ತುಮಕೂರು : ಜಿಲ್ಲೆಯಲ್ಲಿ ಮಳೆಯಿಂದಾಗಿ ಜನ-ಜಾನುವಾರು, ಮನೆ ಸೇರಿದಂತೆ ಬೆಳೆ ಹಾನಿ ಸಂಭವಿಸಿದಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸಿ ಹಾನಿ ಗೊಳಗಾದವರಿಗೆ ಶೀಘ್ರವಾಗಿ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಮಂಗಳವಾರ ಜಿಲ್ಲೆಯ ಉಪವಿಭಾಗಾಧಿಕಾರಿಗಳು ಹಾಗೂ ಎಲ್ಲಾ ತಾಲೂಕಿನ ತಹಶೀಲ್ದಾರರೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಜಿಲ್ಲೆಯ ತುಮಕೂರು, ತುರುವೇಕೆರೆ ಹಾಗೂ ಕುಣಿಗಲ್ ತಾಲೂಕುಗಳಲ್ಲಿ ಅತೀ ಹೆಚ್ಚು ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಈವರೆಗೆ ಮಳೆಯಿಂದ ಹಾನಿಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿದರು. ಬೆಳೆ ಹಾನಿಯಲ್ಲಿ ಪರಿಹಾರ ಹಣ ಪಾವತಿಯನ್ನು ವಿಳಂಬ ಮಾಡದೆ ಶೀಘ್ರವಾಗಿ ಬಾಕಿ ಉಳಿದ ಪರಿಹಾರ ಹಣ ನೀಡಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು ಜಿಲ್ಲೆಯಲ್ಲಿ ವಕ್ಫ್ ಆಸ್ತಿಗೆ ಸಂಬAಧಿಸಿದAತೆ ರೈತರಿಗೆ ನೋಟಿಸ್ ನೀಡಿರುವ ಪ್ರಕರಣಗಳಿದ್ದಲ್ಲಿ ಕೂಡಲೇ ನನ್ನ ಗಮನಕ್ಕೆ ತರಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯ…
Author: News Desk Benkiyabale
ತುಮಕೂರು: ಮುಂಜಾನೆ ಗೆಳೆಯರ ಬಳಗ ಹಾಗೂ ವಿಘ್ನೇಶ್ವರ ಗೆಳೆಯರ ಬಳಗದವತಿಯಿಂದ ನಗರದ ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ 2024ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ಪಡೆದ ವೀರಶೈವ ಬ್ಯಾಂಕಿನ ಉಪಾಧ್ಯಕ್ಷರಾದ ಹೆಬ್ಬಾಕ ಮಲ್ಲಿಕಾರ್ಜುನಯ್ಯ ಅವರಿಗೆ ಅಭಿನಂದನೆ ಹಾಗೂ ಗೆಳೆಯರ ಬಳಗದ ಮಾರ್ಕೇಟ್ ದಿನೇಶ ಮತ್ತು ಕೃಷ್ಣರಾವ್ ಅವರ ಹುಟ್ಟು ಹಬ್ಬದ ಅಂಗವಾಗಿ ಮೂವರನ್ನು ಅಭಿನಂದಿಸಲಾಯಿತು. ಮುAಜಾನೆ ಗೆಳೆಯರ ಬಳಗದ ಅಧ್ಯಕ್ಷ ಹಾಗೂ ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಮಾತನಾಡಿ,ವಿದ್ಯಾರ್ಥಿ ದಿಸೆಯಿಂದಲೂ ನಾಯಕತ್ವದ ಗುಣ ಹೊಂದಿರುವ ಹೆಬ್ಬಾಕ ಮಲ್ಲಿಕಾರ್ಜುನ್ ಅವರು,ಸಹಕಾರ ಕ್ಷೇತ್ರವಲ್ಲದೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮದೇ ಆದ ರೀತಿಯಲ್ಲಿ ಸಾಧನೆಯನ್ನು ಮಾಡಿದ್ದಾರೆ.ಕ್ರೀಡಾಪಟುಗಳಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಅವರು ರಾಜ್ಯಮತ್ತು ರಾಷ್ಟçಮಟ್ಟದಲ್ಲಿ ಸಾಧನೆ ಮಾಡಲು ಸಹಕಾರಿಯಾಗಿದ್ದಾರೆ.ಅವರಿಗೆ ಈ ಬಾರಿಯ ಸಹಕಾರ ರತ್ನ ಪ್ರಶಸ್ತಿ ಬಂದಿರುವುದು ನಮ್ಮಂತಹ ಹಲವರಿಗೆ ಸಂತೋಷವಾಗಿದೆ.ಅವರು ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಯನ್ನು ಮಾಡುವಂತಾಗಲಿ ಎಂದರು ಮುAಜಾನೆ ಗೆಳೆಯರ ಬಳಗದ ಧನಿಯಕುಮಾರ್ ಮಾತನಾಡಿ, ಸರಳ ಸಜ್ಜನಿಕೆಗೆ ಹೆಸರಾದ ಹೆಬ್ಬಾಕ ಮಲ್ಲಿಕಣ್ಣ ಅವರಿಗೆ ಈ ಬಾರಿಯ…
ತುಮಕೂರು: ನಗರದ ಶ್ರೀ ಸಿದ್ಧಾರ್ಥ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮಕ್ಕಳ ದಂತ ಚಿಕಿತ್ಸಾ ವಿಭಾಗದ ವತಿಯಿಂದ ‘ಮಕ್ಕಳ ಮತ್ತು ಶಿಶು ವೈದ್ಯರ ದಿನಾಚರಣೆ’ ಅಂಗವಾಗಿ ತುಮಕೂರಿನ ಹೆಗ್ಗರೆಯ ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ದಂತ ತಪಾಸಣೆ ಮತ್ತು ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ಶಾಲೆಯ ಆವರಣದಲ್ಲಿ ಏರ್ಪಟ್ಟ ಕಾರ್ಯಕ್ರಮವನ್ನು ಶ್ರೀ ಸಿದ್ಧಾರ್ಥ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಮಕ್ಕಳ ದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ.ಜ್ಯೋತ್ಸ್ನಾ ವಿ.ಸೆಟ್ಟಿ ಅವರು ಉದ್ಘಾಟಿಸಿ, ಸರಿಯಾದ ಆಹಾರ ಸೇವನೆ, ಫ್ಲೋರೈಡ್ ಬಳಕೆ ಮತ್ತು ಮೌಖಿಕ ನೈರ್ಮಲ್ಯದ ಅಭ್ಯಾಸವನ್ನು ಮಕ್ಕಳಿಗೆ ತಿಳಿಸುವ ಅಗತ್ಯವಿದೆ ಎಂದರು. ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗಳ ಬಾಯಿಯ ಮೇಲೆ ಪರಿಣಾಮಗಳ ಬೀರುತ್ತವೆ. ಈ ಬಗ್ಗೆ ಮಕ್ಕಳಿಗೆ ಜ್ಞಾನದ ಅಗತ್ಯವಿದೆ. ಈ ನಿಟ್ಟಿನಲ್ಲಿ ಕಾಲಕಾಲಕ್ಕೆ ಮಕ್ಕಳ ಮೌಖಿಕ ತಪಾಸಣೆ ಮತ್ತು ಆರೋಗ್ಯ ಜಾಗೃತಿ ನಡೆಸಬೇಕಾಗಿದೆ ಎಂದು ಡಾ.ಜ್ಯೋತ್ಸ್ನಾ ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ವೀಣಾ ಎಸ್, ಡಾ.ಅಂಬಿಕಾ ಕೆ, ಡಾ.ಮಹೇಶ್ ಕುಮಾರ್, ಶಾಲೆಯ ಮುಖ್ಯ ಶಿಕ್ಷಕರಾದ…
ತುರುವೇಕೆರೆ: ರೈತರು ತಮ್ಮ ಕೃಷಿಯಲ್ಲಿ ಅದುನಿಕತೆ ಅಳವಡಿಸಿಕೊಂಡು ಸಮಗ್ರ ಕೃಷಿಯಲ್ಲಿ ಸಾಧನೆ ಮಾಡಬೇಕು ಎಂದು ರಾಜ್ಯ ಸರ್ಕಾರದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು. ತಾಲೂಕಿನ ಮಾಯಸಂದ್ರ ಟಿ.ಬಿ.ಕ್ರಾಸ್ ಬಳಿಯ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ವತಿಯಿಂದ ನೂತವಾಗಿ ಪ್ರಾರಂಬವಾಗಿರುವ ಖಾಸಗಿ ಕೃಷಿ ವಿಜ್ಞಾನ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು ರೈತರು ಸಂಪ್ರಾದಾಯಿಕ ಕೃಷಿ ಮಾಡುವ ಬದಲು ಕೃಷಿಯಿಂದ ಯಾವ ರೀತಿಯಲ್ಲಿ ಲಾಭ ಮಾಡಬೇಕು ಎಂಬುದನ್ನು ರೈತರು ಕಲಿಯಬೇಕಿದೆ. ರೈತರು ತಮ್ಮ ಜಮೀನಿನಲ್ಲಿ ಒಂದೇ ಬೆಳೆ ಬೆಳೆಯುವ ಬದಲು ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ವಿವಿದ ಬೆಳೆಗಳ ಸಂಶೋದನೆ ಮಾಡಿದ ತೆಳಿಗಳನ್ನು ಆಯ್ಕೆ ಮಾಡಿಕೊಂಡು ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆದು ಸರ್ಕಾರದಿಂದ ಸಿಗುವಂತಹ ಸವಲತ್ತು ಪ್ರೋಜನ ಪಡೆದುಕೊಂಡು ಕೃಷಿ ಮಾಡುವಂತೆ ಸಲಹೆ ನೀಡಿದರು. ಸುಮಾರು 57 ವರ್ಷಗಳ ನಂತರ ಖಾಸಗಿ ಕೃಷಿ ವಿಜ್ಞಾನ ಕಾಲೇಜು ಸರ್ಕಾರ ನೀಡಲಾಗಿದೆ. ಸರ್ಕಾರದ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಕೃಷಿ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅವಕಾಶ ಇತ್ತು. ಪ್ರತಿ ವರ್ಷ ಸರ್ಕಾರದ ಕೃಷಿ…
ತುಮಕೂರು: ನಮ್ಮ ಐದಕ್ಕೆ ಐದೂ ಗ್ಯಾರಂಟಿಗಳು ಮತ್ತು ನಮ್ಮ ಸರ್ಕಾರದ ಅಭಿವೃದ್ಧಿ ಯೋಜನೆಗಳು ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೂ ಸೇರಿವೆ. ನಾವು ಸಕಲರ ಅಭಿವೃದ್ಧಿ ರೂಪಿಸಿದ್ದರಿಂದಲೇ ರಾಜ್ಯದ ಆರ್ಥಿಕತೆ ವೇಗ ಪಡೆದುಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಜಿಲ್ಲಾಡಳಿತ ವತಿಯಿಂದ ಭಾನುವಾರ(ಡಿ.02) ಆಯೋಜಿಸಲಾಗಿದ್ದ ಸರ್ಕಾರದ ನಾನಾ ಯೋಜನೆಗಳ 750 ಕೋಟಿ ರೂ. ಮೊತ್ತದ 23,000 ಕ್ಕೂ ಅಧಿಕ ಮಂದಿ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ, ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಇಡೀ ದೇಶದಲ್ಲಿ ರಾಜ್ಯದ GDP ನಂಬರ್ ಒನ್ ಆಗಿದೆ. ದೇಶದ GDP ಇನ್ನೂ 8 ಇದೆ. ಆದರೆ ರಾಜ್ಯದ ಉಆP 10 ಕ್ಕೆ ತಲುಪಿದೆ. ವಿದೇಶಿ ಬಂಡವಾಳ ಆಕರ್ಷಣೆ ಮತ್ತು ಕೇಂದ್ರಕ್ಕೆ ತೆರಿಗೆ ಪಾವತಿಸುವುದರಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇದು ಸಾಧ್ಯವಾಗಿದ್ದು ರಾಜ್ಯದ ಎಲ್ಲಾ ಜಾತಿ ಮತ್ತು ಎಲ್ಲಾ ಧರ್ಮದವರ ಒಟ್ಟಾರೆ ಕೊಡುಗೆಯಿಂದ ಎಂದು ವಿವರಿಸಿದರು. ರಾಜ್ಯದ ಪ್ರತಿಯೊಬ್ಬರಿಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ…
ಹೆಬ್ಬೂರು: ಕನ್ನಡಕ್ಕೂ ಮತ್ತು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಒಂದು ನಂಟಿದೆ ಎಂದು ಮುಖಂಡರು ಹಾಗೂ ತುಮಕೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯರಾದ ಮಂಜುನಾಥ್ ಹೆತ್ತೇನಹಳ್ಳಿ ತಿಳಿಸಿದರು. ಹೋಬಳಿಯ ಅಂಬೇಡ್ಕರ್ ಆಟೋ ಚಾಲಕರ ಸಂಘದಿoದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾಷಾವಾರು ಪ್ರಾಂತ್ಯಗಳ ಸ್ವಾಯತ್ತತೆ ಬಗ್ಗೆ ಅಂದು ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನ ಸಭೆಯಲ್ಲಿ ಮಾತನಾಡಿದ್ದರು. ಇಲ್ಲದಿದ್ದರೆ ಇಂತಹ ಹೆಮ್ಮೆಯ ಕರುನಾಡನ್ನು ಕಟ್ಟಿಕೊಳ್ಳಲು ನಮಗೆ ಸಾಧ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಭಾರತ ಆಚಾರ, ವಿಚಾರ ಹಾಗೂ ಭಾಷೆಗಳಲ್ಲಿ ವೈವಿಧ್ಯತೆಯನ್ನು ಹೊಂದಿರುವ ದೇಶವೆಂದು ಭಾವಿಸಿದ್ದ ಅಂಬೇಡ್ಕರ್ ಅವರಿಗೆ ವೈವಿಧ್ಯಮಯ ದೇಶ ಸಂವಿಧಾನದ ಮೂಲಕ ಮಾತ್ರವೇ ಏಕತೆ ಸಾಧಿಸಲು ಸಾಧ್ಯ ಎಂದು ತಿಳಿದಿತ್ತು ಎಂದು ಹೇಳಿದರು. ನಮ್ಮ ದೇಶವನ್ನು ಹೊರತು ಪಡಿಸಿ ಇಡೀ ಪ್ರಪಂಚ ಬಾಬಾ ಸಾಹೇಬರನ್ನು ನೋಡಿದ್ದು ಜ್ಞಾನದ ದೃಷ್ಟಿಯಿಂದ ಮಾತ್ರ. ಬಾಬಾ ಸಾಹೇಬರ ವಿವೇಚನೆಗೆ ಬರದಂತಹ ಯಾವ ವಿಷಯಗಳೂ ಈ ಪ್ರಪಂಚದಲ್ಲಿ ಇಲ್ಲ. ವರ್ಷದ 365 ದಿನಗಳು ಹಾಗೂ…
ಚಿಕ್ಕನಾಯಕನಹಳ್ಳಿ; ವಕ್ಫ್ ಆಸ್ತಿ ವಿಷಯ ಹುಟ್ಟಾಕಿರೋರೇ ಬಿಜೆಪಿಗರು ಈ ಆಸ್ತಿ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯ ಅಧ್ಯಕ್ಷ ಎಚ್ ಎಂ ರೇವಣ್ಣ ಹೇಳಿದರು. ಅವರು ಚಿಕ್ಕನಾಯಕನಳ್ಳಿಯ ಪ್ರವಾಸಿ ಮಂದಿರಕ್ಕೆ ಭೇಟಿ ನೀಡಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಉತ್ತರಿಸುತ್ತಾ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ವಕ್ಫ್ ಆಸ್ತಿಗಳನ್ನು ಉಳಿಸುವಂತೆ ಬರೆದಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರದ ಆದೇಶವನ್ನು ಪಾಲಿಸಲು ಹೊರಟಿತ್ತು. ಮಸೀದಿ ಹಾಗೂ ಮಸೀದಿಯ ಜಾಗ ಕಬ್ರ ಸ್ಥಾನ ಮತ್ತು ಅದರ ಜಾಗ ದರ್ಗಾ ಹಾಗೆ ಅದರ ಜಾಗ ಇವೆಲ್ಲವನ್ನು ದೇಣಿಗೆ ಕೊಟ್ಟಿರುವುದು ಬರುತ್ತದೆ ಒರೆತು ಇದು ಯಾವುದು ರೈತರ ಜಾಗವಲ್ಲ ಬಿಜೆಪಿಗರು ಸುಳ್ಳನ್ನೇ ಮನೆ ದೇವರನ್ನಾಗಿ ಸಿಕೊಂಡು ಬೂಟಾಟಿಕೆ ಮಾಡುತ್ತಾ ಅವರು ಇಂತಹದರಲ್ಲಿ ಕಾಲ ಕಳೆಯುತ್ತಾರೆ. ಬಿಜೆಪಿ ಸರ್ಕಾರ ಇದ್ದಾಗಲೇ ವಕ್ಫ್ ಆಸ್ತಿಯ ಬಗ್ಗೆ 2000ಕ್ಕೂ ಹೆಚ್ಚು ನೋಟಿಸ್ ಅನ್ನು ನೀಡಿದ್ದು ಅಲ್ಲದೆ ಬಿಜೆಪಿಯ…
ಪಾವಗಡ: ಅಬಕಾರಿ ಅಧಿಕಾರಿಗಳು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 334 ಲಿಟರ್ ಆಕ್ರಮ ಮಧ್ಯವನ್ನು 47 ಲೀಟರ್ ಬಿಯರ್, 31 ಲೀಟರ್ ಸೆಂದಿ ಹಾಗೂ ವಿವಿಧ ಪೊಲೀಸ್ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ 6.84 ಲೀಟರ್ ಮಧ್ಯವನ್ನು 3.29ಲೀಟರ್ ಬಿಯರ್ 394 ಲೀಟರ್ ಸೇಂದಿಯನ್ನು ಶುಕ್ರವಾರ ಮಧ್ಯಾಹ್ನ 12 ಗಂಟೆಯ ಸಂದರ್ಭದಲ್ಲಿ ಪಾವಗಡ ಪಟ್ಟಣದ ಹೊರವಲಯದ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಬಕಾರಿ ಡಿವೈಎಸ್ಪಿ ದೀಪಕ್ ತಹಸಿಲ್ದಾರ್ ಡಿಎನ್ ವರದರಾಜು ಅಬಕಾರಿ ನಿರೀಕ್ಷಕ ನಾಗರಾಜು ಸಮ್ಮುಖದಲ್ಲಿ ನಾಶಪಡಿಸಲಾಗಿದೆ ಎಂದು ಪಾವಗಡ ಅಬಕಾರಿ ನಿರೀಕ್ಷಕರಾದ ಮೈಕಲ್ ಜಾರ್ಜ್ ತಿಳಿಸಿದ್ದು ಈ ಸಂದರ್ಭದಲ್ಲಿ ನಿರೀಕ್ಷಕ ಮಾರಪ್ಪ ಇತ್ತಲಮನಿ ಪೇದೆಗಳಾದ ರಾಜೇಶ್ ನಿಂಗಪ್ಪ ಮಾರುತಿ ನಾಗೇಶ್ ಇದ್ದರು.
ತುಮಕೂರು: ಕನ್ನಡ ನಾಡು,ನುಡಿ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಇಂತಹ ಸಮ್ಮೇಳನಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಲಿವೆ ಎಂದು ತುಮಕೂರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಡಿಡಿಪಿಐ ಹೆಚ್.ಕೆ.ಮನಮೋಹನ್ ಅವರು ಅಭಿಪ್ರಾಯ ಪಟ್ಟಿದ್ದಾರೆ. ನಗರದ ಗಾಜಿನಮನೆಯಲ್ಲಿ ಜಿಲ್ಲಾ ಕಸಾಪ ವತಿಯಿಂದ ಆಯೋಜಿದ್ದ 16 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಎರಡನೇ ದಿನದ ಕಾರ್ಯಕ್ರಮ ಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಇಂತಹ ಕಾರ್ಯಕ್ರಮ ಗಳಿಗೆ ಶಿಕ್ಷಕರು ಮಕ್ಕಳನ್ನು ಕರೆತರುವ ಮೂಲಕ ಅವರಲ್ಲಿಯೂ ನಾಡು,ನುಡಿ,ಸಂಸ್ಕೃತಿ,ಪರAಪರೆಯ ಬಗ್ಗೆ ಅರಿವು ಮೂಡಿಸಲು ಅವಕಾಶ ಕಲ್ಪಿಸಬೇಕು. ಇದರಿಂದ ಮಕ್ಕಳಲ್ಲಿ ಭಾಷಾಜ್ಣಾನ ಹೆಚ್ಚುವುದರ ಜೊತೆಗೆ, ಅದನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತಾರೆ ಎಂದರು. ತುಮಕೂರು ತಾಲೂಕಿನ ಬಿಇಓ ಹನುಮಂತಪ್ಪ ಮಾತನಾಡಿ, ನವೆಂಬರ್ ಎಂದರೆ ಕನ್ನಡ ಕಲರವ ಮಾಸ. ಸಾಹಿತ್ಯ,ಶಿಕ್ಷಣ ಒಂದಕ್ಕೊAದು ಪೂರಕವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪಾಠ,ಪ್ರವಚನಗಳಿಗೆ ತೊಂದರೆಯಾಗದ ರೀತಿ,ಶೇ 50% ಶಿಕ್ಷಕರಿಗೆ ಓಒಡಿ ನೀಡಿದೆ. ಸಾಕಷ್ಟು ಮಕ್ಕಳು ಕಾರ್ಯಕ್ರಮ ಪಾಲ್ಗೊಂಡು ಸಾಂಸ್ಕೃತಿಕ…
ತುಮಕೂರು: ನಗರದ ಶ್ರೀ ಸಿದ್ದಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೆಕಾನಿಕಲ್ ಎಂಜಿನಿಯರಿAಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಲೀಲಾ ಬಿ.ಎನ್. ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಸಂದಿದೆ. ಲೀಲಾ ಬಿ.ಎನ್. ಅವರು, ಬೆಂಗಳೂರಿನ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಂಡಸ್ಟಿçÃಯಲ್ ಇಂಜಿನಿಯರಿAಗ್ ಮತ್ತು ಮ್ಯಾನೇಜ್‌ಮೆಂಟ್ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಡಾ.ಎನ್.ಡಿ.ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ‘ಇನ್ವೆಸ್ಟೀಗೇಷನ್ ಆಪ್ ಸ್ಟçಕ್ಚರ್ , ಮೆಕಾನಿಕಲ್ ಪ್ರಾಪರ್ಟೀಸ್, ವೇರ್ ಪ್ರಾಪರ್ಟೀಸ್ ಅಂಡ್ ಮೆಷಿನಬಲಿಟೀ, ಎವಾಲಿಯೇಷನ್ ಆಫ್ ಎ16061 ಅಲೈ ಸಬ್ಜೆಕ್ಟೆಟೆಡ್ ಟು ಬಾರೋನ್ ಕಾರ್ಬೈಡ್ ರೀಇನ್ಪೊರ‍್ಸ್ಮೆಂಟ್’ ವಿಷಯ ಕುರಿತ ಸಂಶೋಧನಾ ಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ದೊರತಿದೆ. ತುಮಕೂರು ನಗರದ ವಾಸಿಯಾದ ಲೀಲಾ ಬಿ.ಎನ್. ಅವರು ಎಸ್‌ಎಸ್‌ಐಟಿಯ ಮೆಕಾನಿಕಲ್ ಎಂಜಿನಿಯರಿAಗ್ ಎಂಜಿನಿಯರಿAಗ್ ವಿಭಾಗದಲ್ಲಿ ಕಳೆದ 5 ವರ್ಷದಿಂದ ಹಾಗೂ ಇತರೆ ಸಂಸ್ಥೆಗಳಲ್ಲಿ 10 ವರ್ಷದಿಂದ ಸಹಾಯಕ ಪ್ರಾಧ್ಯಾಪಕರಾಗಿ ರಾಜ್ಯ ಮತ್ತು ರಾಷ್ಟಿçÃಯ ಮಟ್ಟದಲ್ಲಿ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗÀಳನ್ನು ಮಂಡಿಸಿದ್ದಾರೆ.ಅಭಿನAದನೆ: ವಿಟಿ ವಿಶ್ವವಿದ್ಯಾಲಯದಿಂದ…











