ತುಮಕೂರು: ಇತ್ತೀಚೆಗೆ ವಿಜಯಪುರ ಜಿಲ್ಲೆಯ ಗಾಂಧಿನಗರದಲ್ಲಿ ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ದಲಿತ ಕಾರ್ಮಿಕರ ಮೇಲೆ ಆದಂತಹ ಮಾರಣಾಂತಿಕ ಹಲ್ಲೆಯನ್ನು ಖಂಡಿಸಿ ಇಂದು ತುಮಕೂರು ಜಿಲ್ಲೆಯ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ತಮ್ಮ ಮನವಿ ಪತ್ರದಲ್ಲಿ ಪರಿಶಿಷ್ಟ ಜಾತಿ ಕೂಲಿ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೇ ಜಾತಿನಿಂದನೆಯ ಮಾಡಿರುವವರ ವಿರುದ್ಧ ಕಾನೂನು ರೀತ್ಯಾ ಕ್ರಮ ವಹಿಸುವುದಲ್ಲದೇ ಹಲ್ಲೆಗೊಳಗಾದ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ನೆರವನ್ನು ನೀಡುವುದರೊಂದಿಗೆ ಕೂಲಿ ಕಾರ್ಮಿಕರ ಕುಟುಂಬಕ್ಕೆ ಉದ್ಯೋಗ, ಪರಿಹಾರ, ಮೂಲಭೂತ ಸೌಕರ್ಯಗಳು ಹಾಗೂ ಸೂಕ್ತ ರಕ್ಷಣೆ ಕೊಡುವಂತೆ ನಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದೇವೆಂದು ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷರಾದ ಎನ್.ಕೆ.ನಿಧಿಕುಮಾರ್ ತಿಳಿಸಿದ್ದಾರೆ. ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅಖಿಲ ಭಾರತ ಡಾ. ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ…
Author: News Desk Benkiyabale
ತುಮಕೂರು: ಕಾಂಗ್ರೆಸ್ ಪಕ್ಷ ಗಾಂಧಿಜೀ ಅವರು ಸತ್ಯ, ಶಾಂತಿ ಮತ್ತು ಅಹಿಂಸೆಯ ತತ್ವದ ಮೇಲೆ ನಡೆಯುತ್ತಿದೆ. ಎಲ್ಲ ವರ್ಗದ ಜನರಿಗೂ ಅವಕಾಶಗಳನ್ನು ಕಲ್ಪಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ತಿಳಿಸಿದ್ದಾರೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸದ್ಬಾವನಾ ದಿನ(ಹುತಾತ್ಮರ ದಿನ)ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಮಹಾತ್ಮಗಾಂಧಿಜೀ ಅವರು ಕೇವಲ ಸ್ವಾತಂತ್ರ÷್ಯ ಕ್ಕಾಗಿ ಹೋರಾಟ ನಡೆಸಿದ್ದಷ್ಟೇ ಅಲ್ಲ.ಈ ದೇಶದಲ್ಲಿ ನಡೆಯುತಿದ್ದ ಅನಿಷ್ಠ ಪದ್ದತಿಗಳ ವಿರುದ್ದವೂ ಹೋರಾಟ ನಡೆಸಿದ್ದರು ಎಂದರು. ಈ ದೇಶದ ಸ್ವಾತಂತ್ರ÷್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ಪಕ್ಷ,ಸ್ವಾತಂತ್ರ÷್ಯ ನಂತರವೂ ದೇಶದ ಸಮಗ್ರ ಅಭಿವೃದ್ದಿಗೆ ನಿರಂತರವಾಗಿ ಶ್ರಮಿಸಿದ ಪರಿಣಾಮ ಶಾಲಾ,ಕಾಲೇಜು,ಆಸ್ಪತ್ರೆ, ರಸ್ತೆ,ವಿಮಾನ ನಿಲ್ದಾಣಗಳು,ಅಣೆಕಟ್ಟು ಗಳು ನಿರ್ಮಾಣಗೊಂಡು ದೇಶದ ಜನರು ಸ್ವಾವಲಂಭಿ ಜೀವನ ನಡೆಸಲು ಸಾಧ್ಯವಾಯಿತು. ಇದನ್ನು ತಿಳಿಯದ ಕೆಲವರು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಎನು ಎಂದು ಪ್ರಶ್ನೇ ಮಾಡುತ್ತಾರೆ. ಇತಿಹಾಸವೇ ಗೊತ್ತಿಲ್ಲದವರಿಂದ ಇತಿಹಾಸ ನಿರ್ಮಿಸಲು ಸಾಧ್ಯವೇ ಎಂದು ಜಿ.ಚಂದ್ರಶೇಖರ ಗೌಡ ಪ್ರಶ್ನಿಸಿದರು. ನನ್ನ ಜೀವನವೇ ನನ್ನ ಸಂದೇಶ ಎಂದ…
ಚಿಕ್ಕನಾಯಕನಹಳ್ಳಿ; ಉಪ ವಿಭಾಗಾಧಿಕಾರಿ ಆಡಳಿತ ಅಧಿಕಾರಿಗಳ ಅವಧಿಯಲ್ಲಿ ಹಣ ದುರ್ಬಳಿಕೆ ಮಾಡಿಕೊಳ್ಳಲಾಗಿದೆ ಈ ಬಗ್ಗೆ ಹಲವು ಬಾರಿ ಕೇಳಿದರು ಹಾಗೂ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಕೇಳಿದರು ನಮಗೆ ಮಾಹಿತಿ ನೀಡಿಲ್ಲ ಈ ಅವಧಿಯಲ್ಲಿ ಮಾರ್ಚ್ 2023 ರಿಂದ ಡಿಸೆಂಬರ್ 2023 ವರೆಗಿನ ವರದಿ ನೀಡಬೇಕು ಹಾಗೂ ಈ ಬಗ್ಗೆ ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಸದಸ್ಯೆ ಪೂರ್ಣಿಮಾ ರೇಣುಕ ಪ್ರಸಾದ್ ನಾಗರಾಜ್ ಬಾಬು ಹುಸೇನ್ ಗುಂಡ ಇವರುಗಳು ಆಗ್ರಹಿಸಿದರು. ಪುರಸಭಾಧ್ಯಕ್ಷ ಕೆಂಗಲ್ ದಯಾನಂದ್ ಅವರ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಾಮಾನ್ಯ ಸಭೆಯಲ್ಲಿ ಆಡಳಿತ ಅಧಿಕಾರಿಯ ಅವಧಿಯಲ್ಲಿ 14 ಹಾಗೂ 15ನೇ ಹಣಕಾಸು ಯೋಜನೆ, ಕಾಮಗಾರಿಗಳನ್ನು ಮನಬಂದAತೆ ಮಾಡಿದ್ದು ಜಮಾ ಖರ್ಚುಗಳ ಬಗ್ಗೆ ವರದಿಯನ್ನು ಸಭೆಗೆ ಮಂಡಿಸಿಲ್ಲ ಗೌರವಾನ್ವಿತ ಸದಸ್ಯತ್ವ ಬೆಲೆ ಇಲ್ಲವಾ ಎಂದು ಸದಸ್ಯ ಮಲ್ಲೇಶ ಶಾಸಕರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು ಇದಕ್ಕೆ ಶಾಸಕ ಸಿಬಿ ಸುರೇಶ್ ಬಾಬು ಆಡಳಿತ ಅಧಿಕಾರಿಗಳ ಅವಧಿಯಲ್ಲಿನ ಮಾಹಿತಿಯನ್ನು ವಿಶೇಷ ಸಭೆಯಲ್ಲಿ ಚರ್ಚಿಸಿ ಮಾರ್ಚ್ ನಿಂದ ಮಾರ್ಚ್…
ತುಮಕೂರು: ಅವಶ್ಯಕತೆಗಳನ್ನು ಮೀರಿ ಸಾಲ ಮಾಡಿ ಸಮಸ್ಯೆಗಳಿಗೆ ಸಿಲುಕಬಾರದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಸಂಬAಧಿಸಿದAತೆ ಕೊರಟಗೆರೆ ತಾಲ್ಲೂಕು ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ಗಳಿಗೆ ಅಸಲು ಹಣಕ್ಕಿಂತ ಬಡ್ಡಿಯನ್ನೇ ಹೆಚ್ಚಾಗಿ ಕಟ್ಟಬೇಕಾಗುತ್ತದೆ. ಅತಿ ಹೆಚ್ಚು ಬಡ್ಡಿ ವಸೂಲಿ ಮಾಡುವ ಮೈಕ್ರೋ ಫೈನಾನ್ಸ್ಗಳಿಂದ ಸಾಲ ಪಡೆಯುವ ಮುನ್ನ ಜನರು ಆಲೋಚಿಸಬೇಕು ಎಂದು ತಿಳಿಸಿದರು. ಸಾರ್ವಜನಿಕರು ತಮ್ಮ ಖರ್ಚು-ವೆಚ್ಚಗಳು ಇತಿ-ಮಿತಿಯೊಳಗಿರುವಂತೆ ಎಚ್ಚರವಹಿಸಬೇಕು. ಮೈಕ್ರೋ ಫೈನಾನ್ಸ್ನಿಂದ ತಾವು ಸಾಲ ಪಡೆಯುವುದಲ್ಲದೆ ಸ್ನೇಹಿತರು, ಬಂಧುಗಳ ಹೆಸರಲ್ಲಿಯೂ ತೆಗೆದುಕೊಳ್ಳುತ್ತಿರುವುದು ಪರಿಶೀಲನೆ ವೇಳೆಯಲ್ಲಿ ಗಮನಕ್ಕೆ ಬಂದಿದೆ. ಸ್ನೇಹಿತರ ಸಾಲಕ್ಕೆ ಜಾಮೀನು ಹಾಕುವ ಮುನ್ನ ಯೋಚಿಸಬೇಕು. ಇದರಿಂದ ಸಾಲ ಪಡೆದವರು ಹಾಗೂ ಜಾಮೀನು ಹಾಕಿದವರೂ ಸಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿ ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಸರ್ಕಾರದ ವಿವಿಧ ಯೋಜನೆಗಳಡಿ ಅತಿ ಕಡಿಮೆ…
ಕೊರಟಗೆರೆ: ಬಿಜೆಪಿ ಪಕ್ಷ ಸಂಘಟನೆಗೆ ಪ್ರತಿಯೊಬ್ಬ ಕಾರ್ಯಕರ್ತರ ಸಹಕಾರ ಅತ್ಯಗತ್ಯ. ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಬಲಗೊಳ್ಳಿಸುವ ಸಲುವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ನೂತನ ಕೊರಟಗೆರೆ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ಟಿ.ಎನ್.ರುದ್ರೇಶ್ ತಿಳಿಸಿದರು. ಪಟ್ಟಣದ ನವೀನ್ ಕಂಫಟ್‌ನಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ನೂತನವಾಗಿ ಕೊರಟಗೆರೆ ಮಂಡಲ ಅಧ್ಯಕ್ಷರಿಗೆ ಅಭಿನಂದನಾ ಸಭೆಯನ್ನ ಉದ್ದೇಶಿಸಿ ಮಾತನಾಡಿದರು. ಮಂಡಲ ಅಧ್ಯಕ್ಷ ಎನ್ನವುದು ಒಂದು ಹುದ್ದೆ ಪ್ರೋಟೋಕಾಲ್ ಅಷ್ಟೇ. ನಾನು ಕೂಡ ಒಬ್ಬ ಬೂತ್ ಸದಸ್ಯನಾಗಿ ಕೆಲಸ ಮಾಡುತ್ತೇನೆ. ಇಲ್ಲಿ ಯಾರು ಅಧ್ಯಕ್ಷರಲ್ಲ ಎಲ್ಲರೂ ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಗಳಂತೆ ಕೆಲಸ ಮಾಡಿ ಮುಂದೆ ಬರುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಸ್ಪರ್ಧಿಸಿ ಬಿಜೆಪಿ ಪಕ್ಷವನ್ನ ನಮ್ಮ ಕ್ಷೇತ್ರದಲ್ಲಿ ಸದೃಢಗೊಳಿಸೋಣ ಎಂದು ತಿಳಿಸಿದರು. ನನಗೆ ಬಿಜೆಪಿ ಪಕ್ಷದ ಜಿಲ್ಲಾ ಮಟ್ಟದ ಮುಖಂಡು ಹಾಗೂ ಕೊರಟಗೆರೆ ವಿಧಾನಸಭಾದ ಬಿಜೆಪಿ ಅಭ್ಯರ್ಥಿಯಾದ ಹಾಗೂ ನಿವೃತ್ತ ಐಎಎಸ್ ಅಧಿಕಾರಿಯಾದ ಬಿ.ಹೆಚ್.ಅನಿಲ್‌ಕುಮಾರ್ ಅವರು ಸಹಕಾರದಿಂದ…
ತುಮಕೂರು: ಇಂದಿನ ಪರಸ್ಪರ ಸಂಪರ್ಕಿತ ಡಿಜಿಟಲ್ ಪರಿಸರದಲ್ಲಿ ವಿವಿಧ ಕ್ಷೇತ್ರಗಳ ಮಾಹಿತಿಯನ್ನು ರಕ್ಷಿಸಲು ಸೈಬರ್ ಸುರಕ್ಷತೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಾಹೇ ಕುಲಾಧಿಪತಿಗಳ ಸಲಹೆಗಾರರಾದ ಡಾ.ವಿವೇಕ ವೀರಯ್ಯ ಅವರು ಅಭಿಪ್ರಾಯಪಟ್ಟರು. ನಗರದ ಕ್ಯಾತಸಂದ್ರದ ಬಳಿಯಿರುವ ಶ್ರೀ ಸಿದ್ಧಾರ್ಥ ಸ್ಕೂಲ್ ಆಫ್ ಇಂಜಿನಿಯರಿAಗ್ ನಲ್ಲಿ ಏರ್ಪಡಿಸಲಾಗಿದ್ದ ಒಂದು ವಾರದ ಪ್ರಾಧ್ಯಾಪಕರ ಪ್ರಗತಿ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ‘ಇ-ಆಡಳಿತದ ಸುರಕ್ಷತೆ, ಸೈಬರ್ ಭದ್ರತೆ ಸಮ್ಮೀಲನದ ವಸ್ತುಸ್ಥಿತಿ ಹಾಗೂ ಆಧುನಿಕ ಕಾಲಘಟ್ಟದ ತಂತ್ರಜ್ಞಾನದಲ್ಲಿ ಕೃತಕ ಬುದ್ದಿಮತ್ತೆ’ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ಇಂಟರ್ನೆಟ್ ಜೀವನದ ಪ್ರತಿಯೊಂದು ಹಂತದಲ್ಲೂ ಅಗತ್ಯವಾಗಿದ್ದು, ಸೈಬರ್ ಭೀತಿಯ ಜೊತೆಗೆ ಸಂಬAಧಿಸಿದ ತೊಂದರೆಗಳು ವೇಗವಾಗಿ ಹೆಚ್ಚುತ್ತಿವೆ. ಪ್ರತಿಷ್ಠಿತ ವ್ಯಕ್ತಿಗಳು, ದೊಡ್ಡ ಸಂಸ್ಥೆಗಳು, ಹಾಗು ಸರ್ಕಾರಗಳೂ ಸಹ ಎಲ್ಲರೂ ಭದ್ರತೆಗೆ ಸಂಬAಧಿಸಿದ ಅಪಾಯಗಳನ್ನು ಎದುರಿಸುತ್ತಿವೆ ಎಂದ ಡಾ.ವಿವೇಕ ವೀರಯ್ಯ ಅವರು ಸೂಕ್ಷ್ಮ ಮಾಹಿತಿಯನ್ನು ಸುರಕ್ಷಿತವಾಗಿಡಲು ಮತ್ತು ಆನ್ಲೈನ್ ಚಟುವಟಿಕೆಗಳನ್ನು ರಕ್ಷಿಸಲು ಎಷ್ಟು ಅಗತ್ಯವಿದೆ ಎಂಬುದು ನಿರ್ಧರಿಸಬೇಕಾಗಿದೆ. ಸೈಬರ್ ದಾಳಿ…
ಹುಳಿಯಾರು: ಗ್ರಾಮಠಾಣ ವ್ಯಾಪ್ತಿಯಲ್ಲಿರುವ ನನ್ನ ನಿವೇಶನದ ಖಾತೆ ಮಾಡಿಸಲು ಹುಳಿಯಾರು ಪಟ್ಟಣ ಪಂಚಾಯ್ತಿಗೆ 2 ವರ್ಷಗಳಿಂದ ಅಲೆಯುತ್ತಿದ್ದೇನೆ. ಆದರೆ ಇದೂವರೆವಿಗೂ ಖಾತೆ ಆಗಿಲ್ಲ. ಯಾವಾಗ ಬಂದರೂ ಒಂದೊAದು ಸಬೂಬು ಹೇಳಿ ಕಳುಹಿಸುತ್ತಿದ್ದಾರೆ. ಗಂಡನ ಮನೆ ಹೊಸದುರ್ಗ ತಾಲೂಕಿನ ಶ್ರೀರಾಂಪುರದಿAದ ಪಂಚಾಯ್ತಿಗೆ ಅಲೆದು ಅಲೆದು ಸಾಕಾಗಿ ಹೋಗಿದೆ. ಮೇಲಧಿಕಾರಿಗಳು ಇನ್ನಾದರೂ ಖಾತೆ ಮಾಡಿಸಲು ನಿರ್ಲಕ್ಷಿö್ಯಸಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ನನಗೆ ಖಾತೆ ಮಾಡಿಸಿಕೊಟ್ಟು ಪುಣ್ಯಕಟ್ಟಿಕೊಳ್ಳಿ ಎಂದು ರೇಷ್ಮಾಬಾನು ಬುಧವಾರ ಮನವಿ ಮಾಡಿದ್ದಾರೆ. ಹುಳಿಯಾರಿನ ಗ್ರಾಮ ಠಾಣಾ ವ್ಯಾಪ್ತಿಯಲ್ಲಿನ ಲಿಂಗಾಯಿತರ ಬೀದಿಯ ಪಂಚಾಯ್ತಿ ಖಾತೆ ಸಂಖ್ಯೆ 325 ಅ.ಸಂ 204 ನಿವೇಶನವನ್ನು ನನ್ನ ತಾಯಿಯಿಂದ 14/8/2018 ರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದೇನೆ. ಈ ನಿವೇಶನವನ್ನು ನನ್ನ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲು 2/2/23 ರಲ್ಲಿ ಪಂಚಾಯ್ತಿಗೆ ರಿಜಿಸ್ಟರ್ ಪ್ರತಿ, ಇಸಿ, ಆಧಾರ್ ಕಾರ್ಡ್, ಗ್ರಾಮಠಾಣಾ ನಕ್ಷೆ, ಕಂದಾಯ ರಸೀಧಿ ಹೀಗೆ ಎಲ್ಲವನ್ನು ಕೊಟ್ಟಿದ್ದೇನೆ. ಆದರೆ ಇಲ್ಲಿಯವರೆವಿಗೆ ಖಾತೆ ಮಾಡಿಕೊಟ್ಟಿಲ್ಲ. ಯಾವಾಗ ಬಂದರೂ ಸಿಬ್ಬಂದಿ ಇಲ್ಲ,…
ತುಮಕೂರು : ಸ್ಥಳೀಯ ಸಂಸ್ಥೆಗಳಿಗೆ ಕಾಲ-ಕಾಲಕ್ಕೆ ಚುನಾವಣೆಗಳು ನಡೆದಾಗ ಮಾತ್ರ ಹಣಕಾಸು ಆಯೋಗವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಲಿದೆ ಎಂದು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಡಾ: ಸಿ. ನಾರಾಯಣಸ್ವಾಮಿ ತಿಳಿಸಿದರು. ಪಂಚಾಯತ್ ರಾಜ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ 5ನೇ ರಾಜ್ಯ ಹಣಕಾಸು ಆಯೋಗದ ವಿಷಯಗಳ ಕುರಿತು ಜಿಲ್ಲಾ ಪಂಚಾಯತಿಯಲ್ಲಿ ಬುಧವಾರ ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೇಂದ್ರ ಹಣಕಾಸು ಆಯೋಗವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡುವ ಸಂದರ್ಭದಲ್ಲಿ ರಾಜ್ಯ ಹಣಕಾಸು ಆಯೋಗದ ಶಿಫಾರಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಹಂಚಿಕೆ ಮಾಡಲಿದೆ ಎಂದು ತಿಳಿಸಿದರು. ಗ್ರಾಮ ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ರಸ್ತೆ ನಿರ್ಮಾಣ, ವಿದ್ಯುತ್ ಸೇರಿದಂತೆ ಜನಸಾಮಾನ್ಯರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸ್ಥಳೀಯ ಸಂಸ್ಥೆಗಳು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು. “ತೆರಿಗೆ ಮೊದಲು-ಸೇವೆ ನಂತರ” ಎಂಬ ಧ್ಯೇಯವಾಕ್ಯದಡಿ ತೆರಿಗೆಯನ್ನು ಸಂಪೂರ್ಣವಾಗಿ ಪಾವತಿಸಿ ಸರ್ಕಾರದ…
ತುಮಕೂರು: ಮತ್ಸö್ಯದರ್ಶಿನಿ ಹೋಟೆಲ್ ನಲ್ಲಿ ಕಳೆಪೆ ಗುಣಮಟ್ಟದ ಪದಾರ್ಥಗಳನ್ನು ಬಳಸುವ ಮೂಲಕ ಆಹಾರ ಗುಣಮಟ್ಟವನ್ನು ಕಡಿಮೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಹೋಟೆಲ್‌ನ ವ್ಯವಸ್ಥಾಪಕಿಯ ದುರ್ವರ್ತನೆಗೆ ಗ್ರಾಹಕರು ಬೇಸತ್ತಿದ್ದು, ಈಕೆಯ ವರ್ಗಾವಣೆಗೆ ಆಗ್ರಹಗಳು ಕೇಳಿ ಬರುತ್ತಿದೆ. ತುಮಕೂರು ವಿವಿಯ ಹಿಂದೆ ಸರ್ಕಾರದ ಮತ್ಸö್ಯ ದರ್ಶಿನಿ ಹೋಟೆಲ್ ಇದೆ. ಇಲ್ಲಿಗೆ ನಿತ್ಯ ನೂರಾರು ಜನರು ಊಟಕ್ಕೆಂದು ಬರುತ್ತಿದ್ದರು. ಆದರೆ, ಗ್ರಾಹಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಹೋಟೆಲ್ ವ್ಯವಸ್ಥಾಪಕಿ ಕಾವ್ಯಾ ಅವರ ಗ್ರಾಹಕರೊಂದಿಗಿನ ಅನುಚಿತ ವರ್ತನೆಯೇ ಮುಖ್ಯವಾದ ಕಾರಣವೆಂದು ಹೇಳಲಾಗಿದೆ. ರುಚಿ ಶುಚಿ ಇರದ ಊಟ: ಅಡುಗೆ ಮಾಡಿ ಬಡಿಸುವಲ್ಲಿ ಹಿಂದೆ ಇದ್ದಂತಹ ಶ್ರದ್ಧೆ ಈಗ ಇಲ್ಲವಾಗಿದೆ. ಸಾಂಬರು ರುಚಿ ಇರದ ಬಗ್ಗೆ ಗ್ರಾಹಕರು ಕೇಳಿದರೆ `ಬೇಕಾದರೆ ತಿನ್ನಬಹುದು, ಇಲ್ಲವಾದರೆ ನಡೆಯಿರಿ’ ಎಂಬ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂಬ ದೂರು ಕೇಳಿ ಬಂದಿದೆ. ಅಡುಗೆಗೆ ಬಳಸುವ ಆಹಾರ ಪದಾರ್ಥಗಳು ಕಡಿಮೆ ಬೆಲೆಗೆ ಕೊಳ್ಳಲಾಗುತ್ತಿದ್ದು, ಅತ್ಯಂತ ಕಳಪೆ ಗುಣಮಟ್ಟದ ಪದಾರ್ಥಗಳನ್ನು ಬಳಸಿ ಗ್ರಾಹಕರಿಗೆ…
ಚಿಕ್ಕನಾಯಕನಹಳ್ಳಿ; ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ಅಲರ್ಜಿ ಔಷಧಿ ಕುಡಿದ ವಿದ್ಯಾರ್ಥಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ ಪಟ್ಟಣದ ಹೊರವಲಯದಲ್ಲಿರುವ ಮೇಲ್ನಳ್ಳಿ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಧನುಷ್ ಎಂದು ತಿಳಿದುಬಂದಿದೆ ಇAದು ಬೆಳಿಗ್ಗೆ ರೂಮ್ನಲ್ಲಿ ತನ್ನ ಸಹಪಾಠಿಯ ತಿನ್ನಲು ತಂದಿಟ್ಟುಕೊAಡಿದ್ದ ಚಿಪ್ಸನ್ನು ಧನುಷ್ ತಿಂದ ಪರಿಣಾಮ ಅವನ ಸ್ನೇಹಿತ ಈ ವಿಷಯವನ್ನು ಪ್ರಾಂಶುಪಾಲರ ಗಮನಕ್ಕೆ ತರುತ್ತೇನೆ ಎಂದು ಸಹಪಾಠಿ ಮತ್ತೊಬ್ಬ ವಿದ್ಯಾರ್ಥಿ ಹೇಳಿದರ ಪರಿಣಾಮ ಈ ವಿದ್ಯಾರ್ಥಿಗೆ ಭಯಪಟ್ಟು ಮೈ ಅಲರ್ಜಿಗೆ ತಂದಿಟ್ಟುಕೊAಡಿದ್ದ ಬೇರೆ ವಿದ್ಯಾರ್ಥಿಯ ಔಷಧಿಯನ್ನು ಈತ ಕುಡಿದ ಪರಿಣಾಮ ಯಾರಿಗೂ ತಿಳಿಸದೆ ಬೆಳಗ್ಗಿನ ತಿಂಡಿ ಮಧ್ಯಾಹ್ನದ ಊಟ ಸೇವಿಸಿದ ಪರಿಣಾಮ ಸಂಜೆ 4:00 ಹೊತ್ತಿಗೆ ಅವನ ದೇಹ ಅಸ್ವಸ್ಥ ಗೊಂಡಿದೆ ಅದಕ್ಕೆ ಕೂಡಲೇ ಧನುಷ್ ಎಂಬ ವಿದ್ಯಾರ್ಥಿಯನ್ನು ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿ ವಿದ್ಯಾರ್ಥಿಯ ಪೋಷಕರಿಗೂ ತಿಳಿಸಲಾಗಿದೆ ವಿದ್ಯಾರ್ಥಿ ಪರೀಕ್ಷಿಸಿದ ವೈದ್ಯ ಡಾ. ಉಮೇಶ್ ಕುಡಿದ ಒಂದು…











