ತುಮಕೂರು: ಯುವಜನರು, ಅದರಲ್ಲಿಯೂ ಹೆಣ್ಣು ಮಕ್ಕಳು ಓದುವ ಸಮಯದಲ್ಲಿ ಇನ್ನಿಲ್ಲದ ಆಕರ್ಷಣೆಗೆ ಒಳಗಾಗಿ, ದಾರಿ ತಪ್ಪಿದರೆ, ಬದುಕಿನದ್ದಕ್ಕೂ ಸಂಕಷ್ಟದ ಜೀವನ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಶ್ರೀಮತಿ ನೂರುನ್ನಿಸಾ ಎಚ್ಚರಿಸಿದ್ದಾರೆ. ನಗರದ ಮಳೆಕೋಟೆಯ ಧಾನಿಶ್ ಸಭಾಂಗಣದಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,ತೆಹ್ರಿರಿಕ್‌ಎ ಉರ್ದು ಆದಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೌಲಾನ ಅಬ್ದುಲ್ ಕಲಾಂ ಆಜಾದ್ ಶಾಲೆಯ ಮಕ್ಕಳಿಗೆ ಹಮ್ಮಿಕೊಂಡಿದ್ದ ಪರೀಕ್ಷಾ ಪೂರ್ವ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಮೊಬೈಲ್, ಇನ್ನಿತರ ಅಕರ್ಷಣೆಗಳಿಂದ ದೂರವಿದ್ದು,ವಿದ್ಯಾರ್ಥಿ ಜೀವನವನ್ನು ಸದುಪಯೋಗ ಪಡಿಸಿಕೊಂಡರೆ,ಸಾಧಕರ ಪಟ್ಟಿಯಲ್ಲಿ ನಿಲ್ಲಬಹುದು.ಇದಕ್ಕೆ ನನ್ನ ಜೀವನವೇ ಉದಾಹರಣೆ ಎಂದರು. ನಮ್ಮ ತಂದೆ, ತಾಯಿ, ನಮಗೆ ಬೇಕಾದನ್ನು ಕೊಡಿಸಲಿಲ್ಲ,ಒಳ್ಳೆಯ ಶಾಲೆಗೆ ಸೇರಿಸಲಿಲ್ಲ ಎಂದು ದೂರುವ ಬದಲು ಇರುವುದರಲ್ಲಿಯೇ ಕಷ್ಟಪಟ್ಟು ಓದಿ,ಒಳ್ಳೆಯ ಅಂಕ ಪಡೆದು,ಇರುವ ಅವಕಾಶಗಳನ್ನು ಬಳಸಿಕೊಂಡರೆ ನೀವು ಕೂಡ ನಮ್ಮಂತೆ ನ್ಯಾಯಾಧೀಶರೋ,ವಕೀಲರೋ,ಅಧಿಕಾರಿಗಳೋ ಆಗಬಹುದು.ಮನೆಯಲ್ಲಿ ಅಪ್ಪ, ಅಮ್ಮ ನಮಗೆ ಸಮಯ ನೀಡುತ್ತಿಲ್ಲ ಎಂದು ಸೊಷಿಯಲ್ ಮೀಡಿಯಾದಲ್ಲಿ…
Author: News Desk Benkiyabale
ತುಮಕೂರಿನ ಬಾರ್‌ಲೈನ್ ರಸ್ತೆಯಲ್ಲಿರುವ ಕೃಷ್ಣಮಂದಿರದಲ್ಲಿ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ 5ನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ವಿಶೇಷ ಹೋಮ-ಪೂಜಾದಿಗಳು ನೆರವೇರಿದವು. ನಂತರ ಕೃಷ್ಣ ಮಂದಿರದ ಸೇರಿದಂತೆ ಜಯಪುರದ ಲಕ್ಷಿ÷್ಮ ದೇವಸ್ಥಾನ ಮುಂಭಾಗ ಹಾಗೂ ಮೈದಾಳದ ಶಿವಶೈಕ್ಷಣಿಕ ಅನಾಥಾಶ್ರಮದ ಮುಂಭಾಗ ಅನ್ನಸಂತರ್ಪಣೆ ನಡೆಸಲಾಯಿತು.
ತುಮಕೂರು: ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರಿಗೆ ಶನಿವಾರ ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವೆ ನಾಹಿದಾ ಜûಮ್ ಜûಮ್, ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್ ಉಪಸ್ಥಿತರಿದ್ದರು. ಸ್ವಾಮೀಜಿ ಅವರಿಗೆ ತುಮಕೂರು ವಿವಿಯ 17ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿತ್ತು. ಅನಿವಾರ್ಯ ಕಾರಣಗಳಿಂದ ಸ್ವಾಮೀಜಿ ಅವರು ಘಟಿಕೋತ್ಸವದಲ್ಲಿ ಭಾಗವಹಿಸಿರಲಿಲ್ಲ. ಗೌರವ ಡಾಕ್ಟರೇಟ್ ಸ್ವೀಕರಿಸಿ ಮಾತನಾಡಿದ ಪ್ರಸನ್ನಾನಂದ ಸ್ವಾಮೀಜಿ, ಚುನಾವಣೆಯಲ್ಲಿ ತಳ ಸಮುದಾಯದ ಮತಗಳನ್ನು ಪಡೆಯುವ ಪಕ್ಷಗಳು, ಚುನಾವಣೆಯ ನಂತರ ಆ ಸಮುದಾಯಗಳಿಗೆ ನೀಡಿದ ಭರವಸೆಗಳನ್ನು, ಹಿತವನ್ನು ಮರೆಯುತ್ತಾರೆ. ರಾಜಕೀಯ ಇಚ್ಛಾಶಕ್ತಿ ಹಾಗೂ ಅಸಂಘಟನೆಯ ಕೊರತೆಯಿಂದಾಗಿ ಮೀಸಲಾತಿ ಸರಿಯಾದ ಪ್ರಮಾಣದಲ್ಲಿ ಹಂಚಿಯಾಗುತ್ತಿಲ್ಲ. ನೀತಿಯಿಂದ ಮನುಷ್ಯನ ವ್ಯಕ್ತಿತ್ವವನ್ನು ಅಳೆದಾಗ ಸಮ ಸಮಾಜ ರೂಪುಗೊಳ್ಳಲಿದೆ ಎಂದರು. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ಪ್ರಸನ್ನಾನಂದ ಸ್ವಾಮೀಜಿ ಅವರು ಗದಗ ಜಿಲ್ಲೆಯ ಹಿರೇಮಣ್ಣೂರಿನವರು. ಶಾಲಾ ವಿದ್ಯಾಭ್ಯಾಸ…
ತುಮಕೂರು: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಉಪಾಧ್ಯಕ್ಷರನ್ನಾಗಿ ತುಮಕೂರಿನ ಜ್ಞಾನ ಸಿಂಧು ಸ್ವಾಮಿ ಅವರನ್ನು ಆಯ್ಕೆ ಮಾಡಿ ಕೆ ಆರ್ ಎಸ್ ಪಕ್ಷದ ಕಾರ್ಯಕಾರಿ ಸಮಿತಿ ಆದೇಶ ಹೊರಡಿಸಿದೆ. ಪಕ್ಷವೂ ಮುಂಬುರವ ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹೆಚ್ಚಿನ ಕಾರ್ಯಕ್ಷಮತೆಯಿಂದ ಕೆಲಸ ನಿರ್ವಹಣೆ ಮಾಡಲು ಪಕ್ಷದ ರಾಜ್ಯ ಕಾರ್ಯಕಾರಿ ಸಮಿತಿಯ ಪುನರಚನೆ ಕಾರ್ಯ ಕೈಗೊಂಡಿತ್ತು. ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹೆಸರು ಸೂಚಿಸಿ ಮತ ಹಾಕುವ ಪ್ರಕ್ರಿಯೆ ಯಲ್ಲಿ ಒಮ್ಮತದಿಂದ ರಾಜ್ಯ ಕಾರ್ಯದರ್ಶಿಯಾಗಿದ್ದ ಜ್ಞಾನಸಿಂಧುಸ್ವಾಮಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಪಕ್ಷದ ಬಲವರ್ಧನೆ, ಸಂಘಟನಾ ಚಾತುರ್ಯ, ನಾಯಕತ್ವ ಹಾಗೂ ವಿವಿಧ ಆಯಾಮಗಳಲ್ಲಿ ಮುಂದೆ ಇರುವ ಅವರನ್ನು ಪಕ್ಷವು ಉನ್ನತಮಟ್ಟಕ್ಕೆ ಆಯ್ಕೆ ಮಾಡುವ ಮೂಲಕ ಮತ್ತಷ್ಟು ಜವಾಬ್ದಾರಿ ಹಂಚಿದೆ. ಈ ಕುರಿತು ತುಮಕೂರಿನಲ್ಲಿ ಮಾತನಾಡಿದ ಜ್ಞಾನಸಿಂಧು ಸ್ವಾಮಿ ಅವರು, ಪಕ್ಷಕ್ಕೆ ದುಡಿದ ಪ್ರಾಮಾಣಿಕತೆಯನ್ನು ಗಮನಿಸಿ ಉಪಾಧ್ಯಕ್ಷ ಸ್ಥಾನಕ್ಕೇರಿಸಿ ಆಯ್ಕೆ ಮಾಡಿದ್ದು ಪಕ್ಷದಲ್ಲಿ ನನ್ನ ಜವಾಬ್ದಾರಿಯನ್ಮು…
ಹುಳಿಯಾರು: ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿ ಪುಲೆಯವರ 193 ನೇ ಜನ್ಮ ದಿನಾಚರಣೆಯನ್ನು ಹುಳಿಯಾರು ಪಟ್ಟಣ ಪಂಚಾಯ್ತಿಯ ಸೋಮಜ್ಜನಪಾಳ್ಯ ಶಾಲೆಯಲ್ಲಿ ಶುಕ್ರವಾರ ಆಚರಣೆ ಮಾಡಲಾಯಿತು. ಶಾಲಾ ಹಿರಿಯ ಶಿಕ್ಷಕಿಯಾದ ಓಂಕಾರಮ್ಮ ಹೆಚ್ ಸಿ ರವರು ಮಾತನಾಡಿ, ಸಾವಿತ್ರಿ ಬಾಯಿ ಪುಲೆಯವರು ಹೆಣ್ಣು ಮಕ್ಕಳಿಗೆ ಮೊದಲು ಅಕ್ಷರ ಬಿತ್ತಿದ ಅಕ್ಷರದವ್ವ. ತಳಸಮುದಾಯ ಹೆಣ್ಣು ಮಕ್ಕಳಿಗೆ 18 ಶಾಲೆಗಳನ್ನು ತೆರೆದು ಮೇಲುಜಾತಿ ಗಂಡಸರಿಗೆ ಮಾತ್ರ ಮೀಸಲಾಗಿದ್ದ ವಿದ್ಯೆಯನ್ನು ಹೆಣ್ಣು ಮಕ್ಕಳಿಗೆ ತಲುಪಿಸಿದವರು ಎಂದು ಹೇಳಿದರು. ಕೆಸರು, ಸಗಣಿ ಎರಚಿ ಕೇಕೆ ಹಾಕಿದ ಜನರೆದುರು ಹಠವಾದಿಯಾಗಿ ಅಕ್ಷರ ಕಾಯಕ ಮಾಡಿದರು. ಮುಸ್ಲಿಂ, ದಲಿತ, ಹಿಂದುಳಿದ ಹಾಗೂ ಬ್ರಾಹ್ಮಣ ವಿಧವೆಯರ ಮಕ್ಕಳಿಗೂ ಶಿಕ್ಷಣದ ಹಕ್ಕು ದೊರಕಿಸಿ ಕೊಡಲು ಮುನ್ನುಡಿ ಬರೆದ ಮಹಾ ತಾಯಿ. ಅಂದು ಪ್ಲೇಗ್ ಪೀಡಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾಗ ಅದೇ ರೋಗಕ್ಕೆ ತುತ್ತಾಗಿ ಅಸುನೀಗಿದರು. ಇವರ ಹೋರಾಟಕ್ಕೆ ಬೆಂಬಲವಾಗಿ ನಿಂತವರು ಅವರ ಪತಿ ಜ್ಯೋತಿ ಬಾಪುಲೆ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ…
ತುಮಕೂರು : ದೂರು ನೀಡಲು ಬಂದ ಮಹಿಳೆಯನ್ನು ಪುಸಲಾಯಿಸಿ ತನ್ನ ಕಚೇರಿಯಲ್ಲೇ ಲೈಂಗಿಕ ದೌರ್ಜನ್ಯವನ್ನು ಹೆಸಗಿದ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನವರು ವಿರುದ್ಧ ಭೀಮ್ ಆರ್ಮಿ ತುಮಕೂರು ಜಿಲ್ಲಾ ಘಟಕದ ವತಿಯಿಂದ ಇಂದು ಜಿಲ್ಲಾ ಪೊಲಿಸ್ ವರಿಷ್ಠಾಧಿ ಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾದ ಅಯ್ಯನಪಾಳ್ಯ ಶ್ರೀನಿವಾಸ ಮೂರ್ತಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡುತ್ತಾ ಮಹಿಳೆಯೊಬ್ಬರು ತಮ್ಮ ಜಮೀನು ವಿಚಾರವಾಗಿ ದೂರು ನೀಡಲು ಮಧುಗಿರಿ ಡಿ.ವೈ.ಎಸ್.ಪಿ. ಕಛೇರಿಗೆ ಆಗಮಿಸಿದ್ದಂತಹ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ರಾಮಚಂದ್ರಪ್ಪನವರು ಲೈಂಗಿಕ ದೌರ್ಜನ್ಯವನ್ನು ಮಾಡಿದ್ದಾರೆ ಎಂದು ಹೇಳಲಾಗಿ ಸುದ್ಧಿ ಪ್ರಸಾರವಾಗಿದ್ದ ಹಿನ್ನಲೆಯಲ್ಲಿ ಈ ಒಂದು ಅಮಾನುಷ ಘಟನೆಯಿಂದ ಪೊಲೀಸ್ ಇಲಾಖೆ ಮತ್ತು ವ್ಯವಸ್ಥೆಯ ಮೇಲೆ ಸಾರ್ವಜನಿಕರಿಗೆ ಬೇಸರ ಮೂಡಿಸಿರುವುದಲ್ಲದೇ, ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸ ಕಳೆದು ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ರಾಮಚಂದ್ರಪ್ಪನವರು ಪೊಲೀಸ್ ಇಲಾಖೆಯ ಉನ್ನತ ಹುದ್ದೆಯಾದ ಡಿ.ವೈ.ಎಸ್.ಪಿ. ಸ್ಥಾನದಲ್ಲಿದ್ದಾರೆ ತಮ್ಮ ಸನ್ನಿಧಾನಕ್ಕೆ ದೂರದ ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು…
ಹುಳಿಯಾರು: ಕೇಂದ್ರ ಸರ್ಕಾರದ ರಾಜ್ಯ ಸಚಿವ ವಿ.ಸೋಮಣ್ಣ ಅವರು ಹುಳಿಯಾರು ಹೋಬಳಿ ಮಟ್ಟದ ಸಾರ್ವಜನಿಕ ಕುಂದು ಕೊರತೆ ಸಭೆಯನ್ನು ಗುರುವಾರ ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ನಡೆಸಿದರು. ಈ ಸಭೆಯಲ್ಲಿ ಹುಳಿಯಾರಿನ ಯುವಕರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮಾಡುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ತಹಸೀಲ್ದಾರ್ ಕೆ.ಪುರಂದರ ಅವರಿಗೆ ಶೀಘ್ರ ಕನಿಷ್ಟ 1 ಎಕರೆ ಭೂಮಿ ಗುರುತಿಸಿ ಹಣ ಬಿಡುಗಡೆ ಮಾಡಿಸುತ್ತೇನೆ ಎಂದರು. ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯಲ್ಲಿ ಟ್ರೆöÊನಿಂಗ್ ಪಡೆದಿದ್ದರೂ ಸಹ ಬ್ಯಾಂಕ್‌ಗಳು ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಫಲಾನುಭವಿಗಳು ದೂರಿದರು. ಇದಕ್ಕೆ ಸಚಿವರು ಈಗಾಗಲೇ ಜಿಲ್ಲಾಧಿಕಾರಿಗಳ ಸಭೆ ಮಾಡಿದ್ದು ತರಬೇತಿ ಪಡೆದ ಎಲ್ಲರಿಗೂ ಲೋನ್ ಕೊಡಿಸಲು ತಿಳಿಸಿದ್ದೇನೆ. ಇನ್ನೊಂದು ವಾರದಲ್ಲಿ ಸಮಸ್ಯೆ ಪರಿಹಾರವಾಗಲಿದೆ ಎಂದರು. ರೈಲ್ವೆ ಇಲಾಖೆಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದೇನೆ. ಕೆಲಸ ಕೊಡಿಸಿ ಸಾರ್ ಎಂದು ಅನೇಕರು ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು ಸಚಿವರಲ್ಲಿ ಮನವಿ ಮಾಡಿದರು. ರೈಲ್ವೆ ಇಲಾಖೆಯಲ್ಲಿ ಈಗ ಮೊದಲಿನಂತೆ ನೇರ ನೇಮಕಾತಿ ಇಲ್ಲ.…
ಚಿಕ್ಕನಾಯಕನಹಳ್ಳಿ: ಜ.18 ಮತ್ತು 19 ರಂದು ಬೆಂಗಳೂರಿನಲ್ಲಿ ನಡೆಯುವ ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವದ ಮಹಾ ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಎಸ್. ರಾಘವೇಂದ್ರ ತಿಳಿಸಿದರು. ಪಟ್ಟಣದ ನಗರ ಬ್ರಾಹ್ಮಣ ಸಭಾದ ಉಪಾಧ್ಯಕ್ಷರಾದ ಕೆ.ಎಸ್. ಚಂದ್ರಶೇಖರಯ್ಯನವರ ಸ್ವಗೃಹದಲ್ಲಿ ನಡೆದ ಸಮಾಜಬಾಂಧವರ ಸಭೆಯಲ್ಲಿ ಮಾತನಾಡಿ ಜ.18 ಹಾಗೂ 19 ರಂದು ಬೆಂಗಳೂರನ ಅರಮನೆ ಮೈದಾನದ ತ್ರಿಪುರವಾಸಿನಿ ಸಭಾಂಗಣದಲ್ಲಿ 50ನೇವರ್ಷದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನ “ವಿಶ್ವಾಮಿತ್ರ” ನಡೆಯಲಿದೆ. ಸಮ್ಮೇಳನದ ಉದ್ಘಾಟನೆ ಹಾಗೂ ಲಕ್ಷ ಗಾಯತ್ರಿ ಹೋಮದ ಪೂರ್ಣಾಹುತಿ ಯನ್ನು ಶ್ರೀ ಶೃಂಗೇರಿ ಶಾರದಾಪೀಠಾಧೀಶ್ವರರಾದ ಶ್ರೀವಿದುಶೇಖರ ಭಾರತೀಸ್ವಾಮಿಗಳು ನೆರವೇರಿಸುವರು. ಎರಡು ದಿನಗಳ ಕಾಲ ನಡೆಯುವ ಈ ಭವ್ಯಸಮ್ಮೇಳನದಲ್ಲಿ ತ್ರಿಮತಸ್ಥ ಮಠಾಧೀಶರು ಭಾಗವಹಿಸುವರು. ವಿಚಾರ ಗೋಷ್ಠಿ, ವಿಪ್ರಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ವೇದಾಪಾರಾಯಣ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನಕ್ಕೆ ಲಕ್ಷಕ್ಕೂ ಮಿಗಿಲಾಗಿ ಸಮಾಜಬಾಂಧವರು ಭಾಗವಹಿಸಿಲಿದ್ದಾರೆ ಎಂದರು. ಎರಡು ದಿನದ ಈ ಸಮ್ಮೇಳನಕ್ಕೆ ತಾಲ್ಲೂಕು…
ಚಿಕ್ಕನಾಯಕನಹಳ್ಳಿ: ಶಂಬುಗಡಿಯಲ್ಲಿ 38ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ರೈತನಾಯಕ ಜಗತ್‌ಸಿಂಗ್ ದಲ್ಗೆöÊವಾಲಾ ರ ಬೇಡಿಕೆ ಈಡೇರಿಸಿ ಸತ್ಯಾಗ್ರಹವನ್ನು ಅಂತ್ಯಗೊಳಿಸಲು ಕೇಂದ್ರ ಸರ್ಕಾರ ತಕ್ಷಣ ಮುಂದಾಗಬೇಕೆAದು ರೈತಸಂಘ ಹಾಗೂ ಹಸಿರುಸೇನೆ ಸದಸ್ಯರು ಮನವಿ ಸಲ್ಲಿಸಿದರು. ತಾಲ್ಲೂಕು ರೈತಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆಯೊಂದಿಗೆ ತಾಲ್ಲೂಕು ಕಚೇರಿಗೆ ಮಹಾತ್ಮ ಗಾಂಧೀಜಿಯ ಭಾವಚಿತ್ರದೊಂದಿಗೆ ಕೆಲನಿಮಿಷಗಳ ಕಾಲ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷ ಸೀಬಿಲಿಂಗಯ್ಯ ಮಾತನಾಡಿ ಈ ಹಿಂದೆ ದೆಹಲಿಯಲ್ಲಿ ನಡೆದ ರೈತ ಚಳುವಳಿಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೆರಿಸುವ ಭರವಸೆಯನ್ನು ನೀಡಿತ್ತು. ಆದರೆ ಎರಡುವರ್ಷ ಕಳೆದರೂ ಲಿಖಿತ ಬೇಡಿಕೆಯಂತೆ ಎಂಎಸ್‌ಪಿಯನ್ನು ಕಾನೂನಾತ್ಮಕವಾಗಿ ಜಾರಿ ಮಾಡಲಿಲ್ಲ, ವಿದ್ಯುತ್‌ನ್ನು ಖಾಸಗೀಕರಣ ಮಾಡಬಾರದೆಂಬ ನಮ್ಮ ಬೇಡಿಕೆ ಈಡೆರಿಸದ ಕಾರಣ ಪುನಃ ಹರಿಯಾಣದ ಶಂಭು ಗಡಿಯಲ್ಲಿ ರೈತನಾಯಕ ಜಗತ್‌ಸಿಂಗ್ ದಲ್ಗೆöÊವಾಲಾರವರು ಉಪವಾಸ ಸತ್ಯಾಗ್ರಹ ಕೈಗೊಂಡು 38ದಿನಗಳು ಕಳೆದು ಜೀವನ್ಮರಣದ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್ ಕಳವಳವ್ಯಕ್ತಪಡಿಸಿ ಪಂಜಾಬ್ ಹಾಗೂ ಕೇಂದ್ರ ಸರ್ಕಾರಗಳು ತಕ್ಷಣ ಈ ಬಗ್ಗೆ…
ಹುಳಿಯಾರು: ಹುಳಿಯಾರು ಹೋಬಳಿಯ ಹೊಯ್ಸಳಕಟ್ಟೆಯಲ್ಲಿ ಮಹಿಳೆಯರಿಗೆ ಬುಧವಾರ ಯುವ ಉದ್ಯಮಿ ತರಬೇತಿ ಆರಂಭವಾಯಿತು. ನವದಿಶಾ ವತಿಯಿಂದ ಒಂದು ವಾರ ಕಾಲ ನಡೆಯುವ ತರಬೇತಿಯಲ್ಲಿ ಮಹಿಳೆಯರು ಬಯಸುವ ವಿವಿಧ ಉದ್ಯಮಗಳ ಬಗ್ಗೆ ತರತಿಯನ್ನು ನೀಡಲಾಗುವುದು. ತರಬೇತಿಯ ನಂತರ ಉದ್ಯಮ ಆರಂಭಿಸಲು ಆಕತ್ಯವಿರುವವರಿಗೆ ಹಣಕಾಸು ದೊರೆಯುವ ಸಂಸ್ಥೆ ಅಥವಾ ಸಬ್ಸಿಡಿ ಯೋಜನೆಯ ಬಗ್ಗೆ ಪೂರ್ಣ ಮಾಹಿತಿ ನೀಡಲಾಗುವುದು. ಉದ್ಯಮ ಆರಂಭಿಸಿದ ಮೇಲೆ ಉತ್ಪನ್ನಗಳ ಮಾರಾಟಕ್ಕೆ ಅಗತ್ಯ ಮಾರುಕಟ್ಟೆಯ ಸೌಲಭ್ಯದ ಬಗ್ಗೆ ಮಾಹಿತಿ ನೀಡಲಾಗುವುದು.ಮಹಿಳೆಯು ಯಶಸ್ವಿ ಉದ್ಯಮಿಯಾಗಲು ಅಗತ್ಯ ಮೂರು ವರ್ಷಗಳ ಕಾಲ ಅಗತ್ಯ ಮಾರ್ಗದರ್ಶನವನ್ನು ಪೂರೈಸಲಾಗುವುದು ಎಂದು ತರಬೇತುದಾರರಾದ ಅಶ್ವಿನಿ ಮತ್ತು ಸಿ.ಎಂ.ಎಸ್ ಗೌಡ ತಿಳಿಸಿದರು. ತರಬೇತಿಯನ್ನು ಉದ್ಘಾಟಿಸಿದ ಸೃಜನ ಮಹಿಳಾ ಸಂಘಟನೆಯ ಅಧ್ಯಕ್ಷೆ ಇಂದಿರಮ್ಮನವರು ಮಹಿಳೆಯರು ಉದ್ಯಮಿಯಾಗಿ ಆರ್ಥಿಕ ಸಬಲೀಕರಣ ಗೊಳ್ಳಬೇಕೆಂದರು. ಸುವರ್ಣ ವಿದ್ಯಾಚೇತನದ ರಾಮಕೃಷ್ಣಪ್ಪ ಮಹಿಳೆಯರಿಗೆ ಬದ್ಧತೆ ಆತ್ಮವಿಶ್ವಾಸ ಮತ್ತು ಜನರ ಒಡನಾಟ ಉದ್ಯಮಿಯಾಗಲು ಮುಖ್ಯ ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿ ಕೆಂಪಯ್ಯ ಮಾತನಾಡಿ ಪ್ರತಿಯೊಬ್ಬರಿಗೂ ವಿಶೇಷವಾದ ಶಕ್ತಿ ಮತ್ತು ಕುಶಲತೆ…











