ಪಾವಗಡ: ಬಡಜನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ನ್ಯಾಯಬೆಲೆ ಅಂಗಡಿಗಳ ಮೂಲಕ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿದೆ. ಆದರೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ತಾಂತ್ರಿಕ ಎಡವಟ್ಟು ಹಾಗೂ ಸರ್ವರ್ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಪರಿಣಾಮವಾಗಿ ತಾಲ್ಲೂಕಿನಾದ್ಯಂತ ಪಡಿತರ ಚೀಟಿದಾರರು ಬೆಳಗಿನಿಂದ ಸಂಜೆಯವರೆಗೆ ಸರತಿ ಸಾಲಿನಲ್ಲಿ ನಿಂತರೂ ರೇಷನ್ ಪಡೆಯಲಾಗದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಉಚಿತ ಯೋಜನೆಗಳನ್ನು ಘೋಷಿಸುವ ಸರ್ಕಾರ, ಕೋಟ್ಯಂತರ ಜನರು ಬಳಸುವ ಇಲಾಖೆಯ ಸರ್ವರ್ ಸಾಮರ್ಥ್ಯವನ್ನು ಏಕೆ ಹೆಚ್ಚಿಸುತ್ತಿಲ್ಲ? ಕೂಡಲೇ ತಾಂತ್ರಿಕ ಕೊರತೆಯನ್ನು ನೀಗಿಸಬೇಕು. ಸರ್ವರ್ ಸಮಸ್ಯೆ ಸಂಪೂರ್ಣ ಬಗೆಹರಿಯುವವರೆಗೆ ಸಾರ್ವಜನಿಕರನ್ನು ಪೀಡಿಸದೆ, ಹಳೆಯ ಮಾದರಿಯಂತೆ ರಿಜಿಸ್ಟರ್ ಆಫ್‌ಲೈನ್ ಆಧಾರದಲ್ಲಿ ಪಡಿತರ ವಿತರಿಸಲು ಆಹಾರ ಇಲಾಖೆ ತಕ್ಷಣ ಆದೇಶ ಹೊರಡಿಸಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಜೀವನಕ್ಕೆ ನೆರವಾಗಲು ನ್ಯಾಯಬೆಲೆ ಅಂಗಡಿಗಳ ಮೂಲಕ ರಿಯಾಯಿತಿ ದರದಲ್ಲಿ ಪಡಿತರ ವಿತರಿಸುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ…
Author: News Desk Benkiyabale
ತುಮಕೂರು: ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ವತಿಯಿಂದ ಮದರ್ ಥೆರೆಸಾ ರವರ ಜನ್ಮದಿನಾಚರಣೆಯನ್ನು ಇಂದು ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಮೇಣದ ದೀಪವನ್ನು ಹಚ್ಚುವುದರ ಮೂಲಕ ವಿಶೇಷವಾಗಿ ಆಚರಣೆಯನ್ನು ಮಾಡಲಾಯಿತು. ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಹಾಗೂ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಎನ್. ಕೆ ನಿಧಿ ಕುಮಾರ್ ಮದರ್ ಥೆರೆಸಾ ರವರು ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಕಲ್ಕತ್ತ ಮಹಾನಗರದಲ್ಲಿ ಜಾತಿ, ಧರ್ಮ ಎಂಬ ತಾರತಮ್ಯ, ಬೇಧ ಭಾವವಿಲ್ಲದೆ ಪ್ಲೇಗ್ ಮತ್ತು ಕುಷ್ಠರೋಗ ಎಂಬ ಮಹಾಮಾರಿಯಿಂದ ಬಳಲುತ್ತಿದ್ದ ಸಮಾಜವನ್ನು ತಮ್ಮ ಸ್ವ-ಹಸ್ತದಿಂದಲೇ ಅವರುಗಳನ್ನು ಶುಶ್ರೂಷೆ ಮಾಡಲು ಮುಂದಾಗಿ, ವಿಶೇಷ ಸೇವೆಯನ್ನು ಅರ್ಪಿಸಿದ ಮಹಾಮಾತೆ ಅವರಾಗಿದ್ದರು, ಅವರ ನಿಸ್ವಾರ್ಥ ಸೇವೆಯನ್ನು ಭಾರತೀಯರಾದ ನಾವುಗಳು ಹೃದಯಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು. ಅಸ್ಪöÈಶ್ಯತೆ ಎಂಬ ಘನಘೋರ ಆಚರಣೆಯಿದ್ದಂತಹ ಕಾಲಘಟ್ಟದಲ್ಲಿ ನಮ್ಮ ದೇಶಕ್ಕೆ ಅವರ ಧರ್ಮ ಪ್ರಚಾರಕ್ಕೆಂದು ಆಗಮಿಸಿದ್ದ ಅವರು, ಅದನ್ನು…
ಹುಳಿಯಾರು: ಕೈಯಲ್ಲಿ ಬಲವಾದ ಸಂದೇಶ, ಎದೆಯಲ್ಲಿ ಅಚಲವಾದ ಛಲ! ಮೈಸೂರಿನ ಸಾಹಸಿ ವ್ಯಕ್ತಿ ರಾಜೇಂದ್ರ ಅವರು ಮೈಸೂರಿನಿಂದ ಮಹಾರಾಷ್ಟçದ ಪ್ರಸಿದ್ಧ ಪುಣ್ಯಕ್ಷೇತ್ರ ಶಿರಡಿಗೆ ಕೈಗೊಂಡಿರುವ ಬರೋಬ್ಬರಿ ೧,೦೦೦ ಕಿಲೋಮೀಟರ್‌ಗಳ ಸುದೀರ್ಘ ಸೈಕಲ್ ಯಾತ್ರೆ ದಾರಿಯುದ್ದಕ್ಕೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಯಾವುದೇ ಸ್ವಾರ್ಥವಿಲ್ಲದೆ, ಸಮಾಜಕ್ಕೆ ಪ್ರಸ್ತುತ ಅಗತ್ಯವಿರುವ ಪ್ರಮುಖ ಕಾಳಜಿಗಳನ್ನು ಹೊತ್ತು ಅವರು ಈ ಸಾಹಸಕ್ಕೆ ಕೈಹಾಕಿದ್ದಾರೆ. ಸಂವಿಧಾನದ ಉಳಿವು, ನಿರುದ್ಯೋಗ ಸಮಸ್ಯೆಯ ಶೀಘ್ರ ನಿವಾರಣೆ, ತಾರತಮ್ಯವಿಲ್ಲದ ಕಾನೂನು ಜಾರಿ ಹಾಗೂ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವುದು ಈ ಸೈಕಲ್ ಯಾತ್ರೆಯ ಪ್ರಮುಖ ಉದ್ದೇಶವಾಗಿದೆ. ಯಾತ್ರೆಯ ಹಾದಿ ಜನಸಾಮಾನ್ಯರ ಬಾಂಧವ್ಯ: ದಿನಕ್ಕೆ ಸರಾಸರಿ ೭೫ ಕಿಲೋಮೀಟರ್ ಸಂಚರಿಸುವ ರಾಜೇಂದ್ರ ಅವರು, ದಾರಿಯಲ್ಲಿ ಸಿಗುವ ಜನಸಾಮಾನ್ಯರು ಪ್ರೀತಿಯಿಂದ ಕೊಡುವ ತಿಂಡಿ-ಊಟವನ್ನೇ ಸ್ವೀಕರಿಸುತ್ತಿದ್ದಾರೆ. ರಾತ್ರಿಯ ವೇಳೆಯಲ್ಲಿ ದೇವಸ್ಥಾನ, ಮಠಗಳು ಅಥವಾ ಆತ್ಮೀಯರ ಮನೆಗಳಲ್ಲಿ ವಾಸ್ತವ್ಯ ಹೂಡುತ್ತಾ ತಮ್ಮ ಪಯಣವನ್ನು ಮುಂದುವರಿಸಿದ್ದಾರೆ. ಸಾಹಸ ಹೊಸದೇನಲ್ಲ!: ರಾಜೇಂದ್ರ ಅವರಿಗೆ ಈ ರೀತಿಯ ಸುದೀರ್ಘ ಯಾತ್ರೆ ಹೊಸದೇನಲ್ಲ. ಈ ಹಿಂದೆ…
ಪಾವಗಡ: ತಾಲ್ಲೂಕಿನ ಪಳವಳ್ಳಿ ಗ್ರಾಮದ ಆಟೋ ಚಾಲಕ ಚಂದ್ರಶೇಖರ್ ರವರ ಅನುಮಾನಾಸ್ಪದ ಸಾವಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೊಂದು ಪೂರ್ವಯೋಜಿತ ಕೊಲೆ ಎಂದು ಆರೋಪಿಸಿರುವ ಗ್ರಾಮಸ್ಥರು ಹಾಗೂ ಮೃತನ ಕುಟುಂಬಸ್ಥರು, ತಪ್ಪಿತಸ್ಥರನ್ನು ಬಂಧಿಸುವAತೆ ಆಗ್ರಹಿಸಿ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದರು. ಚಂದ್ರಶೇಖರ್ ಹಾಗೂ ಅದೇ ಗ್ರಾಮದ ಬೊಮ್ಮಲಾಟ ಮೂರ್ತಿ, ಮಧು ಮತ್ತು ಹರೀಶ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿತ್ತು. ಇದೇ ವೈಷಮ್ಯದಿಂದ ಆರೋಪಿಗಳು ಸಂಜೆ ವೇಳೆಗೆ ಚಂದ್ರಶೇಖರ್ ಅವರನ್ನು ಮನೆಯಿಂದ ಕರೆದುಕೊಂಡು ಹೋಗಿ, ಸಪ್ಪಲಮ್ಮ ದೇವಸ್ಥಾನದ ಬಳಿ ಮನಬಂದAತೆ ಥಳಿಸಿದ್ದಾರೆ. ನಂತರ ಪ್ರಕರಣದಿಂದ ತಪ್ಪಿಸಿಕೊಳ್ಳಲು ಅಪಘಾತದ ನಾಟಕವಾಡಿದ್ದಾರೆ ಎಂದು ಮೃತನ ಪತ್ನಿ ಶಿಲ್ಪಾ ಪೊಲೀಸರ ಎದುರು ಕಣ್ಣೀರಿಡುವ ಮೂಲಕ ದೂರು ಕೊಟ್ಟಿದ್ದಾರೆ ಕಳೆದ ೨೦ ದಿನಗಳ ಹಿಂದೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಂದ್ರಶೇಖರ್ ಮಂಗಳವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಮನೆಯಲ್ಲಿದ್ದ ಒಬ್ಬನೇ ಮಗನನ್ನು ಕಳೆದುಕೊಂಡಿದ್ದೇವೆ. ೨ ವರ್ಷದ ಮಗಳು ಹಾಗೂ ೨ ತಿಂಗಳ ಹಸುಗೂಸಿಗೆ ಈಗ ತಂದೆಯಿಲ್ಲದAತಾಗಿದೆ…
ತುಮಕೂರು: ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ ೬ರಂದು ಬೆಳಿಗ್ಗೆ ೧೧ ಗಂಟೆಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾತಿ ಒಕ್ಕೂಟದ ರಜತ ಮಹೋತ್ಸವ, ಬೃಹತ್ ಜನಜಾಗೃತಿ ಸಮಾವೇಶ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ ತಿಳಿಸಿದರು. ನಗರದ ಶ್ರೀ ಕಾಳಿದಾಸ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿ ನಿಲಯದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, “ಹಿಂದುಳಿದ ವರ್ಗಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಒಕ್ಕೂಟದಿಂದ ನಿರಂತರ ಹೋರಾಟ ನಡೆಸಲಾಗುವುದು. ಮಾಜಿ ಸಿಎಂ ಸಿದ್ದರಾಮಯ್ಯನವರು ಹಿಂದುಳಿದ ಜಾತಿಗಳ ಕಲ್ಯಾಣಕ್ಕಾಗಿ ಶ್ರಮಿಸಿದ್ದು, ಅನೇಕ ಕೊಡುಗೆಗಳನ್ನು ನೀಡುವ ಮೂಲಕ ಶೋಷಿತರನ್ನು ಮುನ್ನೆಲೆಗೆ ತರುವ ಕೆಲಸ ಮಾಡಿದ್ದಾರೆ. ಸದ್ಯ ಮಧುಸೂದನ್ ನಾಯಕ್ ಸಮಿತಿಯ ವರದಿಯನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಈ ಸಮಾವೇಶದ ಮೂಲಕ ಸರ್ಕಾರವನ್ನು ಒತ್ತಾಯಿಸಲಾಗುವುದು” ಎಂದರು. ಹಿAದುಳಿದ ವರ್ಗಗಳ ಆಯೋಗದ ಮಾಜಿ ಜೆ.ಡಿ. ಗೋಪಾಲ್ ಮಾತನಾಡಿ ೫-೨-೨೦೦೧ರಂದು ಅಧಿಕೃತವಾಗಿ ನೋಂದಾ ಯಿಸಲ್ಪಟ್ಟ ನಮ್ಮ ಒಕ್ಕೂಟವು ಕಳೆದ…
ಪಾವಗಡ: ತಾಲೂಕಿನ ವೈ.ಎನ್.ಹೊಸಕೋಟೆ ಹೋಬಳಿಯ ಜೋಡಿ ಹಚ್ಚಮ್ಮನಹಳ್ಳಿ ಸರ್ವೆ ನಂಬರ್ ೮/೧ರ ವ್ಯಾಪ್ತಿಯ ಮೇಗಳಪಾಳ್ಯ ಗ್ರಾಮದ ಸಮೀಪ, ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿ ರೈತನ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದು ನಾಶಪಡಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ವೈ.ಎನ್.ಹೊಸಕೋಟೆ ಗ್ರಾಮದ ರೈತ ಹೆಚ್.ಪಿ. ಕೃಷ್ಣಪ್ಪ (ಗ್ಯಾಸ್ ಕಿಷ್ಟಪ್ಪ) ಅವರು ಒಂದೂವರೆ ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಮಾರು ೬೦ ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಮಚ್ಚಿನಿಂದ ಕಡಿದು ನಾಶಪಡಿಸಿದ್ದಾರೆ. ಫಸಲು ನೀಡುವ ಹಂತಕ್ಕೆ ಬಂದಿದ್ದ ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿರುವುದರಿಂದ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಸ್ಥಳೀಯ ರೈತರು ತಿಳಿಸಿದ್ದಾರೆ. ಘಟನೆ ಕುರಿತು ವೈ.ಎನ್.ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿದವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತುಮಕೂರು: ನಗರದ ಮರಳೂರು ಗ್ರಾಮ ದೇವತೆ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ಮುಖ್ಯದ್ವಾರ ಲೋಕಾರ್ಪಣೆ ಕಾರ್ಯಕ್ರಮ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಅದ್ದೂರಿಯಿಂದ ನಡೆಯಿತು. ಗ್ರಾಮ ಪ್ರದಕ್ಷಿಣೆ, ಗಂಗಾಪೂಜೆ, ವಿಶ್ವಕ್ಷೇನ ಮಹಾಗಣಪತಿ ಪೂಜೆ, ಮಹಾಸಂಕಲ್ಪ, ವಾಸುದೇವ ಪುಣ್ಯಾಃ, ರಕ್ಷಾಬಂಧನ, ಆಚಾರ್ಯ ಋತ್ವಿಕ್ ಗ್ವರಣ ಮೃತಿಕಾ ಸಂಗ್ರಹಣ, ಯಾಗಶಾಲಾ ಪ್ರವೇಶ, ಜೀವತತ್ವಾದಿ ಹೋಮ, ಪೂರ್ಣಾಹುತಿ, ಅಂಕುರಾರ್ಪಣೆ, ಪಂಚಗವ್ಯ ಸ್ನಪನ, ಧ್ಯಾನ್ಯಾಧಿವಾಸ, ಪುಷ್ಪಾಧಿವಾಸ, ಮಹಾಮಂಗಳಾರತಿ ನೆರವೇರಿದವು. ಬ್ರಾಹ್ಮೀ ಲಗ್ನದಲ್ಲಿ ಅಮ್ಮನವರ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ವಿವಿಧ ಪೂಜೈ ಕೈಂಕರ್ಯಗಳೊAದಿಗೆ ನಡೆಯಿತು. ವಾಸುದೇವ ಪುಣ್ಯಾಃ, ದ್ವಾರಾಧನೆ, ಮಹಾಕುಂಭಾರಾಧನೆ, ಪ್ರಾಣಪ್ರತಿಷ್ಠಾಪನಾ ಹೋಮ, ಪುರುಷಸೂಕ್ತ ಶ್ರೀಸೂಕ್ತ ಹೋಮ, ದುರ್ಗಾ ಸೂಕ್ತ ಹೋಮ, ಪರಿವಾರ ಹೋಮ, ಪ್ರಾಯಶ್ಚಿತ್ತ ಹೋಮ, ಮಹಾ ಪೂರ್ಣಾಹುತಿ, ಕುಂಭ ಉದ್ಘಾಟನೆ ಜರುಗಿತು. ಜತೆಗೆ ಶ್ರೀ ವೀರಾಂಜನೇಯಸ್ವಾಮಿ ದೇವಾಲ ಯದಲ್ಲಿ ಶ್ರೀ ಆಂಜನೇಯ ಮೂಲ ಮಂತ್ರ ಹೋಮ ನಡೆಯಿತು. ಈ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮರಳೂರಿನ ಸುಮಂಗಲಿಯರು ಆರತಿ ಹೊತ್ತು ಅಮ್ಮನವರ ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿ…
ತುಮಕೂರು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿಜ.ಬಿ.ವಿ ಅವರು ಜಿಲ್ಲಾ ಪಂಚಾಯತಿಯಲ್ಲಿAದು ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್‌ಯೋಜನೆಯ ಮಾಹಿತಿಯುಳ್ಳ ಕರಪತ್ರಗಳನ್ನು ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಜುಲೈ ೧ ರಿಂದ ಆರಂಭವಾಗಿರುವ ವಿಬಿ ಜಿ ರಾಮ್ ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲಾಗುತ್ತಿದ್ದು, ಸದರಿ ಯೋಜನೆಯ ಮಾಹಿತಿಯನ್ನು ಗ್ರಾಮೀಣ ಭಾಗದ ಪ್ರತಿ ಮನೆಗೂ ತಲುಪಿಸುವ ಉದ್ದೇಶದಿಂದ ಈ ಕರಪತ್ರಗಳನ್ನು ಬಿಡುಗಡೆಗೊಳಿಸಲಾಗಿದೆ. ಗ್ರಾಮೀಣ ಪ್ರದೇಶದ ಅರ್ಹ ಕುಟುಂಬಕ್ಕೆ ಒಂದು ವರ್ಷದಲ್ಲಿ ೧೨೫ ದಿನಗಳ ಉದ್ಯೋಗ ಮತ್ತು ಒಂದು ಮಾನವ ದಿನಕ್ಕೆ ೩೮೨ ರೂ.ಗಳ ಕೂಲಿಯನ್ನು ನೀಡಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಬರದ ಪರಿಸ್ಥಿತಿ ಇರುವುದರಿಂದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಆಜೀವಿಕ ಮಿಷನ್ ಯೋಜನೆಯ ಸದುಪಯೋಗವನ್ನು ಗ್ರಾಮೀಣ ಜನರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಗ್ರಾಮ ಪಂಚಾಯಿತಿಯಿAದ ಉಚಿತವಾಗಿ ಜಾಬ್ ಕಾರ್ಡ್ ನೀಡಲಾಗುತ್ತಿದೆ. ಅಕುಶಲ ಕೆಲಸ ಬೇಕೆಂದು ಗ್ರಾಮ ಪಂಚಾಯಿತಿಗೆ ನಮೂನೆ ೬ರಲ್ಲಿ…
ಹುಳಿಯಾರು: ಗಣಿ ಬಾಧಿತ ಪ್ರದೇಶಗಳ ಪುನರುಜ್ಜೀವನಕ್ಕಾಗಿ ಮೀಸಲಿಟ್ಟ ಕೋಟ್ಯಂತರ ರೂಪಾಯಿ ಹಣ, ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯಿಂದಾಗಿ ಮಣ್ಣು ಪಾಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ, ಹುಳಿಯಾರು ಹೋಬಳಿಯಲ್ಲಿ ಸಿಇಪಿಎಂಐಝ್ಡ್ ಯೋಜನೆಯಡಿ ಬರೋಬ್ಬರಿ ೯ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೆಂಕೆರೆ-ಗೌಡಗೆರೆ-ಕAಪನಹಳ್ಳಿ ಕಾಂಕ್ರೀಟ್ ರಸ್ತೆ. ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಆಗಲೇ ರಸ್ತೆ ಅಲ್ಲಲ್ಲಿ ಕಿತ್ತು ಹೋಗಿ, ಕಳಪೆ ಕಾಮಗಾರಿಯ ನಗ್ನ ಸತ್ಯವನ್ನು ಸಾರುತ್ತಿದೆ. ಯೋಜನೆಯ ವಿವರ ಮತ್ತು ಪ್ರಸ್ತುತ ಸ್ಥಿತಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ (ತುಮಕೂರು ಜಿಲ್ಲಾ ಪಂಚಾಯತ್) ವತಿಯಿಂದ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎನ್‌ಎಚ್-೨೩೪ ರಿಂದ ಎನ್‌ಎಚ್-೧೫೦ಎ ವರೆಗಿನ ಮಾರ್ಗ ಕಂಪನಹಳ್ಳಿ, ಗೌಡಗೆರೆ ಕೆಂಕೆರೆ ರಸ್ತೆ ಅಭಿವೃದ್ಧಿಗೆ ರೂ. ೯೦೦.೦೦ ಲಕ್ಷ (೯ ಕೋಟಿ) ಅಂದಾಜು ಮೊತ್ತ ನಿಗದಿಯಾಗಿದೆ. ಹೈದರಾಬಾದ್ ಮೂಲದ ಎಂ.ವೆAಕಟಕಿರಣ್ (ಉಷಾ ಕಿರಣ್ ಕನ್ಸ÷್ಟçಕ್ಷನ್ಸ್) ಎಂಬುವರು ಗುತ್ತಿಗೆ ಪಡೆದಿದ್ದು, ೧೬-೧೨-೨೦೨೪ ರಂದು ಕರಾರು ಆಗಿದ್ದು, ೧೧ ತಿಂಗಳ ಅವಧಿ ನೀಡಲಾಗಿದೆ. ಇಷ್ಟೊತ್ತಿಗೆ…
ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈ ವರ್ಷ ಮುಂಗಾರು ಸಂಪೂರ್ಣ ಕೈಕೊಟ್ಟಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತ ಲುಪಿವೆ. ಆರಂಭದಲ್ಲಿ ಪೂರ್ವ ಮುಂಗಾರು ಬಾರದೆ ಪ್ರಮುಖ ವಾಣಿಜ್ಯ ಬೆಳೆಗಳಾದ ಹೆಸರು ಮತ್ತು ಅಲಸಂದೆ ಬಿತ್ತನೆ ಮಾಡಲಾಗದೆ ರೈತರು ಕೈಚೆಲ್ಲಿದ್ದರು. ಈಗ ಮುಂಗಾರು ಕೂಡ ಕೈಕೊಟ್ಟಿದ್ದು, ಬಿದ್ದ ಅಲ್ಪಸ್ವಲ್ಪ ಮಳೆಯನ್ನೇ ನಂಬಿ ಬಿತ್ತನೆ ಮಾಡಿದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿತ್ತನೆ ಪ್ರಮಾಣ ತೀವ್ರ ಕುಸಿತ ಕಂಡಿದ್ದು, ತಾಲೂಕಿನಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ಮಳೆ ಪ್ರಮಾಣ: ತಾಲೂಕಿನ ವಾಡಿಕೆ ಮಳೆ ೩೮೨.೩ ಮಿ.ಮೀ. ಆಗಿದ್ದು ಚಿಕ್ಕನಾಯಕನಹಳ್ಳಿ ತಾಲೂಕಿನ ವಾಡಿಕೆ ಮಳೆ ೩೮೨.೩ ಮಿಮೀ ಆಗಿದ್ದು ೨೦೨೪ ನೇ ಸಾಲಿನಲ್ಲಿ ಆಗಸ್ಟ್ ಮಾಹೆಯವರೆವಿಗೆ ೬೯೩.೯ ಮಿ.ಮೀ ಮಳೆಯಾಗಿತ್ತು. ೨೦೨೫ ರಲ್ಲಿ ೫೧೬ ಮಿ.ಮೀ ಮಳೆಯಾಗಿತ್ತು. ಆದರೆ ೨೦೨೬ ರಲ್ಲಿ ಕೇವಲ ೨೫೩.೧೧ ಮಿ.ಮೀ ಮಳೆಯಾಗುವ ಮೂಲಕ ವಾಡಿಕೆಗಿಂತಲೂ ತೀವ್ರ ಕೊರತೆ ಎದ್ದು ಕಾಣುತ್ತಿದೆ. ಬೀಜ ವಿತರಣೆಯಲ್ಲಿ ಭಾರೀ ಕುಸಿತ: ೨೦೨೪ ರಲ್ಲಿ ೧೪೯೨.೬ ಕ್ವಿಂಟಲ್…











