Author: News Desk Benkiyabale

ತುಮಕೂರು: ತೀವ್ರ ಕುತೂಹಲ ಮೂಡಿಸಿದ್ದ ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ತುಮುಲ್) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪಾವಗಡ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ವಿ. ವೆಂಕಟೇಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕ ವೆಂಕಟೇಶ್ 2 ನಾಮಪತ್ರ ಹಾಗೂ ಎನ್‌ಡಿಎ ಅಭ್ಯರ್ಥಿಯಾಗಿ ಎಸ್.ಆರ್. ಗೌಡ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 12 ಗಂಟೆಯಾದರೂ ಯಾರು ನಾಮಪತ್ರವನ್ನು ಹಿಂಪಡೆಯದ ಕಾರಣ ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಚುನಾವಣೆ ಪ್ರಕ್ರಿಯೆ ಮುಂದುವರೆಸಿದರು. ನಂತರ ಗೌಪ್ಯ ಮತದಾನ ನಡೆಯಿತು. ಶಾಸಕ ಹೆಚ್.ವಿ.ವೆಂಕಟೇಶ್ ಅವರ ಪರವಾಗಿ 9 ಮತಗಳು, ಎಸ್.ಆರ್.ಗೌಡ ಪರವಾಗಿ 5 ಮತಗಳು ಚಲಾವಣೆಗೊಂಡ ಹಿನ್ನೆಲೆಯಲ್ಲಿ ಶಾಸಕ ವೆಂಕಟೇಶ್ ಅವರು ತುಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು. ತುಮಕೂರು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಗದ್ದುಗೆಗೇರಲು ತೀವ್ರ ಪೈಪೋಟಿಯೇ ನಡೆದಿತ್ತು. ಆದರೆ ಇತ್ತೀಚೆಗೆ ನಡೆದ ಅಚ್ಚರಿ ಬೆಳವಣಿಗೆಯಲ್ಲಿ ಪಾವಗಡ…

Read More

ತುಮಕೂರು : ತುಮ ಕೂರು ವಿಶ್ವವಿದ್ಯಾನಿಲಯವು ಎಂಎಸ್ಸಿ ಪದವೀಧರೆ ಸ್ವಾತಿ ಬಿ.ಎನ್.ರವರಿಗೆ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ. ತುಮಕೂರು ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಡಾ. ಎಚ್ ನಾಗಭೂಷಣ್ ರವರ ಮಾರ್ಗದರ್ಶನದಲ್ಲಿ Enhancement of Lumine scence properties of Rare earth Doped phosphors for multi functional Applications ಎಂಬ ವಿಷಯದ ಬಗ್ಗೆ ಸ್ವಾತಿ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ತುಮಕೂರು ವಿವಿಯು ಪಿಎಚ್‌ಡಿ ಪದವಿ ನೀಡಿದೆ.

Read More

ತುಮಕೂರು; ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸರ್ಕಾರವೇ 2018 ರಿಂದ ಕನಿಷ್ಟ ವೇತನ ಮತ್ತು ಪ್ರತಿ ವರ್ಷದ ಏಪ್ರೀಲ್ ತಿಂಗಳಿAದ ಹೆಚ್ಚಾಗುವ ವಿ.ಡಿ.ಎ.ತುಟ್ಟಿ ಭತ್ಯೆಯನ್ನು ಸೇರಿಸಿ ವರ್ಷದ 3ತಿಂಗಳಿಗೆ ಒಮ್ಮೆ ಒಟ್ಟಿಗೆ 3 ತಿಂಗಳ ವೇತನವನ್ನು ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಖಾತೆಗೆ ಬಿಡುಗಡೆ ಮಾಡುತ್ತದೆ.ಬಿಡುಗಡೆಯಾದ ವೇತನದ ಮೂತ್ತದಲ್ಲಿ ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಂಖ್ಯೆಗೆ ಅನುಗುಣವಾಗಿ ಹಣ ನೀಡದೆ ಇರುವದರಿಂದ ಸಿಬ್ಬಂದಿಗಳಿಗೆ ವರ್ಷದಲ್ಲಿ ಕೆಲವು ತಿಂಗಳುಗಳ ವೇತನ ಬಾಕಿ ಉಳಿದಿವೆ. 2018 ಕ್ಕೆ ಮೊದಲು ಗ್ರಾಮ ಪಂಚಾಯತಿಗಳೇ ಸರಿಯಾಗಿ ವೇತನ ಬಾಕಿ ಇದೆ. ಈ ಸಂಬAದ ಆರ್.ಡಿ.ಪಿ.ಆರ್ ಮತ್ತು ಆಯುಕ್ತಾಲಯದ ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ತಂದರು ಮೂಲ ಇಲಾಖೆಯ ಸಿಬ್ಬಂದಿಗಳ ಈ ಬಾಕಿ ವೇತನದ ಬಗ್ಗೆ ಮಲತಾಯಿ ದೋರಣೆ ತಾಳಿವೆ. ಅದರೆ ಅನ್ಯ ಇಲಾಖೆಯ (ಗ್ರಂಥಾಲಯ ಮೇಲ್ವಿಚಾರಕರಿಗೆ) ಸಬ್ಬಿಂದಿಗಳಿಗೆ ವೇತನ ಪಾವತಿಸಲು ಗ್ರಾಮಪಂಚಾಯಿತಿಗಳಲ್ಲಿ ವಸೂಲಿಯಾದ ತೆರಿಗೆಯ ಹಣದಿಂದ ಗ್ರಾಂಥಾಲಯ ಸಿಬ್ಬಂದಿಗಳ ಖಾತೆಗೆ ನೇರವಾಗಿ ಹಣ ಹಾಕುವಂತೆ…

Read More

ತುಮಕೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಗಂಗಾಮತಸ್ಥರ ಸಂಘದವತಿಯಿAದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಹಾಗೂ ರಾಷ್ಟಿçÃಯ ದಾಸೋಹ ದಿನವನ್ನು ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅಂಬಿಗರ ಚೌಡಯ್ಯ ಹಾಗೂ ಡಾ.ಶ್ರೀಶಿವಕುಮಾರಸ್ವಾಮೀಜಿಗಳ ಭಾವಚಿತ್ರಗಳಿಗೆ ಪುಪ್ಪ ನಮನ ಸಲ್ಲಿಸುವ ಮೂಲಕ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಚಾಲನೆ ನೀಡಿದರು.ಈ ವೇಳೆ ಮಾತನಾಡಿದ ಅವರು, ಕಾಯಕವನ್ನೇ ಪೂಜೆ ಎಂದು ನಂಬಿದ್ದ ಅಂಬಿಗರ ಚೌಡಯ್ಯ,ಅದರಲ್ಲಿಯೇ ದೇವರನ್ನು ಕಂಡವರು.ಪೂಜೆ, ಜಪ,ತಪದ ಹೆಸರಿನಲ್ಲಿ ನಡೆಯವ ಆಡಂಬರಗಳನ್ನು ಕಟುವಾಗಿ ತಮ್ಮ ವಚನಗಳಲ್ಲಿ ಟೀಕಿಸಿದ್ದ ಅಂಭಿಗರ ಚೌಡಯ್ಯ, ತಾವು ಮಾಡುವ ಕಾಯಕವೇ ದೇವನಿಗೆ ಅರ್ಪಣೆ ಎಂಬAತೆ ಜೀವನದುದ್ದಕ್ಕೂ ಬದುಕಿದ ಮಹಾಪುರುಷರು.ಇವರ ಈ ಕಾಂiÀiಕ ನಿಷ್ಠೆಯನ್ನು ಮೆಚ್ಚಿ ಅವರನ್ನು ನಿಜ ಶರಣ ಎಂಬ ಬಿರುದಿನಿಂದ ಕರೆಯಲಾಗುತಿತ್ತು ಎಂದರು. ಅAಬಿಗರ ಚೌಡಯ್ಯನವರು ತಮ್ಮ ವಚನಗಳಲ್ಲಿ ಜನರ ನಡುವೆ ಯಾವ ರೀತಿಯ ಸಾಮರಸ್ಯ ಇರಬೇಕೆಂದರೆ ಕುರುಡಿನಿಗೆ ಕಿವಿಯಿದ್ದವ ಜೊತೆಯಾದಂತೆ ಪರಸ್ವರ ಅವಲಂಬಿತರಾಗಿ ಬದುಕುಬೇಕು…

Read More

ತುಮಕೂರು: ಲೋಕಕಲ್ಯಾಣಕ್ಕಾಗಿ ದಣಿವರಿಯದೆ ತಮ್ಮ ಬದುಕನ್ನೇ ಮುಡುಪಾಗಿಟ್ಟು ಸಿದ್ದಗಂಗೆಯನ್ನು ಅಕ್ಷರಶಃ ಶಿಕ್ಷಣ ಕಾಶಿಯನ್ನಾಗಿಸಿ ವಿಶ್ವ ವಿಖ್ಯಾತಗೊಳಿಸಿದ ತ್ರಿವಿಧ ದಾಸೋಹಿ, ಕಾಯಕ ಯೋಗಿ, ನಡೆದಾಡುವ ದೇವರು ಎಂದೇ ನಾಡಿನ ಉದ್ದಗಲಕ್ಕೂ ಪ್ರಸಿದ್ದರಾಗಿದ್ದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 6ನೇ ಪುಣ್ಯ ಸ್ಮರಣೆಯನ್ನು ಸಿದ್ದಗಂಗೆಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಆಚರಿಸಲಾಯಿತು. ಶ್ರೀಕ್ಷೇತ್ರದಲ್ಲಿ ನಡೆದ ಶ್ರೀಗಳ 6ನೇ ಪುಣ್ಯ ಸಂಸ್ಮರಣೋತ್ಸವಕ್ಕೆ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮೇಘಾಲಯ ರಾಜ್ಯಪಾಲರಾದ ಸಿ.ಹೆಚ್. ವಿಜಯಶಂಕರ್, ಕೇಂದ್ರ ಸಚಿವ ವಿ. ಸೋಮಣ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕರಾದ ಜ್ಯೋತಿಗಣೇಶ್, ಬಿ. ಸುರೇಶ್‌ಗೌಡ ಸೇರಿದಂತೆ ವಿವಿಧ ಮಠಾಧೀಶರುಗಳು, ಹರಗುರುಚರಮೂರ್ತಿಗಳು ಹಾಗೂ ಸಹಸ್ರಾರು ಭಕ್ತ ಸಮೂಹ ಶ್ರೀಗಳ ಗದ್ದುಗೆ ದರ್ಶನ ಪಡೆದು ಸಾಕ್ಷಿಯಾದರು. ಲಿಂ. ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಐಕ್ಯರಾಗಿರುವ ಶಿವಯೋಗಿ ಮಂದಿರದ ಗದ್ದುಗೆಯಲ್ಲಿ ನಸುಕಿನಿಂದಲೇ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ವೇದ ಘೋಷಗಳು ಮೊಳಗಿದವು. ಶ್ರೀಗಳ 6ನೇ ಪುಣ್ಯಾರಾಧನೆ ಪ್ರಯುಕ್ತ ಶ್ರೀಗಳು ಐಕ್ಯ ರಾಗಿರುವ…

Read More

ತುಮಕೂರು : ಅಭಿವೃದ್ಧಿಯ ಹೆಸರಿನಲ್ಲಿ ಜಿಲ್ಲೆಯ ಸಾವಿರಾರು ಕೋಟಿ ರೂಪಾಯಿ ಬೆಲೆ ಬಾಳುವ ಗೋಮಾಳ ಮತ್ತು ಅರಣ್ಯ ಭೂಮಿಯನ್ನು ಗ್ರಾಮ ಪಂಚಾಯಿತಿಗಳ ಪಿಡಿಒಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಹಾಗೂ ತಾಲ್ಲೂಕಿನ ಆಡಳಿತ ಸರ್ವನಾಶಕ್ಕೆ ಮುಂದಾಗಿದ್ದು, ವಿದ್ಯುತ್ ಸರಬರಾಜು ಕಂಪನಿಯ ವಿವಿಧ ಯೋಜನೆಗೆ ಜಿಲ್ಲೆಯ ಗೋಮಾಳಗಳಲ್ಲಿರುವ ಸಾವಿರಾರು ಮರಗಳನ್ನು ಮಾರಣ ಹೋಮ ನಡೆಸಲು ಮುಂದಾಗಿದ್ದು, ಇದನ್ನು ಕೂಡಲೇ ಕೈ ಬಿಡಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷ ಜ್ಞಾನಸಿಂಧುಸ್ವಾಮಿ ಒತ್ತಾಯಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ವಿದ್ಯುತ್ ಸರಬರಾಜು ಕಂಪನಿಯು ಜಿಲ್ಲೆಯ ವಿವಿಧ ತಾಲಕು ವ್ಯಾಪ್ತಿಯಲ್ಲಿ ಸೌರ ಶಕ್ತಿ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಿದ್ದು, ಅದಕ್ಕಾಗಿ ಅಗತ್ಯವಾಗಿ ಬೇಕಿರುವ ಸಾವಿರಾರು ಎಕರೆ ಭೂಮಿಯನ್ನು ಸ್ಥಳೀಯ ಆಡಳಿತಗಳಿಂದ ಪಡೆಯಲು ಮುಂದಾಗಿದೆ. ಅಲ್ಲದೇ ಗೋಮಾಳಗಳನ್ನೇ ಗುರಿ ಮಾಡಿಕೊಂಡಿರುವ ವಿದ್ಯುತ್ ಕಂಪನಿ ಗೋಮಾಳ ಜಾಗದಲ್ಲಿರುವ ನೂರಾರು ವರ್ಷಗಳ ಸಾವಿರಾರು ಮರಳನ್ನು ತೆರವು ಮಾಡಿ ಆ ಜಾಗದಲ್ಲಿ ಸೌರಪ್ಲೇಟ್ ಗಳನ್ನು ಅಳವಡಿಸಲು ಈಗಾಗಲೇ…

Read More

ತುರುವೇಕೆರೆ: ತಾಲ್ಲೂಕಿನ ಕಸಬಾ ವ್ಯಾಪ್ತಿಯ ನೀರಗುಂದ ಗ್ರಾಮದ ಸಂಪರ್ಕ ರಸ್ತೆಗೆ ಸೇತುವೆ ಮತ್ತು ರಸ್ತೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ನೀರಗುಂದ, ಅಜ್ಜೇನಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಲೋಕಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್. ಅಲ್ಲಪ್ಪ ಮಾತನಾಡಿ ಗ್ರಾಮದಲ್ಲಿರುವ ಕೆರೆಯ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಹತ್ತಾರು ವರ್ಷಗಳಿಂದ ಈ ರಸ್ತೆಯನ್ನು ದುರಸ್ಥಿ ಪಡಿಸಿ, ಸೇತುವೆ ನಿರ್ಮಾಣ ಮಾಡಿ ಎಂದು ಸಾಕಷ್ಟು ಬಾರಿ ಶಾಸಕರಿಗೂ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜವಿಲ್ಲದಾಗಿದೆ. ಜನರು ಓಡಾಡಲೂ ಕಷ್ಟವಾಗುತ್ತಿದೆ. ರಸ್ತೆ ತುಂಬಾ ನೀರು ನಿಂತಿರುತ್ತದೆ. ಗುಂಡಿಗಳು ತುಂಬಿವೆ. ಮಳೆಗಾಲದಲ್ಲಂತೂ ಇಲ್ಲಿ ಓಡಾಡುವುದು ಕಷ್ಟಕರ. ಮುನ್ನೂರು ಮೀಟರ್ ದೂರ ಕ್ರಮಿಸುವ ರಸ್ತೆ ಸರಿಯಿಲ್ಲದ ಕಾರಣ ಬಳಸಿಕೊಂಡು ಸುಮಾರು ಐದು ಕಿಮೀ ದೂರ ಹೋಗಬೇಕಿದೆ. ಎಂದು ತಿಳಿಸಿದರು. ರಸ್ತೆ ಮತ್ತು ಸೇತುವೆ ನಿರ್ಮಾಣ ಮಾಡದಿದ್ದಲ್ಲಿ ತುರುವೇಕೆರೆಯಿಂದ ಕೆಬಿ ಕ್ರಾಸ್ ಕಡೆ ತೆರಳುವ ರಾಜ್ಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ಮಾಡುವುದು ಅನಿವಾರ್ಯವಾಗಲಿದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಲೋಕಮ್ಮನಹಳ್ಳಿ…

Read More

ಮಧುಗಿರಿ: ಜಿಲ್ಲೆಯ ಪ್ರತಿಷ್ಠಿತ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ(ತುಮುಲ್) ಅಧ್ಯಕ್ಷಗಾದಿಗೆ ಜ.22ರಂದು ಚುನಾವಣೆ ನಡೆಯಲಿದ್ದು, ಸ್ಪಷ್ಟ ಬಹುಮತ ಹೊಂದಿರುವ ಕಾಂಗ್ರೆಸ್‌ಗೆ ಚುಕ್ಕಾಣಿ ಹಿಡಿಯುವುದು ಖಚಿತವಾಗಿದೆ. ಆದರೂ ಇದೇ ಕಾರಣಕ್ಕೆ ಪ್ರಭಾವಿ ಶಾಸಕರ ನಡುವೆಯೇ ಮುಸುಕಿನ ಗುಡ್ಡಾಟ ನಡೆಯುತ್ತಿದೆ. ಸಹಕಾರ ಸಂಘಗಳ ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕ ಸ್ಥಾನ ಅಯ್ಕೆಯಾದ 15 ದಿನದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಯಬೇಕಿದ್ದು, ಜ.24ರೊಳಗೆ ತುಮುಲ್‌ಗೆ ಹೊಸ ಸಾರಥಿ ಆಯ್ಕೆಯಾಗಬೇಕಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಘೋಷಿಸಲಾಗಿದೆ. ಉಪವಿಭಾಗಾಧಿಕಾರಿ ತುಮಕೂರು ಗೌರವ್ ಕುಮಾರ್ ಚುನಾವಣಾಧಿಕಾರಿಯಾಗಿದ್ದಾರೆ. 1324 ಹಾಲು ಉತ್ಪಾದಕರ ಸಂಘಗಳನ್ನು ಹೊಂದಿರುವ ‘ತುಮುಲ್’ನಲ್ಲಿ ಈ ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ 1. ತುಮುಲ್ ಹಿಡಿತ ಕಾಂಗ್ರೆಸ್ ಪಕ್ಷ ಕಸರತ್ತು; -ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು. ಈ ಬಾರಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಜಿಲ್ಲೆಯವರೇ ಆಗಿರುವುದ ರಿಂದ ‘ತುಮುಲ್’ ಚುನಾವಣೆ ಸಾಕಷ್ಟು ಕುತೂಹಲ ಪಡೆದುಕೊಂಡಿದೆ. ತುಮುಲ್ ಅನ್ನು ‘ಕೈ’ ತೆಕ್ಕೆಗೆ ತೆಗೆದುಕೊಳ್ಳಲು ರಾಜಣ್ಣ ಈಗಾಗಲೇ ದಾಳ ಉರುಳಿಸಿದ್ದಾರೆ…

Read More

ಹುಳಿಯಾರು: ಹುಳಿಯಾರಿನ ಕೇಶವ ವಿದ್ಯಾ ಮಂದಿರ ಶಾಲೆಯಲ್ಲಿ ವಿಶೇಷವಾಗಿ ಗೋಮಾತೆ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಶಾಲಾ ಅಧ್ಯಕ್ಷರಾದ ಟಿ.ಜಯಣ್ಣನವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಶ್ರಮಿಕ ಸಂಸ್ಕöÈತಿ ಕಡಿಮೆಯಾಗುತ್ತಾ ಬರುತ್ತಿದ್ದು ಬರೀ ಯಾಂತ್ರಿಕ ವಿಧಾನ ಉಂಟಾಗಿ ಸಂಸ್ಕöÈತಿ ನಾಶದತ್ತ ಸಾಗುತ್ತಿದೆ ಹಾಗೂ ಕರ್ನಾಟಕ ಸಂಸ್ಕöÈತಿಯು ಅವನತಿ ಹತ್ತಿರ ಹೋಗುತ್ತಿದೆ. ಈ ನಿಟ್ಟಿನಲ್ಲಿ ಕೇಶವ ವಿದ್ಯಾ ಮಂದಿರ ಶಾಲೆಯಲ್ಲಿ ಸಂಸ್ಕöÈತಿಯನ್ನು ಬಿಂಬಿಸುವAತಹ ಕಾರ್ಯಕ್ರಮವನ್ನು ಶಿಕ್ಷಕ ಮಿತ್ರರು ಪ್ರತಿವರ್ಷ ಆಚರಣೆ ಮಾಡುತ್ತಿರುವುದು ಶ್ಲಾಘಿನೀಯ ಎಂದರು. ನಿವೃತ್ತ ಉಪನ್ಯಾಸಕ ಶ್ರೀಕಂಠಮೂರ್ತಿರವರು ಮಾತನಾಡಿ ಪ್ರಕೃತಿಯಲ್ಲಿ ಬದಲಾವಣೆ ಅನಿವಾರ್ಯ. ಇನ್ನು ಮುಂದೆ ಕತ್ತಲು ಕಡಿಮೆ ಬೆಳಕು ಜಾಸ್ತಿ ಎಂದು ತಿಳಿಸಿದರಲ್ಲದೆ ಇತ್ತೀಚಿನ ದಿನಗಳಲ್ಲಿ ನಾಟಿ ಹಸು, ಕಣ ಎಲ್ಲವೂ ಮರೆಯಾಗಿ ಯಂತ್ರದ ಮೇಲೆ ರೈತರು ಅವಲಂಬಿಸಿದ್ದಾರೆ. ಕೃಷಿ ಬಗ್ಗೆ ತಾತ್ಸಾರ ಮೂಡಿದೆ. ಗೋಪೂಜೆ ಮಾಡುವ ಮೂಲಕ ಕೃಷಿಯಲ್ಲಿ ಗೋವಿನ ಮಹತ್ವ ತಿಳಿಸುವ ಪ್ರಯತ್ನ ಸ್ವಾಗತಾರ್ಹ ಎಂದರು. ಈಶ್ವರಯ್ಯನವರು ಮಾತನಾಡಿ ಗೋಪೂಜೆಯು ತುಂಬಾ ಶ್ರೇಷ್ಠವಾದ ಪೂಜೆ ಅಷ್ಟ ದೇವತೆಗಳನ್ನು ಕೂಡ…

Read More

ತುಮಕೂರು: ಮಾಧ್ಯಮ ಕ್ಷೇತ್ರ ಇಂದು ಬೃಹದಾಕಾರವಾಗಿ ಬೆಳೆದಿದ್ದು ಕ್ಷಣ ಕ್ಷಣದ ಸುದ್ದಿಗಳನ್ನು ಕಣ್ಮುಂದೆ ತರುವಂತಹ ತಾಂತ್ರಿಕ ವ್ಯವಸ್ಥೆಗಳು ಬಂದಿರುವ ಕಾಲಘಟ್ಟದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುವ ಪತ್ರಕರ್ತರು ಪ್ರಜಾಪ್ರಭುತ್ವದ ಆಶಯಗಳು ಸವಿಂಧಾನದ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸುದ್ದಿಗಳನ್ನು ಬರೆಯಬೇಕು ಸುದ್ದಿ ನೀಡುವ ಬರದಲ್ಲಿ ಸತ್ಯವನ್ನು ಮರೆಮಾಚಿ ಊಹಾಪೋಹದ ಸುಳ್ಳು ಸುದ್ದಿಗಳನ್ನು ನೀಡಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು. ತುಮಕೂರು ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 39ನೇ ರಾಜ್ಯಮಟ್ಟದ ಪತ್ರಿಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅಂದು ಅಂಬೇಡ್ಕರ್ ಮತ್ತು ಗಾಂಧಿಯವರು ಪತ್ರಿಕೋದ್ಯಮದ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ ಅವರುಗಳಿಂದ ಪ್ರೇರಣೆಯಾದ ನಾವುಗಳು ಮೌಲ್ಯಯುತ ಸುದ್ದಿಗಳನ್ನು ಜನರಿಗೆ ನೀಡಬೇಕು ಸತ್ಯವಾದ ಘಟನೆಯನ್ನು ಪರಿಶೀಲಿಸಿ ಪರಮರ್ಶೆ ಮಾಡಿ ಸುಳ್ಳು ಸುದ್ದಿಗಳಿಗೆ ಆಸ್ಪದ ನೀಡದೆ ಜನರಿಗೆ ನೈಜ್ಯವಾದ ವರದಿಯನ್ನು ನೀಡಬೇಕು ಪತ್ರಕರ್ತರು ಸರ್ಕಾರಗಳನ್ನು ಟೀಕೆ ಮಾಡುವ ಭರದಲ್ಲಿ…

Read More