
ತುಮಕೂರು: ಐ.ಎ.ಎಸ್,ಐಪಿಎಸ್, ನ್ಯಾಯಾಧೀಶರು ಮಾತ್ರ ಸಾಧನೆ ಮಾಡಿದವರಲ್ಲ.ಮಕ್ಕಳಿಗೆ ಒಳ್ಳೆಯ ತಾಯಿ ಯಾಗಿ, ಗಂಡನಿಗೆ ಒಳ್ಳೆಯ ಸಂಗಾತಿಯಾಗಿ, ಅತ್ತೆ,ಮಾವನಿಗೆ ಒಳ್ಳೆಯ ಸೊಸೆಯಾಗಿ, ಕೊರತೆಗಳ ನಡುವೆಯೂ ಸಂಸಾರವನ್ನು ಸರಿದೂಗಿಸುವ ಮಹಿಳೆಯು ಸಹ ಸಾಧಕಿಯೇ ಎಂದು ಡಿ.ಎಲ್.ಆರ್.ಸಿ. ಕಾರ್ಯದರ್ಶಿ ಹಾಗೂ ನ್ಯಾ.ನೂರುನ್ನಿಸಾ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮರಳೂರು ದಿಣ್ಣೆಯ ಪ್ರಗತಿ ಬಡಾವಣೆಯ ಶೈನಾ ಅಧ್ಯಯನ ಸಂಸ್ಥೆ(ರಿ), ತುಮಕೂರು ಜಿಲ್ಲಾ ಮಹಿಳಾ ಸಂಘಟನೆ(ರಿ), ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಹಾಗೂ ಜಿಲ್ಲಾ ಮಹಿಳಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,ನಮ್ಮನ್ನು ನೋಡಿ ನಮ್ಮ ಮಕ್ಕಳು ನಮ್ಮಂತಾಗುವ ಬಯಕೆ ಹೊಂದಬೇಕು. ಅದೇ ನಿಜವಾದ ಸಾಧನೆ ಎಂದರು.
ಮಹಿಳಾ ಎಲ್ಲಾ ರಂಗದಲ್ಲಿಯೂ ತನ್ನ ಸಾಧನೆಯ ಗುರುತನ್ನು ಬಿಟ್ಟಿದ್ದಾಳೆ, ಆ ದರೂ ಇಂದಿಗೂ ಕೂಡ ಆಕೆಯ ಮೇಲಿನ ಕೌಟುಂಬಿಕ ದೌರ್ಜನ್ಯ ನಿಂತಿಲ್ಲ.ತಾನು ಸ್ವತಹಃ ದುಡಿಯುತ್ತಿದ್ದರೂ ತನ್ನ ವೇತನವನ್ನು ಮನಸೋಇಚ್ಚೆ ಖರ್ಚು ಮಾಡುವಂತಿಲ್ಲ. ಇಂದಿಗೂ ಗಂಡನ, ಇಲ್ಲವೇ ಅತ್ತೆ, ಮಾವನ ಕೇಳುವಂತಹ ಪರಿಸ್ಥಿತಿ ಇದೆ. ಇದು ನಿಜವಾದ ಸ್ವಾತಂತ್ರವೇ ಎಂಬ ಅನುಮಾನವನ್ನು ಹುಟ್ಟುಹಾಕುತ್ತದೆ. ಹಾಗಾಗಿ ಮೊದಲು ಅರ್ಥಿಕ ಸ್ವಾವಲಂಬನೆಯತ್ತ ಮಹಿಳೆಯರು ಮುನ್ನೆಡೆಬೇಕಿದೆ. ಮನೆ, ಮಕ್ಕಳ ಭವಿಷ್ಯ ಎಂದು ಕೂಡಿ ಇಡುವುದರ ಜೊತೆ ಜೊತೆಗೆ, ತಾನು, ತನ್ನ ಘನತೆ, ಗೌರವ ಹೆಚ್ಚಿಸಿಕೊಳ್ಳಲು ಅಗತ್ಯವಿರುವ ಖರ್ಚುಗಳ ಕಡೆಗೂ ಗಮನಹರಿಸಬೇಕಿದೆ.ತನ್ನನ್ನು ತಾನು ಪ್ರೀತಿಸದವರು, ಹೇಗೆ ಇನ್ನೊಬ್ಬರಿಗೆ ಪ್ರೀತಿ ನೀಡಲು ಸಾಧ್ಯ ಎಂದು ನ್ಯಾ.ನೂರುನ್ನಿಸಾ ಪ್ರಶ್ನಿಸಿದರು.
ಇಂದು ಅವಿದ್ಯಾವಂತರಿಗಿ0ತ, ವಿದ್ಯಾವಂತರಲ್ಲಿಯೇ ಹೆಚ್ಚು ವಿಚ್ಚೇಧನ ಪ್ರಕರಣಗಳು ಹೆಚ್ಚಿವೆ.ಇದಕ್ಕೆ ಪ್ರಮುಖ ಕಾರಣ, ಅತ್ತೆಯಾದವಳು, ಸೊಸೆಯೊಡೆನೆ, ಸೊಸೆಯಾದವಳು, ಅತ್ತೆ, ಮಾವ ಮತ್ತು ವಾರಗಿತ್ತಿಯರ ನಡುವೆ ಸ್ಪರ್ಧೆಗೆ ಇಳಿಯುವುದು. ಇದನ್ನು ಬಿಟ್ಟು ಪರಸ್ವರ ಪ್ರೀತಿ ಮತ್ತು ಕರುಣೆಗೆ ಜಾಗ ದೊರೆತೆರೆ ತಾನಾಗಿಯೇ ಸಮಸ್ಯೆ ಬಗೆಹರಿಯುತ್ತದೆ.ತಂದೆಯಾಗಲಿ, ತಾಯಿಯಾಗಲಿ ತಮ್ಮ ಚಟಗಳನ್ನು ಮಕ್ಕಳ ಮುಂದೆ ತೋರ್ಪಡಿಸುವುದು ಒಳ್ಳೆಯ ಕುಟುಂಬಸ್ತರ ಲಕ್ಷಣವಲ್ಲ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಮುನ್ನೆಡೆದರೆ ಕುಟುಂಬ ತಾನಾಗಿಯೇ ಪ್ರವರ್ಧಮಾನಕ್ಕೆ ಬರುತ್ತದೆ ಎಂದು ನ್ಯಾ.ನೂರುನ್ನಿಸಾ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಜಿಲ್ಲಾ ಮಹಿಳಾ ಸಂಘಟ ನೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಬಿ. ಸಿ.ಶೈಲಾನಾಗರಾಜು ಮಾತನಾಡಿ, ಮಹಿಳೆಯರಲ್ಲಿ ಪ್ರತಿಭಾವಂತರ ಸಂಖ್ಯೆ ಹೆಚ್ಚಿದ್ದರೂ ಸಹ ಇಂದಿಗೂ ಮಹಿಳೆ ತನ್ನ ಅಸ್ಮಿತೆಗಾಗಿ ಹುಡುಕಾಟ ನಡೆಸುತ್ತಲೇ ಇದ್ದಾಳೆ.ಆಕೆಯ ಮೇಲೆ ಕೌಟುಂಬಿಕ ದೌರ್ಜನ್ಯ, ದಬ್ಬಾಳಿಕೆ ನಿರಂತರವಾಗಿ ನಡೆಯುತ್ತಲೇ ಇದೆ.ತನ್ನೊಂದಿಗೆ ತನ್ನ ಎಳೆಯ ಮಕ್ಕಳನ್ನು ಕೊಂದು, ತಾನು ಆತ್ಮಹತ್ಯೆ ಮಾಡಿಕೊಳ್ಳುವಂತಹ ಮನಸ್ಥಿತಿಗೆ ಕಾರಣರಾರು ?, ತಾಯಿಯ ಆತಂಕವನ್ನು ದೂರ ಮಾಡುವಂತಹ ಸ್ಥಿತಿಯನ್ನು ನಾವು ಸೃಷ್ಟಿಸಬೇಕಿದೆ.ಈ ನಿಟ್ಟಿನಲ್ಲಿ ಹೆಣ್ಣಿನ ಪಾತ್ರವೂ ಮಹತ್ವದಿದೆ.ಮನೆಯಲ್ಲಿ ಗಂಡನ, ಅತ್ತೆ, ಮಾವ ಇತರೆ ಕುಟುಂಬಸ್ಥರ ಮನಸ್ಥಿತಿ ಬದಲಾಯಿಸಿ, ಅವರನ್ನು ಮನುಷ್ಯರನ್ನಾಗಿ ಮಾಡುವ, ಅವರ ಅರಿವಿನ ಕೊರತೆಯನ್ನು ನೀಗಿಸುವ ಕೆಲಸವನ್ನು ಹೆಣ್ಣು ಮಕ್ಕಳು ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಶ್ರೀಮತಿ ಲಕ್ಷಿö್ಮÃದೇವಮ್ಮ ಅವರಿಗೆ ಜಿಲ್ಲಾ ಮಹಿಳಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಶೈನಾ ಅಧ್ಯಯನ ಕೇಂದ್ರದ ದೊಂಬರನಹಳ್ಳಿ ನಾಗರಾಜು, ಸಮಾಜ ಸೇವಕರಾದ ಎಂ.ಪಿ.ಸುಶೀಲಮ್ಮ, ತಾಹೆರಾ ಕುಲ್ಸುಂ, ಮಂಜಾನೆ ಗೆಳೆಯರ ಬಳಗದ ಲಕ್ಷಿö್ಮÃöಮನರಸಿಂಹಶೆಟ್ಟರು, ಎಲ್.ಐ.ಸಿ ಅಭಿವೃದ್ದಿ ಅಧಿಕಾರಿ ಗಿರಿರಾಜ್ ಎಸ್.ಕೆ, ನಿವೃತ್ತ ಶಿರಸ್ತೆದಾರ್ ಹೆಚ್.ಶಂಕರಪ್ಪ, ಪಿ.ಜಿ.ಶಕುಂತಲ, ನಿರ್ಮಲ ಗೂಳರಿವೆ, ಗಾಯಕಿಯರಾದ ಮಾಧುರ್ಯ, ವೀಣಾ, ಮುತ್ಯಾಲಮ್ಮ, ಶಾಂತಕುಮಾರಿ, ಸಾವಿತ್ರಮ್ಮ, ಚಂದ್ರಕಲಾ, ಎಸ್.ಆರ್.ಪ್ರವೀಳಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.





