ನ್ಯಾಯಾಲಯದ ಆವರಣದಲ್ಲೇ ಎಸಿಬಿ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್!

ತಿಪಟೂರು:       ಎಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಬ್ಲಿಕ್ ಪ್ರಾಸಿಕ್ಯೂಟರ್ ಸಿಕ್ಕಿಬಿದ್ದಿದ್ದಾರೆ. 20 ಸಾವಿರ ಲಂಚ ಸ್ವೀಕಾರ ಮಾಡುವಾಗ ರೆಡ್ ಹ್ಯಾಂಡ್ ಅಗಿ ಬಲೆಗೆ ಬಿದ್ದಿದ್ದಾರೆ.       ತುಮಕೂರು ಜಿಲ್ಲೆಯ ತಿಪಟೂರು ನ್ಯಾಯಾಲಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಪೂರ್ಣಿಮಾ ಅವರು ಕಕ್ಷಿದಾರರಿಂದ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.       ಕೆಇಬಿಯ ಇಂಜಿನಿಯರ್ ಗುರುಸ್ವಾಮಿ ಅವರ ಬಳಿ ಪಬ್ಲಿಕ್ ಪ್ರಾಸಿಕ್ಯೂಟರ್ ಪೂರ್ಣಿಮಾ ಅವರು 40 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 20 ಸಾವಿರ ರೂ.ಗಳನ್ನು ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ.       ತಿಪಟೂರು ಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪೂರ್ಣಿಮಾ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.    Share

ಮುಂದೆ ಓದಿ...

ಮೇವು, ನೀರು ಪೂರೈಕೆಯಾಗಲಿ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅಧಿಕಾರಿಗಳಿಗೆ ಸೂಚನೆ

 ತುಮಕೂರು:       ಜಿಲ್ಲೆಯ 10 ತಾಲ್ಲೂಕುಗಳು ಬರಪೀಡಿತವಾಗಿರುವುದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಮೇವಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಕ್ರಮಕೈಗೊಳ್ಳಬೇಕೆಂದು ಯೋಜನೆ ಮತ್ತು ಸ್ಯಾಂಖಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ: ಶಾಲಿನಿ ರಜನೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.       ಇಂದು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ತುಮಕೂರು ಜಿಲ್ಲೆಯಲ್ಲಿ ಬರಪರಿಹಾರ ಹಾಗೂ ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಕುರಿತ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.       ಜಿಲ್ಲೆಯಲ್ಲಿ ಬರವಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇರುತ್ತದೆ. ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಮಾಡಬೇಕು. ಅಲ್ಲದೆ ಜನರ ಬಳಿಗೆ ಧಾವಿಸಿ ಅವರ ಸಮಸ್ಯೆಗಳನ್ನು ಆಲಿಸಿ ಅವರ ಸಮಸ್ಯೆಗೆ ಸ್ಪಂದಿಸಬೇಕು. ಜಾನುವಾರುಗಳಿಗೂ ನೀರು ಮತ್ತು ಮೇವು ಕೊರತೆಯಾಗದಂತೆ ನೋಡಿಕೊಳ್ಳಿ ಎಂದು…

ಮುಂದೆ ಓದಿ...

SSLC ಫಲಿತಾಂಶ: ತುಮಕೂರಿಗೆ 18ನೇ ಸ್ಥಾನ

ತುಮಕೂರು:        ತುಮಕೂರು ಶೈಕ್ಷಣಿಕ ಜಿಲ್ಲೆಯು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ರಾಜ್ಯದಲ್ಲಿ 18ನೇ ಸ್ಥಾನ ಪಡೆದುಕೊಂಡಿದೆ ಎಂದು ಡಿಡಿಪಿಐ ಎಂ.ಆರ್. ಕಾಮಾಕ್ಷಿ ತಿಳಿಸಿದ್ದಾರೆ.       ಜಿಲ್ಲೆಯಲ್ಲಿ ಕಳೆದ 2019ರ ಮಾರ್ಚ್ ಮಾಹೆಯಲ್ಲಿ ನಡೆದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ನೋಂದಣಿಯಾದ 21126(ಬಾಲಕರು-11253, ಬಾಲಕಿಯರು-9873) ವಿದ್ಯಾರ್ಥಿಗಳ ಪೈಕಿ 16947(ಬಾಲಕರು-8718, ಬಾಲಕಿಯರು-8229) ವಿದ್ಯಾರ್ಥಿಗಳು ತೇರ್ಗಡೆ ಹೊಂದಿ, ಶೇ.80.21 ಫಲಿತಾಂಶ ಲಭಿಸಿದೆ. ತೇರ್ಗಡೆಯಾದ ಒಟ್ಟು 16947 ವಿದ್ಯಾರ್ಥಿಗಳಲ್ಲಿ ಕನ್ನಡ ಮಾಧ್ಯಮದ 9160, ಆಂಗ್ಲ ಮಾಧ್ಯಮದ 7754, ಉರ್ದು ಮಾಧ್ಯಮದ 33 ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಶಾಲೆಗಳ 5356, ಅನುದಾನಿತ ಶಾಲೆಗಳ 6594, ಅನುದಾನಿತ ರಹಿತ ಶಾಲೆಗಳ 4997 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇವರಲ್ಲಿ 2712 ಪರಿಶಿಷ್ಟ ಜಾತಿ, 974 ಪ.ಪಂಗಡ, 1697 ಪ್ರವರ್ಗ-1, 3655 ಪ್ರವರ್ಗ-2ಎ, 1598 ಪ್ರವರ್ಗ-2ಬಿ, 3474 ಪ್ರವರ್ಗ 3ಎ, 2479 ಪ್ರವರ್ಗ 3ಬಿ ಹಾಗೂ…

ಮುಂದೆ ಓದಿ...

ಆಯೋಗಕ್ಕೆ ಮುಖ್ಯ ಕಾರ್ಯದರ್ಶಿ ಪತ್ರ ಬರೆಯಲಿ : ಬಿಜೆಪಿ ಶಾಸಕರ ಒತ್ತಾಯ

ತುಮಕೂರು:       ಲೋಕಸಭಾ ಚುನಾವಣೆ ರಾಜ್ಯದಲ್ಲಿ ಮುಗಿದಿದೆ. ಬರ ಪರಿಹಾರ ಕಾಮಗಾರಿ ಕೈಗೊಳ್ಳಲು, ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು ನೀತಿ ಸಂಹಿತೆ ಅಡ್ಡಿಯಾಗಿದೆ. ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಚುನಾವಣಾ ಆಯೋಗಕ್ಕೆ ಪತ್ರ ಬರೆದು ನೀತಿ ಸಂಹಿತೆ ಸಡಿಸಲು ಕೋರಬೇಕು ಎಂದು ಜಿಲ್ಲೆಯ ಬಿಜೆಪಿ ಶಾಸಕರು ಒತ್ತಾಯ ಮಾಡಿದ್ದಾರೆ.       ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಮಸಾಲಾ ಜಯರಾಮ್, ಜ್ಯೋತಿಗಣೇಶ್, ‘ರಾಜ್ಯದಲ್ಲಿ 126 ತಾಲ್ಲೂಕು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಚುನಾವಣೆ ನೀತಿ ಸಂಹಿತೆ ಕಾರಣ ಹೇಳಿಕೊಂಡು ಎರಡು ತಿಂಗಳು ಏನೂ ಕೆಲಸಗಳು ಆಗಿಲ್ಲ. ಚುನಾವಣೆ ಮುಗಿದ ಬಳಿಕವೂ ಅದೇ ಸ್ಥಿತಿ ಆದರೆ ಹೇಗೆ’..? `ನಮ್ಮ ಕ್ಷೇತ್ರದಲ್ಲಿ ನೀರಿಗಾಗಿ, ದನಕರುಗಳಿಗೆ ಮೇವಿಗಾಗಿ, ಬರಪರಿಹಾರ ಕಾಮಗಾರಿಗೆ ಜನ ಒತ್ತಾಯಿಸುತ್ತಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಿಂದ ಹಿಡಿದು ಜಿಲ್ಲಾಧಿಕಾರಿವರೆಗೂ ಯಾರೂ ನಮ್ಮ ಕಷ್ಟ ಕೇಳುತ್ತಿಲ್ಲ. ಫೋನ್ ಮಾಡಿದರೆ…

ಮುಂದೆ ಓದಿ...

ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ಕೈಗೊಳ್ಳಲು ಡಿಸಿ ಸೂಚನೆ

ಮಧುಗಿರಿ:       ಗಡಿಭಾಗದಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬಾರದ ಕಾರಣ ನೀರು ಮತ್ತು ಜಾನುವಾರುಗಳಿಗೆ ಮೇವಿನ ಕೊರತೆಯಾದ ಹಿನ್ನೆಲೆಯಲ್ಲಿ ಇತ್ತೀಚಿಗೆ ಮೇವು ಬ್ಯಾಂಕ್ ತೆರೆದಿದ್ದು ದಿಢೀರ್ ಜಿಲ್ಲಾಧಿಕಾರಿ ಡಾ ಕೆ ರಾಕೇಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.       ತಾಲೂಕಿನ ಪುರವರ ಗಂಕಾರನಹಳ್ಳಿ ತೋಪು ಹಾಗೂ ಮೈದನಹಳ್ಳಿ ಮೇವು ಬ್ಯಾಂಕಿಗೆ ಭೇಟಿ ನೀಡಿ ಪಶು ಅಧಿಕಾರಿಗಳು ಹಾಗೂ ರೈತರೊಂದಿಗೆ ಚರ್ಚಿಸಿದರು. ಈ ವೇಳೆ ಗೋ ಶಾಲೆಯ ಬದಲು ಮೇವು ಬ್ಯಾಂಕ್ ತೆರದಿದ್ದು ತುಂಬ ಅನುಕೂಲಕರವಾಗಿದೆ, ಆದರೆ ಮೈದನಹಳ್ಳಿ ಮೇವು ಬ್ಯಾಂಕಿನಲ್ಲಿ ಹಸಿ ಮೇವು ವಿತರಿಸಲಾಗುತ್ತಿದೆ ಜೋಳದ ಮೇವು ಹಸಿಯಾಗಿರುತ್ತದೆ ಇದರ ಬದಲು ಬತ್ತದ ಮೇವು ಗುಣಮಟ್ಟದಿಂದ ಕೊಡಿದ್ದು ಇದನ್ನೇ ವಿತರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ರೈತರು ಮನವಿ ಮಾಡಿದರು       ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ 14 ನೇ ಹಣಕಾಸಿನ…

ಮುಂದೆ ಓದಿ...

ಪಾವಗಡ : ನರೇಗ ಕಾಮಗಾರಿಗಳ ವೀಕ್ಷಣೆ

ಪಾವಗಡ :       ಬರನಿರ್ವಹಣೆಯಲ್ಲಿ ಶುದ್ದಕುಡಿಯುವ ನೀರು ಪೂರೈಕೆಯಲ್ಲಿ ಯಾವುದೇ ತಾರತಮ್ಯ ಮಾಡುವಂತಿಲ್ಲ ಸಾಕಷ್ಟು ಅನುದಾನವಿದ್ದು ಬಳಕೆ ಮಾಡಿಕೊಳ್ಳುವಂತೆ ಪಂಚಾಯತ್ ರಾಜ್ ಇಲಾಖೆಯ ಪ್ರಾಧಾನ ಕಾರ್ಯದರ್ಶಿಗಳಾದ ಎಲ್.ಕೆ.ಅತೀಕ್ ತಿಳಿಸಿದರು.       ಬುದವಾರ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ಶುದ್ದಕುಡಿಯುವ ನೀರಿನ ಸಮಸ್ಯೆ ಮತ್ತು ನರೇಗ ಕಾಮಗಾರಿಗಳನ್ನು ವೀಕ್ಷಣೆಗಾಗಿ ಆರ್.ಹೊಸಕೋಟೆ ಗ್ರಾಮಕ್ಕೆ ಬೇಟಿ ನೀಡಿ ಶುದ್ದಕುಡಿಯುವ ನೀರು ಪೂರೈಕೆಗಾಗಿ ಖಾಸಗಿಯವರಿಂದ ಬಾಡಿಗೆಗೆ ಪಡೆದ ಬೋರೆಗಳ ಬಗ್ಗೆ ರೈತರಿಂದ ಮಾಹಿತಿ ಪಡೆದಿದ್ದು ,ಬೆಳೆ ಇಟ್ಟರೆ ನೀರು ಬಿಡಲು ಸಾದ್ಯವಿಲ್ಲ ಎಂದು ರೈತರು ತಿಳಿಸಿದ್ದು, ಗ್ರಾಮದಲ್ಲಿನ ಶುದ್ದಕುಡಿಯುವ ನೀರಿನ ಘಟಕಗಳ ನಿರ್ವಹಣಿಯ ಬಗ್ಗೆ ಮಾಹಿತಿ ಪಡೆದರು.       ಕೋಡಮೋಡಗು ಗ್ರಾಮ ಪಂಚಾಯ್ತಿಯ ನೂತನ ಕಟ್ಟಡ ಪರಿಶೀಲಿಸಿ ಗುಣಮಟ್ಟದ ಕಟ್ಟದ ನಿರ್ಮಾಣಕ್ಕೆ ಹಣ ಅಗತ್ಯವಾದಲ್ಲಿ ನರೇಗ ಹಣ ಬಳಕೆ ಮಾಡಿಕೋಳ್ಳಲು ತಿಳಿಸಿದ ಅವರು ಬೈರಾಪುರ ಗ್ರಾಮದ…

ಮುಂದೆ ಓದಿ...

ಗಣಿಬಾಧಿತ ಪ್ರದೇಶಕ್ಕೆ ಸೌಲಭ್ಯ ಮರೀಚಿಕೆ

ಗುಬ್ಬಿ:       ದಶಕದ ಹಿಂದೆ ಗಣಿಗಾರಿಕೆಯಿಂದ ನಲುಗಿದ್ದ ತಾಲ್ಲೂಕಿನ ನಿಟ್ಟೂರು ಹೋಬಳಿಯ ಕೊಂಡ್ಲಿ ಸುತ್ತಲಿನ ಹಳ್ಳಿಗಳ ಜನರಿಗೆ ಮೂಲ ಸೌಲಭ್ಯಗಳು ಮರೀಚಿಕೆ ಆಗಿವೆ. ಇಲ್ಲಿ ಮೊದಲಿದ್ದ ಅತ್ಯಂತ ಸುಂದರ ಭೌಗೊಳಿಕ ರಚನೆ ಹಾಗೂ ಪ್ರಕೃತಿಯ ಸೌಂದರ್ಯ ನಾಶವಾಗಿದೆ. ಇದನ್ನು ಪುನಃ ಕಟ್ಟುವ ಯೋಜನೆಗೆ ಕಾಯಕಲ್ಪ ಸಿಗಬೇಕಿದೆ.       ಶಿವಸಂದ್ರ, ಎಮ್ಮೆದೊಡ್ಡಿ, ಮುಸಕೊಂಡ್ಲಿ, ಮಾವಿನಹಳ್ಳಿ, ಕಂಚಿಗಾನಹಳ್ಳಿ, ಕೊಂಡ್ಲಿಕ್ರಾಸ್, ಬ್ಯಾಟಪ್ಪನಪಾಳ್ಯ, ಹೊನ್ನೇನಹಳ್ಳಿ, ದೊಡ್ಡಕೊಂಡ್ಲಿ, ಹರೇನಹಳ್ಳಿ, ಕಾರೇಕುರ್ಚಿ ಭಾಗದ ರೈತರು ಗಣಿಗಾರಿಕೆಯ ಕರಾಳ ಪರಿಣಾಮಗಳಿಂದ ಈಗಾಗಲೇ ತತ್ತರಿಸಿದ್ದಾರೆ. ಇಲ್ಲಿನ ಜನರು ಪಂಚಾಯಿತಿ ಮಟ್ಟದಲ್ಲಿ ಜಾರಿಯಾಗುವ ಯೋಜನೆಗಳಿಗಷ್ಟೇ ತೃಪ್ತಿಪಟ್ಟುಕೊಳ್ಳಬೇಕಿದೆ.       ‘ಗಣಿಗಾರಿಕೆ ಕಾರಣ ಸುತ್ತಲ ಹಳ್ಳಿಗಳ ರೈತರ ಜಮೀನು ಫಲವತ್ತತೆ ಕಳೆದುಕೊಂಡಿದೆ. ಗೋಮಾಳ, ಹುಲ್ಲುಗಾವಲು ಪ್ರದೇಶ ಮತ್ತು ಗೋಕಟ್ಟೆ ಮರೆಯಾಗಿವೆ. ಇವನ್ನು ಮೊದಲಿನಂತೆ ಪುನರ್ ನಿರ್ಮಿಸಬೇಕು ಎನ್ನುವ ಒತ್ತಾಯವೂ ರೈತರಿಂದ ಕೇಳಿಬಂದಿದೆ. ಒಮ್ಮೊಮ್ಮೆ ಹೆಚ್ಚು…

ಮುಂದೆ ಓದಿ...

ಅಂತರ್ಜಲದ ಕತ್ತು ಹಿಸುಕಿದ ಮರಳು ಮಾಫಿಯಾ

ಚಿಕ್ಕನಾಯಕನಹಳ್ಳಿ:      ತಾಲ್ಲೂಕಿನ ಭೂ ಸ್ವರೂಪ ಅರೆ ಮಲೆನಾಡು ಹಾಗೂ ಬಯಲುಸೀಮೆಯನ್ನು ಕೂಡಿಸುವ ಕೊಂಡಿಯಂತಿದೆ. ಕೃಷ್ಣ ಹಾಗೂ ಕಾವೇರಿ ಕೊಳ್ಳಗಳ ನಡುವೆ ವಿಭಾಗಿಸಿದೆ.       ಆದ್ದರಿಂದ ತಾಲ್ಲೂಕಿನ ರೈತರು ತೆಂಗಿಗೂ ಸೈ ಹಾಗೂ ಸಿರಿಧಾನ್ಯಕ್ಕೂ ಜೈ ಎನ್ನುತ್ತಾರೆ. ಆದರೆ ಕಳೆದ ಎರಡು ದಶಕಗಳಿಂದ ತಾಲ್ಲೂಕಿನಲ್ಲಿ ಚಾಲ್ತಿಯಲ್ಲಿರುವ ಕಬ್ಬಿಣದ ಅದಿರು ಗಣಿಗಾರಿಕೆ, ಅಕ್ರಮ ಮರಳು ಮಾಫಿಯಾ ಹಾಗೂ ಅಕ್ರಮ ಇಟ್ಟಿಗೆ ಕಾರ್ಖಾನೆಗಳು ತಾಲ್ಲೂಕಿನ ಭೂ ಸ್ವರೂಪ ಹಾಳುಗೆಡವಿವೆ. ರೈತರ ಬದುಕನ್ನು ಮೂರಾಬಟ್ಟೆ ಮಾಡಿವೆ.       ತಾಲ್ಲೂಕಿನ ಉದ್ದಕ್ಕೂ ಚಾಚಿಕೊಂಡಿದ್ದ ಅಬ್ಬಿಗೆ, ಮದನಿಂಗನಕಣಿವೆ ಹಾಗೂ ಕುದುರೆ ಕಣಿವೆಯ ಬೆಟ್ಟಸಾಲುಗಳು ಹಾಗೂ ತಿಪಟೂರು ತಾಲ್ಲೂಕಿನ ಹಾಲ್ಕುರಿಕೆಯಿಂದ ಬೋರನಕಣಿವೆ ವರೆಗೆ ಚಾಚಿಕೊಂಡಿರುವ ಸುವರ್ಣಮುಖಿ ಹಳ್ಳ ತಾಲ್ಲೂಕಿನ ಭೂ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದವು. ಕಬ್ಬಿಣದ ಅದಿರು ಗಣಿಗಾರಿಕೆ ಹಾಗೂ ಅಕ್ರಮ ಮರಳು ಗಣಿಗಾರಿಕೆ ನೇರವಾಗಿ ಈ ಎರಡು ಪ್ರಾಕೃತಿಕ…

ಮುಂದೆ ಓದಿ...

ಕೊರಟಗೆರೆ : ಬೈಕ್ ಡಿಕ್ಕಿ- ಪಾದಚಾರಿ ಸಾವು!

ಕೊರಟಗೆರೆ:       ದ್ವಿಚಕ್ರ ವಾಹನವೊಂದು ರಸ್ತೆ ಬದಿ ಚಲಿಸುತ್ತಿದ್ದ ಪಾದಾಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೊರಟಗೆರೆ ಪಟ್ಟಣದ ಜೆಟ್ಟಿಅಗ್ರಹಾರ ರಸ್ತೆ ಬಳಿ ನಡೆದಿದೆ.       ಜೆಟ್ಟಿ ಅಗ್ರಹಾರ ಗ್ರಾಮದ ವಾಸಿ ನರಸಿಂಹಯ್ಯ(60) ಮೃತಪಟ್ಟ ದುದೈವಿ. ಇವರು ಕೈಮರದ ಆಶ್ರಮಕ್ಕೆ ಭೇಟಿ ನೀಡಿ ಮರಳಿ ನಡೆದುಕೊಂಡು ಮನೆಗೆ ಬರುತ್ತಿರುವ ವೇಳೆ ಪಾದಚಾರಿಗೆ ದ್ವೀಚಕ್ರ ವಾಹನ ಏಕಾಏಕಿ ಡಿಕ್ಕಿ ಹೊಡೆದಿದೆ. ಅಪಘಾತದ ಬಳಿಕ ಅಜ್ಜಿಹಳ್ಳಿ ಗ್ರಾಮದ ವಾಸಿಯಾದ ದ್ವಿಚಕ್ರ ವಾಹನ ಸವಾರ ಸ್ಥಳದಿಂದ ಪರಾರಿಯಾಗಿದ್ದಾನೆ.       ಅಪಘಾತ ನಡೆದ ಸ್ಥಳಕ್ಕೆ ಕೊರಟಗೆರೆ ಆರಕ್ಷಕ ಉಪನೀರಿಕ್ಷಕ ಮಂಜುನಾಥ ಭೇಟಿ ಪರಿಶೀಲನೆ ನಡೆಸಿದ್ದು, ಕೊರಟಗೆರೆ ಪೆÇಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ.   Share

ಮುಂದೆ ಓದಿ...

ಇಂಧನ ಲಾರಿ ಪಲ್ಟಿ : ಪೆಟ್ರೋಲ್‍ಗೆ ಮುಗಿಬಿದ್ದ ಜನತೆ!

ಮಧುಗಿರಿ:      ಚಾಲಕನ ನಿಯಂತ್ರಣ ತಪ್ಪಿ ಪೆಟ್ರೊಲ್ ಲಾರಿಯೊಂದು ರಸ್ತೆ ಪಕ್ಕಕ್ಕೆ ಉರುಳಿಬಿದ್ದ ಪರಿಣಾಮ ಆತಂಕ ಸೃಷ್ಟಿಯಾದ ಘಟನೆ ನಡೆದಿದೆ.       ತಾಲೂಕಿನ ಕೊಡಿಗೇನಹಳ್ಳಿ ಹೊಬಳಿಯ ಯಾಕಾರ್ಲಹಳ್ಳಿ ಕಡಗತ್ತೂರು ರಸ್ತೆಯಲ್ಲಿ ಬೆಳಿಗ್ಗೆ 11 ಗಂಟೆ ಆಸುಪಾಸಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇಂದನ ತುಂಬಿದಲಾರಿ ರಸ್ತೆ ಪಕ್ಕಕ್ಕೆ ಉರುಳಿದೆ. ಲಾರಿ ಪಲ್ಟಿಯಾಗಿ ಸೋರಿಕೆಯಾಗುವ ಇಂಧನದಿಂದ ಸ್ಪೋಟಿಸುವ ಸಾಧ್ಯತೆ ಹೆಚ್ಚಾಗಿ ಗ್ರಾಮಸ್ಥರ ಭೀತಿಯಿಂದ ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.       ತಕ್ಷಣ ಸುತ್ತಮುತ್ತಲಿನ ಗ್ರಾಮಸ್ಥರು ಬಿಂದಿಗೆ, ನೀರಿನ ಡಬ್ಬಗಳೊಂದಿಗೆ ದೌಡಾಯಿಸಿ ಸೋರಿಕೆಯಾಗುತಿದ್ದ ಪೆಟ್ರೋಲ್ ತುಂಬಿಕೊಳ್ಳಲು ಮುಗಿಬಿದ್ದರು. ಸ್ಥಳಕ್ಕೆ ಪಿಎಸೈ ಮೋಹನ್ ಕುಮಾರ್ ಭೇಟಿ ನೀಡಿ ಟ್ಯಾಂಕರ್‍ನ್ನು ತೆರವು ಮಾಡಿದ್ದು ಯಾವುದೆ ಪ್ರಾಣಪಾಯ ಸಂಭವಿಸಿಲ್ಲಾ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.   Share

ಮುಂದೆ ಓದಿ...