ತುಮಕೂರು: ದಿ. ೧೧-೦೪-೨೦೨೫ ಮದ್ಯಾಹ್ನ ೦೧-೦೦ ಗಂಟೆ ವೇಳೆಯಲ್ಲಿ ಪಿಯಾದಿ ಶ್ರೀಮತಿ ರಾಜಲಕ್ಷ್ಮಿ, ಕೊಂ ಜಯಸಿಂಹ ಮೂರ್ತಿ ೭೫ವರ್ಷ, ಹೊಸಕೆರೆ, ಹಾಗಲವಾಡಿ ಹೋಬಳಿ ಗುಬ್ಬಿ ತಾ// ರವರಿಗೆ ಆರೋಪಿ ಮಂಜುನಾಥ @ ಮನೋಜ್ @ ಮಂಜ ಎಂಬುವವನು ತನ್ನ ಬೈಕಿನಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಕರೆದುಕೊಂಡು ಹೋಗಿ ಶಿವನೇಹಳ್ಳಿ ಕೆರೆ ಏರಿಯ ಸಮೀಪದಲ್ಲಿ ಪಿರ್ಯಾದಿಗೆ ಹೆದರಿಸಿ ಅವರ ಕೊರಳಿನಲ್ಲಿದ್ದ ಚಿನ್ನದ ೪ ಸರಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ, ಪಿರ್ಯಾದಿ ರಾಜಲಕ್ಷ್ಮೀ ರವರು ಪ್ರತಿರೋದ ಮಾಡಿದ್ದರಿಂದ ತುಂಡಾದ ಒಟ್ಟು ೫೧ ಗ್ರಾಂ ತೂಕದ ೪ ಚಿನ್ನದ ಸರಗಳನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಚೇಳೂರು ಪೊಲೀಸ್ ಠಾಣೆಯ ಮೊಕದ್ದಮೆ ನಂಬರ್ ೭೦/೨೦೨೫ ಕಲಂ ೩೦೯(೪) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತಾರೆ. ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ ರವರ ಮಾರ್ಗದರ್ಶನದಲ್ಲಿ, ತುಮಕೂರು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ಸಿ ಗೋಪಾಲ್ ಹಾಗೂ ಬಿ.ಎಸ್.ಅಬ್ದುಲ್ ಖಾದರ್ ರವರ…
Author: News Desk Benkiyabale
ತುರುವೇಕೆರೆ: ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ರ ಥೋತ್ಸವವು ಭಕ್ತರ ಸಮ್ಮುಖದಲ್ಲಿ ಗುರುವಾರ ಬಹಳ ವಿಜೃಂಬಣೆಯಿAದ ನೆರವೇರಿತು. ಪಟ್ಟಣದ ಬ್ರಾಹ್ಮಣ ಬೀದಿಯಲ್ಲಿರುವ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಬ್ರಹ್ಮ ರಥೋತ್ಸವದ ಅಂಗವಾಗಿ ಚನ್ನಕೇಶವಸ್ವಾಮಿಗೆ ಪಂಚಾಮೃತ, ಕ್ಷೀರಾಭಿಷೇಕ ಸೇರಿದಂ ತೆ ದೇವಾಲಯದಲ್ಲಿ ಅನೇಕ ಪೂಜಾ ಕೈಂಕ ರ್ಯಗಳು ನೆರವೇರಿದವು. ಭಕ್ತಾದಿಗಳು ದೇವಾ ಲಯಕ್ಕೆ ತೆರಳಿ ವಿಶೇ಼ಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಚನ್ನಕೇಶವಸ್ವಾಮಿಯನ್ನು ಚಿಕ್ಕ ರಥದಲ್ಲಿ ಕುಳ್ಳರಿಸಿ ನೆರದಿದ್ದ ಆಪಾರ ಭಕ್ತರು ಚನ್ನಕೇಶವ ನಾಮ ಸ್ಮರಣೆಯೊಂದಿಗೆ ರ ಥವನ್ನು ಭಕ್ತರು ದೇವಾಲಯದ ಮುಂಬಾಗ ಬೀದಿಯಲ್ಲಿ ಎಳೆಯಲಾಯಿತು. ಭಕ್ತರು ಹಾಗೂ ಚನ್ನಕೇಶವಸ್ವಾಮಿ ದೇವಾಲಯ ಟ್ರಸ್ಟ್ ವತಿಯಿಂದ ಬಂದAತ ಭಕ್ತಾಧಿಗಳಿಗೆ ಪಾನಕ, ಪಲಹಾರ, ಮಜ್ಜಿಗೆ, ಹಾಗೂ ಪಾಯಸ, ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ರಥೋತ್ಸವದಲ್ಲಿ ಟ್ರಸ್ಟ್ ಅದ್ಯಕ್ಷರು, ಸದಸ್ಯರು ಸೇರಿದಂತೆ, ವಿವಿದ ಸಂಘ ಸಂಸ್ಥೆಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ತುಮಕೂರು: ಜಿಲ್ಲೆಯ ಗುಬ್ಬಿ ತಾಲ್ಲೂಕು ನಿಟ್ಟೂರು ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ೫೮ ಹಾಗೂ ತಿಪಟೂರಿನ ಶಾರದಾ ನಗರದಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ೮೬ ಬದಲಿಗೆ ೧೩೯ ಕೋಟಿ ರೂ. ವೆಚ್ಚದಲ್ಲಿ ರೋಡ್ ಓವರ್ ಬ್ರಿಡ್ಜ್ (ರಸ್ತೆ ಮೇಲ್ಸೇತುವೆ) ಹಾಗೂ ಸೀಮಿತ ಎತ್ತರದ ಸಬ್ ವೇಗಳ ನಿರ್ಮಾಣಕ್ಕೆ ಗುರುವಾರ ಕೇಂದ್ರ ರೈಲ್ವೆ ಹಾಗೂ ಜಲ ಶಕ್ತಿ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಶಂಕುಸ್ಥಾಪನೆ ನೆರವೇರಿಸಿದರು. ತಿಪಟೂರಿನಲ್ಲಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು ಬಹು ವರ್ಷಗಳಿಂದ ಬೇಡಿಕೆ ಇದ್ದ ರೈಲ್ವೆ ಯೋಜನೆಗಳ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗುತ್ತಿದ್ದು, ತಿಪಟೂರಿನ ಶಾರದಾ ನಗರದಲ್ಲಿ ೮೯.೩೨ ಕೋಟಿ ರೂ. ಹಾಗೂ ಗುಬ್ಬಿ ತಾಲೂಕಿನ ನಿಟ್ಟೂರು ರೈಲ್ವೆ ನಿಲ್ದಾಣದಲ್ಲಿ ೫೦.೫೭ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಸಬ್ ವೇ ನಿರ್ಮಾಣವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ ಸುಮಾರು ೨೦ ರಸ್ತೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಹಮ್ಮಿಕೊಂಡಿದ್ದು,…
ತಿಪಟೂರು: ತಾಲ್ಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಹೊಸ ಚಿಂತನೆಯ ಆಶಯದೊಂದಿಗೆ ಬುಧವಾರದಂದು ಕೃಷಿ ಸಾಹಿತ್ಯ ಸಮ್ಮೇಳನದ ಆಯೋಜನೆ ಮಾಡುವುದರ ಬಗ್ಗೆ ಕಲ್ಪತರು ಗ್ರಾಂಡ್ ಹೊಟೇಲ್ನಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾ ದಿಕಾರಿಗಳೊಂದಿಗೆ ಪೂರ್ವಬಾವಿ ಸಭೆಯನ್ನು ನಡೆಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಬಸವರಾಜಪ್ಪ ಪೂರ್ವಭಾವಿ ಸಭೆಯಲ್ಲಿ ಮಾತನಾಡುತ್ತಾ ಇದುವರೆಗೆ ಹೋಬಳಿ ಮಟ್ಟದ, ಮಹಿಳಾ ಸಾಹಿತ್ಯ, ಮಕ್ಕಳ ಸಾಹಿತ್ಯ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜನೆ ಮಾಡುತ್ತಾ ಬಂದಿದ್ದು ಹೊಸದಾಗಿ ಚಿಂತನೆ ಮಾಡುತ್ತಾ ಇಂದಿನ ಪೀಳಿಗೆಯು ಕೃಷಿ ಯಿಂದ ವಿಮುಖತೆ ಹೊಂದುತ್ತಿರುವ ಅಂಶಗಳ ಹಾಗೂ ರೈತರ ಸಮಸ್ಯೆಗಳಿಗೆ ಚಿಂತಿಸುವ ಪರಿಹಾರ ಹುಡುಕುವ ನಿಟ್ಟಿನ ಚಿಂತನೆಯೊAದಿಗೆ ಈ ಕಾರ್ಯಕ್ರಮವನ್ನು ಆಯೋಜನೆ ಮಾ ಡಲಾಗುತ್ತಿದೆ ಎಂಬುದನ್ನು ಸಭೆಯಲ್ಲಿ ಮಂಡಿ ಸಿದರು. ಸಾಹಿತಿ ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ ಸಾಹಿತ್ಯ ಕ್ಷೇತ್ರವು ಬರೀ ಅಕ್ಷರಸ್ಥರ ಜೊತೆ, ಸಾಹಿತಿಗಳು ಬರಹಗಾರ, ಪ್ರಬಂಧಕರಿಗೆ ಸೀಮೀತವಾಗದೆ ಜಾನಪದ-ಜನಪದ ಕಲೆ ಯನ್ನು ಉಳಿಸಿ ಬೆಳಸಿದ ಮುಂದಿನ ಪೀಳಿಗೆಯ ಸಾಗಿಸುತ್ತಿರುವ ಕೃಷಿಕ ರೈತರ ಬಗ್ಗೆ…
ತುಮಕೂರು: ಮಹಾನಗರ ಪಾಲಿಕೆ ಆವರಣದಲ್ಲಿ ಏಪ್ರಿಲ್ ೧೪ರಂದು ಏರ್ಪಡಿಸಿರುವ ಡಾ: ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ಹಾಗೂ ೧೩೪ನೇ ಜಯಂತಿ ಅಂಗವಾಗಿ ಅಂಬೇಡ್ಕರ್ ಜೀವನ ಚರಿತ್ರೆ ಕುರಿತು ಛಾಯಾಚಿತ್ರ ಪ್ರದರ್ಶ ನವನ್ನು ಏರ್ಪಡಿಸಲಾಗಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ. ಪರಮೇಶ್ವರ್ ತಿಳಿಸಿದರು. ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಗುರುವಾರ ಡಾ: ಬಿ.ಆರ್. ಅಂಬೇಡ್ಕರ್ ರ್ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಏಪ್ರಿಲ್ ೧೪ರಂದು ಮಹಾನಗರಪಾಲಿಕೆ ಆವರಣದಲ್ಲಿ ಸಿದ್ಧತೆಯಾಗುತ್ತಿರುವ ಹೆಲಿಕ್ಯಾಪ್ಟರ್ ಮಾದರಿಯನ್ನೂ ಸಹ ಉದ್ಘಾಟಿಸಲಾಗುವುದು. ಕಾರ್ಯಕ್ರಮಕ್ಕೆ ಕೇಂದ್ರ ಹಾಗೂ ರಾಜ್ಯ ಸಚಿವರು ಆಗಮಿಸಲಿದ್ದಾರೆ. ಬೌದ್ಧ ಧರ್ಮದ ಅನುಯಾಯಿಗಳಿಂದ ಪಂಚಶೀಲಾ ಪಠನೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು. ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ೩೦ ಸಾಧಕರು ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಅಂಬೇಡ್ಕರ್ ಹಾಗೂ ಬಾಬು ಜಗಜೀವನ ರಾಂ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಏರ್ಪಡಿಸಬೇಕು. ವೇದಿಕೆ…
ತುಮಕೂರು: ವೀರಶೈವ, ಲಿಂಗಾಯತರಲ್ಲಿ ಐಕ್ಯತೆ ಮತ್ತು ಅಭಿವೃದ್ದಿ ಕಾಣುವುದೇ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಪ್ರಮುಖ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ನಾವೆಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ ಎಂದು ಶ್ರೀಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ನಗರದ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ (ರಿ) ,ತುಮಕೂರು ಜಿಲ್ಲಾ ಘಟಕದ ವಸತಿ ವತಿಯಿಂದ ಆಯೋ ಜಿಸದಸ ಸೇವಾಧೀಕ್ಷೆ, ಸಾಧಕರಿಗೆ ಸನ್ಮಾನ ಮತ್ತು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮೊಳಗಿನ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದರು. ವೀರಶೈವ, ಲಿಂಗಾಯತ ಧರ್ಮದ ಆಚರಣೆ ಇತ್ತಿಚಿನ ದಿನಗಳಲ್ಲಿ ಕಡಿಮೆಯಾಗುತ್ತದೆ. ಅಂಗೈಯಲ್ಲಿ ಲಿಂಗಧರಿಸಿ ನಿತ್ಯವೂ ಪೂಜೆ ಸಲ್ಲಿಸುವ ಸಂಪ್ರದಾಯ ಕಡಿಮೆಯಾಗಿದೆ. ಇನ್ನೊಂದು ಧರ್ಮದ ಅನುಸರಣೆ ಮಾಡುವುದು ಸರಿಯಲ್ಲ. ಸತ್ಯ ನಾರಾಯಣ ಪೂಜೆಗೆ, ಲಿಂಗಾಯಿತ, ವೀರಶೈವರಿಗೂ ಸಂಬAಧವೇನು ಎಂದು ಪ್ರಶ್ನಿಸಿದ ಅವರು, ಪರಧರ್ಮ ಸಹಿಷ್ಣತೆ ಇರಲಿ, ಆದರೆ…
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಅವರ ೫೫ನೇ ಹುಟ್ಟುಹಬ್ಬವನ್ನು ಅವರ ಹಿತೈಷಿಗಳು ಗುರುವಾರ ಸಂಭ್ರಮದಿAದ ಆಚರಿಸಿ ಶುಭ ಕೋರಿದರು. ಧನಿಯಾಕುಮಾರ್ ಅವರ ತುಮಕೂರಿನ ನಿವಾಸದಲ್ಲಿ ಬೆಳಿಗ್ಗೆ ತಂಗನಹಳ್ಳಿ ಅನ್ನಪೂರ್ಣೇಶ್ವರಿ ಮಹಾಸಂಸ್ಥಾನದ ಅಧ್ಯಕ್ಷರಾದ ಬಸವಲಿಂಗ ಸ್ವಾಮೀಜಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದರು. ಧನಿಯಾಕುಮಾರ್ ಪತ್ನಿ, ನಗರಪಾಲಿಕೆ ಮಾಜಿ ಸದಸ್ಯೆ ಗಿರಿಜಾ ಧನಿಯಾಕುಮಾರ್, ಮಾಜಿ ಸಚಿವ ಸೊಗಡು ಶಿವಣ್ಣ, ಹಿರಿಯ ಕಲಾವಿದ ಡಾ.ಲಕ್ಷಣದಾಸ್, ವಿವಿಧ ಸಂಘಟನೆಗಳ ಮುಖಂಡರಾದ ಎಂ.ಕೆ.ವೆAಕಟಸ್ವಾಮಿ, ಮಲ್ಲಸಂದ್ರ ಶಿವಣ್ಣ, ಪಿ.ಎನ್.ರಾಮಯ್ಯ, ಆರ್.ಎನ್.ವೆಂಕಟಾಚಲ, ಮಧು ಜ್ಯೂವೆರ್ಸ್, ಹೊಸಕೋಟೆ ನಟರಾಜು, ಮಂಜೇಶ್, ಟಿ.ಕೆ.ಆನಂದ್, ಡಿ.ಎಂ.ಸತೀಶ್, ತೇಜಸ್, ನಟರಾಜಶೆಟ್ಟರು, ಟಿ.ಹೆಚ್.ಬಾಲಕೃಷ್ಣ, ಪಂಚಾಕ್ಷರಯ್ಯ, ಶಾಂತಕುಮಾರ್ ಮೊದಲಾದವರು ಭಾಗವಹಿಸಿ ಶುಭಕೋರಿದರು.
ತುಮಕೂರು: ರಾಜ್ಯದಲ್ಲಿ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ೨೦೦ ಮೀಟರ್ ಪುತ್ಥಳಿ ಸ್ಥಾಪನೆ, ರಾಜ್ಯದ ಎಲ್ಲಾ ಕೇಂದ್ರಗಳಲ್ಲಿ ಎಲ್ಲಾ ಜಾತಿ, ಜನಾಂಗದ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಲು ಉಚಿತ ಕೋಚಿಂಗ್ ಸೆಂಟರ್ ತೆರೆಯುವುದು ಸೇರಿದಂತೆ ವಿವಿಧ ಬೇಡಿಕೆಗಳನಿಟ್ಟುಕೊಂಡು ಬೀದರನಿಂದ ಭೀಮ ಪ್ರಜಾ ಸಂಘ(ರಿ) ವತಿಯಿಂದ ಹೊರಟಿರುವ ಸ್ವಾಭಿ ಮಾನಿಗಳ ಕಾಲ್ನೆಡಿಗೆ ಜಾಥಾ ಇಂದು ತುಮಕೂರು ತಲುಪಿದ್ದು,ಅಂಬೇಡ್ಕರ್ ಅನುಯಾ ಯಿಗಳು, ಜಾಥವನ್ನು ಬರಮಾಡಿಕೊಂಡು ಬಿಳ್ಕೋಟ್ಟರು. ತುಮಕೂರು ನಗರಕ್ಕೆ ಸ್ವಾಭಿಮಾನಿ ಕಾಲ್ನೇಡಿಗೆ ಜಾಥಾ ಆಗಮಿಸಿದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭೀಮ ಪ್ರಜಾ ಸಂಘ(ರಿ),ನ ಸಂಸ್ಥಾಪಕ ರಾಜ್ಯಾಧ್ಯಕ್ಷ ವೈಟ್ಪೀಲ್ಡ್ ಮುರುಗೇಶ್,ದೇಶದಲ್ಲಿ ಹಲವು ಗಣ್ಯರ ಪತ್ರಿಮೆಗಳಿವೆ. ಗುಜರಾತ್ನಲ್ಲಿರುವ ಸರದಾರ್ ವಲ್ಲಬಾಯಿ ಪಟೇಲ್ ಪತ್ರಿಮೆ ದೇಶ ದಲ್ಲಿ ದೊಡ್ಡ ಪ್ರತಿಮೆಯಾಗಿದೆ.ಆದರೆ ಇಂದು ದೇಶ ನಡೆಯುತ್ತಿರುವುದು ಬಾಬಾ ಸಾಹೇಬರ ಸಂವಿ ಧಾನದಿಂದ.ಹಾಗಾಗಿಯೇ ಬಾಬಾ ಸಾಹೇಬರ ೨೦೦ ಮಿಟರ್ ಪ್ರತಿಮೆ ಸ್ಥಾಪಿಸುವ ಮೂಲಕ ಬಾಬಾ ಸಾಹೇಬರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಮಾಡಬೇಕೆಂಬುದು ಭೀಮ ಪ್ರಜಾ ಸಂಘದ…
ತುಮಕೂರು:ಅಮರ ಜೋತಿ ಸಾಂಸ್ಕೃತಿಕ ಟ್ರಸ್ಟ್, ದಿಬ್ಬೂರು, ತುಮಕೂರು ವಿಶ್ವವಿದ್ಯಾಲಯ ಸಾಂಸ್ಕೃತಿಕ ಚಟುವಟಿಕೆಗಳ ಘಟಕವತಿಯಿಂದ ಡಾ.ರಾಜಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಏ.೧೨ ರಂದು ಸಂಜೆ ೫ ಗಂಟೆಗೆ ತುಮಕೂರು ವಿವಿ ಆವರಣದಲ್ಲಿರುವ ಬಯಲು ರಂಗಮAದಿರದಲ್ಲಿ ಆಯೋಜಿಸಲಾಗಿದೆ. ಕನ್ನಡ ಚಲನಚಿತ್ರರಂಗದ ಮೇರು ನಟ ಡಾ.ರಾಜಕುಮಾರ್ ಅವರ ಸ್ಮರಣೆ ಅಂಗವಾಗಿ ಅಮರಜೋತಿ ಸಾಂಸ್ಕೃತಿಕ ಟ್ರಸ್ಟ್, ದಿಬ್ಬೂರು ಇದರ ಮುಖ್ಯಸ್ಥರಾದ ದಿಬ್ಬೂರು ಮಂಜು ಮತ್ತು ಸಂಗಡಿಗರು ಡಾ.ರಾಜ ಗೀತೆಗಳ ಗಾಯನವನ್ನು ಪ್ರಸ್ತುತ ಪಡಿಸಲಿದ್ದಾರೆ. ವರನಟ ಡಾ.ರಾಜಕುಮಾರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಿರಿಯ ಹರಿಕಥಾ ವಿದ್ವಾನ್ ಕಲಾಶ್ರೀ ಡಾ,ಲಕ್ಷö್ಮಣದಾಸ್ ಉದ್ಘಾಟನೆ ಮಾಡಲಿದ್ದು, ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ತುಮಕೂರು ವಿವಿ ಹಣಕಾಸು ಅಧಿಕಾರಿ ಕೆ.ಸಿ.ನರಸಿಂಹಮೂರ್ತಿ, ಹಿರಿಯ ಪ್ರಾಧ್ಯಾಪಕ ಪ್ರೊ.ಕೆ.ಜಿ.ಪರುಶುರಾವi, ತುಮಕೂರು ವಿವಿ ವಿಜ್ಞಾನ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟರೆಡ್ಡಿ ರಾಮರೆಡ್ಡಿ,ರಾಜ್ಯ ಯುವ ಬರಹಗಾರರ ಒಕ್ಕೂಟದ ರಾಜ್ಯ ಕಾರ್ಯಾಧ್ಯಕ್ಷ ಡಾ.ಲಕ್ಷಿö್ಮರಂಗಯ್ಯ, ಸಾಂಸ್ಕೃತಿಕ ಚಟುವಟಿಕೆಗಳ ಘಟಕದ ಸಂಯೋಜಕರಾದ ಡಾ.ಎಸ್.ದೇವರಾಜು, ತುಮಕೂರು ವಿವಿ ಉಪಗ್ರಂಥಪಾಲಕರಾದ ಡಾ.ಬಿ.ಕುಮಾರ್, ಜಿಲ್ಲಾ…
ತುಮಕೂರು: ಬಯಲು ಸೀಮೆ ಕಂಪನಿ ವತಿಯಿಂದ ಏ.೧೫ ರಿಂದ ಮೇ.೬ರವರೆಗೆ ಉಚಿತ ಅಭಿನಯ ಕಾರ್ಯಗಾರವನ್ನು ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದೊಂದಿಗೆ ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನ ಹಿಂಭಾಗದಲ್ಲಿರುವ ಜನ ಚಳುವಳಿ ಕೇಂದ್ರದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಾಗಾರದ ನಿರ್ದೇಶಕ ನಟರಾಜ್ ಹೊನ್ನವಳ್ಳಿ ತಿಳಿಸಿದ್ದಾರೆ. ಕಾರ್ಯಾಗಾರದಲ್ಲಿ ದೇಹ, ಮನಸ್ಸು, ಮತ್ತು ಧ್ವನಿಯ ಸಿದ್ಧತೆ, ಅಭಿನಯ ತಯಾರಿಗಾಗಿ ರಂಗಾಟಗಳು, ಆಶು ವಿಸ್ತರಣಾ ತರಗತಿಗಳು, ಸಿನೆಮಾ ನೋಡುವುದು, ರಂಗ ಸಂಪನ್ಮೂಲ ವ್ಯಕ್ತಿಗಳಿಂದ ಅಭಿನಯ ತರಗತಿಗಳು, ರಂಗ ಸಾಹಿತ್ಯ ಪರಿಚಯ ಮಾಡಿಕೊಡಲಾಗುವುದು ಮತ್ತು ಕಾರ್ಯಾಗಾರದ ಕಡೆಯಲ್ಲಿ ನಾಟಕ ಪ್ರದರ್ಶನ ಇರಲಿದೆ ಎಂದು ಹೇಳಿದ್ದಾರೆ. ಕಾರ್ಯಾಗಾರದಲ್ಲಿ ಕೇವಲ ೧೫ ಜನರಿಗೆ ಮಾತ್ರ ಅವಕಾಶ ಇರುತ್ತದೆ. ಪ್ರತಿದಿನ ಸಂಜೆ ೪.೩೦ ರಿಂದ ೮.೩೦ರ ವರೆಗೆ ಮತ್ತು ಶನಿವಾರ ಮತ್ತು ಭಾನುವಾರ ಬೆಳಗ್ಗೆ ೧೦ರಿಂದ ಸಂಜೆ ೭ರವರೆಗೆ ತರಬೇತಿ ನೀಡಲಾಗುವುದು. ಶಿಬಿರಾರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. ೧೮ ರಿಂದ ೩೫ ವರ್ಷದೊಳಗಿನವರಿಗೆ ಮಾತ್ರ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.…