ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಚನ್ನಬಸವೇಶ್ವರ ಸ್ವಾಮಿಯ ರಥೋತ್ಸವ ಬುಧ ವಾರ ವಿವಿಧ ಧಾರ್ಮಿಕ ಕೈಂಕರ್ಯಗಳೊAದಿಗೆ ಸಹ ಸ್ತಾçರು ಭಕ್ತರ ಸಮ್ಮು ಖದಲ್ಲಿ ಅದ್ದೂರಿ ಜರುಗಿತು.
ಬಸವ ಜಯಂತಿ ಹಿನ್ನೆಲೆ ಚನ್ನಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾ ಗಿತ್ತು, ಸ್ವಾಮಿಯನ್ನು ಬಸ ವನ ಉತ್ಸವ ಹಾಗೂ ಧ್ವಜದ ಕುಣಿತದೊಂದಿಗೆ ಮೆರವ ಣಿಗೆಯಲ್ಲಿ ಕರೆತಂದು, ಗಣ ಪತಿ ಪೂಜೆ, ಪುಣ್ಯಾಹ, ದಿಕ್‌ಬಲಿ ಹರಣ ಮತ್ತು ಅಷ್ಟೋತ್ತರ ಪೂಜೆ ಮುಂತಾದ ಪೂಜಾ ಕೈಂಕರ್ಯದೊAದಿಗೆ ಆರಂಭವಾದ ಶ್ರೀ ಸ್ವಾಮಿಯವರ ಮಹಾ ರಥೋತ್ಸವಕ್ಕೆ ದೇವಸ್ಥಾವದ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ರಂಗು ರಂಗಿನ ಬಾವುಟಗಳು, ತಳಿರು ತೋರಣಗಳು, ಎಳನೀರಿನ ಗೊಂಚಲುಗಳು, ಬಾಳೆಗೊನೆ, ಕೊಬ್ಬರಿಹಾರ ಹಾಗೂ ಹೂವಿನ ಹಾರಗಳಿಂದ ಶೃಂಗಾರಗೊAಡು, ಮಂಗಳ ವಾದ್ಯಗಳೊಂದಿಗೆ ಸಾಗಿಬಂದ ಅದ್ದೂರಿ, ಆಕರ್ಷಕ, ವೈಭವದ ಮಹಾ ರಥೋತ್ಸವವನ್ನು ಗ್ರಾಮಸ್ಥರು ಜಯ ಘೋಷದೊಂದಿಗೆ ರಥ ಎಳೆದು ಸಂಭ್ರಮಿಸಿದರು. ೩ ವರ್ಷಗಳ ನಂತರ ನಡೆಯು ತ್ತಿರುವ ರಥೋತ್ಸವ ವೀಕ್ಷಿಸಲು ಬಿಸಿಲ ಝಳವನ್ನೂ ಲೆಕ್ಕಿಸದೆ ಜನಸಾಗರವೇ ಹರಿದು ಬಂದಿತ್ತು.
ಭಕ್ತರು ಅನತಿ ದೂರದಿಂದಲೇ ಬಾಳೆ ಹಣ್ಣು ಹಾಗೂ ನಾಣ್ಯಗಳನ್ನು ರಥದ ಕಡೆ ಎಸೆಯುವ ಮೂಲಕ ತಮ್ಮ ಭಕ್ತಿಬಾವ ಸಮರ್ಪಿಸದರು. ನಂತರ ಭಕ್ತರು ಶ್ರೀ ಸ್ವಾಮಿಯವರಿಗೆ ಹಣ್ಣು-ಕಾಯಿ ಪೂಜೆ ಮಾಡಿಸಿಕೊಂಡು ಹಿಂದಿರುಗಿದರು. ಜಾತ್ರೆಗೆ ಆಗಮಿಸಿದ್ದ ಭಕ್ತಾಧಿಗಳಿಗೆ ಪಾನಕ, ಪನಿವಾರ ಹಾಗೂ ಉಪಹಾರ ವ್ಯವಸ್ಥೆ ಕಲ್ಪಿಸಿದ್ದರು.
(Visited 1 times, 1 visits today)