ತುಮಕೂರು: ರಾಜ್ಯದಲ್ಲಿ ರೈತರ, ಮಠಮಾನ್ಯಗಳ, ದೇವಾಲಯಗಳ, ಸರ್ಕಾರಿ ಶಾಲೆಗಳ, ಸಾರ್ವಜನಿಕರ ಆಸ್ತಿಗೆ ವಕ್ಫ್ ನೋಟಿಸ್ ನೀಡಿರುವುದನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಶನಿವಾರ ನಗರದಲ್ಲಿ ನಮ್ಮ ಭೂಮಿ- ನಮ್ಮ ಹಕ್ಕು ಹೆಸರಿನ ಹೋರಾಟ ನಡೆಸಿದರು. ಬಿಜಿಎಸ್ ವೃತ್ತದಲ್ಲಿ ಸಮಾಗಮಗೊಂಡ ಮುಖಂಡರು, ಹಿಂದೂಗಳ ಜಮೀನನ್ನು ವಕ್ಫ್ಗೆ ಪರಭಾರೆ ಮಾಡುವ ಪ್ರಯತ್ನ ನಡೆದಿದೆ ಎಂದು ಆಪಾದಿಸಿ, ವಕ್ಫ್ ಸಮಸ್ಯೆ ಪರಿಹರಿಸಲು ಸರ್ಕಾರವನ್ನು ಒತ್ತಾಯಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಲ್ಪಂಸAಖ್ಯಾತರ ತುಷ್ಟೀಕರಣವನ್ನು ಮುಖ್ಯ ವಿಷಯವನ್ನಾಗಿಸಿಕೊಂಡು ಗೊಂದಲ ಮೂಡಿಸುತ್ತಿದೆ. ರೈತರ ಜಮೀನು, ದೇವಸ್ಥಾನ, ಮಠಮಾನ್ಯಗಳ ಜಾಗ, ಸಾರ್ವಜನಿಕ ಆಸ್ತಿಯನ್ನು ವಕ್ಫ್ಗೆ ನೀಡುವ ಸಂಚು ನಡೆದಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರದ ಅಭಿವೃದ್ಧಿ ಶೂನ್ಯ ಎಂಬುದು ಜನಸಾಮಾನ್ಯರಿಗೂ ಗೊತ್ತಾಗಿದೆ. ಸರ್ಕಾರದಲ್ಲಿ ಯವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಕೇವಲ ವೋಟಿಗಾಗಿ ಯಾರನ್ನೋ ತುಷ್ಟೀಕರಣ ಮಾಡಿಕೊಂಡು ರಾಜ್ಯವನ್ನು ಹಾಳು ಮಾಡುತ್ತಿದ್ದಾರೆ. ಯಾವುದೋ ಸಮುದಾಯದ ಓಲೈಕೆಗಾಗಿ ದೇಶದ…
Author: News Desk Benkiyabale
ತುಮಕೂರು: ಜೇಬು ಕಳ್ಳತನ ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರಿಗೆ ಅಂತರ್ ಜಿಲ್ಲಾ ಜೇಬುಗಳ್ಳರ ಗ್ಯಾಂಗ್ ವೊಂದು ಸಿಕ್ಕಿಬಿದ್ದಿದೆ. ಕವಿತಾ (38), ಶ್ರೀಮತಿ ಸೂರ್ಯ (38), ಲಾವಣ್ಯ (ವಯಸ್ಸು ತಿಳಿದಿಲ್ಲ), ಸಬೀನಾ (25) ಬಂಧನಕ್ಕೊಳಗಾದ ಕಳ್ಳತನ ಆರೋಪಿಗಳು. ಇತ್ತೀಚೆಗೆ ತಿಪಟೂರು ನಗರ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಯಾರೋ ಅಪರಿಚಿತರು ನನ್ನ ಪರ್ಸ್ ಅನ್ನು ಕಳವು ಮಾಡಿರುತ್ತಾರೆಂದು ವಾಸಿಂ ಬಿನ್ ಮೆಹಬೂಬ್ ಸಾಬ್ ಗಾಂಧಿನಗರ ತಿಪಟೂರು ರವರು ದೂರು ನೀಡಿದ ಹಿನ್ನಲೆಯಲ್ಲಿ ತಿಪಟೂರುನಗರ ಪೊಲೀಸ್ ಠಾಣಾ ಮೊ.ನಂ 208/24 ಕಲಂ 303(2) ಬಿಎನ್‌ಎಸ್ ರಿತ್ಯಾ ಕೇಸು ದಾಖಲಿಸಲಾಗಿತ್ತು. ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮಹಿಳೆಯರನ್ನು ಠಾಣೆಗೆ ಕರೆತಂದು ವಿಚಾರ ಮಾಡಲಾಗಿ ಇವರುಗಳು ಬಸ್ಸುಗಳಲ್ಲಿ ಹೆಚ್ಚಿನ ಜನ ತುಂಬಿರುವ ಸಮಯದಲ್ಲಿ ಪ್ರಯಾಣಿಕರ ಕುತ್ತಿಗೆಯಲ್ಲಿದ್ದ ಚಿನ್ನಾಭರಣಗಳನ್ನು, ಪರ್ಸ್‌ಗಳನ್ನು ಯಾಮಾರಿಸಿ ಕಳವು ಮಾಡುತ್ತಿದ್ದುದ್ದಾಗಿ ಬಾಯಿ ಬಿಟ್ಟಿದ್ದಾರೆ. ಅಪರ ಪೊಲೀಸ್ ಅಧೀಕ್ಷಕರುಗಳಾದ ವಿ ಮರಿಯಪ್ಪ ಹಾಗೂ ಬಿ ಎಸ್ ಅಬ್ದುಲ್‌ಖಾದರ್ ರವರ ಮಾರ್ಗದರ್ಶನದಲ್ಲಿ ತಿಪಟೂರು ಉಪವಿಭಾಗದ ಉಪಾಧಿಕ್ಷಕರಾದ ವಿನಾಯಕ ಶೆಟಗೇರಿ…
ಗೂಳೂರು: ಅಡಿಕೆ ಚೀಲಗಳನ್ನು ಕಳ್ಳತನಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಸನ್ನಕುಮಾರ್ (40) ಕಳ್ಳತನ ಆರೋಪಿ. ಈ ತನನ್ನು ವಶಕ್ಕೆ ಪಡೆಯಲಾಗಿದ್ದು, 9 ಒಣಗಿದ ಅಡಿಕೆಯ ಚೀಲಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಅಡಿಕೆ ಕಳ್ಳತನಕ್ಕೆ ಸಂಬಂಧಿಸಿದಂತೆ ಗೂಳೂರು ಹೋಬಳಿಯ ಕೋಡಿಹಳ್ಳಿಯಲ್ಲಿಯೇ ಎರಡು ಪ್ರಕರಣ ದಾಖಲಾಗಿದ್ದವು. ಪ್ರಕರಣ ಭೇದಿಸಲು ಪೊಲೀಸರ ತಂಡವನ್ನು ರಚಿಸಲಾಗಿತ್ತು. ಪ್ರಕರಣವನ್ನು ಭೇದಿಸುವಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ವಿ.ಮರಿಯಪ್ಪ, ಬಿ.ಎಸ್. ಅಬ್ದುಲ್ ಖಾದರ್ ರವರ ಮಾರ್ಗದರ್ಶನದಲ್ಲಿ ಹಾಗೂ ಚಂದ್ರಶೇಖರ್ ಪೊಲೀಸ್ ಉಪಾಧೀಕ್ಷಕರು ತುಮಕೂರು ಉಪ-ವಿಭಾಗ, ಕ್ಯಾತ್ಸಂದ್ರ ವೃತ್ತ ನಿರೀಕ್ಷಕರಾದ ರಾಮಪ್ರಸಾದ್ ಮತ್ತು ಹೆಬ್ಬರು ಪೊಲೀಸ್ ಠಾಣೆ. ಪಿ.ಎಸ್.ಐ ಬೈರೇಗೌಡ ಜಿ.ಎಸ್. ಮತ್ತು ಸಿಬ್ಬಂದಿಗಳಾದ ಸಿದ್ದರಾಜು, ಸುರೇಶ್, ಪುಟ್ಟರಾಜು, ಬಸವರಾಜು, ವಿರೂಪಾಕ್ಷ ಪಾಟೀಲ ರವರುಗಳು ಪತ್ತೆ ಮಾಡುವಲ್ಲಿ ಶ್ರಮಿಸಿದ್ದು, ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವನ್ನು ಮಾನ್ಯ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ.ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.
ತುರುವೇಕೆರೆ: ಭೂಮಿಯಲ್ಲಿನ ಅಂತರ್‌ಜಲ ಹೆಚ್ಚಳಕ್ಕೆ ಚಕ್ ಡ್ಯಾಮ್ ನಿರ್ಮಾಣ ಮಾಡುವ ಯೋಜನೆಗಳನ್ನು ಸರ್ಕಾರ ನೀಡಬೇಕು ಮಾಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು. ತಾಲೂಕಿನ ಮಾಯಸಂದ್ರ ಹೋಬಳಿ ಹೊಣಕೆರೆ, ಬೋಮ್ಮೇನಹಳ್ಳಿ,ಹರಳಹಳ್ಳಿ, ನಾಗಲಾಪುರ ಗ್ರಾಮದಲ್ಲಿನ ಹಳ್ಳಗಳಿಗೆ ಹೇಮಾವತಿ ಇಲಾಖೆಯಿಂದ ಮುಂಜೂರಾಗಿರುವ ಚಕ್ ಡ್ಯಾಮ್ ಗಳಿಗೆ ಭೂಮಿ ಪೂಜೆ ನೆರವೇರಸಿ ಮಾತನಾಡಿದ ಅವರು ಮಳೆಗಾಲದಲ್ಲಿ ಮಳೆಯ ನೀರು ಪೋಲಾಗದಂತೆ ಕ್ರಮ ವಹಿಸುವಂತಹ ಕಾರ್ಯಕ್ರಮವನನು ಕೈಗೊಳ್ಳಬೇಕು. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿಯುವಂತಹ ಮಳೆಯ ನೀರನ್ನು ಸಂಗ್ರಹಿಸಿ ಬೂಮಿಯಲ್ಲಿ ಹಿಂಗಿಸುವAತಹ ಕೆಲಸ ಮಾಡಿದರೆ ಭೂಮಿಯಲ್ಲಿ ಅಂತರ್ ಜಲ ಮಟ್ಟ ಹೆಚ್ಚಾಗಿ ಬೇಸಿಗೆಯಲ್ಲಿ ಬೋರ್‌ವೆಲ್‌ಗಳಲ್ಲಿ ಸಮರ್ಪಕವಾಗಿ ಸಿಗಲಿದೆ ಇದರಿಂದ ರೈತರಿಗೆ ಬೆಳೆಗಳನನು ಬೆಳೆಯಲು ಸಹಕಾರಿಯಾಗಲಿದೆ ಎಂದರು. ಈ ಸಂದರ್ಬದಲ್ಲಿ ಮುಖಂಡರಾದ ರಾಜೀವ್ ಕೃಷ್ಣಪ್ಪ, ಸೋಮಶೇಖರಯ್ಯ, ಶಂಕರೇಗೌಡ, ಪ್ರೇಮಕುಮಾರ್, ದೀಪು ಸೇರಿದಂತೆ ಇತರರು ಇದ್ದರು.
ಕೊರಟಗೆರೆ: ಎತ್ತಿನಹೊಳೆ ಯೋಜನೆಯ ಬೈರಗೊಂಡ್ಲು ಬಫರ್‌ಡ್ಯಾಂ ನಿರ್ಮಾಣದ ಸ್ಥಳ ವಿಕ್ಷಣೆ ಮತ್ತು 12ಗ್ರಾಮದ ರೈತರ ಜೊತೆ ಸಮಾಲೋಚನೆ ಸಮಾವೇಶದ ಹೇಲಿಪ್ಯಾಡ್ ಸ್ಥಳಕ್ಕೆ ಗುರುವಾರ ತುಮಕೂರು ಜಿಲ್ಲಾಧಿಕಾರಿ ಶುಭಕಲ್ಯಾಣ್ ಮತ್ತು ಪೊಲೀಸ್ ವರಿಷ್ಟಾಧಿಕಾರಿ ಅಶೋಕ್‌ವೆಂಕಟ್ ಬೇಟಿನೀಡಿ ಗ್ರಾಮ ಮತ್ತು ಜಮೀನಿನ ಪರಿಶೀಲನೆ ನಡೆಸಿದರು. ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯ ಬೂಚನಹಳ್ಳಿ ಗ್ರಾಮಕ್ಕೆ ಗುರುವಾರ ತುಮಕೂರು ಜಿಲ್ಲಾಧಿಕಾರಿ ಬೇಟಿನೀಡಿ ಪರಿಶೀಲನೆ ನಡೆಸಿ ರೈತರಿಂದ ಮನವಿ ಸ್ವೀಕರಿಸಿದರು. ನಂತರ ಅಧಿಕಾರಿಗಳ ಜೊತೆ ಚರ್ಚಿಸಿ ಹೇಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳ ಮತ್ತು ಬಂದೋಬಸ್ತ್ ವಿಚಾರವಾಗಿ ಮಾಹಿತಿ ಪಡೆದರು. ಸಮಾವೇಶದ ವೇಳೆ ಯಾವುದೇ ರೀತಿಯ ಗೊಂದಲ ಆಗದಂತೆ ರೈತರಿಗೆ ಮನವರಿಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಂಡಿ ಕಾಲಿಗೆ ಬಿದ್ದ ರೈತ.. ವಿಶ್ವೇಶ್ವರಯ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಹೇಲಿಪ್ಯಾಡ್ ಸ್ಥಳ ಪರಿಶೀಲನೆ ನಡೆಸಲು ಆಗಮಿಸಿದ ವೇಳೆ ಸ್ಥಳೀಯ ರೈತನೋರ್ವ ನಮ್ಮ ಜಮೀನು ಮತ್ತು ಮನೆ ಕಿತ್ತುಕೊಳ್ಳಬೇಡಿ. ನಮ್ಮ ಊರಿನಲ್ಲೇ ನಮಗೇ ಬದುಕಲು ಅವಕಾಶ ಮಾಡಿಕೋಡಿ.…
ತುಮಕೂರು: ದೇಶದಲ್ಲಿ ಉಪಶಮನಕಾರಿ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದಕ್ಕೆ ಸಂಬAಧಿಸಿದAತೆ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯವು ಇಂದು ಅಜಿತ್ ಐಸಾಕ್ ಫೌಂಡೇಷ್ ಜತೆ ಒಪ್ಪಂದಕ್ಕೆ ಸಹಿ ಮಾಡಿದೆ. ಇದರ ಅನ್ವಯ ತುಮಕೂರಿನಲ್ಲಿ 63 ಹಾಸಿಗೆಗಳ ಉಪಶಮನಕಾರಿ ಆರೈಕೆ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ಮುಂದಿನ ವರ್ಷದಿಂದ ಇದು ಕಾರ್ಯಾರಂಭ ಮಾಡಲಿದೆ. ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಮಾರಣಾಂತಿಕ ಅನಾರೋಗ್ಯಕ್ಕೆ ಒಘಗಾದ ರೋಗಿಗಳಿಗೆ ಸಹಾನುಭೂತಿಯ, ಘನತೆಯ ಆರೈಕೆ ಸೇವೆ ಒದಗಿಸುವುದು ಇದರ ಉದ್ದೇಶ. ಸಮುದಾಯ ಆಧರಿತ ಆರೈಕೆದಾರರಿಗೆ ತರಬೇತಿ ಮತ್ತು ಅಗತ್ಯ ಬೆಂಬಲವನ್ನೂ ಈ ಕೇಂದ್ರ ಒದಗಿಸಲಿದೆ ಎಂದು ಜೆಎಯು ಅಧ್ಯಕ್ಷ ರೋನಾಲ್ಡ್ ಜೆ.ಡೇನಿಯಲ್ಸ್ ಮತ್ತು ಎಐಎಫ್ ಸಹ ಸಂಸ್ಥಾಪಕ ಅಜಿತ್ ಐಸಾಕ್ ಪ್ರಕಟಣೆಯಲ್ಲಿ ಹೇಳಿದ್ದಾರೆ. ದೇಶದಲ್ಲಿ ಸುಮಾರು 80 ಲಕ್ಷದಿಂದ 1ಕೋಟಿ ಮಂದಿಗೆ ಉಪಶಮನಕಾರಿ ಆರೈಕೆ ಅಗತ್ಯವಿದ್ದು, ಈ ಸೌಲಭ್ಯ ಶೇಕಡ 1 ರಿಂದ 2ರಷ್ಟು ಮಂದಿಗೆ ಮಾತ್ರ ಲಭ್ಯವಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇಂಥ ಸೇವೆಗಳು ವಿರಳವಾಗಿದ್ದು, ಈ ಸೌಲಭ್ಯ ಪಡೆಯಲು ಹಣಕಾಸು ಕೊರತೆಯೂ ಬಾಧಿಸುತ್ತಿದೆ. ಗುಣಮಟ್ಟದ…
ತುಮಕೂರು: ಡಿಜಿಟಲ್ ಕೌಶಲ್ಯಗಳನ್ನು ಹೆಚ್ಚಾಗಿ ರೂಢಿಸಿಕೊಂಡರೆ ಮಾಧ್ಯಮರಂಗದಲ್ಲಿ ಉತ್ತಮ ಭವಿಷ್ಯವಿದೆ. ಇದರೊಂದಿಗೆ ಪ್ರಚಲಿತ ವಿದ್ಯಮಾನಗಳ ತಿಳುವಳಿಕೆ, ಉತ್ತಮ ಭಾಷಾಜ್ಞಾನ ಕೂಡ ಮುಖ್ಯ ಎಂದು ದೂರದರ್ಶನ ಕೇಂದ್ರದ ಹಿರಿಯ ವಾರ್ತಾವಾಚಕಿ ಚೇತನಾ ರಾಜೇಂದ್ರ ತಿಳಿಸಿದರು. ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಮಾಧ್ಯಮರಂಗದ ಉದ್ಯೋಗಾವಕಾಶಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಡಿಜಿಟಲ್ ಸಾಧ್ಯತೆಗಳಿಂದಾಗಿ ಮಾಧ್ಯಮರಂಗ ವಿಸ್ತಾರವಾಗಿ ಬೆಳೆದಿದೆ; ಆದರೆ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಬದಲಾಗಬೇಕಿದೆ ಎಂದರು. ಮಾಧ್ಯಮದ ವ್ಯಾಪ್ತಿ ಮತ್ತು ಪರಿಭಾಷೆ ಬದಲಾಗಿದೆ. ಸಾಂಪ್ರದಾಯಿಕ ಪತ್ರಿಕೋದ್ಯಮ ಬದಲಾವಣೆ ಹೊಂದಿ ಡಿಜಿಟಲ್‌ನ ವಿವಿಧ ಆಯಾಮಗಳು ಬದುಕನ್ನು ಆವರಿಸಿಕೊಂಡಿದೆ. ಜಾಹೀರಾತು, ಸಾರ್ವಜನಿಕ ಸಂಪರ್ಕ, ಕಾರ್ಪೋರೇಟ್ ಸಂವಹನ, ಗ್ರಾಫಿಕ್ಸ್ ಮತ್ತು ಅನಿಮೇಶನ್, ಡಿಜಿಟಲ್ ಮಾರ್ಕೆಟಿಂಗ್, ಈವೆಂಟ್ ಮ್ಯಾನೇಜ್ಮೆಂಟ್, ಮೀಡಿಯಾ ಪ್ಲಾನಿಂಗ್, ಬ್ರಾಂಡಿAಗ್, ಕಂಟೆAಟ್ ರೈಟಿಂಗ್‌ನAತಹ ಕ್ಷೇತ್ರಗಳತ್ತ ಯುವಕರು ಗಮನ ಹರಿಸಬೇಕು ಎಂದರು. ಭಾಷೆ ಎಲ್ಲದಕ್ಕೂ ಜೀವಾಳ. ಉತ್ತಮ ಪುಸ್ತಕಗಳು ಹಾಗೂ ದಿನಪತ್ರಿಕೆಗಳನ್ನು ಪ್ರತಿದಿನ ಓದುವುದರಿಂದ ಭಾಷಾಕೌಶಲ್ಯ ಬೆಳೆಯುತ್ತದೆ, ತಿಳುವಳಿಕೆ ವಿಸ್ತಾರವಾಗುತ್ತದೆ. ರಾಷ್ಟಿçÃಯ,…
ವರದಿ: ಎಸ್. ಮೈಕೆಲ್ ನಾಡಾರ್ ಪಾವಗಡ: ಬಿಪಿಎಲ್ ಹಾಗೂ ಅಂತ್ಯೋದ್ಯಯ ಕಾರ್ಡ್ ಪಡೆಯಲು ರಾಜ್ಯ ಸರ್ಕಾರವು ನಿಗದಿತ ಮಾನದಂಡವನ್ನು ರೂಪಿಸಿದೆ. ಆ ನಿಯಮಗಳನ್ನು ಉಲ್ಲಂಘಿಸಿದ್ದರೆ ಅಂತಹವರ ಕಾರ್ಡ್ಗಳನ್ನು ಪತ್ತೆ ಮಾಡಿ ಅನರ್ಹ ಎಂದು ಪರಿಗಣಿಸಿ ಆಹಾರ ಇಲಾಖೆ ಅಧಿಕಾರಿಗಳು ರದ್ದು ಮಾಡುತ್ತಿದ್ದಾರೆ. ಅದರಂತೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿಯೂ ಅನರ್ಹರ ಪಡಿತರ ಚೀಟಿ ರದ್ದುಗೊಳಿಸುತ್ತಿದೆ. ಆದರೆ ಕೆಲವು ಅರ್ಹ ಪಡಿತರ ಚೀಟಿಗಳನ್ನು ಸಸ್ಪೆನ್ಷನ್ ಮಾಡಲಾಗಿದೆ. ಸರ್ಕಾರದ ಆದೇಶದಂತೆ ಬಿ.ಪಿ.ಎಲ್ ಕಾರ್ಡ್ ಪಡೆದ ಸರ್ಕಾರಿ ನೌಕರರು ಮತ್ತು ತೆರಿಗೆ ಪಾವತಿ ಮಾಡುವವರ ಪಡಿತರ ಚೀಟಿಗಳನ್ನು ರದ್ದುಗೊಳಿಸ ಬೇಕಾಗಿದೆ. ಆದರೆ ಈಗ ಕೆಲ ಗ್ರಾಮಗಳಲ್ಲಿ ಬಡವರ ಪಡಿತರ ಚೀಟಿಗಳೂ ಸಹ ತೆರಿಗೆ ಪಾವತಿದಾರರ ಎಂದು ಸಸ್ಪೆನ್ಷನ್ ಮಾಡಲಾಗಿದೆ. ಪಡಿತರ ಚೀಟಿ ಬಂದ್ ಆಗಿದೆ. ಅಂದಿನಿAದ ರೇಷನ್ ಕಾರ್ಡ್ಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಟ ನಡೆಸುತ್ತಿದ್ದಾರೆ ಸರ್ಕಾರಿ ಕಚೇರಿಗಳು, ಗ್ರಾಮ ಒನ್ ಸೆಂಟರ್‌ನಲ್ಲಿ ಕಾರ್ಡ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಪಡಿತರ ಚೀಟಿ ಕೇಳಿದ್ರೆ, ವಿನಾಕಾರಣ ಕಾಲಹರಣ ಮಾಡ್ತಿದ್ದಾರೆ ಎಂದು…
ತುಮಕೂರು: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯಮಟ್ಟದ ಕ್ರೀಡಾಕೂಟದ ಅಂಗವಾಗಿ ಇಂದಿನಿAದ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಕ್ರೀಡಾಜ್ಯೋತಿ ಮೆರವಣಿಗೆಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ನಗರದಲ್ಲಿಂದು ವಿದ್ಯುಕ್ತ ಚಾಲನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಜಿಲ್ಲೆಯಾದ್ಯಂತ ಕ್ರೀಡಾಜ್ಯೋತಿ ಕೊಂಡೊಯ್ಯುವ ವಾಹನಕ್ಕೆ ಪೂಜೆ ಸಲ್ಲಿಸಿ ಕ್ರೀಡಾಜ್ಯೋತಿಯನ್ನು ಬೆಳಗುವ ಮೂಲಕ ಚಾಲನೆ ನೀಡಿದ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಾತನಾಡಿ, ತುಮಕೂರಿನಲ್ಲಿ ಇದೇ ಮೊದಲ ಬಾರಿಗೆ ನ. 24 ರಂದು ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಇದರ ಅಂಗವಾಗಿ ಕ್ರೀಡಾ ಜ್ಯೋತಿಯನ್ನು ಇಡೀ ಜಿಲ್ಲೆಯಲ್ಲಿ ಶಾಂತಿಯ ಸಂದೇಶ ಸಾರುವ ಸಲುವಾಗಿ ಕ್ರೀಡಾಜ್ಯೋತಿ ಮೆರವಣಿಗೆಗೆ ಚಾಲನೆ ನೀಡಲಾಗಿದೆ. ಈ ಕ್ರೀಡಾಜ್ಯೋತಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಸಂಚರಿಸಿ ಸಮಾಜದಲ್ಲಿ ಶಾಂತಿ, ಸಹೋದರತ್ವ ಭಾವನೆಯಿಂದ ಬಾಳಬೇಕು ಎಂಬ ಸಂದೇಶ ಸಾರಲಿದೆ ಎಂದರು. ಪ್ರತಿಯೊಬ್ಬ ಪತ್ರಕರ್ತರಲ್ಲೂ ಕ್ರೀಡಾ ಮನೋಭಾವನೆ ಮೂಡಬೇಕು. ಈ ನಿಟ್ಟಿನಲ್ಲಿ…
ತುಮಕೂರು: ನಗರದ ಮುಂಜಾನೆ ಗೆಳೆಯರ ಬಳಗದ ವತಿಯಿಂದ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇಹದಾರ್ಢ್ಯ ಪಟು ಶ್ರೀಹರಿ ಮತ್ತು ಹೈಜಂಪ್ ಕ್ರೀಡಾಳು ದರ್ಶನ್ ಹಾಗೂ ರಾಜೋತ್ಸವ ಪ್ರಶಸ್ತಿ ಪಡೆದ ವಿದ್ತಾ÷್ಯವಾಹಿನಿ ಪ್ರದೀಪಕುಮಾರ್ ಅವರನ್ನು ಅಭಿನಂದಿಸಲಾಯಿತು. ಇತ್ತೀಚೆಗೆ ಥೈಲಾಂಡ್‌ನಲ್ಲಿ ನಡೆದ ವಿಶ್ವ ದೇಹದಾರ್ಢ್ಯ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಕಂಚಿನ ಪದಕ ಪಡೆದ ಶ್ರೀಹರಿ, ರಾಜ್ಯಮಟ್ಟದ ಪಿಯು ಅಥ್ಲೆಟಿಕ್ಸ್ ಕ್ರೀಡಾಕೂಟದ ಹೈಜಂಪ್ ವಿಭಾಗದಲ್ಲಿ 1.91 ಮೀಟರ್ ಎತ್ತರ ಜಿಗಿದು ಚಿನ್ನದ ಪದಕವನ್ಬು ತನ್ನದಾಗಿಸಿಕೊಂಡ ಗ್ರಾಮೀಣ ಪ್ರತಿಭೆ ದರ್ಶನ್ ಹಾಗೂ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕöÈತರಾದ ವಿದ್ಯಾನಿಧಿ ಶಿಕ್ಷಣ ಸಂಸ್ಥೆಯ ಪ್ರದೀಪಕುಮಾರ್ ಅವರನ್ನು ಅಂತಾರಾಷ್ಟಿçÃಯ ಕ್ರೀಡಾಪಟು ಟಿ.ಕೆ. ಆನಂದ್ ನೇತೃತ್ವದಲ್ಲಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್, ಹೊಸದುರ್ಗ ತಾಲ್ಲೂಕಿನ ಒಂದು ಕುಗ್ರಾಮದಲ್ಲಿ ಹುಟ್ಟಿ ಸಮರ್ಪಕ ಪರಿಕರಗಳಿಲ್ಲದಿದ್ದರೂ ಹೈಜಂಪ್ ನಂತಹ ಕ್ರೀಡೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು, ರಾಷ್ಟçಮಟ್ಟದ ಪಾಲ್ಗೊಳ್ಳಲು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ಹಾಗೆಯೇ ಶ್ರೀಹರಿ ಕೂಡ ತನ್ನ…











