ಡಿ.30ರೊಳಗೆ ಕುಡಿಯುವ ನೀರಿನ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಿ – ಸಚಿವ ಕೃಷ್ಣಭೈರೇಗೌಡ.

ತುಮಕೂರು :       ತುಮಕೂರು ಜಿಲ್ಲೆಯ 10 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಎಲ್ಲಾ ಕಾಮಗಾರಿಗಳಿಗೆ ಡಿಸೆಂಬರ್ 30ರೊಳಗೆ ಕಾಮಗಾರಿಗಳ ಆದೇಶವನ್ನು ನೀಡಿ ಆದಷ್ಟು ಶೀಘ್ರ ಕುಡಿಯುವ ನೀರಿನ ಕೊರತೆ ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ಅವರು ತಾಲ್ಲೂಕು ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಗ್ರಾಮೀಣ ಕುಡಿಯುವ ನೀರು ಯೋಜನೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.       ತುಮಕೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಬರಗಾಲ ಸಂದರ್ಭದಲ್ಲಿ ಕುಡಿಯುವ ನೀರು ಒದಗಿಸಲು ಈಗಾಗಲೇ ಪ್ರತಿ ತಾಲ್ಲೂಕಿಗೆ 50ಲಕ್ಷ ರೂ.ನಂತೆ ಜಿಲ್ಲೆಗೆ 5 ಕೋಟಿ ರೂ. ಗಳನ್ನು ಬಿಡುಗಡೆ ಮಾಡಲಾಗಿದೆ. ಬರಗಾಲದ ಸಂದರ್ಭದಲ್ಲಿ ಯಾವ…

ಮುಂದೆ ಓದಿ...

ಪ್ರೀತಿ ನಿರಾಕರಿಸಿದ್ದಕ್ಕೆ ಬಾಲಕಿಗೆ ಬೆಂಕಿ ಹಚ್ಚಿದ ದು‍ಷ್ಟರು

ವಿಜಯಪುರ :        ಪ್ರೀತಿ ನಿರಾಕರಿಸಿದ್ದಕ್ಕೆ ಹಾಗೂ ಆ ವಿಷಯವನ್ನು ಪೋಷಕರಿಗೆ ತಿಳಿಸಿದ ಕಾರಣ ಅಪ್ರಾಪ್ತ ಬಾಲಕಿಗೆ ಬೆಂಕಿ ಹಚ್ಚಿ ಕೊಲೆ ಮಾಡಿರುವ ಧಾರುಣ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.       ಕೊಲೆಯಾದ ಬಾಲಕಿಯನ್ನು ರತ್ನಾಪುರ ಗ್ರಾಮದ ಪ್ರಾಜಕ್ತಾ ಬಲಭೀಮ ನರಳೆ (14) ಎಂದು ಗುರುತಿಸಲಾಗಿದೆ. ಶಂಕರ್ ಹಿಪ್ಪರಕರ, ಮೋಹನ್ ಎಡವೆ ಎಂಬ ಇಬ್ಬರು ಅಪ್ರಾಪ್ತೆಗೆ ಪ್ರೀತಿಸು ಎಂದು ಬೆನ್ನು ಬಿದ್ದಿದ್ದರು. ಶುಕ್ರವಾರ ಹೀಗೆ ಆಕೆಗೆ ಇಬ್ಬರೂ ಕಿರುಕುಳ ನೀಡಿದ್ದಾರೆ. ಮನೆಯಲ್ಲಿ ವಿಷಯ ತಿಳಿಸದಂತೆ ಬೆದರಿಕೆ ಹಾಕಿದ್ದರು. ಆದರೆ ಅಪ್ರಾಪ್ತೆ ಇವರ ಪ್ರೀತಿಯನ್ನು ನಿರಾಕರಿಸಿ ತನ್ನ ಪೋಷಕರಿಗೆ ಈ ವಿಷಯವನ್ನು ತಿಳಿಸಿದ್ದಳು.        ಬಾಲಕಿ ಪೋಷಕರು ಪ್ರಾಜಕ್ತಳನ್ನು ಮರುದಿನ ಅಂದರೆ ಶನಿವಾರ ಶಾಲೆ ಬಿಡಿಸಿ ಮನೆಯಲ್ಲಿ ಇರಿಸಿಕೊಂಡಿದ್ದರು. ಇಬ್ಬರಿಗೂ ಮದುವೆಯಾಗಿದ್ರೂ, ಪ್ರಾಜಕ್ತ ಹಿಂದೆ ಬಿದ್ದಿದ್ದರು. ಪ್ರಾಜಕ್ತಾ ಶನಿವಾರ ಶಾಲೆಗೆ ಹೋಗದಿದ್ದಾಗ ಮನೆಯಲ್ಲಿ ವಿಷಯ ತಿಳಿಸಿದ್ದಾಳೆ…

ಮುಂದೆ ಓದಿ...

ಹಂಪಿ ಉತ್ಸವ ನಡೆಸಿ, ನಾನು ದುಡ್ಡು ನೀಡುತ್ತೇನೆ: ಜನಾರ್ದನ ರೆಡ್ಡಿ

ಬಳ್ಳಾರಿ:       ಬರದ ಕಾರಣವೊಡ್ಡಿ ಹಂಪಿ ಉತ್ಸವ ರದ್ದು ಮಾಡಲು ಸರಕಾರ ಮುಂದಾಗಿರುವುದಕ್ಕೆ ಮಾಜಿ ಸಚಿವ, ಗಣಿಧಣಿ ಜಿ.ಜನಾರ್ದನ ರೆಡ್ಡಿ ಅವರು ವಿರೋಧ ವ್ಯಕ್ತ ಪಡಿಸಿದ್ದು, ಅದ್ಧೂರಿ ಉತ್ಸವಕ್ಕೆ ಆರ್ಥಿಕ ನೆರವು ಸೇರಿದಂತೆ ಸಕಲ ರೀತಿಯಲ್ಲಿ ಸಹಕರಿಸುವುದಾಗಿ ಹೇಳಿಕೊಂಡಿದ್ದಾರೆ.       ಈ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಸವಾಲು ಹಾಕಿದ್ದಾರೆ.       ಕೋಟಿ ಕೋಟಿ ಖರ್ಚು ಮಾಡಿ ಕೃತಜ್ಞತಾ ಸಮಾವೇಶ ಮಾಡ್ತೀರಿ. ಉಪ ಚುನಾವಣೆ ಗೆಲ್ಲೋದಕ್ಕೆ ನೀರಿನಂತೆ ಹಣ ಖರ್ಚು ಮಾಡ್ತೀರಿ. ಅವೆಲ್ಲದಕ್ಕೂ ಇರದ ಬರ, ಹಂಪಿ ಉತ್ಸವದ ವಿಚಾರಕ್ಕೆ ಏಕೆ ಬರುತ್ತೆ ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಹಂಪಿ ಉತ್ಸವ ಮಾಡಲು ನಿಮ್ಮ ಕೈಲಿ ಆಗಲಿಲ್ಲ ಅಂದ್ರೆ ಹೇಳಿ. ನಾನು ದುಡ್ಡು ಕೊಡ್ತೇನೆ. ಹಂಪಿ ಉತ್ಸವ ನಡೆಸಿ ಅಂತ…

ಮುಂದೆ ಓದಿ...

ಮಠಕ್ಕೆ ಮರಳಿದ ಸಿದ್ದಗಂಗಾ ಶ್ರೀ

ಬೆಂಗಳೂರು:        ಆರೋಗ್ಯ ತಪಾಸಣೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗಾ ಮಠಾಧ್ಯಕ್ಷರಾದ ಡಾ.ಶಿವಕುಮಾರ ಸ್ವಾಮೀಜಿ ಸೋಮವಾರ ಮಧ್ಯಾಹ್ನ ಮಠಕ್ಕೆ ಮರಳಿದರು.       ಡಿ.1 ರಂದು ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಶಿವಕುಮಾರ ಸ್ವಾಮೀಜಿಗಳು, ನಗರದ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಶ್ರೀಗಳ ಆರೋಗ್ಯ ತಪಾಸಣೆ ನಡೆಸಿದಾಗ ರಕ್ತ ಹಾಗೂ ಕಿಡ್ನಿಯಲ್ಲಿ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರು.       ಜತೆಗೆ ಎರಡು ಸ್ಟಂಟ್‌ಗಳನ್ನು ಸಹ ಶಸ್ತ್ರಚಿಕಿತ್ಸೆ ಇಲ್ಲದೆ ಅಳವಡಿಸಲಾಗಿದೆ. ರವಿವಾರ ಶ್ರೀಗಳು ಚೇತರಿಸಿಕೊಂಡಿದ್ದರು. ಆದರೆ, ಶ್ರೀಗಳು ಮಠಕ್ಕೆ ತೆರಳಲೇಬೇಕು ಎಂದು ಹಠ ಮಾಡಿದರು. ಹಾಗಾಗಿ ಸೋಮವಾರ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಿದ್ದೇವೆ ಎಂದು ವೈದ್ಯ ಡಾ.ರವೀಂದ್ರ ಅವರು ಸುದ್ದಿಗಾರರಿಗೆ ತಿಳಿಸಿದರು.       ಶಿವಕುಮಾರ ಸ್ವಾಮೀಜಿಗಳಿಗೆ ಇನ್ನೂ 3-4 ಆಂಟಿ…

ಮುಂದೆ ಓದಿ...

” ಜೀವನ ಸಾರ್ಥಕವಾಗಬೇಕಾದರೆ ಎಲ್ಲರ ಹಿತ ಚಿಂತನೆ ಮಾಡಬೇಕು” -ಶ್ರೀ ಹನುಮಂತನಾಥ ಸ್ವಾಮೀಜಿ

ಮಧುಗಿರಿ :       ಧಾರ್ಮಿಕ ಆಚರಣೆಗಳಿಂದ ಮಾತ್ರ ಸಮಾಜದ ಸರ್ವರನ್ನು ಒಗ್ಗೂಡಿಸಲು ಸಾಧ್ಯ ಎಂದು ಕುಂಚಿಟಿಗ ಮಠದ ಪೀಠಾಧ್ಯಕ್ಷ ಶ್ರೀ ಹನುಮಂತನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.       ತಾಲ್ಲೂಕಿನ ಹೊಸಕೆರೆ ಗ್ರಾಮದ ಶ್ರೀ ಬೊಮ್ಮಲಿಂಗೇಶ್ವರ ಮತ್ತು ಶ್ರೀ ವೀರನಾಗಮ್ಮ ದೇವಾಲಯಗಳಲ್ಲಿ ಕಾರ್ತಿಕ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ದಾನ, ಧರ್ಮ, ಸತ್ಕಾರ್ಯ ಚಿಂತನೆಗಳಲ್ಲಿ ತೊಡಗಿಸಿಕೊಳ್ಳಬೇಕು. ಜೀವನ ಸಾರ್ಥಕವಾಗಬೇಕಾದರೆ ಸರ್ವೇಜನ ಸುಖಿನೋ ಭವಂತು ಎನ್ನುವ ರೀತಿ ಎಲ್ಲರ ಹಿತ ಚಿಂತನೆ ಮಾಡಬೇಕು. ಭಕ್ತಿಯಲ್ಲಿ ಧಾರ್ಮಿಕತೆಯಲ್ಲಿ ಭೇದ ಭಾವ ಮಾಡಬಾರದು. ಸ್ವಾರ್ಥ ಅಳಿಸಿ ನಿಸ್ವಾರ್ಥ ಸೇವೆಯಲ್ಲಿ ತೊಡಗಿದಾಗ ಮಾನವೀಯ ಮೌಲ್ಯಗಳು ಪ್ರಕಾಶಿಸುತ್ತವೆ ಎಂದರು.       ಅರ್ಚಕ ನಾಗರಾಜು, ದೇವಾಲಯ ಸಮಿತಿ ಪದಾಧಿಕಾರಿಗಳಾದ ಎಚ್.ಬಿ.ವೀರಣ್ಣ, ಬೊಮ್ಮಲಿಂಗಯ್ಯ, ದಿನೇಶ್, ಕೃಷ್ಣ, ಬೊಮ್ಮಣ್ಣ, ವೀರಣ್ಣ, ರಾಮಕೃಷ್ಣ ಮುಂತಾದವರು ಇದ್ದರು.

ಮುಂದೆ ಓದಿ...

ವಿಕಲಚೇತನರಿಗೆ ಅನುಕಂಪ ಬೇಡ-ಅವಕಾಶ ನೀಡಿ – ಜಿ.ಪಂ. ಅಧ್ಯಕ್ಷೆ ಲತಾ ರವಿಕುಮಾರ್.

ತುಮಕೂರು :       ವಿಕಲಚೇತನರಿಗೆ ಅನುಕಂಪಕ್ಕೆ ಬದಲಾಗಿ ಸಾಮಾನ್ಯರಂತೆ ಬದುಕಲು ಅವಕಾಶ ನೀಡಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್ ಅಭಿಪ್ರಾಯಪಟ್ಟರು.       ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಸರ್ಕಾರೇತರ ಶಾಲೆ/ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಬಾಲಭವನದಲ್ಲಿಂದು ಏರ್ಪಡಿಸಿದ್ದ “ವಿಶ್ವ ವಿಕಲಚೇತನರ ದಿನಾಚರಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು.       ಸರ್ಕಾರವು ವಿಕಲಚೇತನರಿಗಾಗಿ ವಿಶೇಷ ಶಾಲೆಗಳ ಸೌಲಭ್ಯ ಒದಗಿಸಿದ್ದು, ವಿದ್ಯಾಭ್ಯಾಸ ಹಾಗೂ ಉದ್ಯೋಗದಲ್ಲಿ ಮೀಸಲಾತಿಯನ್ನು ಕಲ್ಪಿಸಿದೆ. ಈ ನಿಟ್ಟಿನಲ್ಲಿ ವಿಕಲಚೇತನರು ಸರ್ಕಾರಿ ಸೌಲಭ್ಯಗಳನ್ನು ಪಡೆದು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಬೇಕು. ಕಳೆದ 3 ವರ್ಷಗಳಿಂದ ಜಿಲ್ಲಾ ಪಂಚಾಯತಿಯಲ್ಲಿ ವಿಕಲಚೇತನರಿಗಾಗಿ ಮೀಸಲಾಗಿಟ್ಟಿದ್ದ ಸುಮಾರು 80ಲಕ್ಷ ರೂ. ಹಣವನ್ನು ಸ್ವಯಂ…

ಮುಂದೆ ಓದಿ...

ಗಣಪತಿ ಜಾತ್ರೆಯಲ್ಲಿ ಪಟಾಕಿ ದುರಂತಕ್ಕೆ ಯುವತಿ ಬಲಿ

ತಿಪಟೂರು :       ನಗರದಲ್ಲಿ ನಡೆದ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಸಿಡಿಮದ್ದು ಪ್ರದರ್ಶನದ ವೇಳೆ ಪಟಾಕಿ ಹಚ್ಚಿದ ಸಂದರ್ಭದಲ್ಲಿ ಪಟಾಕಿಯ ರಭಸಕ್ಕೆ ಸ್ಥಳದಲ್ಲಿದ್ದ ಕಲ್ಲು ಸಿಡಿದು ಯುವತಿ ಸಾವನ್ನಪ್ಪಿದ್ದಾಳೆ.       ಸಿತಾರ(23) ಮೃತ ದುರ್ದೈವಿ. ಈಕೆ ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿ ಮಾರಸಂದ್ರ ಗ್ರಾಮದ ವಾಸಿ ರಾಜಣ್ಣನ ಮಗಳು.ಬೆಂಗಳೂರಿನಲ್ಲಿ ವಾಸವಿದ್ದ ಸಿತಾರ ಸಂಬಂಧಿಕರ ಮನೆಗೆ ಗಣಪತಿ ಜಾತ್ರೆಗೆ ಶನಿವಾರ ಆಗಮಿಸಿದ್ದು ಭಾನುವಾರ ತಡರಾತ್ರಿ 1 ಗಂಟೆ ಸಮಯದಲ್ಲಿ ದುರ್ಮರಣಕ್ಕೀಡಾಗಿದ್ದಾರೆ ಎನ್ನಲಾಗಿದೆ.       ಪಟಾಕಿ ಪ್ರದರ್ಶನದ ವೇಳೆ ಕಲ್ಲು ಸಿಡಿದು ಕಲ್ಲಿನ ಬಲವಾದ ಪೆಟ್ಟಿನಿಂದ ಸಿತಾರ ಮೃತಪಟ್ಟಿರಬಹುದೆಂದು ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಮೃತಳ ದೇಹದ ಮೇಲೆ ಯಾವುದೇ ಸುಟ್ಟ ಗಾಯಗಳಾಗಿಲ್ಲ ಕೇವಲ ಕಲ್ಲಿನ ಏಟಿನಿಂದ ಸಾವು ಸಂಭವಿಸಿರಬಹುದು ಎಂದು ವೈದ್ಯರು ತಿಳಿಸಿದ್ದು, ಈ ಸಾವು ಹಲವು ಅನುಮಾನಕ್ಕೆ ಎಡೆ ಮಾಡಿ…

ಮುಂದೆ ಓದಿ...