ತುರುವೇಕೆರೆ: ಜಿಲ್ಲೆಗೆ ಹೇಮಾವತಿ ನೀರು ಕೂಡಲೇ ಹರಿಸಬೇಕು ಹಾಗೂ ತಾಲೂಕನ್ನು ಬರದ ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿ ತಾಲೂಕು ಜೆಡಿಎಸ್ ಹಾಗೂ ಬಿಜೆಪಿ ಪಕ್ಷ ಸೇರಿ ಎನ್.ಡಿ.ಎ ಒಕ್ಕೂಟದಿಂದ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನೆಡೆಸಿದರು.
ಪಟ್ಟಣದ ಹೇಮಾವತಿ ಕಚೇರಿ ಮುಂಬಾಗದಲ್ಲಿನ ಪ್ರತಿಭಟನೆಯಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ ನಾವು ರೈತರ ಹಿತಕಾಯಬೇಕಿದೆ. ಈ ಹೋರಾಟದ ಉದ್ದೇಶ ರೈತರನ್ನು ಉಳಿಸಿಕೊಳ್ಳಬೇಕಿದೆ. ಬರಗಾಲ ಆವರಿಸಿದ್ದು ರೈತರು ಬೆಳೆ ಇಲ್ಲಾದೆ ಕಂಗಾಲಾಗಿದ್ದಾರೆ.ಯಾವಬ್ಬ ರೈತರು ಕನಿಷ್ಟ ಒಂದು ಎಕರೆ ಕೂಡ ಬಿತ್ತನೆ ಮಾಡಿಲ್ಲ.ತೆಂಗು ಅಡಿಕೆ ತೋಟ ಒಣಗುತ್ತಿವೆ. ಅದ್ದರಿಂದ ಹೇಮಾವತಿ ನೀರು ಹರಿಸಬೇಕು. ಈಗಾಗಲೇ ಹೇಮಾವತಿ ಡ್ಯಾಮ್ ನಲ್ಲಿ ಸುಮಾರು ೩೧ಟಿ.ಎಂ.ಸಿ ನೀರು ಇದೆ ನಾಲೆಯಲ್ಲಿ ನೀರು ಹರಿಸಬಹುದು. ನಾನು ಶಾಸಕನಾಗಿ ೨೦೧೩- ೧೪ರಲ್ಲಿ ಕೇವಲ ೧೯ ಟಿಎಂ.ಸಿ ನೀರು ಇದ್ದರು ಹೋರಾಟ ಮಾಡಿ ನೀರು ಹರಿದ್ದೆ ಅದ್ದರಿಂದ ನೀರು ಸಲಹಾ ಸಮಿತಿ ಸದಸ್ಯನಾಗಿ ನೀರು ಹರಿಸಲು ಸಹಿ ಹಾಕುತ್ತಿದ್ದು ನೀರು ಹರಿಸಿ ರೈತರನ್ನು ಉಳಿಸಿ ಎಂದರು.
ಮುಖ್ಯಮAತ್ರಿ ದೆಹಲಿ ಟೂ ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯಮಂತ್ರಿ ಗಳು ಕೇವಲ ಮಂತ್ರಿ ಮಂಡಲ ರಚನೆ ಖಾತೆ ಹಂಚಿಕೆ ಮಾಡುವಲ್ಲಿ ನಿರತವಾಗಿದೆ. ಖಾತೆ ಹಂಚಿಕೆ ಮಾಡುವ ಅಧಿಕಾರ ಮುಖ್ಯಮಂತ್ರಿಗೆ ಇಲ್ಲಾದಾಗಿದೆ ಎಂದು ಲೇವಡಿ ಮಾಡಿದರು. ರಾಜ್ಯದ ಲ್ಲಿ ಮಳೆ ಇಲ್ಲದೆ ಬರ ತಾಂಡವವಾಡುತ್ತಿದ್ದು ರಾಜ್ಯ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಅರೋಪಿಸಿ ಕೂಡಲೇ ಮುಖ್ಯಮಂತ್ರಿ ಗಳು ಜಿಲ್ಲೆಗೆ ಹೇಮಾವತಿ ನೀರು ಹರಿಸಬೇಕು ಮತ್ತು ಬರ ಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಮಸಾಲಜಯರಾಮ್ ಮಾತನಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರ.ರಾಜ್ಯದ ಜನರ ಕಷ್ಟವನ್ನು ಅರಿಯುವಲ್ಲಿ ವಿಪುಲವಾಗಿದೆ. ಬರಗಾಲ ಆವರಿಸಿದ್ದು. ಕೂಡಲೇ ಹೇಮಾವತಿ ನೀರು ಹರಿಸಬೇಕು. ಬರ ತಾಲೋಕು ಎಂದು ಘೋಷಣೆ ಮಾಡಬೇಕು. ನಿಗದಿತ ಸಮಯದೊಳಗೆ ಹೇಮಾವತಿ ನೀರು ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಎನ್.ಡಿ.ಎ ಒಕ್ಕೂಟದಿಂದ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಶಾಸಕ ಎಂ.ಡಿ.ಲಕ್ಣಿ÷್ಮÃನಾರಾಯಣ್ ಮಾತನಾಡಿ ನಾನು ೯ಜನ ಮುಖ್ಯಮಂತ್ರಿ ಗಳನ್ನು ನೋಡಿದ್ದೇನೆ ಈ ಸಿ.ಎಂ. ಶಕ್ತಿ ಇಲ್ಲ ಬರ ಬಂದರೂ ಕೃಷಿ ಸಚವರನ್ನು ನೇಮಕ ಮಾಡಲು ಸಾದ್ಯವಾಗಿಲ್ಲ ಎಂದು ಲೇವಡಿ ಮಾಡಿ. ಹೇಮಾವತಿ ಲಿಂಕ್ ಕೆನಾಲ್ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಮಳೆಯಲ್ಲಿ ಬಿಡದ ಪ್ರತಿಭಟನೆ: ಪ್ರತಿಭಟನೆ ಮೆರವಣಿಗೆ ಸಾಗುತ್ತಿರುವಾಗ ಮಳೆಯ ಸಿಂಚನ ಶುರುವಾಯಿತು ಆದರೂ ಶಾಸಕರು ಮಾಜಿ ಶಾಸಕರು ಮುಖಂಡರು ಕಾರ್ಯಕರ್ತರು ಮಳೆಗೂ ಜಗ್ಗದೆ ಪ್ರತಿಭಟನೆ ಮುಂದುವರೆಸಿದರು.
ಪ್ರತಿಭಟನೆ ಅಂತ್ಯ: ಪ್ರತಿಭಟನೆ ನಿರತ ಸ್ಥಳಕ್ಕೆ ಆಗಮಿಸಿದ ಹೇಮಾವತಿ ಇಲಾಖೆ ಎಸ್.ಇ.ಶ್ರೀನಿವಾಸ್ಮುಂದಿನ ಶುಕ್ರವಾರ ನೀರಾವರಿ ಸಲಹ ಸಮಿತಿ ಸಭೆ ಸೇರಲಿದ್ದು ಅಂದು ನೀರು ಹರಿಸಲಾಗುವುದು ಎಂದು ಬರವಸೆಯ ಮೇರಗೆ ಪ್ರತಿಭಟನೆ ಅಂತ್ಯಗೊಳಿಸಿದರು.
ರೈತರಿಗೆ ನಿಗದಿತ ಸಮಯ ತ್ರೀಪೇಸ್ ವಿದ್ಯುತ್ ನೀಡಬೇಕು ಬೆಸ್ಕಾಂ ಇ.ಇ ಸೋಮಶೇಖರ್ ಹಾಗೂ ಬರ ತಾಲೂಕು ಎಂದು ಘೋಷಣೆ ಮಾಡಲು ರಾಜ್ಯ ಸರ್ಕಾರಕ್ಕೆ ವರದಿ ನೀಡಬೇಕು ಎಂದು ತಹಶೀಲ್ದರ್ ಕುಂ.ಇ.ಅಹಮದ್ ರವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಗುಬ್ಬಿ ಬಿಜೆಪಿ ಮುಖಂಡ ದಿಲೀಪ್ ಕುಮಾರ್, ತಾಲೂಕು ಬಿಜೆಪಿ ಅದ್ಯಕ್ಷ ಪ್ರಕಾಶ್, ತಾಲೂಕು ಜೆಡಿಎಸ್ ಅದ್ಯಕ್ಷ ದೊಡ್ಡೇಗೌಡ ಮುಖಂಡರಾದ ವೆಂಕಾಟಪುರ ಯೋಗೀಶ್, ಸಿದ್ದೇಗೌಡ, ತ್ಯಾಗರಾಜು, ಕೊಂಡಜ್ಜಿವಿಶ್ವನಾಥ್, ಶಂಕರೇಗೌಡ ಸೇರಿದಂತೆ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಇದ್ದರು.
(Visited 1 times, 1 visits today)





