Author: News Desk Benkiyabale

ತುಮಕೂರು: ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪವಿರುವ ಡಾ. ಶಿವಕುಮಾರ ಸ್ವಾಮೀಜಿ ಆಟೋ ನಿಲ್ದಾಣ ಹಾಗೂ ಕಲ್ಪತರು ಆಟೋ ನಿಲ್ದಾಣದ ಚಾಲಕರ ವತಿಯಿಂದ ಕನ್ನಡ ಚಲನಚಿತ್ರ ರಂಗದ ಮೇರು ನಟ ದಿ. ಶಂಕರ್‌ನಾಗ್ ರವರ ಜನ್ಮ ಜಯಂತಿಯನ್ನು ಆಚರಿಸಲಾಯಿತು. ಆಟೋ ಚಾಲಕರು ಹಮ್ಮಿಕೊಂಡಿದ್ದ ನಟ ದಿ. ಶಂಕರ್‌ನಾಗ್ ಅವರ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಶಂಕರ್‌ನಾಗ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಮರ್ಪಿಸಿ ಮಾತನಾಡಿ, ಆಟೋ ಚಾಲಕರು ಶ್ರಮ ಜೀವಿಗಳು, ಸ್ವಾಭಿಮಾನಿಗಳು. ಸಾಲ ಮಾಡಿ ಆಟೋ ಖರೀದಿಸಿ ದೇಶ ಕಟ್ಟುವ ಕೆಲಸ ಮಾಡುತ್ತಾ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುತ್ತಿರುವುದು ಶ್ಲಾಘನೀಯ ಎಂದರು. ಆಟೋ ಚಾಲಕರು ಸ್ವತಃ ದುಡ್ಡು ಹಾಕಿಕೊಂಡು ಮೇರು ನಟ ದಿ. ಶಂಕರ್‌ನಾಗ್ ರವರ ಜನ್ಮ ಜಯಂತಿ ಆಚರಣೆ ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಶಂಕರ್‌ನಾಗ್ ಅವರು ಇಡೀ ಕರ್ನಾಟಕದ ಜನರ ಪ್ರೀತಿಯ ನಟ ಎಂದರು. ಆಟೋ ಚಾಲಕರ ಸಮಸ್ಯೆಗೆ ಸ್ಪಂದಿಸಲು ನಾನು ಸದಾ ಸಿದ್ದನಿರುತ್ತೇನೆ ಎಂದು…

Read More

ತಿಪಟೂರು: ವಾಹನಗಳನ್ನು ಕಾಲಕಾಲಕ್ಕೆ ತಪಾಸಣೆ ಮಾಡಿಸಿ, ವಾಹನದ ಆರೋಗ್ಯವನ್ನು ಕಾಪಾಡಬೇಕು ನಮ್ಮ ನಮ್ಮ ವಾಹನಗಳನ್ನು ಸುಸ್ಥಿತಿಯಲ್ಲಿಡುವ ಮೂಲಕ ಪರಿಸರವನ್ನು ಉಳಿಸಲು ಕಾರ್ಯ ಪ್ರವೃತ್ತರಾಗಬೇಕೆಂದು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಭಗವಾನ್‌ದಾಸ್ ತಿಳಿಸಿದರು. ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಆಯೋಜನೆ ಮಾಡಿದ್ದ ವಾಯುಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿನಿತ್ಯ ರಸ್ತೆಗೆ ಹೊಸದಾಗಿ ವಾಹನಗಳು ಬರುತ್ತಿದ್ದು ಸಂಚಾರ ದಟ್ಟಣೆಯು ಹೆಚ್ಚಳವಾಗುತ್ತಿದೆ, ಅದರಿಂದ ಬರುವ ಹೊಗೆಯು ಪರಿಸರವನ್ನು ಹಾಳು ಮಾಡುತ್ತಿದ್ದು, ಇದರಿಂದ ಅನೇಕ ಮನುಷ್ಯನ ಆರೋಗ್ಯವು ಅಪಾಯಕಾರಿಯಾಗುವ ಲಕ್ಷಣಗಳು ಹೆಚ್ಚಾಗುತ್ತಿದೆ ಆದ್ದರಿಂದ ಪರಿಸರವನ್ನು ಉತ್ತಮ ಸ್ಥಿತಿಯಲ್ಲಿರಲು ಪ್ರತಿ ವಾಹನ ಸವಾರರು ಸುಮಾರು ಆರು ತಿಂಗಳಿಗೊಮ್ಮೆ ವಾಹನ ತಪಾಸಣೆ ಮಾಡಿಸಬೇಕು ಎಂದು ತಿಳಿಸಿದರು. ವಾಹನ ನಿರೀಕ್ಷಕರಾದ ನಂದೀಶ್ ಬಿ.ಎಸ್ ಮಾತನಾಡಿ ನಿಮ್ಮ ನಿಮ್ಮ ವಾಹನಗಳ ವಾಯುಮಾಲಿನ್ಯ ತಪಾಸಣೆ ಮಾಡಿಸಿಕೊಳ್ಳದಿದ್ದರೆ ಸರ್ಕಾರದಿಂದ ನಿರ್ಧರಿಸಿರುವ ದಂಡವನ್ನು ವಿಧಿಸಲಾಗುವುದು ಆದ್ದರಿಂದ ನಿಮ್ಮ ವಾಹನಗಳ ಮಾಲಿನ್ಯ ತಪಾಸಣೆ ಮಾಡುವುದು ಕಡ್ಡಾಯವಾಗಿರುತ್ತದೆ ಎಂದು ತಿಳಿಸಿದರು. ಅಧೀಕ್ಷಕರಾದ ಎಚ್.ಎಸ್.ಚೇತನ್ ಮಾತನಾಡಿ…

Read More

ತುಮಕೂರು : ಕನಿಷ್ಟ ಬೆಂಬಲ ಯೋಜನೆಯಡಿ ರಾಗಿ ಖರೀದಿಸಲು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ 2 ಖರೀದಿ ಕೇಂದ್ರ ಹಾಗೂ ತುಮಕೂರು, ಶಿರಾ, ಮಧುಗಿರಿ, ಚಿಕ್ಕನಾಯಕನಹಳ್ಳಿ, ಹುಳಿಯಾರು, ತಿಪಟೂರು, ತುರುವೇಕೆರೆ, ಗುಬ್ಬಿ ತಾಲೂಕು ಸೇರಿ ಒಟ್ಟು 10 ರಾಗಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಇಂದು ಸಂಜೆ ಜರುಗಿದ ಪೂರ್ವಭಾವಿ ¸ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಪ್ರತಿ ಕ್ವಿಂಟಾಲ್ ರಾಗಿಗೆ 4,290 ರೂ.ಗಳ ಬೆಂಬಲ ಬೆಲೆಯನ್ನು ನಿಗಧಿಪಡಿಸಲಾಗಿದೆ. ರಾಗಿ ಖರೀದಿ ಪ್ರಕ್ರಿಯೆ ಕಾರ್ಯವನ್ನು 2025ರ ಜನವರಿ 1 ರಿಂದ ಮಾರ್ಚ್ 31ರ ಅವಧಿಯವರೆಗೆ ಕೈಗೊಳ್ಳಬೇಕು ಎಂದು ಹೇಳಿದರು. ರಾಗಿ ಖರೀದಿಗಾಗಿ ರೈತರ ನೋಂದಣಿ ಪ್ರಕ್ರಿಯೆ ಡಿಸೆಂಬರ್ 1ರಿಂದ ಪ್ರಾರಂಭವಾಗಲಿದ್ದು, ನೋಂದಣಿಗಾಗಿ ಕೃಷಿ ಇಲಾಖೆಯಿಂದ ನೀಡಿರುವ ಫ್ರೂಟ್ಸ್ ಐಡಿ, ಆಧಾರ್ ಕಾರ್ಡ್ ಹಾಜರುಪಡಿಸಬೇಕು ಎಂದು ಸೂಚನೆ ನೀಡಿದರು. ರಾಗಿ ಖರೀದಿ ಹಂತದಲ್ಲಿ ಎಫ್.ಎ.ಕ್ಯೂ. ಗುಣಮಟ್ಟವನ್ನು ಪರಿಶೀಲಿಸಿ ದೃಢೀಕರಿಸಲು ಪ್ರತಿ ಖರೀದಿ ಕೇಂದ್ರಕ್ಕೆ…

Read More

ತುಮಕೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಕೆ.ಎಸ್.ಸಿದ್ಧಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿ ಸಭೆ ಸೇರಿ ಜಿಲ್ಲೆಯ ಹಿರಿಯ ಸಾಹಿತಿಗಳಾದ ಕೊರಟಗೆರೆ ತಾಲ್ಲೂಕು ಜಟ್ಟಿ ಅಗ್ರಹಾರದ ಕೃಷ್ಣಮೂರ್ತಿಯವರನ್ನು 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಅಗ್ರಹಾರ ಕೃಷ್ಣಮೂರ್ತಿ ಎಂದೇ ಪ್ರಸಿದ್ಧರಾದ ಇವರು ಭಾರತ ಸರ್ಕಾರದ ಕೇಂದ್ರ ಸಾಹಿತ್ಯ ಅಕಾಡೆಮಿಯ ಕಾರ್ಯದರ್ಶಿಯಾಗಿ 30 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಈ ಸಂಸ್ಥೆಯಡಿ ಸಾಹಿತ್ಯ ಮತ್ತು ಭಾಷೆಗಳ ಅಭಿವೃದ್ಧಿ ಬಗ್ಗೆ ರಾಷ್ಟಿçÃಯ ಮತ್ತು ಅಂತರಾಷ್ಟಿçÃಯ ವಿಚಾರ ಸಂಕಿರಣಗಳನ್ನು ಆಯೋಜಿಸಿದ್ದಾರೆ. ಎಲ್ಲಾ ಭಾಷೆಗಳ ನಡುವೆ ಪರಸ್ಪರ ಭಾಷಾಂತರ ಚಟುವಟಿಕೆ, ಪುಸ್ತಕ ಪ್ರಕಟಣೆ ಮಾಡಿದ್ದಾರೆ. ಪಂಡಿತ್ ಜವಹರಲಾಲ್ ನೆಹರು ಸ್ಥಾಪಿಸಿದ ರಾಷ್ಟಿçÃಯ ಸಂಸ್ಥೆಯಾದ ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ನೆನೆಗುದಿಗೆ ಬಿದ್ದಿದ್ದ ಶಾಸ್ತಿçÃಯ ಭಾಷೆಯ ಕಡತಗಳನ್ನು ಪರಿಶೀಲಿಸಿ ನಿರಂತರ ಸಭೆಗಳನ್ನು ಆಯೋಜಿಸಿ ಕನ್ನಡ ಭಾಷೆಗೆ ಶಾಸ್ತಿçÃಯ ಭಾಷೆಯ ಸ್ಥಾನಮಾನ ದೊರಕಲು ಕಾರಣಕರ್ತರೂ ಆಗಿದ್ದಾರೆ. ಆ ಸಂಸ್ಥೆಯ ದಕ್ಷಿಣ ಭಾರತದ ಪ್ರಾದೇಶಿಕ ಕಛೇರಿ ಬೆಂಗಳೂರಿನಲ್ಲಿ ಸ್ಥಾಪಿಸಲು ಶ್ರಮಿಸಿದ್ದಾರೆ.…

Read More

ತುಮಕೂರು : ಜಿಲ್ಲೆಯ ಗುಬ್ಬಿ ತಾಲೂಕಿನ ಸಿ.ಎಸ್. ಪುರ ಹೋಬಳಿ ಇಡಗೂರು ಗ್ರಾಮದಲ್ಲಿ ಕಳೆದ ಅಕ್ಟೋಬರ್ 9ರಂದು ಜಿಲೆಟಿನ್ ಸ್ಪೋಟದಿಂದ ಕೈ ಬೆರಳುಗಳು ತುಂಡಾಗಿದ್ದ ಸರ್ಕಾರಿ ಹಿರಿಯ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಮೋನಿಶ್ ಗೌಡ ಅವರಿಗೆ ಬರವಣಿಗೆ ತರಬೇತಿ ನೀಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯಾರ್ಥಿಯ ತಾಯಿ ನಳಿನ ತಮ್ಮ ಮಗನ ಚಿಕಿತ್ಸಾ ವೆಚ್ಚವನ್ನು ಭರಿಸಲು ಕ್ರಮ ಕೈಗೊಂಡ ಅಭಿನಂದನೆ ಸಲ್ಲಿಸಲು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಮೋನಿಶ್ ಗೌಡ ಅವರ ಆರೋಗ್ಯ ವಿಚಾರಿಸಿದ ಜಿಲ್ಲಾಧಿಕಾರಿಗಳು ಈ ಸೂಚನೆ ನೀಡಿದರು. ಜಿಲೆಟಿನ್ ಸ್ಫೋಟದಿಂದ ಮೋನಿಶ್ ಗೌಡನ ಬಲಗೈನ ಮೂರು ಬೆರಳುಗಳು ತುಂಡಾಗಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಯ ಕೈಬೆರಳುಗಳು ಪೂರ್ಣ ಗುಣಮುಖವಾದ ನಂತರ ಫಿಜಿûಯೋಥೆರಪಿ ಮೂಲಕ ಬರವಣಿಗೆ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕೆಂದು ದೂರವಾಣಿ ಮೂಲಕ ಸ್ಥಳದಲ್ಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಚಂದ್ರಶೇಖರ್ ಅವರಿಗೆ ಸೂಚನೆ…

Read More

ಕೊರಟಗೆರೆ: ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 24-25 ಸಾಲಿನಲ್ಲಿ 214 ಕೋಟಿ ರೂಗಳ 3811 ಕಾಮಗಾರಿಗಳಿಗೆ ಅನುಮೋಧನೆ ದೊರೆತಿದ್ದು ಕೆಲಸ ಪ್ರಾರಂಭವಾಗಿವೆ ಎಂದು ಗೃಹ ಸಚಿವ ಡಾ. ಈ ಪರಮೇಶ್ವರ್ ತಿಳಿಸಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆಯನ್ನು ನಡೆಸಿ ಮಾತನಾಡಿ, ಕಾಮಗಾರಿಗಳಲ್ಲಿ ಶಾಲೆಯ ದುರಸ್ಥಿ, ಅಂಗನವಾಡಿ, ಆಸ್ಪತ್ರೆ ದುರಸ್ಥಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳು ನಡೆಯಲಿದೆ, ಜಿಲ್ಲೆಯಲ್ಲ 27 ಕೋಟಿ ಸಿಎಸ್ ಆರ್ ಅನುಧಾದಲ್ಲಿ ಶಾಲಾ ಕೊಠಡಿಗಳ ದುರಸ್ಥಿ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಬಳಸಲಾಗುತ್ತದೆ ಎಂದರು. ಕೊರಟಗೆರೆ ತಾಲೂಕಿನಲ್ಲಿ 48 ಗ್ರಾಮಗಳನ್ನು ನೂತನವಾಗಿ ಮಾಡಲಾಗಿದ್ದು ಇವುಗಳಲ್ಲಿ ಲಂಬಾಣಿ ತಾಂಡ ಮತ್ತು ಗೊಲ್ಲರಹಟ್ಟಿಗಳು ಸೇರಿದ್ದು ಈಗಾಗಲೇ 800 ಜನರಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ, ತಾಲೂಕಿನಲ್ಲಿ 4422 ನರೇಗಾ ಕಾಮಗಾರಿಗಳು, 39 ಕೋಟಿ ರೂಗಳಲ್ಲಿ ಪ್ರಾರಂಭವಾಗಿದ್ದು 20 ಕೋಟಿ ವ್ಯಯವಾಗಿದೆ,ತಾಲೂಕಿನಲ್ಲಿ ಎತ್ತಿನ ಹೊಳೆ ಯೋಜನೆಯಲ್ಲಿ ಕೆರೆ ತುಂಬಿಸುವ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದು, ಬೈರಗೊಂಡ್ಲು ಬಳಿಯ ಬಫರ್ ಡ್ಯಾಂ ಪುನರ್ ಪರಿಶೀಲನೆಗೆ ರಾಜ್ಯದ…

Read More

ತುಮಕೂರು: ‘ಬ್ರಿಟಿಷ್ ಕೌನ್ಸಿಲ್‌ನವರು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಹಯೋಗದಲ್ಲಿ ಇಂಗ್ಲೆAಡ್‌ನ ಯೂನಿವರ್ಸಿಟಿ ಆಫ್ ಈಸ್ಟ್ ಲಂಡನ್‌ಗೆ ನ.9ರಿಂದ 23ರವರೆಗೆ ಹಮ್ಮಿಕೊಂಡಿರುವ ಅಧ್ಯಯನ ಪ್ರವಾಸಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಐದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ’ ಎಂದು ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು. ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿ, ಶೈಕ್ಷಣಿಕ ಪ್ರವಾಸದ ಕುರಿತು ಶುಕ್ರವಾರ ಮಾಹಿತಿ ನೀಡಿದ ಅವರು, ರಾಜ್ಯ ಉನ್ನತ ಶಿಕ್ಷಣದ ಕಾರ್ಯಕ್ರಮವಾದ ಸ್ಕೌಟ್ (ಸ್ಕಾಲರ್ ಫಾರ್ ಔಟ್‌ಸ್ಟಾö್ಯಂಡಿAಗ್ ಅಂಡರ್ ಗ್ರಾö್ಯಜುಯೇಟ್ ಟ್ಯಾಲೆಂಟ್) ಅಡಿಯಲ್ಲಿ ಅಧ್ಯಯನ ಪ್ರವಾಸದ ಮೊದಲ ಹಂತದಲ್ಲಿ ರಾಜ್ಯದ ಐದು ವಿವಿಗಳ 30 ವಿದ್ಯಾಥಿಗಳು ಇಂಗ್ಲೆAಡ್‌ಗೆ ತೆರಳಲಿದ್ದಾರೆ. ಈ ಪೈಕಿ ತುಮಕೂರು ವಿವಿಯ ಐದು ವಿದ್ಯಾಥಿಗಳಿಗೆ ಅವಕಾಶ ಸಿಕ್ಕಿರುವುದು ಅವರ ಮತ್ತು ವಿವಿಯ ಭವಿಷ್ಯದ ತಿರುವಿನ ಹಂತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಪ್ರವಾಸದ ವೀಸಾ, ಇತರೆ ಖರ್ಚುಗಳನ್ನು ಬ್ರಿಟಿಷ್ ಕೌನ್ಸಿಲ್ ಭರಿಸಲಿದೆ. 6 ಲಕ್ಷ ಪ್ರಯಾಣ ವೆಚ್ಚವನ್ನು ತುಮಕೂರು ವಿವಿಯಿಂದ ಭರಿಸಲಿದ್ದೇವೆ.…

Read More

ತುಮಕೂರು : ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಕಳೆದ 25 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಬಿಲ್ ಕಲೆಕ್ಟರ್ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಜೇಷ್ಠತೆ ಹಾಗೂ ಅರ್ಹತೆ ಆಧಾರದ ಮೇಲೆ ಖಾಲಿ ಇರುವ ಗ್ರೇಡ್-2 ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳಿಗೆ ಇಂದು ಬಡ್ತಿ ನೀಡಿ ಆದೇಶ ಹೊರಡಿಸಲಾಗಿದೆ. ಕರವಸೂಲಿಗಾರ(ಬಿಲ್ ಕಲೆಕ್ಟರ್) ವೃಂದದಿAದ ಗ್ರೇಡ್-2 ಕಾರ್ಯದರ್ಶಿ ಹುದ್ದೆಗಳಿಗೆ 13 ಮಂದಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗೆ 8 ಮಂದಿ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ವೃಂದದಿAದ ಗ್ರೇಡ್ 2 ಕಾರ್ಯದರ್ಶಿ ಹುದ್ದೆಗೆ 9 ಮಂದಿ ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ 9 ಮಂದಿ ಸೇರಿದಂತೆ ಒಟ್ಟು 39 ನೌಕರರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ. ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಡ್ತಿ ನೀಡಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ(ಅಭಿವೃದ್ಧಿ) ಕೆ.ಪಿ. ಸಂಜೀವಪ್ಪ ಮತ್ತು ಸಕ್ಷಮ ಪ್ರಾಧಿಕಾರ ಸಮಿತಿಯ ಸದಸ್ಯರು…

Read More

ಹುಳಿಯಾರು: ಖಾಸಗಿ ಒಡತನದ ಸೋಲಾರ್ ಕಂಪನಿಗೆ ಸರ್ಕಾರಿ ಭೂಮಿ ಗುತ್ತಿಗೆ ನೀಡುವ ಮೂಲಕ ಆ ಭೂಮಿಯಲ್ಲಿ ಅನ್ನ ತಿನ್ನುತ್ತಿದ್ದ ದಲಿತರನ್ನು ಒಕ್ಕಲೆಬ್ಬಿಸಿ, ಬೀದಿಗೆ ತಳ್ಳಿರುವ ಘಟನೆ ಹುಳಿಯಾರು ಸಮೀಪದ ಕಂದಿಗೆರೆ ಹೋಬಳಿಯ ಚಿಕ್ಕರಾಂಪುರದಲ್ಲಿ ನಡೆದಿದೆ. ಸರ್ಕಾರಿ ಸರ್ವೇ ನಂ. 14 ರಲ್ಲಿರುವ 148 ಎಕರೆ ಸರ್ಕಾರಿ ಭೂಮಿಯನ್ನು ಚಿಕ್ಕರಾಂಪುರದ ಪರಿಶಿಷ್ಟ ಜಾತಿಯ ಒಂದೇ ಕೋಮಿನ ನೂರಾರು ಜನ ಕಳೆದ 30-40 ವರ್ಷಗಳಿಂದ ಉಳುಮೆ ಮಾಡಿಕೊಂಡಿದ್ದು ತಮ್ಮ ಹಸಿದ ಹೊಟ್ಟೆಯ ತುಂಬಲು ಹಿಡಿ ಅನ್ನ ಬೆಳೆದುಕೊಳ್ಳುತ್ತಿದ್ದರು. ಮಳೆಯಾಶ್ರಿತ ಬೆಳೆಯಾದ ರಾಗಿ, ಹುರುಳಿ ಬೆಳೆದು ವರ್ಷ ಪೂರ್ತಿ ಈ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿದ್ದರು. ಸರ್ವೇ 14 ರಲ್ಲಿ ಸುಮಾರು 62 ಕುಟುಂಬ ತಲಾ ಎರಡೆರಡು ಎಕರೆ ಭೂಮಿಯನ್ನು 1980 ರಿಂದಲೂ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. 1990 ಮತ್ತು 1998 ಹಾಗೂ 2018 ರಲ್ಲಿ ಈ ಭಾಗದ ಭೂರಹಿತ ದಲಿತ ವರ್ಗದ ರೈತರು ಫಾರಂ: 50, 53, ಮತ್ತು 57 ನಲ್ಲಿ…

Read More

ತುಮಕೂರು : ಜಿಲ್ಲಾಡಳಿತ ವತಿಯಿಂದ ನವೆಂಬರ್ ಮಾಹೆಯಲ್ಲಿ ಆಚರಿಸಲಾಗುತ್ತಿರುವ ಸಂತ ಶ್ರೇಷ್ಠ ವೀರರಾಣಿ ಒನಕೆ ಓಬವ್ವ ಜಯಂತಿ ಹಾಗೂ ಕನಕದಾಸರ ಜಯಂತಿಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ನವಂಬರ್ 11ರಂದು ವೀರರಾಣಿ ಒನಕೆ ಓಬವ್ವ ಜಯಂತಿ ಮತ್ತು ನವೆಂಬರ್ 18ರಂದು ಸಂತ ಶ್ರೇಷ್ಠ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಒನಕೆ ಓಬವ್ವ ಹಾಗೂ ಕನಕದಾಸರ ವಿಚಾರಧಾರೆ ಮತ್ತು ಅವರ ಜೀವನ ಕುರಿತು ತಿಳಿಸುವ ಮೂಲಕ ಜಯಂತಿ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜನೆ ಮಾಡಬೇಕು. ಜಯಂತಿ ಅಂಗವಾಗಿ ಸಮುದಾಯದ ತಲಾ 10 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ವೇದಿಕೆ ಕಾರ್ಯಕ್ರಮದ ಮುನ್ನ ನಗರದ ಶಿರಾ ಗೇಟ್, ದಿಬ್ಬೂರು ಸೇರಿದಂತೆ ವಿವಿಧ ಭಾಗಗಳಿಂದ ಮೆರವಣಿಗೆ ಆಗಮಿಸುವುದರಿಂದ ಮೆರವಣಿಗೆಗೆ ವಿವಿಧ ಕಲಾ ತಂಡಗಳನ್ನು ಕರೆತರುವಂತೆ…

Read More