ತುಮಕೂರು: ರಂಗಭೂಮಿ ಟ್ರಸ್ಟ್ (ರಿ).ಕೊಡಗು ಇವರ ವತಿಯಿಂದ ನವೆಂಬರ್ 28 ಮತ್ತು 29 ರಂದು ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕದ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ನಾಟಕದ ಪ್ರವೇಶಕ್ಕೆ 200 ರೂ ಪ್ರವೇಶ ಶುಲ್ಕ ನಿಗಧಿ ಮಾಡಲಾಗಿದೆ ಎಂದು ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಮೈಸೂರಿನ ರಂಗಾಯಣದ ನಿಕಟಪೂರ್ವ ನಿರ್ದೇಶಕರಾಗಿರುವ ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ಚರಿತ್ರೆಯ ಕುರಿತ ಸತ್ಯವನ್ನೇ ಹೇಳುತ್ತೇನೆ ಎಂಬ ನಾಟಕ ಎರಡು ದಿನಗಳ ಕಾಲ ಪ್ರದರ್ಶನಗೊಳ್ಳಲಿದ್ದು,ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸುವಂತೆ ಮನವಿ ಮಾಡಿದರು. ರಂಗಭೂಮಿ ಟ್ರಸ್ಟ್ ಕೊಡಗುನ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಮೈಸೂರಿನ ರಂಗಾಯಣದ ನಿರ್ದೇಶಕ ನಾಗಿದ್ದಾಗ, ಅಲ್ಲಿನ ಕಲಾವಿದರನ್ನು ಬಳಸಿಕೊಂಡು ಟಿಪ್ಪುವಿನ ನಿಜ ಕನಸು ಎಂಬ ನಾಟಕವನ್ನು ರಾಜ್ಯದ ಎಲ್ಲಡೆ ಪ್ರದರ್ಶನ ನಡೆಸಿದ್ದು, ಸುಮಾರು ಅರವತ್ತು ಪ್ರದರ್ಶನ ಕಂಡಿತ್ತು.ತದನAತರ ಸ್ವಾತಂತ್ರ ಹೋರಾಟದಲ್ಲಿ ಭಾಗಿಯಾಗಿಯೂ ಅಪಹಾಸ್ಯಕ್ಕೆ ಒಳಗಾಗಿದ್ದ ನಿಜ ಸ್ವಾತಂತ್ರ ಹೋರಾಟಗಾರ ವೀರ ಸಾರ್ವಕರ್ ಕುರಿತ ಕರಿನೀರಿನ ವೀರ…
Author: News Desk Benkiyabale
ಶಿರಾ: ದುಶ್ಚಟಗಳು ನಮ್ಮ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ, ಮಾದಕ ವ್ಯಸನದಿಂದ ಬದುಕಿಗೆ ಹಾನಿಯಾಗುತ್ತದೆ ಆಗಾಗಿ ನಾವು ಅದರಿಂದ ಅಂತರ ಕಾಪಾಡಿಕೊಳ್ಳುವುದು ಮುಖ್ಯ ಎಂದು ಅಚರ್ಡ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಮುತ್ತರಾಯಪ್ಪ ಹೇಳಿದರು. ಶಿರಾ ತಾಲ್ಲೂಕಿನ ತಾವರೆಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ‘ಸರಣಿ ಸಂವಾದ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದ ಅವರು ಈ ಹದಿಹರೆಯದ ವಯಸ್ಸಿನಲ್ಲಿ ತುಮುಲಗಳು ಸಹಜ ಅದನ್ನು ಹಿಡಿತದಲ್ಲಿ ಇಟ್ಟಿಕೊಳ್ಳಬೇಕು. ದುಶ್ಚಟಗಳ ಬಗ್ಗೆ ಕೆಟ್ಟ ಕೌತುಕಗಳು ಬೇಡ. ಬೆಟ್ಟಿಂಗ್, ಮೊಬೈಲ್ ಚಟದಿಂದ ದೂರವಿರಿ. ಕೀಳರಿಮೆ ಬಿಟ್ಟು ಸಾಧನೆಕಡೆಗೆ ನಿಮ್ಮ ನಡೆ ಇರಲಿ ಎಂದೇಳಿದರು ಹಾಗೆಯೇ ಮಕ್ಕಳ ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಶಾಲಾ ಮುಖ್ಯ ಶಿಕ್ಷಕ ತಿಪ್ಪೇಸ್ವಾಮಿ ಎಂ. ಮಾತಾನಾಡಿ ಈ ತರಹದ ಉಪನ್ಯಾಸಗಳು ಮಕ್ಕಳಿಗೆ ತೀರಾ ಅವಶ್ಯಕ. ನೈತಿಕ ಮೌಲ್ಯಗಳು ಬದುಕಿಗೆ ಮುಖ್ಯ, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದೇಳಿದರು. ಕಾರ್ಯಕ್ರಮದಲ್ಲಿ ಗ್ರಾ. ಪಂ ಸದಸ್ಯ ಶಿವು ಕುಮಾರನಾಯ್ಕ, ಶಿವು ಸ್ನೇಹಪ್ರಿಯ, ರವಿತೇಜ ಚಿಗಳಿಕಟ್ಟೆ ಹಾಗೂ…
ಹುಳಿಯಾರು: ರಾಜ್ಯದ ಮೂರು ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ ಹಿನ್ನೆಲೆಯಲ್ಲಿ ಹುಳಿಯಾರು ಬ್ಲಾಕ್ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮಾಜಿ ಶಾಸಕ ಕೆ.ಎಸ್.ಕಿರಣ್‌ಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಗಳು ಫಲದಾಯಕವಾಗಿವೆ ಎಂಬುದಕ್ಕೆ ಈ ಉಪ ಚುನಾವಣೆ ಫಲಿತಾಂಶ ಸಾಕ್ಷಿ. ಬಿಜೆಪಿಯವರು ಏನೇ ಕುತಂತ್ರ ಮಾಡಿದರೂ ಮತದಾರ ಅದಕ್ಕೆ ಬೆಲೆ ಕೊಡದೆ ತಕ್ಕ ಪಾಠ ಕಲಿಸಿದ್ದಾನೆ ಎಂದರು. ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ ಪರಿಣಾಮ ನಮ್ಮ ಮೂವರು ಅಭ್ಯರ್ಥಿಗಳು ಭಾರಿ ಮತಗಳ ಅಂತರದಿAದ ಗೆದ್ದಿದ್ದಾರೆ. ಈ ಗೆಲುವು ರಾಜ್ಯದ ಪ್ರತಿಯೊಬ್ಬ ಜನಸಾಮಾನ್ಯರ ಗೆಲುವಾಗಿದೆ. ವಿರೋಧ ಪಕ್ಷಗಳು ಅಭಿವೃದ್ಧಿಗೆ ಸಹಕರಿಸುವ ಬದಲು ಸುಳ್ಳು ಆರೋಪಗಳನ್ನು ಮಾಡುತ್ತ ಜನಪ್ರಚಾರ ಪಡೆಯಲು ಪ್ರಯತಿಸುತ್ತಿದ್ದಾರೆ. ಆದರೂ ಮತದಾರರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿರುವುದು ಸರ್ಕಾರಕ್ಕೆ ಮತ್ತಷ್ಟು ಆನೆ ಬಲದಂತಾಗಿದೆ…
ತುಮಕೂರು: ಡಿಸೆಂಬರ್ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಡೆಯಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಯಾವುದೇ ಲೋಪ ಆಗದಂತೆ ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಡಕ್ ಸೂಚನೆ ನೀಡಿದ್ದಾರೆ. ತುಮಕೂರಿನಲ್ಲಿ ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮ ನಿಮಿತ್ತ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಅವರು, ಡಿಸೆಂಬರ್ 2ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಸವಲತ್ತು ವಿತರಣೆ ಕಾರ್ಯಕ್ರಮದ ಕುರಿತು ಈಗಾಗಲೇ ಎಲ್ಲಾ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಆಯಾ ಇಲಾಖೆ ಕಾಮಗಾರಿಗಳ ಉದ್ಘಾಟನೆ ಸಂಬAಧಿಸಿದ ಕಾಮಗಾರಿಗಳು ಶಿಲಾನ್ಯಾಸದ ಫಲಕ ಸೇರಿದಂತೆ ವಿವಿಧ ಸಿದ್ಧತೆಗಳಿಗೆ ಸೂಚನೆ ನೀಡಲಾಗಿದೆ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲದAತೆ ಹಾಗೂ ಲೋಪವಾಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ಅವರು ಸೂಚಿಸಿದರು. ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಈಗಾಗಲೇ ಮುದ್ರಿಸಿ ಎಲ್ಲಾ ಹಂತದ ಅಧಿಕಾರಿಗಳಿಗೆ ನೀಡಲಾಗಿದೆ. ಸಂಬAಧಿಸಿದ ಅಧಿಕಾರಿಗಳು ಆಯಾ ಸ್ಥಳೀಯ ಜನಪ್ರತಿನಿಧಿಗಳಿಗೆ ಹಾಗೂ…
ತುಮಕೂರು: ವೀರಶೈವ, ಲಿಂಗಾಯತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಜಿಲ್ಲೆಯ ಹಿರಿಯರು ಸೇರಿ ಐದು ಎಕರೆ ಜಾಗ ಖರೀದಿಸಿ, ಹಾಸ್ಟೆಲ್ಗಳ ನಿರ್ಮಾಣಕ್ಕೆ ಒತ್ತ್ತುನೀಡಿದರೆ ತಮ್ನ ಕೈಲಾದ ಸೇವೆಯನ್ನು ಮಾಡುವುದಾಗಿ ಕೇಂದ್ರದ ಜಲಶಕ್ತಿ ಮತ್ತು ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ನಗರದ ಗುರುಕುಲ ಹಾಸ್ಟಲ್ ಆವರಣದಲ್ಲಿ ಹೊಸದಾಗಿ ನಿರ್ಮಿಸಿರುವ ಗುರುಕುಲ ಅರ್ಕೇಡ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ತುಮಕೂರು ಬೆಳೆದಂತೆ ಭೂಮಿಯ ಬೆಲೆ ಗಗನಮುಖಿಯಾಗಿದೆ.ಭವಿಷ್ಯದ ದೃಷ್ಟಿಯಿಂದ ನೆರೆಯ ಆಂದ್ರದವರು ಬಂದು, ಈ ಭಾಗಕ್ಕೆ ಬಂದು ಒಂದಕ್ಕೆ ಎರಡು ರೇಟ್ ನೀಡಿ ಭೂಮಿ ಖರೀದಿಸುತ್ತಿದ್ದಾರೆ.ಹಾಗಾಗಿ ಸಮುದಾಯದ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ವೀರಶೈವ ಸಮಾಜದ ಮುಖಂಡರು ನಗರದ ಸುತ್ತಮುತ್ತ ಐದು ಎಕರೆ ಜಾಗ ಖರೀದಿಸಿದರೆ,ಅಲ್ಲಿ ಹಾಸ್ಟಲ್ ನಿರ್ಮಿಸಿ ಮತ್ತಷ್ಟು ಮಕ್ಕಳಿಗೆ ಆಶ್ರಯ ನೀಡಬಹುದು ಎಂದರು. ತುಮಕೂರು ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಬಸವರಾಜು ಸಂಸದರಾಗಿ ಅವರು ಕೈ ಹಾಕಿದ ಎಲ್ಲಾ ಕಾರ್ಯಕ್ರಮಗಳನ್ನು ಪೂರೈಸುತ್ತೇನೆ. ಈಗಾಗಲೇ ಸಾಕಷ್ಟು ರೈಲುಗಳನ್ಬು ನೀಡಲಾಗಿದೆ.ಬಹುಜನರ ಕೋರಿಕೆಯಂತೆ ತುಮಕೂರು ಮೂಲಕ ಮಂಗಳೂರಿಗೆ ಟ್ರೈನ್…
ತುಮಕೂರು: ದೇಶದ ಹೆಸರನ್ನು ಎತ್ತಿ ಹಿಡಿಯಲು ಎನ್‌ಸಿಸಿ ಕೆಡೆಟ್‌ಗಳು ಶ್ರಮಿಸುತ್ತಾರೆ. ಅವರ ಅವಿರತ ಶ್ರಮ ಮತ್ತು ಸಮರ್ಪಣಾ ಮನೋಭಾವವು ದೇಶದ ಕೀರ್ತಿಯನ್ನು ಇಮ್ಮಡಿಗೊಳಿಸಿದೆ ಎಂದು ತುಮಕೂರಿನ 4 ಕೆಎಆರ್ ಬೆಟಾಲಿಯನ್‌ನ ಸುಬೇದಾರ್ ಮೇಜರ್ ದಿನೇಶ್ ಸಿಂಗ್ ಸಂತಸ ವ್ಯಕ್ತಪಡಿಸಿದರು. ವಿವಿ ಕಲಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಎನ್‌ಸಿಸಿ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ರಕ್ಷಣಾ ಅಧಿಕಾರಿಗಳಾಗಿ ಯಶಸ್ಸನ್ನು ಸಾಧಿಸಿದ ನಂತರ ತಮ್ಮ ಪ್ರಯಾಣವನ್ನು ರೂಪಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದ ಪೋಷಕರು ಮತ್ತು ಶಿಕ್ಷಕರ ಕೊಡುಗೆಗಳನ್ನು ಗೌರವಿಸಬೇಕು. ಎನ್‌ಸಿಸಿಯಲ್ಲಿ ಹಿರಿಯರು ಮತ್ತು ಕಿರಿಯರ ನಡುವಿನ ಸಮನ್ವಯಕ್ಕೆ ಕಾರಣ ಶಿಸ್ತು ಮತ್ತು ಒಗ್ಗಟ್ಟು ಎಂದರು. ಎನ್‌ಸಿಸಿ ಮಹಿಳಾ ತರಬೇತುದಾರೆ ಭವ್ಯಶ್ರೀ ಮಾತನಾಡಿ, ವಾರಕ್ಕೊಮ್ಮೆ ನಡೆಯುವ ಎನ್‌ಸಿಸಿ ವಿದ್ಯಾರ್ಥಿಗಳ ಮೆರವಣಿಗೆಯಿಂದ ಪ್ರೇರೇಪಿತರಾದ ಅನೇಕ ಸಾರ್ವಜನಿಕರಿದ್ದಾರೆ. ಅವರಲ್ಲಿ ರಾಷ್ಟಿçÃಯ ಮನೋಭಾವ ಉತ್ಕೃಷ್ಟಗೊಂಡಿದೆ. ಎನ್‌ಸಿಸಿ ಸಹಪಠ್ಯ ಚಟುವಟಿಕೆಗಳ ಜೊತೆಗೆ, ವಿದ್ಯಾರ್ಥಿಗಳು ತಮ್ಮ ಶಿಕ್ಷಣದತ್ತ ಗಮನಹರಿಸಬೇಕು. ಎನ್‌ಸಿಸಿ ಕ್ಷೇತ್ರದಲ್ಲಿ ಎ ಮತ್ತು ಬಿ ಗ್ರೇಡ್ ಪ್ರಮಾಣಪತ್ರಗಳನ್ನು ಗಳಿಸುವಲ್ಲಿ ಶಿಕ್ಷಣವು ಬಹುಮುಖ್ಯ ಪಾತ್ರ…
ತುಮಕೂರು: ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ರಾಜ್ಯದ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಅತೀಕ್ ಅಹಮದ್ ಹೇಳಿದರು. ಅವರು ನಗರದ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ನಡೆದ ಮೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಇಂದು ಹೊರ ಬಿದ್ದಿದ್ದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಅಭೂತಪೂರ್ವ ವಿಜಯ ಸಾಧಿಸಿದ್ದು, ಇದರೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ಅಸಂಬದ್ಧವಾಗಿ ಮಾತನಾಡುತ್ತಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೆ ರಾಜ್ಯದ ಜನರಿಂದ ಉತ್ತಮವಾದ ತೀರ್ಮಾನ ದೊರೆತಿದ್ದು ಗೆಲುವಿನ ಸಾಧಿಸಿದ ಮೂರು ಅಭ್ಯರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಹಗುರವಾಗಿ ಮಾತನಾಡುತ್ತಾ, ರಾಜ್ಯದ ಜನತೆಗೆ ಕೇವಲ ಸುಳ್ಳನ್ನೇ ಹೇಳುತ್ತಾ, ಸುಳ್ಳನ್ನು ಸತ್ಯವನ್ನಾಗಿಸುವ ಕೆಲಸ ಮಾಡಿದ್ದರು. ಈ ರೀತಿಯ ಸುಳ್ಳು ಪ್ರಚಾರಗಳಿಗೆ ಸೊಪುö್ಪ ಹಾಕದ ರಾಜ್ಯದ…
ತುಮಕೂರು: ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿದ್ದ ಅಪರಾಧಿ ಬಸವರಾಜ ಎಂಬಾತನಿಗೆ ಜೀವಾವಧಿ, ಕಾರಾಗೃಹ ಶಿಕ್ಷೆ ಮತ್ತು ರೂ. 50 ಸಾವಿರ ದಂಡ ವಿಧಿಸಿ ಮಧುಗಿರಿಯ ಮಾನ್ಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರ ಅವರು ತೀರ್ಪು ನೀಡಿದ್ದಾರೆ. 2020ರಲ್ಲಿ ಬಡವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ನಡೆದಿತ್ತು. ಪ್ರಕರಣ ದಾಖಲಿಸಿ ಅಂದಿನ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾಕರ್, ಕೆ ಅವರು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅಪರಾಧ ಸಾಭೀತಾದ್ದರಿಂದ ಬಸವರಾಜನಿಗೆ ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಈ ಪ್ರಕರಣದಲ್ಲಿ ಅಭಿಯೋಜನೆ ಪರವಾಗಿ ಬಿ.ಎಂ. ನಿರಂಜನಮೂರ್ತಿ, ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.
ಹುಳಿಯಾರು: ಹುಳಿಯಾರಿನ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ತಂಬಾಕು ಮುಕ್ತ ಅಭಿಯಾನದ ಅಂಗವಾಗಿ ಜಾಗೃತಿ ಜಾಥಾ ನಡೆಸಲಾಯಿತು. ಹುಳಿಯಾರಿನ ಬಸ್ ನಿಲ್ದಾಣ, ಡಾ.ರಾಜ್‌ಕುಮಾರ್ ರಸ್ತೆ ಸೇರಿದಂತೆ ಕಾಲೇಜು ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡುತ್ತಿರುವವರಿಗೆ ವಿದ್ಯಾರ್ಥಿಗಳು ಗುಲಾಬಿ ಹೂ ನೀಡುವ ಮೂಲಕ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕರು ತಂಬಾಕು ವ್ಯಸನದಿಂದ ಮುಕ್ತಿ ಹೊಂದುವAತೆ ಅರಿವು ಮೂಡಿಸಿದರು. ಅರಿವು ಆಂದೋಲನಕ್ಕೆ ಪ್ರಾಂಶುಪಾಲರಾದ ಸಿ.ಜಿ.ಶೈಲಜಾ ಚಾಲನೆ ನೀಡಿ ಮಾತನಾಡಿ ತಂಬಾಕು ಸೇವನೆ ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗೆ ಆಹ್ವಾನ ನೀಡುತ್ತದೆ. ಆರೋಗ್ಯಕ್ಕೆ ಮಾರಕವಾಗುವ ತಂಬಾಕು ಸೇವನೆಯಿಂದ ದೂರ ಇರಬೇಕು ಎಂದು ಹೇಳಿದರು. ತಂಬಾಕು, ಗುಟ್ಕಾ ಮತ್ತು ಸಿಗರೇಟ್ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಮಾರಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 80 ಲಕ್ಷ ಮತ್ತು ಪ್ರತಿ ದಿನ 22 ಸಾವಿರ ಜನರು ತಂಬಾಕು ಸೇವನೆಯಿಂದ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದರು. ವಿದ್ಯಾರ್ಥಿಗಳು ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತಂಬಾಕು ಸೇವನೆಯ…
ತಿಪಟೂರು : ಕಲ್ಪತರು ನಾಡಿನಲ್ಲಿ 1922 ರಿಂದ ಬಡ, ಹಿಂದುಳಿದ, ರೈತ ಮಕ್ಕಳು ವಿದ್ಯಾವಂತರಾಗಲು ಅನ್ನ, ಅಕ್ಷರ, ಆಶ್ರಯ ಕಲ್ಪಿಸಿ ಸಮಾಜಕ್ಕೆ ಸತ್ಪ್ರಜೆಯಾಗಿ ರೂಪಿಸಿ, ಶರಣರ ಚಿಂತನೆಗಳನ್ನು ಮನೆ ಮನಗಳಲ್ಲಿ ಬಿತ್ತಿ ಸದ್ದು ಗದ್ದಲವಿಲ್ಲದೆ ಕೊಡುಗೆ ಸಲ್ಲಿಸುತ್ತಿರುವ ಸಿಡ್ಲೆಹಳ್ಳಿ ಮಹಾ ಸಂಸ್ಥಾನ ಮಠ, ಶ್ರೀ ಗುರುಕುಲನಂದಾಶ್ರಮದಲ್ಲಿ ನವಂಬರ್ 24 ನೇ ಭಾನುವಾರದಂದು ಗುರುಕುಲದ ಹಿರಿಯ ವಿದ್ಯಾರ್ಥಿಗಳು ಹಾಗೂ ಸದ್ ಭಕ್ತರು ಲಿಂಗೈಕ್ಯ ಪಟ್ಟದ ಶ್ರೀ ಕರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳವರ 114 ನೇ ಸಂಸ್ಮರಣೆ ಹಾಗೂ ಪ್ರಸಕ್ತ ಶ್ರೀಗಳ 27 ನೇ ಪೀಠಾರೋಹಣ, ಧಾರ್ಮಿಕ ಸಮಾರಂಭ ಆಯೋಜಿಸಿರುತ್ತಾರೆ. ಪರಂಪರೆಯAತೆ ಈ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸುತ್ತಿರುವ ಮಹನೀಯರಿಗೆ ಕೊಡಮಾಡುವ ‘ಗುರುಕುಲಶ್ರೀ’ ಗೌರವ ಪ್ರಶಸ್ತಿಯನ್ನು ಈ ವರ್ಷ ನೈಸರ್ಗಿಕ ಕೃಷಿ ವಿಜ್ಞಾನಿಯಾದ ,ಮುಂದಿನ ಪೀಳಿಗೆಗೆ ವಿಷಮುಕ್ತ ಆಹಾರ ದೊರಕುವಲ್ಲಿ ರಾಸಾಯನಿಕ ಮುಕ್ತ ಕೃಷಿ ಹಾಗೂ ಕುಲಾಂತರಿ ತಳಿ ನಿಷೇದದ ಬಗ್ಗೆ ದೊಡ್ಡಹೊಸೂರು ಸತ್ಯಾಗ್ರಹ ಮಾಡಿ ನಾಡಿನ ಸಹಸ್ರಾರು ರೈತರಲ್ಲಿ ಅರಿವು ಮೂಡಿಸುವ ಸೇವಾ…










