ಹುಳಿಯಾರು: ಸಂಸತ್ ಚುನಾವಣೆಯಲ್ಲಿ ನಾನು ದಿಕ್ಕುತಪ್ಪಿದ್ದೆ. ಹೋದ ಕಡೆಯಲ್ಲ ನಾನು ಹೊರಗಿನವನು, ಗೆದ್ದ ಮೇಲೆ ಜಿಲ್ಲೆ ಕಡೆ ತಿರುಗಿ ನೋಡಲ್ಲ. ಹೀಗೆ ಒಂದೊAದು ಕಡೆ ಒಂದೊAದು ರೀತಿಯ ಜಾಪಾಳ್ ಮಾತ್ರೆ ಹಾಕುತ್ತಿದ್ದರು. ಈ ಅಪಪ್ರಚಾರಕ್ಕೆ ಕಿವಿ ಕೊಡದೆ ಪಕ್ಷ, ಜಾತಿ ನೋಡದೆ ಎಲ್ಲರೂ ಇವ ನಮ್ಮವ ಇವ ನಮ್ಮವ ಎಂದು ಮತ ಹಾಕಿದ್ದೀರಿ. ನಾನೂ ಕೂಡ ಜಾತಿ ಪಕ್ಷ ನೋಡದೆ ಜಿಲ್ಲೆಯ ಅಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದ್ದೇವೆ. ದೇಶದಲ್ಲೇ ತುಮಕೂರು ಜಿಲ್ಲೆಯನ್ನು ಮಾದರಿ ಮಾಡುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಕೇಂದ್ರ ಸರ್ಕಾರದ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು. ಹುಳಿಯಾರು ಅಂಬೇಡ್ಕರ್ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದುಕೊರತೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಇನ್ನೆರಡು ವರ್ಷದಲ್ಲಿ ಜಿಲ್ಲೆಯಲ್ಲಿ ಎಲ್ಲೂ ರೈಲ್ವೆ ಗೇಟ್ ಇಲ್ಲದಂತೆ ಮಾಡಿ ರೈಲು ಮತ್ತು ಇತರೆ ವಾಹನಗಳು ತಡೆರಹಿತವಾಗಿ ಓಡಾಡುವಂತೆ ಮಾಡತ್ತೇನೆ. ನೆನೆಗುದಿಗೆ ಬಿದ್ದಿರುವ ಜಿಲ್ಲೆಯಲ್ಲಿ ಹಾದು ಹೋಗುವ ರೈಲ್ವೆ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಿಸಿದ್ದೇನೆ. ನಿಂತಿರುವ ರಾಷ್ಟಿçÃಯ ಹೆದ್ದಾರಿ…
Author: News Desk Benkiyabale
ತಿಪಟೂರು: ಸರಗಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬoಧಿತರು ಅಸ್ಟರ್ ಅಲಿ ಮತ್ತು ಮತ್ತೊಬ್ಬ ಆರೋಪಿ ಮಹಾರಾಷ್ಟ್ರದ ಹೈದರ್ ಅಲಿ ಎಂಬಾತನನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತರಿoದ ಒಟ್ಟು 05 ಪ್ರಕರಣಗಳಲ್ಲಿ 7 ಲಕ್ಷ ರೂ ಬೆಲೆ ಬಾಳುವ 100 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ಹಾಗೂ 1 ಲಕ್ಷ ರೂ ಬೆಲೆ ಬಾಳುವ ಬಜಾಜ್ ಪಲ್ಸರ್ ಬೈಕ್‌ನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಡಿ. 17 ರಂದು ತಿಪಟೂರು ಟೌನ್ ಮಂಜುಳಮ್ಮ ಗಾರ್ಡನ್ ಏರಿಯಾ ವಾಸಿಯಾದ ವೆಂಕಟಮ್ಮ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಬೈಕ್ ನ ಹಿಂಬದಿ ಸವಾರ ಕಿತ್ತುಕೊಳ್ಳಲು ಹೋದಾಗ ಆಕೆ ಬಿಗಿಯಾಗಿ ಹಿಡಿದುಕೊಂಡಿದ್ದರಿoದ ಅರ್ಧ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುವ ಸಂಬoಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಈ ಪ್ರಕರಣಗಳ ಆರೋಪಿ ಮತ್ತು ಮಾಲನ್ನು ಪತ್ತೆ ಹಚ್ಚಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ ಮರಿಯಪ್ಪ, ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚನೆ ಮಾಡಿದ್ದು ತಂಡದಲ್ಲಿ ತಿಪಟೂರು ಉಪ ವಿಭಾಗದ ವಿನಾಯಕ ಎನ್ ಶೆಟಿಗೆರಿ…
ತುಮಕೂರು: ರಾಜ್ಯದಲ್ಲಿ ಶೇಕಡ 33ರಷ್ಟು ನಿರ್ಣಾಯಕ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗದ ಸಮಾಜದವರು ಸಂಘಟಿತರಾಗದ ಕಾರಣ ರಾಜಕೀಯ, ಸಾಮಾಜಿಕ ಶಕ್ತಿ ಇಲ್ಲದಂತಾಗಿದೆ. ಇನ್ನುಮುಂದೆ ಹಿಂದುಳಿದ ವರ್ಗದವರು ಒಗ್ಗಟ್ಟಾಗಿ ತಮ್ಮ ಪಾಲು ಕೇಳುವಷ್ಟು ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಬಿಜೆಪಿ ನಾಯಕ, ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ನ ನಿರ್ದೇಶಕ ಎನ್.ನರೇಶ್‌ಕುಮಾರ್ ಹೇಳಿದರು. ಬಿಜೆಪಿ ಹಿಂದುಳಿದ ಮೋರ್ಚಾ ನಾಯಕ ಸ್ಪೂರ್ತಿ ಚಿದಾನಂದ ಆವರ ನಗರದ ನಿವಾಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಸ್ಥಳಿಯ ಮುಂಡರರೊAದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗಗಳಿಗೆ ಹಲವು ವರ್ಷಗಳಿಂದ ಅವಕಾಶ ವಂಚಿತರಾಗುತ್ತಲೇ ಬಂದಿದ್ದಾರೆ. ಹಿಂದುಳಿದ ವರ್ಗಗಳ ಸಣ್ಣಪುಟ್ಟ ಸಮಾಜಗಳು ಒಂದುಗೂಡಬೇಕು. ರಾಜಕೀಯ ಸಮಾವೇಶ ಮಾಡಿ ರಾಜಕೀಯ ಪಕ್ಷಗಳ ರಾಜ್ಯ, ರಾಷ್ಟಿçÃಯ ನಾಯಕರಿಗೆ ತಮ್ಮ ಶಕ್ತಿ ತೋರಿಸಿ ಸಂದೇಶ ನೀಡಿ ರಾಜಕೀಯ ಅವಕಾಶ ಪಡೆಯಬೇಕು, ಇಲ್ಲವಾದರೆ ನಿರ್ಲಕ್ಷö್ಯಕ್ಕೀಡಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಂಘಟನೆಯಾಗಿಲ್ಲ ಎನ್ನುವ ಕಾರಣಕ್ಕೆ ಹಿಂದುಳಿದ ವರ್ಗಗಳ ಮುಖಂಡರು ಚುನಾವಣೆಗಳಲ್ಲಿ ಸ್ಪರ್ಧೆ ಮಾಡಲು ರಾಜಕೀಯ ಪಕ್ಷಗಳು ಅವಕಾಶ ನೀಡುತ್ತಿಲ್ಲ, ಸರ್ಕಾರದ ನೇಮಕಾತಿಗಳಲ್ಲೂ ಈ…
ಚಿಕ್ಕನಾಯಕನಹಳ್ಳಿ: ಬರಶಿಡ್ಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಎಂಟು ಹಳ್ಳಿಯಿಂದ 710 ಕುಟುಂಬಗಳು ಒಂದಿದ್ದು ಸಂಘದ ಮೂಲಕ 272 ಕೇವಲ ಷೇರುದಾರರನ್ನು ಹೊಂದಿದ್ದರು 2024 ಹಾಗೂ 25ರ ಚುನಾವಣೆಗೆ ಸಾಲ ಪಡೆದಿರುವ ಕ್ಷೇತ್ರದಿಂದ 188 ಮಂದಿ ಸಾಲ ಪಡೆಯದವರ ಕ್ಷೇತ್ರದಿಂದ ಕೇವಲ 14 ಮಂದಿ ಉಳಿದ 70 ಮಂದಿಯ ಷೇರುಗಳು ಉದ್ದೇಶಪೂರ್ವಕವಾಗಿ ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ ಎಂದು ಹಾಗೂ ಅವರ ಸಂವಿಧಾನಿಹಕ್ಕನ್ನು ಮಟಗುಗೊಳಿಸಿದ್ದಾರೆ ಎಂದು ಬರ್ಶಿಡ್ಲಳ್ಳಿ ಗ್ರಾಮದ ಸಂಘದ ಉಪಾಧ್ಯಕ್ಷರಾದ ನಟರಾಜು ಹಾಗೂ ನಿರ್ದೇಶಕರಾದ ಉಮೇಶ್ ಮಾಜಿ ನಿರ್ದೇಶಕ ರಾಜಶೇಖರ್ ಇವರುಗಳು ಆರೋಪಿಸಿದ್ದರು. ಬರಶಿಡ್ಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಷೇರ್ ಲೆಡ್ಜರ್ ಪುಸ್ತಕದ ಪುಟ ಸಂಖ್ಯೆ 10 ಹಾಗೂ 7 ರ ಲೆಡ್ಜರ್ ಪುಸ್ತಕದಲ್ಲಿ ಸಭಾ ನಡಾವಳಿಗಳಲ್ಲಾಗಲಿ ಆಡಿಟ್ ವರದಿಯಲ್ಲಾಗಲಿ ಹೆಸರಿಲ್ಲದವರನ್ನ ಷೇರುದಾರರಿಗೆ ಮಾಡಿಕೊಂಡು ಅಲ್ಲದೆ ಕೇವಲ 100 ರೂಪಾಯಿ ಷೇರು ಹೊಂದಿರುವ ಸುಮಾರು 65 ಮಂದಿಗೂ ಹೆಚ್ಚಿದ್ದು ಲಕ್ಷ್ಮಿ ನಾಗರಾಜು ಕೋಟಿಗಲ್ಲು ಮಂಜಮ್ಮ…
ತುಮಕೂರು: ಅಮರ ಶಿಲ್ಪಿ ಜಕಣಾಚಾರಿ ಅವರು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ವಿಶೇಷವಾದ ಕೌಶಲ್ಯವನ್ನು ತಮ್ಮ ಪ್ರತಿಭೆ ಮೂಲಕ ತೋರಿಸಿದ್ದಾರೆ. ಇಂದಿನ ಯುವ ಶಿಲ್ಪಿಗಳಿಗೆ ಅಮರಶಿಲ್ಪಿ ಜಕಣಾಚಾರಿ ಸ್ಫೂರ್ತಿಯಾಗಿದ್ದಾರೆ ಎಂದು ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಹೇಳಿದರು. ನಗರದ ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ವಿಶ್ವ ಕರ್ಮ ಸೇವಾ ಸಮಿತಿ ಸಹಯೋಗದಲ್ಲಿ ಅತ್ಯಂತ ಸರಳವಾಗಿ ಏರ್ಪಡಿಸಿದ್ದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಅಮರಶಿಲ್ಪಿ ಜಕಣಾಚಾರಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಮರ್ಪಿಸಿ ಅವರು ಮಾತನಾಡಿದರು. ಶಿಲ್ಪಿಗಳು ದೇಶದ ನಾಗರಿಕತೆಯ ರಾಯಭಾರಿಗಳು. ಶಿಲ್ಪಿಗಳು ಲೋಹದ ಜತೆ, ಮರಗಳ ಜತೆ, ಪ್ರಕೃತಿ ಜತೆ, ಭವಿಷ್ಯಕ್ಕೆ ಬೇಕಾಗಿರುವ ಕುರುಹುಗಳನ್ನು ಬಿಟ್ಟು ಹೋಗುವಂತಹ ಕೆಲಸ ಮಾಡಿ ಸಂಸ್ಕöÈತಿ, ಕಲೆಯನ್ನು ಜೀವಂತವಾಗಿಡುವ ಕೆಲಸವನ್ನು ಮಾಡುತ್ತಾರೆ ಎಂದರು. ತುಮಕೂರು ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ಕೈದಾಳವನ್ನು ಅಮರಶಿಲ್ಪಿ…
ತುಮಕೂರು: ಮತ, ಧರ್ಮ, ಮೌಢ್ಯಗಳ ಅಂಧಶ್ರದ್ಧೆಯನ್ನು ತೊರೆದು ವಿಜ್ಞಾನ ಮತ್ತು ಅಧ್ಯಾತ್ಮದ ಮೊರೆ ಹೋದಾಗ ‘ನಮಗೂ-ಲೋಕಕ್ಕೂ ಕಲ್ಯಾಣವಾಗಲಿದೆ’ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದ ಗೌಡ ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯ ಕುವೆಂಪು ಅಧ್ಯಯನ ಪೀಠ ಬುಧವಾರ ಆಯೋಜಿಸಿದ್ದ ಕುವೆಂಪು: ಮಾತು ಮಂಥನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಆತ್ಮಶ್ರೀಗಾಗಿ ವಿಜ್ಞಾನ ಮತಿಗಳಾಗಿ’ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಉತ್ತಮ ಆರೋಗ್ಯದ, ಭಾವನೆಗಳ, ಬುದ್ಧಿಯ ಬೆಸುಗೆಯಲ್ಲಿ ‘ತಾನು ಯಾರು?’ ಎಂಬುದನ್ನು ಅರಿತು ಆತ್ಮದ ಅರಿವು-ಆತ್ಮಶ್ರೀ ಸಾಧಿಸಬೇಕು. ಉತ್ತಮ ಆಲೋಚನೆಗಳನ್ನು, ಭಾವನೆಗಳನ್ನು ಅನುಭವಿಸಬೇಕು. ಅಧ್ಯಯನಶೀಲತೆ, ಏಕಾಗ್ರತೆ, ಸಂಯಮದ ಆತ್ಮಾನುಸಂಧಾನದಲ್ಲಿ ತಪಸ್ವಿಗಳಾಗಬೇಕು ಎಂದು ತಿಳಿಸಿದರು. ಆತ್ಮದ ಸಾರ್ವಭೌಮತ್ವವನ್ನು ಸಾಧಿಸಿದರೆ ಬದುಕು ಗಟ್ಟಿಗೊಳ್ಳುತ್ತದೆ. ಇದರಿಂದ ಆತ್ಮಹತ್ಯೆಗಳ, ಮನಸ್ತಾಪಗಳ ಸಂಖ್ಯೆ ಕ್ಷೀಣಿಸಲಿದೆ. ‘ನಾನು ಯಾರು?’ ಎಂಬ ಆತ್ಮಾವಲೋಕನವಾದರೆ ಪ್ರತ್ಯೇಕತೆಯ ಭಾವ ಕಳಚಿ ಏಕತೆಯ ಬೆಸುಗೆ ಚಿಗುರಿ ಸಮಾನತೆ ಸ್ಪುಟಿಸಲಿದೆ. ವೇದೋಪನಿಷತ್ತುಗಳ ಆಂತರಿಕ ಮಿತಿ ತೊರೆದು ವೈಜ್ಞಾನಿಕ ಮನೋಭಾವದಿಂದ ಎಲ್ಲವನ್ನೂ ಸ್ವೀಕರಿಸಿದರೆ ಪಕ್ಷಪಾತವಿರದ, ವಸ್ತುನಿಷ್ಠತೆಯ ಪ್ರಾಯೋಗಿಕ ಪುರಾವೆಗೆ ಸಾಕ್ಷಿಯಾಗುತ್ತೇವೆ…
ತುಮಕೂರು: ಹಿರಿಯ ಅಂತರರಾಷ್ಟಿçÃಯ ಅಥ್ಲೇಟಿಕ ಕ್ರೀಡಾಪಟು ಟಿ.ಕೆ.ಆನಂದ ಅವರ 77ನೇ ಹುಟ್ಟು ಹಬ್ಬದ ಅಂಗವಾಗಿ ಇಂದು ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸನ್ಮಾನ ಮತ್ತು ದಾರಿ ದೀಪ ಚಾರಿಟಬಲ್ ಟ್ರಸ್ಟ್ಗೆ ಸಹಕಾರ ನೀಡಿದ ಹಿರಿಯರನ್ನು ಗೌರವಿಸುವ ಕಾರ್ಯಕ್ರಮ ಮುಂಜಾನೆ ಗೆಳೆಯರ ಬಳಗದಿಂದ ಹಮ್ಮಿಕೊಳ್ಳಲಾಗಿತ್ತು. ಪ್ರೌಢಶಾಲಾ ವಿಧ್ಯಾರ್ಥಿಯಾಗಿದ್ದ ದಿನದಿಂದಲೂ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡು ಹಲವಾರು ರಾಜ್ಯ, ರಾಷ್ಟç ಮತ್ತು ಅಂತರರಾಷ್ಟಿçÃಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ಪದಕಗಳ ಪಡೆದಿರುವ ಟಿ.ಕೆ. ಆನಂದ, ತಮ್ಮಂತೆಯೇ ಕ್ರೀಡೆ, ಸಾಹಿತ್ಯ, ಸಹಕಾರ, ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಹಿರಿಯ, ಕಿರಿಯ ಕ್ರೀಡಾಪಟುಗಳನ್ನು ಗುರುತಿಸಿ, ಪ್ರೋತ್ಸಾಹಿಸುತ್ತಾ, ಕ್ರೀಡಾ ವಾತಾರಣ ಸೃಷ್ಟಿಸಿ, ಹಲವರ ಸಾಧನೆಗೆ ಸ್ಪೂರ್ತಿ ನೀಡಿದ್ದಾರೆ. ಇಂತಹ ವ್ಯಕ್ತಿಯ 77ನೇ ಜನ್ಮ ದಿನವನ್ನು ಸಮಾಜದ ಎಲ್ಲ ವರ್ಗದವರು ಸೇರಿ ಆಚರಿಸುವ ಮೂಲಕ ಮತ್ತಷ್ಟು ಸ್ಪೂರ್ತಿದಾಯಕ ಕೆಲಸಗಳನ್ನು ಉತ್ತೇಜನ ನೀಡಿದರು. ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಅವರನ್ನು ಅಭಿನಂದಿಸಿ ಮಾತನಾಡಿದ ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್,ವಿದ್ಯಾರ್ಥಿ ದಿಸೆಯಿಂದಲೂ ಇಂದಿನ ಗೃಹ ಸಚಿವರಾದ…
ಚಿಕ್ಕನಾಯಕನಹಳ್ಳಿ; ತಾಲೂಕಿನ ಕೃಷಿಕ ಸಮಾಜದ ಚುನಾವಣಾ ಪ್ರತಿನಿಧಿಗಳಾಗಿ2025 ಹಾಗೂ 2030 ನೇ ಸಾಲಿಗೆ ಈ ಕೆಳಕಂಡವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಜಯಚಾಮರಾಜೇಂದ್ರಪುರ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಪಂಕಜ್ ನಲ್ಲಿ ನಿವಾಸಿ ಆರ್ ಗಂಗಾಧರಯ್ಯ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪಿ ದೊಡ್ಡ ರಂಗಪ್ಪ ಪ್ರಧಾನ ಕಾರ್ಯದರ್ಶಿಯಾಗಿ ಡಿ ಆರ್ ವಿಶ್ವನಾಥ್ ಜಿಲ್ಲಾ ಪ್ರತಿನಿಧಿಯಾಗಿ ಬಿ ಎನ್ ಲೋಕೇಶ್ ಖಜಾಂಚಿಯಾಗಿ ಹೆಚ್ಚಿಸಿ ಪ್ರಕಾಶ್ ಇವರುಗಳು ಅವಿರೋಧ ಆಯ್ಕೆ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಹಾಗೂ ತಾಲೂಕ್ ಕೃಷಿಕ ಸಮಾಜ ಮತ್ತು ಸಹಾಯಕ ಕೃಷಿ ನಿರ್ದೇಶಕ ಶಿವರಾಜ್ ಕುಮಾರ್ ಘೋಷಿಸಿದ್ದಾರೆ.
ತುಮಕೂರು: ರಾಜ್ಯ ಸರ್ಕಾರಿ ನಿವೃತ್ತ ನೌಕರರು ಆರೋಗ್ಯ ಕಾಪಾಡಿಕೊಂಡು ಸಾಮಾಜಿಕ ಚಟಿವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸಂಘದ ಜಿಲ್ಲಾ ಶಾಖೆಯ ಕಟ್ಟಡ ನಿರ್ಮಾಣಕ್ಕೆ ಅಗತ್ಯ ನಿವೇಶನ, ಅನುದಾನ ಪಡೆಯಲು ಜಿಲ್ಲಾ ಸಚಿವ ಡಾ.ಪರಮೇಶ್ವರ್ ಹಾಗೂ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಬಳಿಗೆ ನಿಯೋಗ ತೆರಳಿ ಅನುಕೂಲ ಪಡೆಯಬೇಕು, ನಿಮ್ಮ ನಿಯೋಗಕ್ಕೆ ತಾವೂ ಕೈ ಜೋಡಿಸುವುದಾಗಿ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳಿಧರ ಹಾಲಪ್ಪ ಹೇಳಿದರು. ನಗರದ ಬಾಲಭವನದಲ್ಲಿ ಮಂಗಳವಾರ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾ ಶಾಖೆ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ದಿನಾಚರಣೆ ಹಾಗೂ ಹಿರಿಯ ಚೇತನಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆಗಳು ಇವೆ, ಅವುಗಳ ಸಿಎಸ್‌ಆರ್ ಫಂಡ್ ಅನ್ನು ಕೇಳಿ ಪಡೆದು ಬಳಕೆ ಮಾಡಿಕೊಳ್ಳಿ ಎಂದು ಸಲಹೆ ಮಾಡಿದರು. ಹಲವು ವರ್ಷ ಕಾಲ ಸರ್ಕಾರಿ ಸೇವೆ ಸಲ್ಲಿಸಿ ಅನುಭವ, ಆಡಳಿತ ಸಾಮರ್ಥ್ಯ ಹೊಂದಿರುವ ನಿವೃತ್ತ ನೌಕರರನ್ನು ಜಿಲ್ಲಾಡಳಿತದ ವಿವಿಧ ಸಮಿತಿಗಳಿಗೆ ನೇಮಕ ಮಾಡುವಂತೆ ಮನವಿ…
ತುಮಕೂರು : ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಸರಕಾರದಿಂದ ನೀಡುವ ಸೌಲಭ್ಯ ಹಾಗೂ ಕಾನೂನು ಸೇವೆಗಳ ಬಗ್ಗೆ ದಲಿತ ಕಾಲೋನಿಗಳಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಜಾಗೃತಿ ಉಸ್ತುವಾರಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಪ.ಜಾತಿ ಮತ್ತು ಪ.ಪಂಗಡದವರಿಗೆ ನೀಡಲಾಗುತ್ತಿರುವ ಸವಲತ್ತುಗಳ ಬಗೆಗಿನ ಮಾಹಿತಿ ಕೊರತೆಯಿಂದ ಅನೇಕರು ಸೌಲಭ್ಯ ವಂಚಿತರಾಗುತ್ತಿದ್ದು, ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ತಿಳಿಸಿದರು. ಜಿಲ್ಲೆಯಲ್ಲಿ ಕಾರ್ಮಿಕ ನೀತಿಗೆ ವಿರೋಧವಾಗಿ ಕೆಲವು ಕೈಗಾರಿಕೆಗಳಲ್ಲಿ ಸಮಯ ಮೀರಿ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಸಮಿತಿ ಸದಸ್ಯರು ಆರೋಪಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಕೈಗಾರಿಕೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗೆ ಸೂಚನೆ ನೀಡಿದರು. ಪ.ಜಾತಿ ಮತ್ತು ಪ.ಪಂಗಡದವರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸಲಾದ ಕೊಳವೆ ಬಾವಿಗಳಲ್ಲಿ ನೀರು ಸಿಗದೆ ಹೋದರೂ…











