ಕೊರಟಗೆರೆ: ಸ್ವಾತಂತ್ರೊ÷್ಯÃತ್ಸವದ ಸಂಭ್ರಮದಲ್ಲಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಮೂಲಕ ಕೊರಟಗೆರೆ ರೋಟರಿ ಸಂಸ್ಥೆ ಅರ್ಥಪೂರ್ಣವಾಗಿ ಸಹಭಾಗಿತ್ವ ವಹಿಸಿತು. ಕೊರಟಗೆರೆಯಲ್ಲಿ ನಡೆದ ಸ್ವಾತಂತ್ರೊ÷್ಯÃತ್ಸವ ಕಾರ್ಯಕ್ರಮದ ಅಂಗವಾಗಿ ಕೊರಟಗೆರೆ ರೋಟರಿ ಕ್ಲಬ್ ಅಧ್ಯಕ್ಷ ವಿಕೆ ನರಸಿಂಹಮೂರ್ತಿ ಹಾಗೂ ಕಾರ್ಯದರ್ಶಿ ಹೊನ್ನೇಶ್ ನೇತೃತ್ವದಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ೨,೦೦೦ ನೋಟ್‌ಬುಕ್‌ಗಳು ಹಾಗೂ ಲೇಖನಿಗಳನ್ನು ವಿತರಿಸಲಾಯಿತು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸ್ವಾತಂತ್ರೊ÷್ಯÃತ್ಸವದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಾಯಿತು. ಶಿಕ್ಷಣವೇ ಸಮಾಜದ ಪ್ರಗತಿಯ ಪ್ರಮುಖ ಅಡಿಪಾಯ ಎಂಬ ಆಶಯದೊಂದಿಗೆ ರೋಟರಿ ಸಂಸ್ಥೆಯು ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಗಳಿಗೆ ಸ್ಪಂದಿಸಿರುವುದು ವಿಶೇಷ ಗಮನ ಸೆಳೆಯಿತು. ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕಲಿಕೆಯ ಆಸಕ್ತಿ, ಶಿಸ್ತು ಹಾಗೂ ದೇಶಪ್ರೇಮ ಬೆಳೆಸುವ ನಿಟ್ಟಿನಲ್ಲಿ ಇಂತಹ ಸೇವಾ ಚಟುವಟಿಕೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂಬ ಅಭಿಪ್ರಾಯವೂ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೂ ಅಗತ್ಯ ಶೈಕ್ಷಣಿಕ ಸಾಮಗ್ರಿಗಳು ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ನೋಟ್‌ಬುಕ್ ಮತ್ತು ಲೇಖನಿಗಳನ್ನು ನೀಡಿರುವ ರೋಟರಿ ಸಂಸ್ಥೆಯ ಕಾರ್ಯಕ್ಕೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮೆಚ್ಚುಗೆ…
Author: News Desk Benkiyabale
ಹುಳಿಯಾರು: ವರ್ಷಗಳಿಂದ ರಾಗಿ, ಸಾಮೆ ಬೆಳೆಯುತ್ತಿದ್ದ ನೆಲದಲ್ಲಿ ಭರವಸೆಯ ಬೆಳೆಯಾಗಿ ರೇಷ್ಮೆ ಕೃಷಿ ನೆಚ್ಚಿಕೊಂಡು ಬದುಕು ಕಟ್ಟಿಕೊಳ್ಳುತ್ತಿದ್ದ ರೈತನೊಬ್ಬನ ಶ್ರಮದ ಫಲವನ್ನು ದುಷ್ಕರ್ಮಿಗಳು ಬೆಂಕಿಗಾಹುತಿ ಮಾಡಿದ ಅಮಾನವೀಯ ಘಟನೆ ಹುಳಿಯಾರು ಹೋಬಳಿಯ ದೊಡ್ಡಬಿದರೆ ಗ್ರಾಪಂ ವ್ಯಾಪ್ತಿಯ ಪೋಚಕಟ್ಟೆ ಬಳಿ ನಡೆದಿದೆ. ದೊಡ್ಡಬಿದರೆ ಸರ್ವೇ ನಂಬರ್ ೭೭ ರಲ್ಲಿರುವ ರೈತ ಶಿವಣ್ಣ ಎಂಬುವರಿಗೆ ಸೇರಿದ ೪೧ ಅಡಿ ಉದ್ದ, ೨೫ ಅಡಿ ಅಗಲದ ರೇಷ್ಮೆ ಹುಳು ಸಾಕಣೆ ಶೆಡ್ಡಿಗೆ ದುಷ್ಟರು ಬೆಂಕಿ ಇಟ್ಟಿದ್ದಾರೆ. ಕ್ಷಣಾರ್ಧದಲ್ಲಿ ಹಬ್ಬಿದ ಬೆಂಕಿಯ ಕೆನ್ನಾಲೆಗೆಗೆ ರೇಷ್ಮೆ ಶೆಡ್‌ನ ಮುಕ್ಕಾಲು ಭಾಗ ಸಂಪೂರ್ಣ ಭಸ್ಮವಾಗಿದೆ. ಶೆಡ್‌ನ ಮುಂಭಾಗದಲ್ಲಿ ಕಟ್ಟಲಾಗಿದ್ದ ಸೀಮೆ ಹಸುವಿಗೂ ಬೆಂಕಿ ತಗಲಿದ್ದು, ಹಸು ತೀವ್ರವಾಗಿ ಗಾಯಗೊಂಡಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ವಾಹನ ಆಗಮಿಸುವಷ್ಟರಲ್ಲಾಗಲೇ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ಬೆಂಕಿ ದುರಂತದಿAದಾಗಿ ಶೆಡ್‌ನಲ್ಲಿದ್ದ ಔಷಧಿ, ಚಾಫ್ ಕಟರ್, ಚಿಕ್ಕ ಕಟರ್, ಕಡ್ಡಿ ಕಟ್ ಮಾಡುವ ಯಂತ್ರ, ಚಂದ್ರಿಕೆಗಳು, ಹುಳು ಮೇಯಿಸುವ ಸ್ಟಾ÷್ಯಂಡ್ ಹಾಗೂ…
ತುಮಕೂರು: ತುಮಕೂರಿನ ಜನತೆ ಶಾಂತಿ ಪ್ರಿಯರು, ಸಜ್ಜನಿಕೆಗೆ ಹೆಸರಾದವರು, ದೇಶಪ್ರೇಮಿಗಳು. ಕೊಟ್ಟ ಮಾತಿನಂತೆ ನಮ್ಮ ಸರ್ಕಾರ 5 ಗ್ಯಾರಂಟಿಗಳನ್ನು ಅನುಷ್ಟಾನಕ್ಕೆ ತಂದು ನುಡಿದಂತೆ ನಡೆದಿದೆ. ಜನರ ಆಶಯಕ್ಕೆ ತಕ್ಕಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಸೌಲಭ್ಯವನ್ನು ತಲುಪಿಸುವ ಕೆಲಸ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಎಂದು ಉಪ ಮುಖ್ಯಮಂತ್ರಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಹೇಳಿದರು. ಅವರು ಇಂದು 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ತುಮಕೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೇರವೇರಿಸಿ, ಬಳಿಕ ಮಾತನಾಡಿದರು. ತುಮಕೂರು ಜಿಲ್ಲೆಯ ರೇಷ್ಮೆ ಬೆಳೆಗಾರರು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ತಾವು ಬೆಳೆದ ರೇಷ್ಮೆ ಗೂಡುಗಳಿಗೆ ಗರಿಷ್ಠ ಧಾರಣೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ 2,974 ಮೆ.ಟನ್ ದ್ವಿತಳಿ ಗೂಡು ಹಾಗೂ 5,008 ಮೆ.ಟನ್ ಒಟ್ಟು ಗೂಡು ಉತ್ಪಾದಿಸಿ ಜಿಲ್ಲೆಯು ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು. ತುಮಕೂರು-ರಾಯದುರ್ಗ ರೈಲ್ವೆ ಯೋಜನೆಯು ತುಮಕೂರು ಜಿಲ್ಲೆಯ 4 ತಾಲೂಕುಗಳ ಒಟ್ಟು 77…
ತುಮಕೂರು: ರೈತರು ಬರ ಪರಿಸ್ಥಿತಿ ಸಂದರ್ಭದಲ್ಲಿ ಕೃಷಿಯಲ್ಲಿ ಪರ್ಯಾಯ ಬೆಳೆಗಳನ್ನು ಬೆಳೆಯಬೇಕು ಎಂದು ಕರ್ನಾಟಕ ಪ್ರದೇಶ ಕೃಷಿಕ ಪ್ರದೇಶ ರಾಜ್ಯಾಧ್ಯಕ್ಷ ನಗರದ ಮಹದೇವಪ್ಪ ಅವರು ಸಲಹೆ ನೀಡಿದರು. ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ, ಜಿಲ್ಲಾ ಕೃಷಿ ಇಲಾಖೆ, ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜ, ಜಿಲ್ಲಾ ಕೃಷಿಕ ಸಮಾಜ ಹಾಗೂ ಇನ್‌ಸ್ಟಿಟ್ಯೂಷನ್ ಆಫ್ ಅಗ್ರಿಕಲ್ಚರಲ್ ಟೆಕ್ನಾಲಜಿಸ್ಟ್÷್ಸ, ಕೃಷಿ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಜಿಲ್ಲೆಯ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ರೈತರಿಗಾಗಿ ಆಯೋಜಿಸಲಾಗಿದ್ದ ಬರ ನಿರ್ವಹಣೆ, ಪರ್ಯಾಯ ಬೆಳೆ ಯೋಜನೆ, ಸಾವಯವ/ನೈಸರ್ಗಿಕ ಕೃಷಿ ಹಾಗೂ ಸಮಗ್ರ ಪೋಷಕಾಂಶ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬರ ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸಲು, ರೈತರ ಜ್ಞಾನ ಮತ್ತು ಸಿದ್ಧತೆಯನ್ನು ಹೆಚ್ಚಿಸಲು, ಸೂಕ್ತ ಪರ್ಯಾಯ ಬೆಳೆಗಳನ್ನು ಅಳವಡಿಸಿಕೊಳ್ಳುವಂತೆ ಮಾರ್ಗದರ್ಶನ ನೀಡಲು, ಸಾವಯವ ಮತ್ತು ನೈಸರ್ಗಿಕ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಹಾಗೂ ಸುಸ್ಥಿರ ಕೃಷಿ ಉತ್ಪಾದನೆ ಮತ್ತು ಕೃಷಿ ವ್ಯವಸ್ಥೆಯ…
ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ(ರಿ) ವತಿಯಿಂದ ತುಮಕೂರು ಜಿಲ್ಲೆಯ ಸ್ಲಂ ನಿವಾಸಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಲಂ ಕುಂದು ಕೊರತೆ ಸಭೆ ಕರೆಯಲುಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಜಿಲ್ಲೆಯಲ್ಲಿ À ಸ್ಲಂ ನಿವಾಸಿಗಳ ಸಮಸ್ಯೆಗಳನ್ನು ಕಾಲಕಾಲಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಇದಕ್ಕೆ ಸ್ಪಂಧಿಸಿರುವ ಜಿಲ್ಲಾಳಿತದ ಕೆಲವೊಂದು ಹಕ್ಕೋತ್ತಾಯಗಳನ್ನು ಈಡೇರಿಸಲು ಮುಂದಾಗಿದೆ. ಆದರೆ ಇತ್ತೀಚೆಗೆ ಕಳೆದ ೬ ತಿಂಗಳಿನಿAದ ಜಾತಿ ಜನಗಣತಿ ಮತ್ತು ಎಸ್‌ಐಆರ್ ಮತಪರಿಷ್ಕರಣೆಕೆಲಸಗಳಿಂದ ಅರ್ಧಕ್ಕೆ ನಿಲ್ಲಿಸಲಾಗಿದೆ. ತುಮಕೂರು ನಗರದಲ್ಲಿ ಪ್ರಧಾನಮಂತ್ರಿ ಅವಾಸ್‌ಯೋಜನೆಯಡಿ ೧೪೫೦ ಮನೆಗಳ ಪೈಕಿ ೬೩೦ ಮನೆಗಳ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿ ೩ ವರ್ಷಗಳಾಗಿದೆ. ಕಳೆದ ಡಿಸೆಂಬರ್‌ನಲ್ಲಿ ನಗರದಲ್ಲಿ ಎರಡು ಸ್ಲಂಗಳಿಗೆ ೧೧೦ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದ್ದು ಬಾಕಿ ಉಳಿದಿರುವ ೧೨೫೦ ಕುಟುಂಬಗಳ…
ಶಿರಾ: ಮಕ್ಕಳಿಗೆ ಉತ್ತಮ ಶಿಕ್ಷಣ, ಆರೋಗ್ಯ, ಸಂಸ್ಕಾರ ಮತ್ತು ಸಂಸ್ಕöÈತಿ ನೀಡುವುದು ಪೋಷಕರ ಕರ್ತವ್ಯವಾಗಿದೆ ಮತ್ತು ಮಕ್ಕಳ ಉತ್ತಮ ಭವಿಷ್ಯವನ್ನ ನಿರ್ಮಿಸುವುದೇ ಸ್ವಾತಂತ್ರ÷್ಯ ದೇಶದ ಅಭಿವೃದ್ಧಿಯ ಬುನಾದಿಯಾಗಿದೆ ಎಂದು ತಾಲೂಕು ಪಂಚಾಯತಿ ಮಾಜಿ ಸದಸ್ಯರು ಶ್ರೀ ಕೃಷ್ಣಪ್ಪ ಅಭಿಪ್ರಾಯಪಟ್ಟರು.. ಸ. ಹಿ. ಪ್ರಾ.ಶಾಲೆ ಕುರುಬರ ರಾಮನಹಳ್ಳಿಯಲ್ಲಿ ೮೦ನೇ ವರ್ಷದ ಸ್ವಾತಂತ್ರ÷್ಯ ದಿನಾಚರಣೆಲ್ಲಿ ಕುರಿತು ಮಾತನಾಡಿದ ಅವರು ವಿದ್ಯಾರ್ಥಿಗಳು ಪ್ರಶ್ನೆ ಮಾಡದೇ ಯಾವುದನ್ನು ಒಪ್ಪಿಕೊಳ್ಳಬಾರದು, ಪ್ರಶ್ನೆ ಮಾಡುವ ಧೈರ್ಯ ಬೆಳೆಸಿಕೊಳ್ಳಬೇಕು. ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಪ್ರಪಂಚದಾದ್ಯAತ ಸಾಧನೆಯ ಮೆಟ್ಟಿಲನ್ನೇರಿದ್ದಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸದೆ ಸರ್ಕಾರಿ ಶಾಲೆಗೆ ಸೇರಿಸಬೇಕೆಂದು ತಿಳಿಸಿದರು. ಪಟ್ಟನಾಯಕನಹಳ್ಳಿ ಆರಕ್ಷಕ ಠಾಣೆ ಪೊಲೀಸ್ ಸಿಬ್ಬಂದಿ ನಟರಾಜ್ ಅವರು ಇಂದಿನ ನಮ್ಮ ಜೀವನ ಅಂದಿನ ಸ್ವಾತಂತ್ರಾ÷್ಯ ಹೋರಾಟಗಾರರು ಮಾಡಿದ ಹೊರಟಿದ ಪ್ರತಿಫಲವೇ ಆಗಿದೆ. ಅವರನ್ನು ಪ್ರತಿದಿನ ನೆನೆಯಬೇಕು ಮತ್ತು ಮಕ್ಕಳನ್ನ ಉತ್ತಮ ಪ್ರಜೆಗಳನ್ನಾಗಿ ಮಾಡುವುದು ಪೋಷಕರ ಕರ್ತವ್ಯವಾಗಿದೆ ಎಂದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷರಾದ…
ತುಮಕೂರು: ೮೦ನೇ ಸ್ವಾತಂತ್ರö್ಯ ದಿನಾಚರಣೆ ಅಂಗವಾಗಿ ಸಾಮರಸ್ಯ, ರಾಷ್ಟçಭಕ್ತಿ ಸಾರಲು ಭಗತ್ ಕ್ರಾಂತಿ ಸೇನೆಯಿಂದ ಶುಕ್ರವಾರ ರಾತ್ರಿ ನಗರದಲ್ಲಿ ಅಖಂಡ ಭಾರತ ಜಾಗೃತಿ ದಿವಸ್ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಡಿ.ಡಿ.ಪಿ.ಐ. ಕಛೇರಿ ಬಳಿ ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಪಂಜಿನ ಮೆರವಣಿಗೆಗೆ ಚಾಲನೆ ನೀಡಿ, ರಾಷ್ಟçಭಕ್ತಿ ಸಾರಲು, ಸಾಮರಸ್ಯ ಮೂಡಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ವಿಶೇಷವಾಗಿ ಯುವ ಜನರಲ್ಲಿ ರಾಷ್ಟಾçಭಿಮಾನ ಬೆಳೆಯಬೇಕು. ದೇಶದ ರಕ್ಷಣೆ, ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು ಎಂದರು. ಭಾರತ ಸ್ವಾತಂತ್ರö್ಯಕ್ಕಾಗಿ ತ್ಯಾಗ ಮಾಡಿದ ಹಲವಾರು ಮಹನೀಯರು ತ್ಯಾಗ ಮಾಡಿದ್ದಾರೆ, ಅವರ ಕೊಡುಗೆ ಸ್ಮರಿಸಬೇಕು. ಸ್ವಾತಂತ್ರö್ಯ ದಿನಾಚರಣೆಯನ್ನು ದೇಶದ ಐಕ್ಯತೆಯ ಸಂಕೇತವಾಗಿ ಸಂಭ್ರಮದಿAದ ಆಚರಿಸಬೇಕು ಎಂದರು. ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಅತಿಥಿಯಾಗಿ ಭಾಗಹಿಸಿದ್ದರು. ಭಗತ್ ಕ್ರಾಂತಿ ಸೇನೆ ಕಾರ್ಯಕರ್ತರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ನೂರಾರು ಜನ ಪಂಜು ಬೆಳಗಿಸಿಕೊಂಡು ಮೆರವಣಿಗೆ ಸಾಗಿ ಸೋಮೇಶ್ವರ ಮುಖ್ಯರಸ್ತೆ, ಕೆಂಪಣ್ಣನ ಅಂಗಡಿ ಸರ್ಕಲ್ ಮುಖಾಂತರ ದೋಭಿ…
ತುಮಕೂರು: ಸ್ವಾತಂತ್ರ ಎಂಬುದು ಕೇವಲ ಬ್ರಿಟಿಷರ ಆಡಳಿತದಿಂದ ಮುಕ್ತಿ ಪಡೆಯುವುದಲ್ಲ, ಬದಲಿಗೆ ಭಯ, ಅಜ್ಞಾನ ಮತ್ತು ಭ್ರಷ್ಟಾಚಾರದಿಂದ ಮುಕ್ತವಾದ ಸಮಾಜವನ್ನು ನಿರ್ಮಿಸುವುದೇ ನಿಜವಾದ ಸ್ವಾತಂತ್ರ÷್ಯ. ಇಂದಿನ ನಮ್ಮ ದೇಶದ ಅಭಿವೃದ್ಧಿಯಲ್ಲಿ ಯುವಜನತೆಯ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ” ಎಂದು ಭಾರತದ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಟಿ.ಎನ್. ಸತ್ಯನಾರಾಯಣ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಶನಿವಾರ ಆ. ೧೫ ರಂದು ನಡೆದ ೮೦ನೇ ಸ್ವಾತಂತ್ರ÷್ಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ದೇಶವನ್ನು ಮುನ್ನಡೆಸಲು ಯುವಕರಿಗೆ ಶಿಸ್ತು ಎಂಬುದು ಅತ್ಯಂತ ಮುಖ್ಯವಾದ ಅಸ್ತçವಾಗಿದೆ. ಶಿಸ್ತಿನಿಂದ ಕೂಡಿದ ಜೀವನವು ವೈಯಕ್ತಿಕ ಯಶಸ್ಸಿಗೆ ಮಾತ್ರವಲ್ಲದೆ, ಸದೃಢ ರಾಷ್ಟç ನಿರ್ಮಾಣಕ್ಕೂ ಬುನಾದಿಯಾಗುತ್ತದೆ ಎಂದರು. ಇಂದಿನ ದೇಶದ ಪ್ರಮುಖ ಸವಾಲುಗಳಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಕೂಡ ಒಂದಾಗಿದ್ದು, ಇದು ದೇಶದ ಅಭಿವೃದ್ಧಿಗೆ ಮತ್ತು ಯುವಕರ ಪ್ರತಿಭೆಗೆ ತಡೆಯೊಡ್ಡುವ ದೊಡ್ಡ ಪಿಡುಗಾಗಿದೆ. ಪ್ರತಿಯೊಬ್ಬ ಯುವಕನೂ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡು, ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವ ಮೂಲಕ ಬದಲಾವಣೆಯ ಹರಿಕಾರರಾಗಬೇಕು ಎಂದು ಅವರು ಕರೆ…
ತುಮಕೂರು: ಭಾರತದ ೮೦ನೇ ಸ್ವಾತಂತ್ರ ದಿನದ ಅಂಗವಾಗಿ ಭಾರತ್ ಸಂಚಾರ್ ನಿಗಮ ನಿಯಮಿತ ಗ್ರಾಹಕರಿಗೆ ಹೊಸ ಪ್ಯೂಚರ್ ಒಳಗೊಂಡಿರುವ ಡಿಜಿಟಲ್ ಮತ್ತು ಮನರಂಜನಾ ಸೇವೆಗಳನ್ನು ನೀಡಲಾಗುತ್ತಿದೆ ಎಂದು ಬಿ.ಎಸ್.ಎನ್.ಎಲ್‌ನ ತುಮಕೂರು ಮತ್ತು ಹಾಸನ ಜಿಲ್ಲಾ ಡಿಜಿಎಂ ದಿಗಂಬರಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಹಕರಿಗೆ ಇದುವೆರೆಗೂ ಇದ್ದ ೧೧೯೯ ಪ್ಲಾನ್‌ನ್ನು ೧೧೧೧ ಆಗಿ ಪರಿಷ್ಕರಿಸಿ, ಗ್ರಾಹಕರಿಗೆ ೨೦೦ ಎಂ.ಪಿಪಿಎಸ್ ವೇಗದಲ್ಲಿ ೫೦೦ ಜಿಬಿ ವರೆಗೆ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ. ಹಾಗೆಯೇ ೨೫ ಒಟಟಿ ಚಾನಲ್‌ಗಳು ಇನ್ ಬಿಲ್ಟ್ ಆಗಿದ್ದು, ಮನರಂಜನೆಯ ವೇಗವನ್ನು ಮತ್ತಷ್ಟು ಸುಧಾರಿಸಿದೆ. ಬೇರೆ ಕಂಪನಿಯ ಪ್ಲಾನ್‌ಗಳಿಗೆ ಹೊಲಿಕೆ ಮಾಡಿದರೆ ಬಿ.ಎಸ್.ಎನ್.ಎಲ್‌ನ ಈ ಪ್ಲಾನ್ ತುಂಬಾ ಚನ್ನಾಗಿದೆ ಎಂದರು. ಸ್ವಾತAತ್ರದ ಹೆಸರಿನಲ್ಲಿ ಉಚಿತವಾಗಿ ಸಿಮ್ ನೀಡುತ್ತಿದ್ದು,ಒಂದು ರೂಗೆ ಒಂದು ಸಿಮ್ ವಿತರಿಸುತಿದ್ದು, ೨೪ ದಿನಗಳ ವ್ಯಾಲಿಡಿಟಿ ಇರಲಿದೆ.ಇದರಲ್ಲಿ ಪ್ರತಿದಿನ ಒಂದು ಜಿ.ಬಿ.ವರೆಗೆ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶವಿದೆ.ಹಾಗೆಯೇ ೧೦೦ ಎಸ್.ಎಂ.ಎಸ್ ಹಾಗೂ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಮಾಡಲು ಅವಕಾಶವಿದೆ. ೨೪ ದಿನಗಳ…
ತುಮಕೂರು: ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್ ೨೮ರ ಹರವೆಲೆ ಭಾಗದಲ್ಲಿರುವ ಗೆದ್ದಲಹಳ್ಳಿ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸ್ಥಳೀಯ ನಿವಾಸಿಗಳು ಪರದಾಡುವಂತಾಗಿದೆ. ಸುಮಾರು ೩೫೦ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ೧,೫೦೦ಕ್ಕೂ ಅಧಿಕ ಜನರು ವಾಸವಾಗಿದ್ದಾರೆ. ಆದರೆ, ಇಷ್ಟೊಂದು ದೊಡ್ಡ ಸಂಖ್ಯೆಯ ಜನಸಂಖ್ಯೆ ಇರುವ ಪ್ರದೇಶಕ್ಕೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು ಮಾತ್ರ ಇನ್ನೂ ಸಮರ್ಪಕವಾಗಿ ದೊರೆತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ. ಕಳೆದ ೨೫ರಿಂದ ೩೦ ವರ್ಷಗಳಿ ಂದ ಇದೇ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ವಿಶೇಷವಾಗಿ ಒಳಚರಂಡಿ ಹಾಗೂ ಚರಂಡಿ ವ್ಯವಸ್ಥೆಯ ಸಮಸ್ಯೆ ಇಲ್ಲಿನ ಜನರನ್ನು ತೀವ್ರವಾಗಿ ಕಾಡುತ್ತಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ಬಂದ ಸಂದರ್ಭದಲ್ಲಿ ಮಳೆನೀರು ಸರಾಗವಾಗಿ ಹರಿದು ಹೋಗದೆ ರಸ್ತೆಗಳಲ್ಲೇ ನಿಂತು, ಕೆಲವೊಮ್ಮೆ ಮನೆಗಳಿಗೂ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದರಿಂದ ಮನೆಗಳಲ್ಲಿರುವ ವಸ್ತುಗಳು ಹಾನಿಗೊಳಗಾಗುವುದರ ಜೊತೆಗೆ, ಕೊಳಚೆ ನೀರು ಹಾಗೂ ಮಳೆ ನೀರು ಒಂದೇ…











