ಸಂತೆ ಸ್ಥಳಾಂತರ ವಿರೋಧಿಸಿ ಸಂತೆ ಬಂದ್

ಚಿಕ್ಕನಾಯಕನಹಳ್ಳಿ :       ಸಂತೆಯನ್ನು ಹಾಲಿ ನಡೆಯುತ್ತಿದ್ದ ಜಾಗದಿಂದ ಸ್ಥಳಾಂತರ ಮಾಡಲು ಪುರಸಭಾ ಆಡಳಿತ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಮಕೈಗೊಂಡಿರುವುದನ್ನು ಸಂತೆಯ ವ್ಯಾಪಾರಿಗಳು, ಸಾರ್ವಜನಿಕರು ವಿರೋಧಿಸಿ ಸಂತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.       ಪಟ್ಟಣದಲ್ಲಿ ಪ್ರತಿಸೋಮವಾರ ನಡೆಯುತ್ತಿದ್ದ ವಾರದ ಸಂತೆಯು ಪಟ್ಟಣದ ಬಿ.ಹೆಚ್. ರಸ್ತೆ ಹಾಗೂ ತೀನಂಶ್ರೀ ಸಭಾಂಗಣದ ಆವರಣದಲ್ಲಿ ನಡೆಯುತ್ತಿತ್ತು ಅದರೆ ಇದರ ಸಮೀಪದಲ್ಲೇ ಶಾಲೆ ಹಾಗೂ ಕಾಲೇಜುಗಳಿದ್ದು ಇದರಿಂದ ತೊಂದರೆಯಾಗುತ್ತದೆ ಎಂದು ದೂರು ನೀಡಿದ್ದರ ಹಿನ್ನೇಲೆಯಲ್ಲಿ ಜಿಲ್ಲಾಧಿಕಾರಿಗಳು ಸಂತೆಯನ್ನು ಪಟ್ಟನದ ಸಾರ್ವಜನಿಕ ಆಸ್ಪತ್ರೆ ಬಳಿ ಇರುವಂತಹ ಎಪಿಎಂಸಿ ಗೆ ಸ್ಥಳಾಂತರ ಮಾಡಲು ಆದೇಶ ನೀಡಿದ್ದು ಇದರ ಹಿನ್ನೆಲೆಯಲ್ಲಿ ಕಳೆದ ಸೋಮವಾರ ಪುರಸಭೆಯವರು ಕರಪತ್ರದ ಮೂಲಕ ಇಂದಿನಿಂದ ಸಂತೆಯನ್ನು ಎಪಿಎಂಸಿ ವರ್ಗಾಹಿಸಲಾಗಿದೆ ಎಂದು ತಿಳಿಸಿದ್ದರು ಈ ಬಗ್ಗೆ ತೀವ್ರವಾಗಿ ವಿರೋದ ಮಾಡಿದ ವ್ಯಾಪಾರಸ್ಥರು, ನಾಗರೀಕರು…

ಮುಂದೆ ಓದಿ...

ವಿಜ್ಞಾನ ಕಲಿಯಲು ಮಕ್ಕಳಿಗೆ ಪ್ರೋತ್ಸಾಹ ನೀಡಿ-ಶಾಸಕ

ತುಮಕೂರು :        ಪೋಷಕರು ವಿಜ್ಞಾನ ವಿಷಯವನ್ನು ಅಧ್ಯಯನ ಮಾಡಲು, ಕಲಿಯಲು ಮಕ್ಕಳಿಗೆ ವಿಶೇಷ ಪ್ರೋತ್ಸಾಹವನ್ನು, ಮಕ್ಕಳನ್ನು ಹುರಿದುಂಬಿಸುವ ಕೆಲಸವನ್ನು ಮಾಡುವಂತೆ ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅವರು ಮನವಿ ಮಾಡಿದರು.       ತುಮಕೂರು ತಾಲ್ಲೂಕು ಬೆಳ್ಳಾವಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಮಕ್ಕಳ ವಿಜ್ಞಾನಹಬ್ಬವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ಕಲಿಕೆಗೆ ಇರುವ ಅವಕಾಶಗಳು, ಕಲಾ ವಿಷಯಗಳ ಕಲಿಕೆಯಲ್ಲಿ ಸಿಗುವುದಿಲ್ಲ, ವಿಜ್ಞಾನಕ್ಕೆ ದೇಶದಲ್ಲೆಡೆ ಮಾನ್ಯತೆ ಇದ್ದು, ಪೋಷಕರು ಮಕ್ಕಳಿಗೆ ವಿಜ್ಞಾನ ವಿಷಯ ಕಲಿಕೆಗೆ ಪ್ರೋತ್ಸಾಹಿಸಬೇಕು ಎಂದು ಹೇಳಿದರು.       ವಿಜ್ಞಾನ ಕಲಿಕೆಗೆ ಮುಂದಾಗುವುದು ಖಾಸಗಿ ಶಾಲೆಯ ಮಕ್ಕಳೇ, ಸರ್ಕಾರಿ ಶಾಲೆಯ ಮಕ್ಕಳಿಗೆ ವಿಜ್ಞಾನ ಕಲಿಕೆಯ ಸಾರ್ಮಥ್ಯವಿದ್ದರೂ, ಪೋಷಕರು ಪ್ರೋತ್ಸಾಹ ನೀಡುವುದಿಲ್ಲ, ಕಲಾ,ವಾಣಿಜ್ಯ ವಿಷಯಗಳನ್ನೇ ಸರ್ಕಾರಿ ಶಾಲೆಯ ಮಕ್ಕಳು ಆಯ್ಕೆ ಮಾಡಿಕೊಳ್ಳುತ್ತಾರೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಸರಿಯಾದ ಪ್ರೋತ್ಸಾಹ…

ಮುಂದೆ ಓದಿ...