Author: News Desk Benkiyabale

ತುಮಕೂರು: ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಸಲ್ಲಿಸಿರುವ ಜಾತಿ ಜನಗಣತಿ ವರದಿಯಲ್ಲಿ ಕುಂಚಿಟಿಗ ಸಮುದಾಯದ ಸಂಖ್ಯೆ ಬಗ್ಗೆ ತಪ್ಪು ಮಾಹಿತಿ ನೀಡಿದೆ, ರಾಜ್ಯದಲ್ಲಿ ಸುಮಾರು ೩೫ ಲಕ್ಷ ಕುಂಚಿಟಿಗರಿದ್ದಾರೆ, ವರದಿಯಲ್ಲಿ ಕೇವಲ ೧.೯೫ ಲಕ್ಷ ಕುಂಚಿಟಿಗರೆAದು ನಮೂದಿಸಲಾಗಿದೆ. ನಮ್ಮ ಜಾತಿಯ ಮರು ಸಮೀಕ್ಷೆ ಆಗಬೇಕು ಎಂದು ಅಖಿಲ ಕುಂಚಿಟಿಗರ ಮಹಾಮಂಡಲ ಅಧ್ಯಕ್ಷ ರಂಗಹನುಮಯ್ಯ ಸರ್ಕಾರವನ್ನು ಒತ್ತಾಯಿಸಿದರು. ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೧೯೩೦ರಲ್ಲಿ ಮೈಸೂರು ಮಹಾರಾಜರ ಆಡಳಿತ ಕಾಲದಲ್ಲಿ ಕುಂಚಿಟಿಗರು ಪ್ರತ್ಯೇಕ ಜಾತಿ, ಯಾವುದೇ ಜಾತಿಯ ಉಪಜಾತಿಯಲ್ಲ ಎಂದು ಸ್ಥಾನಮಾನ ನೀಡಲಾಗಿತ್ತು. ೧೯೩೧ರಲ್ಲಿ ನಡೆದ ಜನಗಣತಿ ಪ್ರಕಾರ ಕುಂಚಿಟಿಗರ ಸಂಖ್ಯೆ ೧.೧೬ ಲಕ್ಷದಷ್ಟಿತ್ತು. ಇಲ್ಲಿಯವರೆಗೆ ಕುಂಚಿಟಿಗರ ಸಂಖ್ಯೆ ಏರಿಕೆಯಾಗಿರುವುದು ಕೇವಲ ೧.೯೫ ಲಕ್ಷವೆ? ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ೧೯ ಜಿಲ್ಲೆಗಳ ೪೬ ತಾಲ್ಲೂಕುಗಳಲ್ಲಿ ಕುಂಚಿಟಿಗರಿದ್ದಾರೆ. ತುಮಕೂರು, ಚಿತ್ರದುರ್ಗ, ಮೈಸೂರು, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಮೊದಲಾದ ಜಿಲ್ಲೆಗಳಲ್ಲಿ ನಮ್ಮ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತುಮಕೂರು, ಚಿತ್ರದುರ್ಗ ಜಿಲ್ಲೆಯಲ್ಲೇ ೨…

Read More

ತುಮಕೂರು: ನಗರದ ಖಾಸಗಿ ರೆಸಾರ್ಟ್ನಲ್ಲಿ ಕಲ್ಪತರು ಯೂಥ್ ಸ್ಪೋರ್ಟ್ಸ್ ಅಸೋಸಿಯೇಷನ್ ರಿ., ತುಮಕೂರು ವತಿಯಿಂದ ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ೨೦೨೫ ಇದರ ದಿನಾಂಕ ಮತ್ತು ಜರ್ಸಿ ಆನಾವರಣವನ್ನು ಇತ್ತೀಚೆಗೆ ಮಾಡಲಾಯಿತು. ತುಮಕೂರು ನಗರದ ಬಿ.ಹೆಚ್.ರಸ್ತೆಯಲ್ಲಿ ರುವ ಸರ್ಕಾರಿ ಜೂನಿಯರ್ ಕಾಲೇಜು ಮೈದಾ ನದಲ್ಲಿ ಇದೇ ಮೇ ೦೩ ಶನಿವಾರ ಮತ್ತು ೦೪ ಭಾನುವಾರದÀಂದು ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ೨೦೨೫ ನಡೆಯಲಿದ್ದು ಈ ಲೀಗ್‌ನಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಟಗಾರರು ಆಗಮಿಸಲಿದ್ದಾರೆ. ಈ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಆಟಗಾ ರರ ಹರಾಜು ಪ್ರಕ್ರಿಯೆಯು ಏಪ್ರಿಲ್ ೧೨ರಂದು ಬಿಡ್ ನಡೆದಿದ್ದು ತುಮಕೂರು ಜಿಲ್ಲೆ ಸೇರಿದಂತೆ ಬಳ್ಳಾರಿ, ರಾಯಚೂರು, ಭದ್ರಾವತಿ, ಮೈಸೂರು, ದಾವಣಗೆರೆ, ಬೆಂಗಳೂರು ಜಿಲ್ಲೆಗಳಿಂದ ಆಗಮಿಸಿದ್ದ ಫ್ರಾಂಚೈಸಿ ಮಾಲೀ ಕರು ಹಾಗೂ ಸ್ಟಾರ್ ಆಟಗಾರರು ಸೇರಿ ೧೨೬ ಆಟಗಾರರಲ್ಲಿ ೮೦ ಆಟಗಾರರನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಈ ಸಂದರ್ಭದಲ್ಲಿಯೇ ಪಂದ್ಯಾವಳಿಯಲ್ಲಿ ಆಟಗಾರರು ಬಳಸುವ ಜರ್ಸಿಗಳನ್ನು ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಟಿಡಿಬಿಬಿಎ…

Read More

ತುಮಕೂರು: ಪ್ರಾಚೀನ ಭಾರತದಲ್ಲಿ ಯಾವುದನ್ನು ಅಂದಿನ ಸನಾತನವಾದ ಶ್ರೇಣಿಕೃತ ಧರ್ಮ ಧಿಕ್ಕರಿಸಿ ಬುದ್ಧನ ಮಾರ್ಗದರ್ಶನದಲ್ಲಿ ಧಮ್ಮ ಅವರ ವಿಕಾಸ ಎಲ್ಲರನ್ನು ಒಳಗೊಳ್ಳುವ ತಾತ್ವಿಕತೆಯ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಿತು, ಇದೆ ಪ್ರತಿಕ್ರಾಂತಿಯಾಯಿತು. ಇದನ್ನು ೬ನೇ ಶತಮಾನದಲ್ಲಿ ಪುನಃ ಸನಾತನ ಧರ್ಮದ ಶಂಕರಚಾರ್ಯ ಮನುಧರ್ಮವನ್ನು ಅಸ್ತಿತ್ವಕ್ಕೆ ತಂದು ಬೌದ್ಧ ಧರ್ಮವನ್ನು ನಾಶ ಮಾಡಿದರು, ಈ ಇತಿಹಾಸವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಮನಗಂಡು ಸಂವಿಧಾನದ ಮೂಲಕ ಸ್ವಾತಂತ್ರ‍್ಯ, ಸಮಾನತೆ, ಸೋದರತೆ, ಬ್ರಾತೃತ್ವದ ಮೂಲಕ ಕ್ರಾಂತಿ ಮಾಡಿ ಶ್ರೇಣಿಕೃತ ಜಾತಿ ವ್ಯವವಸ್ಥೆಯನ್ನು ನಾಶ ಮಾಡಲು ಮನು ಸಂವಿಧಾನವನ್ನು ಸುಟ್ಟರು. ಇದರಿಂದ ವ್ಯವಸ್ಥೆ ಬದಲಾಗುತ್ತಿಲ್ಲ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕರಾದ ಎ.ನರಸಿಂಹಮೂರ್ತಿ ಪ್ರತಿಪಾಧಿಸಿದ್ದರು, ಅವರು ತುಮಕೂರು ಜಿಲ್ಲಾ ಕೊಳಗೇರಿ ನಿವಾ ಸಿಗಳ ಸಮಿತಿ, ಮಾರಿಯಮ್ಮ ಯುವಕರ ಅಂಘ(ರಿ) ಹಾಗೂ ಯುವ ಭೀಮ ಪಡೆಯಿಂದ ಮಂಡಿಪೇಟೆ ಮಾರಿಯಮ್ಮ ನಗರದಲ್ಲಿ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ೧೩೪ನೇ ಜಯಂತಿ ಮತ್ತು ಬಾಬು ಜಗಜೀವನರಾಂ ರವರ ೧೧೮ನೇ ಜಯಂತಿಯನ್ನು…

Read More

ತುಮಕೂರು: ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ ೧೩೪ನೇ ಜಯಂತಿಯ ಪ್ರಯುಕ್ತ ಕರ್ನಾಟಕ ಸರ್ವ ಜನಾಂಗ ಸಂರಕ್ಷಣಾ ವೇದಿಕೆ ವತಿಯಿಂದ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ತುಮಕೂರು ನಗರದ ಕರ್ನಾಟಕ ಸರ್ವ ಜನಾಂಗ ಸಂರಕ್ಷಣಾ ವೇದಿಕೆ ವತಿಯಿಂದ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಜನ್ಮದಿನಾಚರಣೆಯನ್ನು ಪುಷ್ಪ ನಮನ ಸಲ್ಲಿಸುವ ಮೂಲಕ ಆಚರಿಸಲಾಯಿತು. ವೇದಿಕೆಯ ಜಿಲ್ಲಾಧ್ಯಕ್ಷ ಅಸ್ಲಾಂ ಪಾಷ ಮಾತನಾಡಿ, ಡಾ.ಬಿ. ಆರ್. ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನವು ಬಹಳ ದೊಡ್ಡದು, ಡಾ.ಬಿ.ಆರ್. ಅಂಬೇಡ್ಕರ್ ಅವರು ತೋರಿದ ದಾರಿಯಲ್ಲಿ ಯುವ ಪೀಳಿಗೆ ನಡೆಯಬೇಕು ಅವರ ಆದರ್ಶ ಮೈ ಗೂಡಿಸಿಕೊಳ್ಳಬೇಕು ಅಂಬೇಡ್ಕರ್ ರವರು ಒಂದು ಸಮುದಾಯದ ನಾಯಕರಲ್ಲಾ ಎಲ್ಲಾ ಸಮುದಾಯಕ್ಕೂ ನಾಯಕರು ಅವರು ತೋರಿದ ಮಾರ್ಗದಲ್ಲಿ ನಮ್ಮ ಕರ್ನಾಟಕ ಸರ್ವ ಜನಾಂಗ ಸಂರಕ್ಷಣಾ ವೇದಿಕೆ ಸಹ ಬದ್ಧವಾಗಿದೆ ಯಾವುದೇ ಜಾತಿ ಭೇದವಿಲ್ಲದೆ ಎಲ್ಲರೂ ಸಹ ಅಣ್ಣ ತಮ್ಮಂದಿರ ರೀತಿಯಲ್ಲಿ ಬಾಳ್ವೆ ನಡೆಸುತ್ತಿದ್ದು ಯಾವುದೇ ಸಾಮಾನ್ಯ…

Read More

ತುಮಕೂರು: ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಅಂಬೇಡ್ಕರ್ ಯುವ ಸೇನೆ(ರಿ), ಸಂಘಟನೆಯ ಪದಾಧಿಕಾರಿಗಳ ಸಭೆಯನ್ನು ಸಂಘದ ಅಧ್ಯಕ್ಷರಾದ ಜಿ.ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಅಯೋಜಿಸಲಾಗಿತ್ತು. ಜಿಲ್ಲಾಧ್ಯಕ್ಷ ಜಿ.ಗಣೇಶ್ ಸಭೆಯನ್ನು ಉದ್ದೇ ಶಿಸಿ ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟ ಎಂಬ ಬಾಬಾ ಸಾಹೇಬ್ ಅಂಬೇ ಡ್ಕರ್ ಅವರ ಮೂರು ಮುಖ್ಯ ಗುರಿಗಳನ್ನು ಮುಂದಿಟ್ಟುಕೊAಡು ಹತ್ತಾರು ವರ್ಷಗಳಿಂದ ಅಂಬೇಡ್ಕರ್‌ಯುವ ಸೇನೆ ದಲಿತರು, ದಮನಿತರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಸಂವಿಧಾನದ ಮೂಲ ಆಶಯದಂತೆ ಎಲ್ಲಾ ವರ್ಗದ ಜನರಿಗೆ ಸ್ವಾತಂತ್ರ, ಸಮಾನತೆ, ಸಮಾನ ಅವಕಾಶಗಳು ದೊರೆಯುಬೇಕು ಎಂಬುದು ಸಂಘಟನೆಯ ಮೂಲ ಮಂತ್ರವಾ ಗಿದೆ. ಈ ನಿಟ್ಟಿನಲ್ಲಿ ಪದಾಧಿಕಾರಿಗಳು ಗ್ರಾಮೀಣ ಭಾಗಗಳಲ್ಲಿ ಶಿಕ್ಷಣದಿಂದ ವಂಚಿತರಾದ ಮಕ್ಕಳನ್ನು ಗುರುತಿಸಿ, ಅವರನ್ನು ಶಾಲೆಗೆ ಸೇರಿಸುವ, ಅವರಿಗೆ ಶೈಕ್ಷಣಿಕವಾಗಿ ಸರಕಾರದ ಸವಲತ್ತುಗಳು ದೊರೆಯುವಂತೆ ಮಾಡಬೇಕಿದೆ. ಈ ನಿಟ್ಟಿನಲ್ಲಿಎಲ್ಲರೀತಿಯ ಸಹಕಾರವನ್ನು ನೀಡ ಲು ಸಿದ್ದರಿರುವುದಾಗಿ ತಿಳಿಸಿದರು. ಸಮಾಜದಲ್ಲಿ ಮಹಿಳೆಯರನ್ನು ಇಂದಿಗೂ ಎರಡನೇ ದರ್ಜೆ ಪ್ರಜೆಯ ರೀತಿಯಲ್ಲಿಯೇ ನೋಡಿಕೊಳ್ಳಲಾಗುತ್ತಿದೆ. ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಆಕೆ…

Read More

ತುಮಕೂರು: ರಾಜ್ಯ ಸರ್ಕಾರ ಅಕ್ಷರಶಃ ಲೂಟಿಗೆ ಇಳಿದಿದೆ. ರಾಜ್ಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಟೋಲ್ ಸಂಗ್ರಹಿಸುತ್ತಿದೆ. ಅನೇಕ ಆರ್‌ಟಿಒ ಚೆಕ್ ಪೋಸ್ಟ್ಗಳು ಕೋಟ್ಯಂತರ ಹಣವನ್ನು ಸರ್ಕಾರದ ಪರವಾಗಿ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಲಾರಿಗಳ ಸಂಚಾರದಿAದ ಶೇ ೩೫ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಆದರೂ ಕೂಡಾ ಲಾರಿ ಮಾಲೀಕರ ಮತ್ತು ಚಾಲಕರ ಹಿತ ಕಾಪಾಡಲು ಮುಂದೆ ಬರುತ್ತಿಲ್ಲ ಎಂದು ಲಾರಿ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುಜಾಬಿಲ್ ಪಾಷಾ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿ.ಆರ್ ಷಣ್ಮುಗಪ್ಪನವರ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಲಾರಿ ಮುಷ್ಕರಕ್ಕೆ, ಜಿಲ್ಲಾ ಟ್ರಕ್ ಲಾರಿ ಮಾಲೀಕರ ಸಂಘದಿAದ ಬೆಂಬಲ ವ್ಯಕತ್ತಪಡಿಸಿ ಅವರು ಮಾತನಾಡಿದರು. ರಾಜ್ಯ ರಸ್ತೆಗಳಿಗೆ ಬಣ್ಣ ಬಳಿದು ಟೋಲ್ ಸಂಗ್ರಹವನ್ನು ಸ್ಥಳೀಯ ಪುಢಾರಿಗಳಿಗೆ ವಹಿಸಿದ್ದಾರೆ. ೧೮ ರಸ್ತೆಗಳಿಗೆ ದರ ವಿಧಿಸಿದ್ದಾರೆ. ಅಲ್ಲದೇ ಕಮರ್ಶಿಯಲ್ ಟ್ಯಾಕ್ಸ್ ಚೆಕ್ ಪೋಸ್ಟ್ಗಳು ೧೦೨೮ ಕಡೆ ಇವೆ. ಗಡಿ ಠಾಣೆಗಳು ಲಾರಿ ಮಾಲೀಕರ ರಕ್ತ ಹೀರುತ್ತಿವೆ.…

Read More

ತುಮಕೂರು: ಡೀಸೆಲ್ ಮೇಲಿನ ಸೆಸ್ ಕಡಿತ, ಅಂತಾ ರಾಜ್ಯ ಆರ್.ಟಿ.ಓ. ಚೆಕ್ ಪೋಸ್ಟ್ ರದ್ದು, ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜ್ ಮುಚ್ಚುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರು ಲಾರಿಗಳನ್ನು ರಸ್ತೆಗಿಳಿಸದೆ ಇಂದಿನಿAದ ಮುಷ್ಕರ ಆರಂಭಿಸಿದ್ದು, ಸರಕು ಸಾಗಣೆ ವಾಹನಗಳ ಸಂಚಾರ ಸ್ತಬ್ದವಾಗಿದೆ. ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಇಳಿಕೆ ಮಾಡು ವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಲಾರಿ ಮಾಲೀಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮುಷ್ಕರ ಕೈಗೊಂ ಡಿದ್ದಾರೆ. ಲಾರಿ ಮಾಲೀಕರ ಮುಷ್ಕರದಿಂದಾಗಿ ಲಾರಿ ಗಳು, ಸರಕು ಸಾಗಣೆ ವಾಹನಗಳು ರಸ್ತೆಗಿಳಿಯದೆ ನಗರದ ರಿಂಗ್ ರಸ್ತೆಯಲ್ಲಿರುವ ಲಾರಿ ನಿಲ್ದಾಣ ಸೇರಿದಂತೆ ರಸ್ತೆ ಬದಿಗಳಲ್ಲಿ ಸಂಚಾರ ಸ್ಥಗಿತಗೊಳಿಸಿ ಸಾಲು ಸಾಲಾಗಿ ನಿಂತಿವೆ. ಲಾರಿ ಮಾಲೀಕರು ಮುಷ್ಕರ ಕೈಗೊಂಡಿರು ವುದರಿಂದ ನಗರ ಸೇರಿದಂತೆ ಹೊರ ಭಾಗದ ಯಾವುದೇ ರಸ್ತೆಗಳಲ್ಲಿ ಲಾರಿ ಸಂಚಾರ ಕಂಡು ಬರುತ್ತಿಲ್ಲ. ಬದಲಾಗಿ ಲಾರಿಗಳು ಅಲ್ಲಲ್ಲೆ ಸಂಚಾರ ಸ್ಥಗಿತಗೊಳಿಸಿ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ.…

Read More

ತುಮಕೂರು: ಭಾರತ ರತ್ನ, ಸಂವಿಧಾನ ಶಿಲ್ಪಿ, ಭಾರತ ಭಾಗ್ಯವಿಧಾತ ಡಾ: ಬಿ.ಆರ್. ಅಂಬೇಡ್ಕರ್ ಅವರ ಜೀವನ ಚರಿತ್ರೆ ಕುರಿತ ಛಾಯಾಚಿತ್ರ ಪ್ರದರ್ಶನಕ್ಕೆ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಇಂದು ಚಾಲನೆ ನೀಡಿದರು. ಡಾಃ ಬಿ.ಆರ್. ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಅನಾವರಣ ಮತ್ತು ಅವರ ೧೩೪ನೇ ಜಯಂತಿ ಹಾಗೂ ಡಾ: ಬಾಬು ಜಗಜೀವನ ರಾಂ ಅವರ ೧೧೮ನೇ ಜಯಂತಿ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸೋಮವಾರ ಮಹಾನಗರ ಪಾಲಿಕೆ ಆವರಣದಲ್ಲಿಂದು ಇಬ್ಬರು ಮಹನೀಯರ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಛಾಯಾಚಿತ್ರ ಪ್ರದರ್ಶನದಲ್ಲಿ ಡಾಃ ಬಿ.ಆರ್. ಅಂಬೇಡ್ಕರ್ ಹಾಗೂ ಡಾ: ಬಾಬು ಜಗಜೀವನ ರಾಂ ಅವರ ಸುಮಾರು ೧೧೬ ಅಪರೂಪದ ಛಾಯಾಚಿತ್ರಗಳನ್ನು ಇರಿಸಲಾಗಿತ್ತು. ಅಂಬೇಡ್ಕರ್ ಅವರ ಛಾಯಾಚಿತ್ರ ಪ್ರದರ್ಶನ: ಅಂಬೇಡ್ಕರ್ ಅವರು ೧೯೪೨ರ ಜುಲೈ ೨೦ರಂದು ಕಮ್ಯಾಂಡಿAಗ್ ಆಫೀಸರ್ ಹುದ್ದೆಯಲ್ಲಿದ್ದಾಗ ಮಿಲಿಟರಿ ಅಧಿಕಾರಿ ಹಾಗೂ ಸೈನಿಕರೊಂದಿಗೆ,…

Read More

ತುಮಕೂರು: ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತಕ್ಕೆ ಸಮಾನತೆ, ಸ್ವಾತಂತ್ರ ಮತ್ತು ಭಾತೃತ್ವವೆಂಬ ಮೂರು ತತ್ವಗಳನ್ನು ಒಳಗೊಂಡ ಸಂವಿಧಾನವನ್ನು ಬಾಬಾ ಸಾಹೇಬ್‌ಅಂಬೇಡ್ಡಕರ್ ನೀಡಿದ್ದು, ಇದಕ್ಕೆ ದಕ್ಕೆತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಟಿ.ಶ್ರೀನಿವಾಸ್ ದೂರಿದ್ದಾರೆ. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿಸಿಸಿ ಅಧ್ಯಕ್ಷ ಚಂದ್ರಶೇಖರ ಗೌಡ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ೧೩೫ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ಜಾತಿ,ಧರ್ಮ, ಭಾಷೆಯ ಹೆಸರಿನಲ್ಲಿ ಜನರ ನಡುವೆ ಕಂದಕವನ್ನು ಉಂಟು ಮಾಡಿ, ಇಡೀದೇಶದ ಶಾಂತಿಯನ್ನೇ ಕದಡುವ ಕೆಲಸ ಮಾಡುತ್ತಿದೆ.ಇದರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ದ್ವನಿ ಎತ್ತಬೇಕಾಗಿದೆಎಂದರು. ರಾಜ್ಯದಲ್ಲಿ ಹಾಲಿನ ದರ, ಇಂಧನಗಳ ಮೇಲಿನ ಸೆಸ್ ಹೆಚ್ಚಳವನ್ನೇ ದೊಡ್ಡದು ಮಾಡಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಆ ದರೆಕೇಂದ್ರ ಸರಕಾರ ಗ್ಯಾಸ್‌ದರ ಹೆಚ್ಚಳ, ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ, ಇಂಧನ ಬೆಲೆ ಹೆಚ್ಚಳದ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಸಹ ಹೋರಾಟ ನಡೆಸುವ ಬೆಲೆ ಹೆಚ್ಚಳದ ಹೆಸರಿನಲ್ಲಿ…

Read More

ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬೂ ಜಗಜೀವನರಾಂ ಉದಯಿಸದಿದ್ದರೆ, ಈ ದೇಶದ ಶೋಷಿತರ ಬದುಕು ಮತ್ತಷ್ಟು ಹೀನಾಯವಾಗುತ್ತಿತ್ತು. ಅಂಬೇಡ್ಕರ್ ಶ್ರಷ್ಠವಾದ ಸಂವಿಧಾನ ರಚನೆ ಮಾಡಿದರೆ, ಬಾಬೂ ಜಗಜೀವನರಾಂ ಅವರು ತಮ್ಮ ಅಧಿಕಾರವಧಿಯಲ್ಲಿ ಸಂವಿಧಾನದ ಆಶಯಗಳನ್ನು ಅನುಷ್ಠಾನಗೊಳಿಸುವ ಪ್ರಯತ್ನ ಮಾಡಿದರು ಎಂದು ಜಿಲ್ಲಾ ಜೆಡಿಎಸ್ ಎಸ್.ಸಿ.ಘಟಕದ ಅಧ್ಯಕ್ಷ ಎಎಸ್.ಡಿ.ಕೃಷ್ಣಪ್ಪ ಹೇಳಿದರು. ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಾಬೂ ಜಗಜೀವನರಾಂ ಅವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಇಬ್ಬರೂ ಮಹನೀ ಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ದೇಶದ ಸಾಮಾಜಿಕ ಬದಲಾವಣೆ, ಸುಧಾರಣೆಗೆ ಇವರಿಬ್ಬರ ಕೊಡುಗೆ ಅಪಾರ. ಸಂವಿಧಾನದ ಆಶಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಬಾಳುವುದೇ ನಾವು ಈ ಮಹನೀಯರಿಗೆ ಕೊಡುವ ಗೌರವ ಎಂದರು. ಆಗಿನ ಸಮಾಜಿಕ ಪರಿಸ್ಥಿತಿಯಲ್ಲಿ ಜಾತಿಭೇದ, ಶೋಷಣೆ, ಸಾಮಾಜಿಕ ಅಸಮತೋಲನ ತಾಂಡವಾಡುತ್ತಿತ್ತು. ಇಂತಹ ಅಸ್ತವ್ಯಸ್ಥ ಸಮಾಜವನ್ನು ತಮ್ಮ ಸಂವಿಧಾನದ ಮೂಲಕ ಸರಿಪ ಡಿಸಿದ ಕೀರ್ತಿ ಡಾ. ಅಂಬೇಡ್ಕರ್ ಅವರಿಗೆ ಸಲ್ಲಬೇಕು. ದೇಶದ ಎಲ್ಲರೂ ಸಮಾನರು, ಎಲ್ಲರಿಗೂ…

Read More