲ್ಲಿ ಹಣಕಾಸಿನ ಅವ್ಯವಹಾರ ಖಂಡಿಸಿ ಶಿಕ್ಷಕರ ಧರಣಿ

ಮಧುಗಿರಿ :       ಪಟ್ಟಣದಲ್ಲಿರುವ ಗುರುಭವನದ ತಾಲ್ಲೂಕು ಸಮಿತಿಯಲ್ಲಿನ ಹಣಕಾಸಿನ ಅವ್ಯವಹಾರಗಳನ್ನು ಖಂಡಿಸಿ ಡಿ.1 ರಂದು ಮಧ್ಯಾಹ್ನ 12.30 ಕ್ಕೆ ಬಿ.ಇ.ಒ ಕಚೇರಿ ಎದುರು ಶಾಂತಿಯುತ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು 9 ಶಿಕ್ಷಕರ ಸಂಘಗಳು ಪ್ರಕಟಣೆಯಲ್ಲಿ ತಿಳಿಸಿದೆ.       ಗುರುಭವನದ ವಾಣಿಜ್ಯ ಮಳಿಗೆಗಳ ಸಂಪೂರ್ಣ ಕಾಮಗಾರಿಯ ಖರ್ಚು, ವೆಚ್ಚಗಳನ್ನು ಪಾಸ್ ಬುಕ್ ಸಹಿತ ನೀಡಬೇಕು, 31 ಅಂಗಡಿ ಮಳಿಗೆಗಳಿಂದ ವಸೂಲಾಗಿರುವ 12 ತಿಂಗಳ ಬಾಡಿಗೆ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮ ಮಾಡಿಬೇಕು, ಸರಕಾರದ ಸುತ್ತೋಲೆಯಂತೆ ಗುರುಭವನ ಸಮಿತಿಯ ಅಧ್ಯಕ್ಷರು ಮತ್ತು ಖಜಾಂಚಿಗಳು ಜಂಟಿಯಾಗಿ ಖಾತೆಯನ್ನು ನಿರ್ವಹಿಸಬೇಕು, 31 ಅಂಗಡಿ ಮಳಿಗೆಯವರಿಂದ ಬಾಡಿಗೆಯನ್ನು ನಗದು ರೂಪದಲ್ಲಿ ವಸೂಲು ಮಾಡದೆ ನೇರವಾಗಿ ಗುರುಭವನ ಸಮಿತಿಯ ಜಂಟಿ ಖಾತೆಗೆ ಅಂಗಡಿಯವರೆ ಬಾಡಿಗೆಯನ್ನು ಸಂದಾಯ ಮಾಡಿ ಹಣವನ್ನು ಕಟ್ಟಿದ ರಶೀದಿಯನ್ನು ನಿರ್ವಹಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಒಬ್ಬ…

ಮುಂದೆ ಓದಿ...

 ಕನ್ನಡ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಬೆಳೆಸಿ ನಾಡಿನ ಹಿರಿಮೆ ಹೆಚ್ಚಿಸಿ

ಕೊರಟಗೆರೆ:       ಹೋರಾಟ ಮತ್ತು ಸಂಘಟನೆಯಿಂದ ಕನ್ನಡ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ. ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು  ಸಂಸ್ಕೃತಿಯನ್ನು ನಾವೇಲ್ಲರು ಬೆಳೆಸಿ ಕನ್ನಡ ನಾಡಿನ ಭೂಪಟವನ್ನು ವಿಶ್ವದ ಭೂಪಟದಲ್ಲಿ ಕಾಣುವಂತಹ ಪ್ರಯತ್ನ ಮಾಡಬೇಕು ಎಂದು ಸಿವಿಲ್ ನ್ಯಾಯಾಧೀಶ ರಮೇಶ್‍ಬಾಬು ತಿಳಿಸಿದರು.       ಪಟ್ಟಣದ ಜೆಎಂಎಪ್‍ಸಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ 46ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.       ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೇ ಕನ್ನಡ ನಾಡಿನ ಪ್ರತಿಯೊಬ್ಬ ಮನುಷ್ಯನ ಜೀವನದ ಕ್ಷಣದಲ್ಲಿಯೂ ಕನ್ನಡ ಭಾಷೆಯನ್ನು ನೆನೆಯುವಂತಹ ಕೆಲಸ ಮಾಡಬೇಕು. ಬೆಂಗಳೂರು ನಗರದ ಬಹುತೇಕ ಕಡೆ ಮತ್ತು ರಾಜ್ಯದ ಗಡಿಭಾಗಗಳಲ್ಲಿ ಕನ್ನಡ ಭಾಷೆ ಮರೆಯಾಗಿ ಪರಬಾಷೆಯ ಬಳಕೆ ಹೆಚ್ಚಾಗುತ್ತೀದೆ ಎಂದು…

ಮುಂದೆ ಓದಿ...

ಸಾವಿರಾರು ಹೆಜ್ಜೇನು ಹುಳುಗಳ ದಾಳಿಗೆ ವೃದ್ಡ ಬಲಿ!!

ಕೊರಟಗೆರೆ:       ತನ್ನ ಹೊಲದಲ್ಲಿ ಹುಲ್ಲು ತರಲು ಹೋದಾಗ ಹೆಜ್ಜೇನು ದಾಳಿಗೆ ತುತ್ತಾದ ವ್ಯಕ್ತಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಕೋಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಡೆದಿದೆ.       ಹೊಳವನಹಳ್ಳಿ ಹೋಬಳಿಯ ಲಂಕೇನಹಳ್ಳಿ ಗ್ರಾಮದ ವೃದ್ದ ಹನುಮಂತರಾಯಪ್ಪ (70) ಎಂಬ ವ್ಯಕ್ತಿ ತನ್ನ ಹೊಲದಲ್ಲಿ ಹುಲ್ಲು ತರಲು ಹೋದಾಗ ಏಕಾಏಕಿ ಮೂರು ಸಾವಿರಕ್ಕೂ ಹೆಚ್ಚು ಹೆಜ್ಜೇನು ಹುಳುಗಳು ದಾಳಿ ಮಾಡಿವೆ.  ಹೆಜ್ಜೇನುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಅವರು ಮೈ ಮೇಲಿನ ಬಟ್ಟೆ ಬಿಚ್ಚಿ ಹಾಕಿ ಸಮೀಪದಲ್ಲೇ ಇದ್ದ ನೀರಿನ ತೊಟ್ಟಿ ಒಳಗೆ ಧುಮುಕಿದ್ದಾರೆ. ಹೀಗಿದ್ದರೂ ಹೆಜ್ಜೇನು ದಾಳಿ ಮಾಡುವುದನ್ನು ನಿಲ್ಲಿಸಲಿಲ್ಲ. ಅವರ ಚೀರಾಟ, ಕೂಗಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅವರನ್ನು ಗ್ರಾಮದೊಳಗೆ ಕರೆದುಕೊಂಡು ಬಂದ್ರು ಬನಿಯನ್ ಒಳಗೆ 10ಕ್ಕೂ ಹೆಚ್ಚು ಹೆಜ್ಜೇನುಗಳು ಇದ್ದುದು ಕಂಡು ಬಂದಿದೆ. ಇದಲ್ಲದೆ ಕೊರಟಗೆರೆ ಆಸ್ಪತ್ರೆಗೆ ಕರೆತಂದರು ಕೂಡ ಅವರ…

ಮುಂದೆ ಓದಿ...