ತುಮಕೂರು :  ಚಿರತೆ ದಾಳಿಗೆ ವಯೋವೃದ್ಧ ಮಹಿಳೆ ಬಲಿ!!

ತುಮಕೂರು:        ವಯೋವೃದ್ಧ ಮಹಿಳೆಯೊಬ್ಬರನ್ನು ಚಿರತೆ ದಾಳಿ ನಡೆಸಿ ಭೀಕರವಾಗಿ ಕೊಂದು ಹಾಕಿರುವ ಘಟನೆ ತುಮಕೂರು ಜಿಲ್ಲೆಯ ಬನ್ನಿಕೊಪ್ಪ ಗ್ರಾಮದಲ್ಲಿ ನಡೆದಿದೆ.      ಲಕ್ಷ್ಮಮ್ಮ (62) ಚಿರತೆಗೆ ಬಲಿಯಾದ ದುರ್ದೈವಿ.        ನಿನ್ನೆ ಸಂಜೆಯಿಂದ ಬನ್ನಿಕೊಪ್ಪ ಗ್ರಾಮದಿಂದ ಕಣ್ಮರೆಯಾಗಿದ್ದ ಲಕ್ಷ್ಮಮ್ಮ ಅವರಿಗಾಗಿ ಅವರ ಸಂಬಂಧಿಕರು ಹುಡುಕಾಟ ನಡೆಸಿದ್ದರು. ಇಂದು ಬೆಳಿಗ್ಗೆ ಅರಣ್ಯ ಪ್ರದೇಶದಲ್ಲಿ ಲಕ್ಷ್ಮಮ್ಮ ಅವರ ಮೃತದೇಹ ಪತ್ತೆಯಾಗಿದ್ದು, ದೇಹದ ಬಹುತೇಕ ಭಾಗವನ್ನು ಚಿರತೆ ತಿಂದುಹಾಕಿದೆ. ವಿಷಯ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.       ಹಲವು ದಿನಗಳಿಂದ ಈ ಭಾಗದಲ್ಲಿ ಚಿರತೆ ಓಡಾಡುತ್ತಿದ್ದು, ಜಾನುವಾರುಗಳನ್ನು ತಿಂದು ಹಾಕಿತ್ತು. ಚಿರತೆಯನ್ನು ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಈಗಾಗಲೇ ಆಗ್ರಹಿಸಿದ್ದರೂ ಸಹ ಅರಣ್ಯ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ…

ಮುಂದೆ ಓದಿ...