ಸಿಎಎ ಕಾಯ್ದೆಗಳ ಜಾರಿಯನ್ನು ವಿರೋಧಿಸಿ ಪ್ರತಿಭಟನೆ : ರಾಷ್ಟ್ರಧ್ವಜ ಹಿಡಿದು ಡಿಸಿ ಕಚೇರಿ ಸೇರಿದ ಜನಸ್ತೋಮ!

ತುಮಕೂರು :        ನಾಲ್ಕು ದಿಕ್ಕಿನಿಂದಲೂ ರಾಷ್ಟ್ರಧ್ವಜ ಹಿಡಿದು ನಾವು ಭಾರತೀಯರೆಂದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಕೇಂದ್ರ ಸರ್ಕಾರ ಎನ್‍ಆರ್‍ಸಿ ಮತ್ತು ಸಿಎಎ ಕಾಯ್ದೆಗಳ ಜಾರಿಯನ್ನು ವಿರೋಧಿಸಿ ನಡೆದ ಪ್ರತಿಭಟನಾ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು. ದೇಶದ ಐಕ್ಯತೆಯ ಬಿಂಬಿಸುವ ಘೋಷಣೆಗಳು ಮೊಳಗಿದವು.       ಧರಣಿಯನ್ನುದ್ದೇಶಿಸಿ ಮಾತನಾಡಿದ ಪರಿಸರವಾದಿ ಸಿ.ಯತಿರಾಜ್ ಇಂದು ದೇಶದಲ್ಲಿ ತರುತ್ತಿರುವ ಕಾಯ್ದೆಗಳು ಜನಪರವಾಗಿರದೆ ಜನರನ್ನು ಒಡೆದುಆಳುವ ನೀತಿಗೆ ಪೂರಕವಾಗಿದೆ. ಸರ್ಕಾರದ ಸಚಿವರೊಬ್ಬರು ನೀಡುತ್ತಿರುವ ಹೇಳಿಕೆಗಳು ತದ್ವಿರುದ್ದವಾಗಿದ್ದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗಳನ್ನು ಗಮನಿಸಿದರೆ ಬಿಜೆಪಿಯ ದ್ವಂದ್ವವು ತಿಳಿಯುತ್ತದೆ ಎಂದು ಆರೋಪಿಸಿದರು.       ಜನಪರ ಚಿಂತಕ ಕೆ.ದೊರೈರಾಜು ಮಾತನಾಡಿ, ಒಂದು ಕೋಮಿನ ಜನರಷ್ಟೇ ಅಲ್ಲ, ದೇಶದ ಬುಡಕಟ್ಟು, ಆದಿವಾಸಿಗಳು ಬಡವರು ಸಹ ಸಂಕಟಕ್ಕೆ…

ಮುಂದೆ ಓದಿ...