
ಕೊರಟಗೆರೆ: ತಾಲೂಕು ವಕೀಲರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಎಲ್.ಸAತೋಷ್, ಉಪಾಧ್ಯಕ್ಷ ರಾಗಿ ಹನುಮಂತರಾಜು, ಪ್ರಧಾನ ಕಾರ್ಯದರ್ಶಿ ಮಂಜುನಾಥ ಖಜಾಂಚಿ ಅರುಂಧತಿ, ಜಂಟಿಕಾರ್ಯದರ್ಶಿ ಕೃಷ್ಣಪ್ಪ ಆಯ್ಕೆಯಾದರೆ ಎಂದು ಚುನಾವಣಾಧಿಕಾರಿಯಾಗಿದ್ದ ಹಿರಿಯ ವಕೀಲ ನಾಗೇಂದ್ರಪ್ಪ ಘೋಷಣೆ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಜಿ. ಡಿ.ದೇವರಾಜು, ಟಿ.ಕೃಷ್ಣಮೂರ್ತಿ, ಎಂ.ಎಲ್. ಸಂತೋಷ್ ಸ್ಪರ್ಧೆ ಮಾಡಿದ್ದು, ದೇವರಾಜು ೧೮ ಮತ ಪಡೆದರೆ ಎಂ.ಎಲ್ ಸಂತೋಷ್ ಅವರು ೧೯ ಮತ ಪಡೆದು ಜಯಶೀಲರಾಗಿದ್ದಾರೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷಲಕ್ಷಿö್ಮÃ ಅವರು ೧೫ ಮತ ಮತ್ತು ಕೃಷ್ಣಪ್ಪ ಅವರು ೨೨ ಮತ ಪಡೆದು ಕೃಷ್ಣಪ್ಪ ಅವರು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಇನ್ನೂಳಿದಂತೆ ಉಪಾಧ್ಯಕ್ಷ, ಪ್ರಧಾನಕಾರ್ಯದರ್ಶಿ ಮತ್ತು ಖಜಾಂಚಿ ಸ್ಥಾನಗಳು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನೂತನ ಅಧ್ಯಕ್ಷ ಎಂ.ಎಲ್.ಸAತೋಷ್ ಮಾತ ನಾಡಿ ವಕೀಲರ ನಾನಾ ಕುಂದುಕೊರತೆಗಳು ಇದ್ದು, ಎಲ್ಲರ ಸಹಕಾರ ಪಡೆದು ಎರಡು ವರ್ಷಗಳ ಕಾಲ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನಮ್ಮ ವಕೀಲರ ಸಮಸ್ಯೆಗಳನ್ನ ಬಗೆಹರಿಸಲು ಎಲ್ಲರ ಪರವಾಗಿ ಕೆಲಸ ಮಾಡುತ್ತೇನೆ. ನನಗೆ ಮತ ಹಾಕಿದ ಎಲ್ಲಾ ನನ್ನ ವೃತ್ತಿಬಾಂದವರಿಗೆ ಧನ್ಯವಾಗಳನ್ನ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಎಂ.ಎಚ್.ಮAಜು ನಾಥ್ ಮಾತನಾಡಿ ವಕೀಲ ಸಮಸ್ಯೆ ಹಾಗೂ ಕುಂದುಕೊರತೆಗಳ ಬಗ್ಗೆ ಗಮನ ಹರಿಸಿ ಮುಂದಿನ ದಿನಗಳಲ್ಲಿ ಈ ನಮ್ಮ ಜೆಎಂಎಫ್‌ಸಿ ಕೋಟ್‌ನ್ನ ಮೇಲ್ದರ್ಜೆಗೆ ತರಲು ಎಲ್ಲರು ಪ್ರಮಾಣಿಕ ಪ್ರಯತ್ನ ಮಾಡಬೇಕು. ನೂತನವಾಗಿ ಆಯ್ಕೆಯಾದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
ಚುನಾವಣೆ ವೇಳೆಯಲ್ಲಿ ಪ್ರಧಾನ ಕಾರ್ಯ ದರ್ಶಿ ಎಂ.ಎಚ್.ಮAಜುನಾಥ್ ಮಾಜಿ ಅಧ್ಯಕ್ಷ ಬಿ.ಎಲ್.ನಾಗರಾಜು, ಹಿರಿಯ ವಕೀಲ ರಾದ ಎ.ಎಂ.ಕೃಷ್ಣಮೂರ್ತಿ, ಪುಟ್ಟರಾಜಯ್ಯ, ಮಧುಸೂಧನ್, ಅನಿಲ್‌ಕುಮಾರ್, ತಿಮ್ಮ ರಾಜು, ರಾಮಚಂದ್ರಯ್ಯ, ನರಸಿಂಹರಾಜು ಶಿವಕು ಮಾರ್, ಮಲ್ಲಿಕಾರ್ಜುನಯ್ಯ, ನಾಗೇಂದ್ರಪ್ಪ, ಸಂತೋ ಷಲಕ್ಷಿö್ಮÃ, ಶಿಲ್ಪಾ, ಕೆಂಪರಾಜಮ್ಮ, ಬೃಂಧಾ, ಮಂಜುಳ, ಜ್ಯೋತಿ, ಸುನೀಲ್, ಶಿವರಾಜು, ತಿಮ್ಮೇಶ್, ನಾಗರಾಜು, ಅನಂತರಾಜು, ಇದ್ದರು.





