ತುಮಕೂರು: ಪ್ರಸ್ತುತ ಜಗತ್ತು ವಿಜ್ಞಾನದ ಮೇಲೆ ಅವಲಂಬಿತವಾಗಿದೆ. ದೇಶದ ಅಭಿವೃದ್ಧಿಯನ್ನು ವಿಜ್ಞಾನದ ಮೇಲೆ ಅಳೆಯಲಾಗುತ್ತಿದೆ. ಈ ವಿಜ್ಞಾನ ದುಡಿಮೆಯನ್ನು ಕಲಿಸುತ್ತದೆ. ಕೇವಲ ದುಡಿಮೆಯೇ ಜೀವನವಲ್ಲ ಈ ವಿಜ್ಞಾನದ ಜೊತೆಗೆ ಜ್ಞಾನವೂ ಬೇಕು. ಅತ್ಯುತ್ತಮ ಜೀವನ ಶಿಸ್ತುಬದ್ಧ ನಡತೆಯನ್ನು ಸಾಹಿತ್ಯದ ಅಧ್ಯಯನದಿಂದ ಮಾತ್ರ ಸಾಧ್ಯ. ಇದು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವ ಸಾಧನವಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಪ್ರಭುರವರು ಅಭಿಪ್ರಾಯಪಟ್ಟರು.
ಅವರು ನಗರದ ಎಂಪ್ರೆಸ್ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತದ ಸಹಯೋಗದಿಂದಿಗೆ ಜಿಲ್ಲಾ ಕಸಾಪ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಶಾಲಾ ಕಾಲೇಜು ಕಡೆ ಎಂಬ ಮೊದಲ ಹಂತದ ೫೩ ಶಾಲೆಗಳಲ್ಲಿ ಏರ್ಪಾಟಾಗಿರುವ ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.
ಜಗತ್ತಿನಲ್ಲಿ ೪೫೦೦ ಭಾಷೆಗಳಿವೆ, ಸಂವಹನ ಕಲೆಯಾದ ಈ ಭಾಷೆಯಲ್ಲಿ ಕನ್ನಡ ಅತ್ಯಂತ ಸುಂದರವಾದುದು. ಕನ್ನಡವನ್ನು ಲಿಪಿಗಳ ರಾಣಿ ಎಂದು ಕರೆಯುವರು ಇಂತಹ ಕನ್ನಡಕ್ಕೆ ಏಳು ಜ್ಞಾನಪೀಠ ಪ್ರಶಸ್ತಿಗಳ ಜೊತೆಗೆ ಅಂತರಾಷ್ಟಿçÃಯ ಬೂಕರ್ ಪ್ರಶಸ್ತಿ ಬಂದಿದೆ. ಇದರಿಂದ ಕನ್ನಡ ಸಾಹಿತ್ಯದ ಆಳ ಅಗಲ ಎಷ್ಟಿದೆ ಎಂಬುದು ತಿಳಿಯುತ್ತದೆ ಎಂದರು.
ಜಗತ್ತಿನಲ್ಲೇ ಮೊದಲಬಾರಿಗೆ ಪ್ರಜೆಗಳ ಮಾತಿಗೆ ಶಕ್ತಿ ಕೊಟ್ಟವರು ಮೈಸೂರಿನ ಮಹಾರಾಜರು ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸುವುದರ ಮೂಲಕ ಜನರ ಸಮಸ್ಯೆಗಳನ್ನು ಆಲಿಸಿದ ಇತಿಹಾಸ ನಮ್ಮ ರಾಜ್ಯಕ್ಕಿದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸುವುದರ ಮೂಲಕ ಈ ನಾಡಿನ ಭಾಷೆಯನ್ನು ಬೆಳೆಸಲು ಸಹಕಾರ ನೀಡಿ ಅನೇಕ ಪ್ರಾಚೀನ ಸಾಹಿತ್ಯವನ್ನು ಪ್ರಕಟಿಸಿ ಪ್ರಚಾರ ಮಾಡಲು ನೆರವಾದರು ಎಂದರು.
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ (ಅಭಿವೃದ್ಧಿ) ಕೆ.ಮಂಜುನಾಥ್‌ರವರು ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯವನ್ನು ನೂರಾರು ಜನ ಕವಿಗಳು ಸಾಹಿತಿಗಳು ಕಟ್ಟಿ ಬೆಳೆಸಿದ್ದಾರೆ. ಆ ಸಾಹಿತ್ಯದಲ್ಲಿ ಬದುಕಿಗೆ ಬೇಕಾದ ಮೌಲ್ಯಗಳಾಗಿವೆ. ಅವುಗಳನ್ನು ಓದುವುದರ ಮೂಲಕ ಬದುಕನ್ನು ಸುಂದರಗೊಳಿಸಿಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಕನ್ನಡ ಸಾಹಿತ್ಯ ಪರಿಷತ್ತು ಹೈಸ್ಕೂಲ್, ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳಲ್ಲಿ ನಮ್ಮ ನಾಡಿನ ಸಾಹಿತ್ಯ ಇತಿಹಾಸ ಪರಂಪರೆಯನ್ನು ಸಾರುವ ಕಾರ್ಯಕ್ರಮಗಳನ್ನು ರೂಪಿಸಿದೆ. ನಮ್ಮ ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸಾಹಿತ್ಯ ಪರಿಷತ್ತನ್ನು ತೆಗೆದುಕೊಂಡು ಹೋಗಿ ಸಾಹಿತ್ಯದ ಅಧ್ಯಯನದ ಔಚಿತ್ಯವನ್ನು ತಿಳಿಸುವ ಉದ್ದೇಶ ಹೊಂದಿದೆ ಎಂದರಲ್ಲದೆ ನಮ್ಮ ಜಿಲ್ಲೆಯ ಸಾಹಿತ್ಯ ಪರಂಪರೆಗೆ ೯೦೦ ವರ್ಷಗಳ ಇತಿಹಾಸವಿದ್ದು ಅವೆಲ್ಲವನ್ನು ಪರಿಚಯ ಮಾಲೆ ಕಾರ್ಯಕ್ರಮದಡಿ ಜನರಿಗೆ ತಲುಪಿಸುವ ಯೋಜನೆಯನ್ನು ರೂಪಿಸಿದೆ. ಇದಕ್ಕೆ ಸಹಕಾರ ನೀಡುತ್ತಿರುವ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಇಲಾಖೆ ಹಾಗೂ ವಿಶ್ವÀವಿದ್ಯಾನಿಲಯದ ನೆರವನ್ನು ಸ್ಮರಿಸಿದರು.
ವೇದಿಕೆಯಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಡಾ. ಡಿ.ಎನ್.ಯೋಗೀಶ್ವರಪ್ಪ, ಕಂಟಲಗೆರೆ ಸಣ್ಣಹೊನ್ನಯ್ಯ, ಜಿ.ಹೆಚ್.ಮಹದೇವಪ್ಪ, ಪ್ರಾಂಶುಪಾಲರಾದ ಡಾ. ಕಂಪಲಪ್ಪ, ಉಪ ಪ್ರಾಂಶುಪಾಲರಾದ ಶ್ರೀಮತಿ ಮಂಜುಳಾ, ಎಂ.ಜಿ.ಸಿದ್ಧರಾಮಯ್ಯ, ಸಂಚಾಲಕರಾದ ಕೆ.ಎಸ್.ಉಮಾಮಹೇಶ್, ತುರುವೇಕೆರೆ ಕಸಾಪ ಅಧ್ಯಕ್ಷ ಡಿ.ಪಿ.ರಾಜು, ತಿಪಟೂರು ಕಸಾಪ ಕಾರ್ಯದರ್ಶಿ ನಾಗರಾಜ್, ತುಮಕೂರು ತಾಲ್ಲೂಕು ಕಸಾಪ ಅಧ್ಯಕ್ಷ ಚಿಕ್ಕಬೆಳ್ಳಾವಿ ಶಿವಕುಮಾರ್ ಇತರರು ಹಾಜರಿದ್ದರು, ಸಾಹಿತಿ ಕೃಷ್ಣಪ್ಪ ಕುವೆಂಪು ಬಗ್ಗೆ ಉಪನ್ಯಾಸ ನೀಡಿದರು. ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಯೋಗಾನಂದ್, ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಣ್ಣ ಸ್ವಾಗತಿಸಿದರು.