ತುಮಕೂರು: ಕಳೆದ ೨೦ ವರ್ಷಗಳಿಂದ ರಾಜ್ಯದಲ್ಲಿ ಅಸಹಾಯಕರು,ತುಳಿತಕ್ಕೆ ಒಳಗಾದವರ ಹಕ್ಕುಗಳ ಪರವಾಗಿ ಕೆಲಸ ಮಾಡುತ್ತಿರುವ ಅಸೋಸಿಯೇಷನ್ ಫಾರ್ ಪ್ರೊಟಕ್ಷನ್ ಅಫ್ ಸಿವಿಲ್ ರೈಟ್ ಸಂಸ್ಥೆಯ ಜಿಲ್ಲಾ ಮಟ್ಟದ ಸಭೆಯನ್ನು ಹಿರಿಯರಾದ ಪಿಯುಸಿಎಲ್‌ನ ತುಮಕೂರು ಅಧ್ಯಕ್ಷ ಕೆ.ದೊರೆರಾಜು ಅವರ ಅಧ್ಯಕ್ಷತೆಯಲ್ಲಿ ನಗರದ ಧ್ಹಾನಾ ಪ್ಯಾಲೆಸ್‌ನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಕೀಲರಾದ ಬಿ.ಟಿ.ವೆಂಕಟೇಶ ಮಾತನಾಡಿ, ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಅಸಹಜ ಸಾವು, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ, ಕೊಲೆ ಸೇರಿದಂತೆ ದೇಶದ ವಿವಿದೆಡೆ ನಡೆದಿರುವ ಇಂತಹ ಪ್ರಕರಣಗಳಲ್ಲಿ ಸಮರ್ಪಕ ತನಿಖೆ ನಡೆದು, ಸತ್ಯ ಹೊರಬರಬೇಕೆಂಬುದು ಎಪಿಸಿಆರ್‌ನ ಒತ್ತಾಯವಾಗಿದೆ.ಎಪಿಸಿಆರ್ ಯಾವುದೇ ರಾಜಕೀಯ ಪಕ್ಷಕ್ಕೆ, ಒಂದು ಧರ್ಮಕ್ಕೆ, ಜಾತಿಗೆ ಸೇರಿದ ಸಂಘಟನೆಯಲ್ಲಿ ಜನರ ಹಕ್ಕುಗಳನ್ನು ರಕ್ಷಿಸುವ ಕೆಲಸವನ್ನು ಮಾಡುತ್ತಿರುವ ಸಮಾನ ಮನಸ್ಕರ ಸಂಘಟನೆಯಾಗಿದೆ.ಸತ್ಯವನ್ನು ಜನರಿಗೆ ತಿಳಿಸುವುದೇ ಇದರ ಮುಖ್ಯ ಉದ್ದೇಶ. ನುರಿತ ವಕೀಲರ ತಂಡವೇ ನಮ್ಮೊಂದಿಗೆ ಕೆಲಸ ಮಾಡುತ್ತಿದೆ.ಒಂದು ಪ್ರಕರಣದ ಬಗ್ಗೆ ಸಮಗ್ರ ಅಧ್ಯಯನ ನಡೆಸಿ,ಸತ್ಯಾಸತ್ಯತೆಗಳನ್ನು ಜನತೆಯ ಮುಂದಿಡುವ ಕೆಲಸ ಮಾಡಲಿದ್ದೇವೆ.ತನಿಖೆ ಪೂರ್ಣಗೊಂಡು ವರದಿ ಬರುವ ಮೊದಲೇ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಮೂರ್ಖತನ.ಈ ಕೆಲಸವನ್ನು ಎಪಿಸಿಆರ್ ಎಂದಿಗೂ ಮಾಡುವುದಿಲ್ಲ.ಈ ಕೆಲಸವನ್ನು ಇತರೆ ಸಂಘ,ಸAಸ್ಥೆಗಳು ಮಾಡಬೇಕೆಂದು ಮನವಿ ಮಾಡಿದರು.
ವಕೀಲರು, ಗ್ರಾಹಕರ ಜಾಗೃತಿ ವೇದಿಕೆಯ ಅಧ್ಯಕ್ಷ ಟಿ.ಎಸ್.ನಿರಂಜನ್ ಮಾತನಾಡಿ, ಸಂಘಟನೆಯಗಳು ಹಣಕ್ಕಾಗಿ ಹೋರಾಟಕ್ಕೆ ಇಳಿಯುವ ಇಂದಿನ ಪರಿಸ್ಥಿತಿಯಲ್ಲಿ, ಯಾವುದೇ ಪ್ರತಿಫಲಾಪೆಕ್ಷೆ ಇಲ್ಲದೆ, ದೌರ್ಜನ್ಯಕ್ಕೆ ಒಳಗಾದವರ ಪರವಾಗಿ ಹೋರಾಟ ನಡೆಸುತ್ತಿರುವ ಎಪಿಸಿಆರ್ ನಿಜಕ್ಕೂ ಒಳ್ಳೆಯ ಕೆಲಸ ಮಾಡುತ್ತಿದೆ. ಕಾನೂನಿನ ಅರಿವು ಇಲ್ಲದ ಜನರನ್ನು ಇದು ತಲುಪವಂತಾಗಬೇಕು ಎಂದರು.
ಹೈಕೋರ್ಟು ವಕೀಲರಾದ ಅಕ್ಮಲ್ ರಜ್ವಿ ಮಾತನಾಡಿ,ಎಪಿಸಿಆರ್ ಕಳೆದ ೨೦ ವರ್ಷಗಳಿಂದ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದು, ಪ್ರಮುಖವಾಗಿ ಭಯೋತ್ಪಾಧನೆ ಹೆಸರಿನಲ್ಲಿ ಅಮಾಯಕರ ಯುವಕರನ್ನು ಬಂಧಿಸಿದಾಗ, ಅವರನ್ನು ಬಿಡಿಸುವ ಕೆಲಸದ ಜೊತೆಗೆ,ದ್ವೇಷ ಭಾಷಣದ ನಡೆದಾಗ ಹೋರಾಟ ನಡೆಸಿ, ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡುವಂತೆ ಮಾಡಲಾಗಿದೆ.ಮಂಗಳೂರು ಗೋಲಿಬಾರ್,ಕಾರಾವಳಿಯಲ್ಲಿ ಬಾಂಬ್ ಸ್ಟೋಟ ಸೇರಿದಂತೆ ಹಲವು ವಿಚಾರಗಳಲ್ಲಿ ಸತ್ಯ ಶೋಧನೆ ನಡೆಸಿ,ಅಪರಾಧಿಗಳ ಶಿಕ್ಷಿಸುವಂತೆ ಸರಕಾರದ ಮೇಲೆ ಒತ್ತಡ ತರಲಾಗಿದೆ.ಯುಎಪಿಎ ಅಡಿಯಲ್ಲಿ ಬಂಧಿತವಾಗಿರುವ ಅನೇಕ ಅಮಾಯಕ ಯುವಕರ ಪರವಾಗಿ, ಹಾಗೆಯೇ ದೌರ್ಜನ್ಯಕ್ಕೆ ಒಳಗಾದ ಎಲ್ಲರ ಪರವಾಗಿ ನ್ಯಾಯಾಲಯಗಳ ಮೂಲಕ ಹೋರಾಟ ನಡೆಸುವ ಕೆಲಸವನ್ನು ಎಪಿಸಿಆರ್ ಮಾಡುತ್ತಿದೆ ಎಂದರು.
ಎಪಿಸಿಆರ್‌ನ ಜಿಲ್ಲಾಧ್ಯಕ್ಷ ತಾಜುದ್ದೀನ್ ಷರೀಫ್ ಮಾತನಾಡಿ,ಎಪಿಸಿಆರ್ ದಮನಿತರ ಹಕ್ಕುಗಳಿಗಾಗಿ ಹೋರಾಟ ಮಾಡುವ ಒಂದು ಸಂಸ್ಥೆಯಾಗಿದೆ.ಕಳೆದ ೧೮ ವರ್ಷಗಳಿಂದ ಕೆಲಸ ಮಾಡುತ್ತಿದ್ದು,ಬಡವರಿಗೆ, ದೀನ ದಲಿತರಿಗೆ, ಹಕ್ಕುಗಳಿಂದ ವಂಚಿತರಾದವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಸಾಧ್ಯವಾದಷ್ಟು ಮಟ್ಟಿಗೆ ನೀಡಿದ್ದೇವೆ. ನಗರದ ಹಲವಾರು ಸಂಘ ಸಂಸ್ಥೆಗಳು ನಮಗೆ ಸಹಕಾರ ನೀಡಿವೆ. ನಾಗರಿಕರ ಹಕ್ಕುಗಳ ರಕ್ಷಣೆಗಾಗಿ ಮಾಡಿಕೊಂಡಿರುವ ದೇಶದಾದ್ಯಂತ ಇರುವ ದೊಡ್ಡ ಸಂಘಟನೆಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಚಿಂತಕರಾದ ಕೆ.ದೊರೆರಾಜು ಮಾತನಾಡಿ,ಎಪಿಸಿಆರ್ ಯಾವುದೇ ಧರ್ಮ, ಜಾತಿ,ಲಿಂಗ ಅಸಮಾನತೆ, ನಾಗರಿಕ ವಿರೋಧಿ ಕಾಯ್ದೆಗಳ ವಿರುದ್ದ,ಪ್ರಭುತ್ವದಿಂದ ತುಳಿತಕ್ಕೆ ಒಳಗಾದ ಜನರ ನೆರವಾಗಿ ಹೋರಾಟ ನಡೆಸುತ್ತಿರುವ ಸಂಸ್ಥೆಯಾಗಿದೆ.ನಮ್ಮ ಎಲ್ಲಾ ಕೆಲಸಗಳು ಪ್ರಜಾಸತ್ಮಾತ್ಮಕವಾಗಿದ್ದು,ಪರಸ್ವರ ಪ್ರೀತಿ ಬಿತ್ತುವ ಸಂಘಟನೆ ಯಾಗಿದೆಯೇ ಹೊರತು, ದ್ವೇಷಿಸುವ ಸಂಘಟನೆಯಲ್ಲ. ಅದಕ್ಕೆ ಎಪಿಸಿಆರ್‌ನಲ್ಲಿ ಅವಕಾಶವಿಲ್ಲ.ಇತ್ತೀಚಿನ ದಿನಗಳಲ್ಲಿ ನಾಗರಿಕರ ಹಕ್ಕುಗಳ ಧಮನ ಕೆಲಸಗಳು ನಡೆಯುತ್ತಿದ್ದು,ಅವುಗಳ ಬೇರುಗಳನ್ನು ಹುಡುಕಿ, ಬುಡ ಸಮೇತ ಕಿತ್ತು ಹಾಕುವ ಕೆಲಸವನ್ನು ಸಂಘಟನೆ ಮಾಡುತ್ತಿದೆ.ಪರಸ್ವರ ಸೌಹಾರ್ಧಯುತ ವಾತಾವರಣ ನಿರ್ಮಾಣ ಮಾಡುವ ಕೆಲಸವನ್ನು ಎಪಿಸಿಆರ್ ಮಾಡುತ್ತಿದೆ. ಸ್ವಯಂ ಪ್ರೇರಿತವಾಗಿ ಕೆಲಸ ಮಾಡುವ ಮೂಲಕ ಅಶಕ್ತರಿಗೆ ನ್ಯಾಯ ದೊರಕಿಸುವ ಕೆಲಸವನ್ನು ಮಾಡಲಾಗುತ್ತಿದೆ.ಇದಕ್ಕೆ ನಮ್ಮ ವಕೀಲರ ಸಂಖ್ಯೆ ಬೆಂಬಲವಾಗಿ ನಿಂತಿದೆ.ನಾಗರಿಕರ ಎಲ್ಲಿಯವರೆಗೆ ತಮ್ಮ ಹಕ್ಕುಗಳನ್ನು ಚಲಾಯಿಸುವವರೆಗೂ, ತಮ್ಮ ಹಕ್ಕುಗಳಿಗೆ ಧಕ್ಕೆಯಾದಾಗ ಪ್ರತಿಭಟಿಸುವುದಿಲ್ಲವೋ, ಅಲ್ಲಿಯವರೆಗೂ ನ್ಯಾಯವೆಂಬುದು ಮರೀಚಿಕೆಯಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಿದರು.
ವೇದಿಕೆಯಲ್ಲಿ ನಿವೃತ್ತ ಪೊಲೀಸ್ ಕಮಿಷನರ್ ಜೋತಿ ಪ್ರಕಾಶ್ ಮಿರ್ಜಿ,ವಿಜ್ಞಾನ ಕೇಂದ್ರದ ಸಿ.ಯತಿರಾಜು, ಸ್ಲಂ ಜನಾಂದೋಲನದ ಎ.ನರಸಿಂಹಮೂರ್ತಿ, ಡಿಎಸ್‌ಎಸ್‌ನ ಪಿ.ಎನ್.ರಾಮಯ್ಯ,ನಿವೃತ್ತ ಪ್ರಾಧ್ಯಾಪಕ ಡಾ.ಚಂದ್ರಕಾAತ್,ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ದೀಪಿಕಾ, ಪಿಯುಸಿಎಲ್ ಕಾರ್ಯದರ್ಶಿ ತೇಜಸ್ ಕುಮಾರ್, ಕೋಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅರುಣ್ ಮತ್ತಿತರರು ಪಾಲ್ಗೊಂಡಿದ್ದರು.
(Visited 1 times, 1 visits today)