Author: News Desk Benkiyabale

ತುಮಕೂರು: ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ಸ್ಥಗಿತತೆ ಆಗಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಈ ಕುರಿತು ಕೂಡಲೆ ತನಿಖೆ ಮಾಡಬೇಕು ಎಂದು ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪ್ರಭು ಅವರಿಗೆ ಆ ದೇಶಿಸಿದರು. ಸ್ಥಳೀಯ ಶಾಸಕ ಬಿ. ಸುರೇಶ ಗೌಡರ ಅವರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಇಂಥ ಯೋಜನೆಗಳು ಸರಿಯಾದ ನಿರ್ವಹಣೆ ಇಲ್ಲದೆ ಸ್ಥಗಿತಗೊಂಡರೆ ಭೂಮಿಯ ಮೇಲಿನ ನೀರು ಪೂರೈಕೆಯ ಸಿದ್ಧಾಂತಕ್ಕೇ ಅಪಚಾರ ಮಾಡಿದಂತೆ ಎಂದು ಅಭಿಪ್ರಾಯಪಟ್ಟರು. ನಾಗವಲ್ಲಿಯೂ ಸೇರಿದಂತೆ ಐದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಲವಾರು ಹಳ್ಳಿಗಳಿಗೆ ಶುದ್ಧ ನೀರು ಪಂಪ್ ಮಾಡುವ ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನಾ ಸ್ಥಳಕ್ಕೆ ಅವರು ಶಾಸಕರ ಜತೆಗೆ ಭೇಟಿ ನೀಡಿದರು. ಈ ಯೋಜನೆ ಸ್ಥಗಿತಗೊಂಡುದಕ್ಕೆ ಕಾರಣ ಏನೇ ಇರಲಿ. ಇಲ್ಲಿ ಅಧಿಕಾರಿಗಳು ಸರಿಯಾಗಿ ಕೆಲಸ…

Read More

ತುಮಕೂರು: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರು ಬುಧವಾರ ನಗರದ ಬಟವಾಡಿ, ಬಡ್ಡಿಹಳ್ಳಿ ಹಾಗೂ ಮೈದಾಳ ರೈಲ್ವೆ ಗೇಟ್ ಬಳಿ ರೋಡ್ ಓವರ್ ಬ್ರಿಡ್ಜ್(ಆರ್‌ಓಬಿ) ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಮೈದಾಳದಲ್ಲಿ ಶಂಕುಸ್ಥಾಪನೆ ನೆರವೇರಿಸಿದ ನಂತರ ಮಾತನಾಡಿದ ಅವರು ನಗರದಲ್ಲಿ ೧೨೭.೪೩ ಕೋಟಿ ರೂ. ವೆಚ್ಚದಲ್ಲಿ ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ರೈಲ್ವೆ ಮೇಲ್ಸೇತುವೆ ಹಾಗೂ ಕೆಳ ಸೇತುವೆ ನಿರ್ಮಾಣ ಮಾಡುವುದರಿಂದ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ರೋಡ್ ಓವರ್ ಬ್ರಿಡ್ಜ್ ನಿರ್ಮಾಣಕ್ಕಾಗಿ ಬಟವಾಡಿ ರೈಲ್ವೆ ಗೇಟ್(ಎಲ್.ಸಿ ೩೯) ಬಳಿ ೪೩.೩೭ ಕೋಟಿ ರೂ., ಬಡ್ಡಿಹಳ್ಳಿ ಗೇಟ್(ಎಲ್.ಸಿ ೩೮)ಬಳಿ ೨೬.೭೫ ಕೋಟಿ ರೂ. ಹಾಗೂ ಮೈದಾಳ ಗೇಟ್ ಬಳಿ(ಎಲ್.ಸಿ ೩೫) ೫೭.೩೧ ಕೋಟಿ ರೂ. ಸೇರಿ ಒಟ್ಟು ೧೨೭.೪೩ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಮುಂದಿನ ೧೮ ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು…

Read More

ತುಮಕೂರು: ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಕಾರ್ಯಕಾರಿ ಸಮಿತಿ ಸಭೆಯನ್ನು ನಗರದ ಸ್ಲಂ ಭವನದಲ್ಲಿ ಹಮ್ಮಿಕೊಳ್ಳಲಾಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನದ ರಾಜ್ಯ ಸಂಚಾಲಕರಾದ ಎ. ನರಸಿಂಹಮೂರ್ತಿ ಇದೇ ಮೇ ತಿಂಗಳಲ್ಲಿ ವಿಭಾಗ ಮಟ್ಟದ ಸ್ಲಂ ಜನರ ಹಬ್ಬ ಮತ್ತು ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ತುಮಕೂರು , ಚಿತ್ರದುರ್ಗ, ದಾವಣಗೆರೆ, ಬೆಂಗಳೂರು ನಗರಗಳು ಒಟ್ಟುಗೂಡಿ ತುಮಕೂರಿನಲ್ಲಿ ಸ್ಲಂ ಜನರ ಸಾಂಸ್ಕೃತಿಕ ಕಲಾ ಪ್ರಕಾರಗಳೊಂದಿಗೆ ಮೇ ನಲ್ಲಿ ಸ್ಲಂಹಬ್ಬ ಘೋಷಣೆ. ಸಮಾವೇಶಕ್ಕೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹಸಚಿವರಾದ ಡಾ.ಜಿ.ಪರಮೇಶ್ವರ್ ರವರು ಮತ್ತು ಸಹಾಕಾರ ಸಚಿವರಾದ ಕೆ.ಎನ್ ರಾಜಣ್ಣರವರಿಗೆ ಆಹ್ವಾನಿಸಲು ಸ್ಲಂ ಜನಾಂದೋಲನದಿAದ ತೀರ್ಮಾನಿಸಲಾಗಿದೆ. ಇದರ ಜೊತೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರಾಜ್ಯದಲ್ಲಿ ಬೆಲೆ ಏರಿಕೆ ಮಾಡಿ ಬಡವರು ಬದುಕಲು ಕಷ್ಟಸಾಧ್ಯವಾಗುವಂತೆ ಮಾಡುತ್ತಿ ರುವ ಮತ್ತು ಬಡಜನ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದು ಖಂಡನೀಯವಾಗಿದೆ. ಈಗಾಗಲೇ ಕೇಂದ್ರ ಸರ್ಕಾರ ಗ್ಯಾಸ್ ಪೆಟ್ರೋಲ್. ಡಿಸೇಲ್ ಹಾಗೂ ದಿನ ಬಳಕೆ ವಸ್ತುಗಳ…

Read More

ತುಮಕೂರು: ಯಕ್ಷದೀವಿಗೆ ಸಂಸ್ಥೆಯು ಏಪ್ರಿಲ್ ೧೨ ಹಾಗೂ ೧೩ರಂದು ನಗರದ ಶ್ರೀಕೃಷ್ಣಮಂದಿರದಲ್ಲಿ ಎರಡು ದಿನಗಳ ಯಕ್ಷಗಾನ ಬಣ್ಣಗಾರಿಕೆ ಕಮ್ಮಟವನ್ನು ಹಮ್ಮಿಕೊಂಡಿದೆ. ಕಮ್ಮಟವನ್ನು ಏಪ್ರಿಲ್ ೧೨ರಂದು ಬೆಳಗ್ಗೆ ೯-೩೦ಕ್ಕೆ ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ. ಚಂದ್ರಶೇಖರ ದಾಮ್ಲೆ ಉದ್ಘಾಟಿಸಲಿದ್ದಾರೆ. ದಕ್ಷಿಣ ಕನ್ನಡ ಮಿತ್ರವೃಂದದ ಅಧ್ಯಕ್ಷ ಅಮರನಾಥ ಶೆಟ್ಟಿ ಕೆಂಜೂರು ಮನೆ, ಕಾರ್ಯದರ್ಶಿ ವೆಂಕಟೇಶ ಎಂ.ಎಸ್. ಕಾರಂತ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಯಕ್ಷದೀವಿಗೆಯ ಅಧ್ಯಕ್ಷೆ ಆರತಿ ಪಟ್ರಮೆ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ವಿವಿಧ ಭಾಗಗಳಿಂದ ಕಲಾಸಕ್ತರು ಆಗಮಿಸಿ ಯಕ್ಷಗಾನದ ಮುಖವರ್ಣಿಕೆ ಮಾಡುವ ವಿಧಾನವನ್ನು ಅಭ್ಯಾಸ ಮಾಡಲಿದ್ದಾರೆ. ಯಕ್ಷಗಾನ ಕಲಾವಿದರಾದ ನಿಡುವಜೆ ಗೋಪಾಲಕೃಷ್ಣ ಭಟ್ ಹಾಗೂ ಪಾರ್ಥಸಾರಧಿ ಸಂಪನ್ಮೂಲವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಯಕ್ಷಗಾನ, ನಾಟಕ, ಭರತನಾಟ್ಯ ಇತ್ಯಾದಿ ಕಲೆಗಳಿಗೆ ಸಂಬAಧಪಟ್ಟವರು ಈ ಕಮ್ಮಟದಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬಹುದು. ಆಸಕ್ತರು ಮೊಬೈಲ್ ಸಂಖ್ಯೆ ೭೦೧೯೩೯೪೯೮೮ ಅಥವಾ ೯೩೮೦೭೫೦೯೭೨ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಕಮ್ಮಟದ ಅಂಗವಾಗಿ ಯಕ್ಷದೀವಿಗೆಯ ವಿದ್ಯಾರ್ಥಿಗಳು ಸಂಜೆ ೫-೩೦ರಿಂದ ‘ಏಕಲವ್ಯ’ ಎಂಬ ತಾಳಮದ್ದಳೆಯನ್ನು ಪ್ರದರ್ಶಿಸಲಿದ್ದಾರೆ. ಸಂವೃತ…

Read More

ಕೇಂದ್ರ ಸರಕಾರವು ಅಡುಗೆ ಅನಿಲದ ಬೆಲೆಯನ್ನು ತೀವ್ರವಾಗಿ ಹೆಚ್ಚಳಗೊಳಿಸಿ ಜನತೆಯ ಮೇಲೆ ಬೆಲೆಯೇರಿಕೆಯ ಬರೆ ಎಳೆಯಲಾಗಿದೆ. ರೂ.೫೦ ಪ್ರತಿ ಸಿಲಿಂಡರಿಗೆ ಹೆಚ್ಚಳಗೊಳಿಸಲಾಗಿದೆ. ಇದನ್ನು ಸಿಪಿಐಎಂ ಪಕ್ಷ ತುಮಕೂರು ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ. ಈ ಬೆಲೆಯೇರಿಕೆಯು ಸಾಮಾನ್ಯ ಮತ್ತು ರಿಯಾಯಿತಿದಾರರಿಗೂ ಇಬ್ಬರಿಗೂ ಅನ್ವಯಿಸಲಾಗಿದೆ. ಇದು ಜನರ ಮೇಲೆ ರೂ.೭೦೦೦ ಕೋಟಿ ಹೊರೆ ಹೊರೆಸಿದೆ. ಪೆಟ್ರೋಲ್ ಮತ್ತು ಡಿಜೆಲ್ ಎರಡರ ಮೇಲೂ ರೂ.೩೨೦೦೦ ಕೋಟಿಯಷ್ಟು ಅಬಕಾರಿ ಸುಂಕವನ್ನು ಹೆಚ್ಚಳ ಮಾಡಿದೆ. ಹಣದುಬ್ಬರದಿಂದ ಈಗಾಗಲೇ ಜನರ ಜೀವನವು ಕಷ್ಟದಲ್ಲಿದೆ. ಈ ಬೆಲೆಯೇರಿಕೆಯಿಂದ ಜನತೆಯ ಬದುಕು ಮತ್ತಷ್ಟು ಕಷ್ಟಕ್ಕೆ ಈಡಾಗಲಿದೆ. ತೈಲ ಮತ್ತು ಅನಿಲದ ಅಂತರರಾಷ್ಟಿçÃಯ ಬೆಲೆ ಕುಸಿತದ ಲಾಭವನ್ನು ಜನರಿಗೆ ಮಾಡುವ ಬದಲು ಸರಕಾರವು ಆ ಲಾಭವನ್ನು ತಾನು ಪಡೆದು ಜನರಿಗೆ ಇನ್ನಷ್ಟು ಹೆಚ್ಚುವರಿ ಬೆಲೆಯೇರಿಕೆಯ ಹೊರೆಯನ್ನು ಹಾಕುತ್ತಿದೆ. ವಿಶೇಷ ಅಬಕಾರಿ ಸುಂಕದ ಹೆಸರಿನಲ್ಲಿ ಒಕ್ಕೂಟದ ತತ್ವಗಳನ್ನು ಗಾಳಿಗೆ ತೂರಿ ತನ್ನ ಲಾಭವನ್ನು ಹೆಚ್ಚು ಮಾಡಿಕೊಳ್ಳುವ ಕೇಂದ್ರ ಸರಕಾರದು ಧೋರಣೆಯು ಜನವಿರೋಧಿಯಾಗಿದೆ. ರಾಜ್ಯ ಸರಕಾರವೂ…

Read More

ತುಮಕೂರು: ಭಗವಾನ್ ಮಹಾವೀರರು ಭಾರತಕ್ಕಷ್ಟೇ ಅಲ್ಲ ಇಡೀ ವಿಶ್ವದಾದ್ಯಂತ ತಮ್ಮ ಅಹಿಂಸಾ ತತ್ವದ ಮೂಲಕ ಹೆಸರುವಾಸಿಯಾದ ಸಂತರಾಗಿದ್ದಾರೆ. ಅವರ ಮಾನವನ ಬದುಕಿಗೆ ಬೇಕಾದಐದು ತತ್ವಗಳನ್ನು ಹೇಳಿದ್ದು, ಅವುಗಳನ್ನು ಜನರು ಅಳವಡಿಸಿಕೊಂಡರೆ ಇಡೀ ವಿಶ್ವವೇ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂದು ತುಮಕೂರು ತಹಶೀಲ್ದಾರ್ ರಾಜೇಶ್ವರಿ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿಗಳ ಸಭಾಂ ಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯಿತಿ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಸಾಪ ಹಾಗೂ ಶ್ವೇತಾಂಬರ ಮತ್ತು ದಿಗಂಬರ್‌ಜೈನ ಸಮಾಜದ ವತಿಯಿಂದ ಆಯೋಜಿಸಿದ್ದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತಿದ್ದಅವರು, ಬೋಗ,ಲಾಲಸ ಜೀವನದಿಂದ ಹೊರಬರಲು ಸತ್ಯ, ಅಹಿಂಸೆ, ಬ್ರಹ್ಮಚರ್ಯ ಸೇರಿದಂತೆಐದು ಪ್ರಮುಖ ಅಂಶಗಳನ್ನು ಮಹಾವೀರರು ಗುರುತಿಸಿ, ಅನುಸರಿಸಿದ್ದಾರೆ. ಅವುಗಳನ್ನು ಪಾಲನೆ ಮಾಡುವ ಮೂಲಕ ನಾವುಗಳು ಕೂಡ ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆದರೆ ಜಯಂತಿಗೂ ಒಂದು ಅರ್ಥ ಬರುತ್ತದೆ ಎಂದರು. ಹಿರಿಯ ಸಾಹಿತಿ ಡಾ. ಪದ್ಮಪ್ರಸಾದ್ ಮಾತನಾಡಿ, ಕ್ರಿಸ್ತಪೂರ್ವ ೫೯೯ರಲ್ಲಿ ಜನಿಸಿ ದ ಮಹಾವೀರರು…

Read More

ಹುಳಿಯಾರು: ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವವು ಭಾರಿ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿAದ ಬುಧವಾರ ನೆರವೇರಿತು. ರಥೋತ್ಸವದ ಅಂಗವಾಗಿ ಮುಂಜಾನೆಯಿAದಲೇ ಸ್ವಾಮಿಯ ವರ ಧಾರ್ಮಿಕ ಕೈಂಕರ್ಯಗಳು ನಡೆಯಿತು. ನಂತರ ಗೌಡಗೆರೆ ಯ ದುರ್ಗಮ್ಮದೇವರು ಹಾಗೂ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಿಕೊAಡು ಸಕಲ ವಾದ್ಯಮೇ ಳದೊಂದಿಗೆ ದೇವಾಲಯವನ್ನು ಪ್ರದಕ್ಷಿಣೆ ಹಾಕಿ ಬಂದ ನಂತರ ಕೆಂಚರಾಯಸ್ವಾಮಿ, ದೂತರಾಯಸ್ವಾಮಿ ಹಾಗೂ ನಗಾರಿ ಹೊತ್ತ ಬಸವನೊಂದಿಗೆ ರಥದ ಬಳಿ ಕರೆತರಲಾಯಿತು. ಜೈಕಾರದೊಂದಿಗೆ ಶುಭಲಗ್ನದಲ್ಲಿ ಆಂಜನೇಯ ಸ್ವಾಮಿಯ ವರನ್ನು ಬ್ರಹ್ಮರಥದ ಮೇಲೆ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥದ ಮುಂದೆ ನೆಟ್ಟಿದ್ದ ಕದಳಿ ಮರವನ್ನು ತುಂಡರಿಸಿದ ನಂತರ ಫಲಪುಷ್ಪಾದಿಗಳಿಂದ, ರಂಗಿನ ಬಾವುಟ, ತಳಿರು ತೋರಣಗಳಿಂದ ಸಕಲ ಬಿರುದಾವಳಿಗಳಿಂದ ಅಲಂಕೃತಗೊAಡ ರಥವನ್ನು ಮಂಗಳವಾದ್ಯ ವೇದ, ಮಂತ್ರ ಘೋಷಗಳ ನಡುವೆ, ಜೈ ಹನುಮಾನ್ ಉದ್ಘೋಷದೊಂದಿಗೆ ಭಕ್ತರು ಎಳೆದು ಪುನೀತರಾದರು. ಭಕ್ತರು ಅನತಿ ದೂರದಿಂದಲೇ ಬಾಳೆ ಹಣ್ಣನ್ನು ರಥದ ಕಲಶಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಮಹಿಳೆಯರು…

Read More

ತುಮಕೂರು: ಸಿದ್ದಗಂಗಾ ಶ್ರೀಗಳ ನಾಡಿನಲ್ಲಿ ಅನ್ನದಾಸೋಹಕ್ಕೆ ಎಂದಿಗೂ ಕೊರತೆ ಉಂಟಾಗುವುದಿಲ್ಲ ಎಂಬುದಕ್ಕೆ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತಿರುವ ಮಧ್ಯಾಹ್ನದ ಭೋಜನ ಯೋಜನೆ ಪ್ರತ್ಯಕ್ಷ ಸಾಕ್ಷಿ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ಸಚಿವ ಹಾಗೂ ತುಮಕೂರು ಸಂಸದ ವಿ. ಸೋಮಣ್ಣ ಅಭಿಪ್ರಾಯಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಅನ್ನಪೂರ್ಣೇಶ್ವರಿ ಯೋಜನೆಯನ್ನು ಬುಧವಾರ ವೀಕ್ಷಿಸಿ ಅವರು ಮಾತನಾಡಿದರು. ನಿಷ್ಕಲ್ಮಶವಾದ ಸೇವೆಯನ್ನು ಮಾಡುವುದಕ್ಕೆ ಇಂvಹÀದ್ದೇ ಕೆಲಸವೆಂದು ಇಲ್ಲ. ಅಧಿಕಾರವಿದ್ದಾಗ ಎಲ್ಲಾ ವರ್ಗದವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು. ದೇಶದಲ್ಲಿ ಸಾವಿರಾರು ಕೋಟಿಯನ್ನು ಗಳಿಸಿ ಅದನ್ನು ಏನು ಮಾಡಬೇಕು ಎಂದು ಯೋಚಿಸುವವರ ನಡುವೆ ಒಂದು ತುತ್ತು ಊಟಕ್ಕೂ ಸಹ ಪರದಾಡುವ ಪರಿಸ್ಥಿತಿ ಜನರಿದ್ದಾರೆ. ಪ್ರಧಾನ ಮಂತ್ರಿಯವರ ಆಶಯದಂತೆ ಹತ್ತು ವರ್ಷದಲ್ಲಿ ದೇಶದ ೧೦೮ ಜಿಲ್ಲೆಗಳ ಸಾವಿರಾರು ಕುಟುಂಬಗಳನ್ನು ಬಡತನ ರೇಖೆಗಿಂತ ಮೇಲಕ್ಕೆ ತರಲಾಗಿದೆ ಎಂದರು. ತಮ್ಮ ವಿದ್ಯಾಭ್ಯಾಸಕ್ಕೆ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಇಂತಹ ವಿಭಿನ್ನವಾದ ಯೋಜನೆಯನ್ನು…

Read More

ಕೊರಟಗೆರೆ: ೨೦೨೨ರ ಜನವರಿ ೨೦ರಂದು ಪಟ್ಟಣದಲ್ಲಿ ನಡೆದ ಹಲ್ಲೆ ಮತ್ತು ಬೆದರಿಕೆಯ ಪ್ರಕರಣದಲ್ಲಿ ಮಧುಗಿರಿ ೪ನೇ ಜಿಲ್ಲಾ ಸತ್ರ ನ್ಯಾಯಾಲಯವು ತೀರ್ಪು ನೀಡಿದ್ದು, ಮೊದಲನೇ ಆರೋಪಿ ಕೆ.ಟಿ. ವೆಂಕಟೇಶ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ೧,೦೦೦ ಸಾವಿರ ದಂಡ ವಿಧಿಸಿ, ಇತರ ಇಬ್ಬರು ಆರೋಪಿಗಳಾದ ಅವರ ಪುತ್ರರಾದ ರೋಹಿತ್ ಮತ್ತು ಕಿಶೋರ್ ಅವರಿಗೆ ತಲಾ ೧೦೦೦ ಸಾವಿರ ದಂಡ ವಿಧಿಸಿದೆ. ಪಟಣದ ಹನುಮಂತಪುರದ ನಿವಾಸಿಗಳಾದ ವೆಂಕಟೇಶ್ ಕೆ.ಟಿ., ರೋಹಿತ್ ಮತ್ತು ಕಿಶೋರ್ ಎಂಬವರು, ಕರ್ನಾಟಕ ಎಟಿಎಂ ಎದುರಿನ ಖಾಲಿ ಜಾಗದಲ್ಲಿ ಷೆಡ್ ನಿರ್ಮಿಸುತ್ತಿದ್ದ ಉಮಾಶಂಕರ್, ಅವರ ತಂದೆ ಕುಮಾರಸ್ವಾಮಿ ಹಾಗೂ ನವೀನ್ ಎಂಬುವರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಜೀವ ಬೆದರಿಕೆ ಹಾಕಿದ್ದರು. ಆರೋಪಿಗಳು ಆ ಜಾಗವು ತಮಗೆ ಸೇರಿದ್ದೆಂದು ತಿಳಿಸಿ ಶೆಡ್ ನಿರ್ಮಾಣಕ್ಕೆ ತಡೆ ನೀಡಲು ಯತ್ನಿಸಿದ್ದರು. ಈ ಪ್ರಕರಣದಲ್ಲಿ ಅಭಿ ಯೋಜನೆಯ ಪರವಾಗಿ ವಕೀಲರಾದ ಬಿ.ಎಂ. ನಿರಂಜನಮೂರ್ತಿ ಅವರು ವಾದ ಮಂಡಿಸಿದ್ದರು.…

Read More

ಕೊರಟಗೆರೆ: ಮಕ್ಕಳ ಸಾಧನೆಗೆ ಶಿಕ್ಷಣ ಮತ್ತು ಪೌಷ್ಠಿಕ ಆಹಾರ ಅಗತ್ಯ. ಪೌಷ್ಠಿಕ ಆಹಾರದ ಕೊರತೆ ಯಿಂದ ಮಗುವಿನ ಬುದ್ಧಿ ಬೆಳವಣಿಗೆಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇರುತ್ತದೆ ಎಂದು ಪ.ಪಂ ಸದಸ್ಯೆ ಭಾಗ್ಯಮ್ಮ ತಿಳಿಸಿದರು. ಪಟ್ಟಣದ ಗಂಗಮ್ಮ ದೇವಾಲಯ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ವತಿಯಿಂದ ಆಯೋಜಿಸಿದ್ದ ಪೋಷಣ್ ಅಭಿಯಾನ ಯೋಜನೆಯ ‘‘ಪಕ್ವಾಡ್ ಅಭಿಯಾನ ಕಾರ್ಯಕ್ರಮವನ್ನು’’ ಉದ್ಘಾಟಿಸಿ ಮಾತನಾಡಿದರು. ಮಗು ಮತ್ತು ತಾಯಿ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರಬೇಕೆಂದರೆ ಪೌಷ್ಠಿಕ ಆಹಾರ ಬಹಳ ಮುಖ್ಯ, ಈ ನಿಟ್ಟಿನಲ್ಲಿ ಸರ್ಕಾರ ತಾಯಿ ಹಾಗೂ ಮಗುವಿನಲ್ಲಿ ಪೌಷ್ಠಿಕತೆ ಹೆಚ್ಚಿಸಲು ಅಂಗನವಾಡಿಗಳ ಮೂಲಕ ಪೌಷ್ಠಿಕ ಆಹಾರ ವಿತರಿಸಲಾಗುತ್ತಿದೆ. ಹೆಚ್ಚಿನ ಸಂಖೈಯು ಬಡ ತಾಯಂದಿರು ಮತ್ತು ಮಕ್ಕಳಿಗೆ ಈ ಯೋಜನೆಯು ವರದಾನವಾಗಿದೆ ಎಂದು ಹೇಳಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಂಬಿಕಾ ಮಾತನಾಡಿ, ಪೋಷಣ್ ಪಕ್ವಾಡ್ ಅಭಿಯಾನ ದೇಶದ್ಯಾಂತ ೧೫ದಿನಗಳ ಕಾಲ ನಡೆಯುತ್ತದೆ. ಮಕ್ಕಳ, ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡುವ, ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಕಂಡುಬರುವ ರಕ್ತ…

Read More