Author: News Desk Benkiyabale

ಕೊರಟಗೆರೆ ಒಂದು ವಾರದಿಂದ ಸುರಿಯುತ್ತಿರುವ ಬಾರಿ ಮಳೆಗೆ ತಾಲೂಕಿನ ಬಹುತೇಕ ಕೆರೆಗಳು ತುಂಬಿ ಕೋಡಿ ಬಿದ್ದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿ ಗ್ರಾಮಗಳಿಗೆ ಜಲ ದಿಗ್ಬಂಧನ ಆದಂತೆ ಬಾಸವಾಗುತ್ತಿದೆ. ಕೊರಟಗೆರೆ ತಾಲೂಕು ಬಯಲು ಸೀಮೆಯಾಗಿದ್ದು, ಈ ಬಾರಿ ಸುರಿದ ಬಾರಿ ಮಳೆಗೆ ಸಾವಿರಾರು ವರ್ಷಗಳ ಇತಿಹಾಸ ಇರುವ ಕೆರೆಗಳು ತುಂಬಿದ್ದು ರೈತರಿಗೆ ಒಂದು ಕಡೆ ಸಂತಸವಾದರೆ ಇನ್ನೊಂದು ಕಡೆ ಪ್ರತಿನಿತ್ಯ ಸಂಚಾರ ಮಾಡುವ ರಸ್ತೆಗಳು ನೀರು ಹರಿದು ಗುಂಡಿಗಳು ಬಿದ್ದು ರಸ್ತೆಗಳು ತುಂಬಾ ಹಾಳಾಗುತ್ತಿವೆ. ಸಾರ್ವಜನಿಕರು ಸಂಚಾರ ಮಾಡಲು ತೀರ್ವ ತೊಂದರೆ ಉಂಟಾಗಿದೆ. ತಾಲೂಕಿನಾದ್ಯಾAತ ಅಬ್ಬರಿಸಿದ ಮಳೆಯ ಆರ್ಭಟಕ್ಕೆ ಜಯಮಂಗಲಿ, ಗರುಡಾಚಲ ನದಿ, ಸುವರ್ಣಮುಖಿ ನದಿಗಳು ಮೈದುಂಬಿ ಹರಿಯುತ್ತಿವೆ. ಅತಿ ಹೆಚ್ಚು ಮಳೆ ಬರುತ್ತಿರುವ ಕಾರಣ ತಾಲೂಕು ದಂಡಾಧಿಕಾರಿಗಳು ನದಿ ಪಾತ್ರದಲ್ಲಿರುವ ಕುಟುಂಬಗಳು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಯಾಗಿ ಇರುವಂತೆ ಸೂಚನೆ ನೀಡಿದ್ದಾರೆ. ತಹಸೀಲ್ದಾರ್ ಮಂಜುನಾಥ್ ತಾಲೂಕಿನಾದ್ಯಾಂತ ಸಂಚಾರ ಮಾಡಿ ತಾಲೂಕಿನಲ್ಲಿ ಯಾವುದೆ ಅಹಿತಕರ ಘಟನೆ ನಡೆದರೆ ತಕ್ಷಣ ಗ್ರಾಪಂ, ತಾಪಂ, ಹಾಗೂ…

Read More

ತುರುವೇಕೆರೆ: ತಾಲ್ಲೂಕಿನಾದ್ಯಂತ ನಿರಂತರ ಸುರಿಯುತ್ತಿರುವ ಮಳೆಗೆ ಕೆಲವೆಡೆಗಳಲ್ಲಿನ ಕೆರೆಗಳು ಕೋಡಿ ಬಿದ್ದು ನೀರು ರಸ್ತೆ ಮೇಲೆ ಹರಿದು ಸಂಚಾರಕ್ಕೆ ಅಡಚಣೆಯಾಗಿದ್ದರೆ, ರಾತ್ರಿ ಮಳೆಗೆ ಮನೆ ಗೋಡೆ ಕುಸಿದಿದೆ. ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಹೊಸಹಳ್ಳಿ ಗ್ರಾಮದ ಪಾರ್ವತಮ್ಮನವರ ವಾಸದ ಮನೆಯ ಒಂದು ಭಾಗದ ಗೋಡೆ ಬುಧವಾರ ರಾತ್ರಿ ಕುಸಿದು ಬಿದ್ದು ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದು ಮನೆಯ ದವಸ, ದಾನ್ಯ ಸೇರಿದಂತೆ ಹಲವು ಪರಿಕರಗಳು ಹಾಳಾಗಿವೆ. ಪಟ್ಟಣದ ೧೩ನೇ ವಾರ್ಡ್ನಲ್ಲಿ ಕೆಲವರು ರಾಜಕಾಲುವೆ ಒತ್ತುವರಿ ಮಾಡಿಕೊಂಡು ಮುಚ್ಚಿರುವುದರಿಂದ ಮಳೆ ನೀರು ಇಲ್ಲಿನ ವೆಂಕಟೇಶ್, ಕೆಂಪೇಗೌಡ, ಮರಿಯಪ್ಪ ಸೇರಿದಂತೆ ನಾಲ್ವರ ಮನೆಗಳು ಮಳೆ ನೀರು ನುಗ್ಗಿ ಮನೆಯ ದಿನ ನಿತ್ಯದ ಪರಿಕರಗಳೆಲ್ಲ ಹಾನಿಯಾಗಿವೆ. ತಹಶೀಲ್ದಾರ್ ಎನ್.ಎ.ಕುಂಞಅಹಮದ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಆಶಾ, ಸದಸ್ಯ ಅಂಜನ್ ಕುಮಾರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಶಿರಸ್ತೆದಾರ್ ಸುನಿಲ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಒತ್ತುವರಿ ತೆರವು ಮಾಡಿಸಿ, ಕಾಲುವೆ ನೀರು ಸರಾಗವಾಗಿ ಹೋಗುವಂತೆ ಮಾಡಿಸಿದರು. ತಾಲ್ಲೂಕಿನ ಕೊಂಡಜ್ಜಿ ಕ್ರಾಸ್ ಸೊಪ್ಪನಹಳ್ಳಿ…

Read More

ತಿಪಟೂರು : ಋತುವಿಗೆ ಅನುಗುಣವಾಗಿ ಅಹಾರ ಪದ್ದತಿಯನ್ನು ಅಳವಡಿಸಿಕೊಂಡರೆ ಮನುಷ್ಯನ ಜೀವನವು ಆರೋಗ್ಯಕರವಾಗಿದ್ದು, ಜೊತೆಯಲ್ಲಿ ಯೋಗ, ಪ್ರಾಣಾಯಾಮ, ಧ್ಯಾನ, ಪಠಣ ಅತಿ ಅವಶ್ಯಕ ಎಂದು ಆಯುಷ್ ಆಸ್ವತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಸುಮನಾ ತಿಳಿಸಿದರು. ತಾಲ್ಲೂಕಿನ ಬಿದರೆಗುಡಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೊನೇಹಳ್ಳಿ ಆಯುಷ್ ಆಸ್ವತ್ರೆಯ ಸಹಯೋಗದಲ್ಲಿ ೯ನೇ ರಾಷ್ಟಿçÃಯ ಆರ್ಯುವೇದ ದಿನಾಚರಣೆಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮನುಷ್ಯನಿಗೆ ಆಗಲೀ ಜೀವ ಇರುವ ಪ್ರಾಣಿ ಸಂಕಲುಗಳಿಗೆ ರೋಗ ಬರದಂತೆ ಆಯಾಸಗೊಳ್ಳದಂತೆ ಸದಾ ಲವಲವಿಕೆಯಿಂದ ಇರುವುದೇ ಆರೋಗ್ಯವೆಂದು ಧನ್ವಂತರಿಯಲ್ಲಿ ತಿಳಿಸಿದ್ದು, ಇತ್ತೀಚಿನ ದಿನಗಳಲ್ಲಿ ಹದಿಹರಯದ ಹೆಣ್ಣು ಮಕ್ಕಳು ಜಂಕ್‌ಫುಡ್‌ಗೆ ಮಾರುಹೋಗಿ ರಾಸಾಯನಿಕ ಆಹಾರಗಳನ್ನು ಹಾಗೂ ಅತಿಯಾದ ಎಣ್ಣೆ ಪದಾರ್ಥಗಳನ್ನು, ಬೀದಿ ಬದಿಯಲ್ಲಿನ ಆಹಾರಗಳನ್ನು ಸೇವಿಸುತ್ತಿರುವುದರಿಂದ ಋತು ಸಂಬAಧಿ ಕಾಯಿಲೆಗಳು ಸಹ ಹೆಚ್ಚಾಗುತ್ತಿದ್ದು ಅದರಿಂದ ಮುಟ್ಟಿನ ದಿನಗಳಲ್ಲಿ ಹೊಟ್ಟೆ ನೋವು, ಅನಿಮಯತ ರಕ್ತಸ್ರಾವ ಅಥವಾ ಸ್ರಾವ ಆಗದೇ ಇರುವುದು ಇಂತಹ ತೊಂದರೆಗಳು, ಪಿಸಿಓಡಿಯಂತಹ ಗರ್ಭಕೋಶದ ವೈಪರಿತ್ಯಗಳು ಕಂಡುಬರುತ್ತವೆ. ಇವುಗಳಿಗೆ ಆಯುರ್ವೇದದಲ್ಲಿ ತಿಳಿಸಿರುವ ಜೀವನ ಶೈಲಿ…

Read More

ತುಮಕೂರು:\ ಇತ್ತೀಚೆಗೆ ಸುರಿಯುತ್ತಿರುವ ಮಳೆಯ ಪರಿಣಾಮ ನಗರದ ಆರ್.ಟಿ.ನಗರದ ಹೋರಿ ಮುದ್ದಪ್ಪ ಬಡಾವಣೆಯಲ್ಲಿ ಮಳೆನೀರು ಹಾಗೂ ಯುಜಿಡಿ ಕೊಳಚೆ ಮನೆಗಳಿಗೆ ನುಗ್ಗಿ ಅವಾಂತರ ಉಂಟಾಗಿದೆ. ಇದರಿಂದ ಇಡೀ ಪ್ರದೇಶದಲ್ಲಿ ದುರ್ವಾಸನೆ ಆವರಿಸಿ ನಿವಾಸಿಗಳು ನಿತ್ಯ ಸಂಕಟ ಅನುಭವಿಸುವಂತಾಗಿದೆ. ಈ ಪ್ರದೇಶದಲ್ಲಿ ವ್ಯವಸ್ಥಿತ ಚರಂಡಿ ವ್ಯವಸ್ಥೆ ಇಲ್ಲದಿರುವುದು ಹಾಗೂ ಅವೈಜ್ಞಾನಿಕ ಒಳಚರಂಡಿ ವ್ಯವಸ್ಥೆಯಿಂದಾಗಿ ಪ್ರತಿ ಬಾರಿ ಮಳೆ ಸುರಿದಾಗಲೂ ಇಲ್ಲಿನ ಜನ ಇಂತಹ ಸಮಸ್ಯೆ ಅನುಭವಿಸುವಂತಾಗಿದೆ. ಈ ಸಮಸ್ಯೆ ಬಗ್ಗೆ ಹಲವು ಬಾರಿ ನಗರಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಸ್ಪಂದಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂದು ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು. ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದ ಕಾರಣ ವಿಪರೀತ ಮಳೆ ಸುರಿದಾಗ ಮಳೆನೀರು ಸರಾಗವಾಗಿ ಹರಿದುಹೋಗದೆ, ರಸ್ತೆ, ಮನೆಗಳಿಗೆ ನುಗ್ಗಿ ಅವಾಂತರ ಸೃಸ್ಟಿಸುತ್ತದೆ. ಸಾಲದಕ್ಕೆ ಇಲ್ಲಿನ ಒಳಚರಂಡಿ ವ್ಯವಸ್ಥೆಯೂ ಸರಿಯಾಗಿಲ್ಲ, ಕಸ ತುಂಬಿವೆ. ಮಳೆಗಾಲದಲ್ಲಿ ನೀರು ಹರಿದು ಒಳಚರಂಡಿಗಳ ಕೊಳಚೆ ಉಕ್ಕಿ ರಸ್ತೆ, ಮನೆಗಳಿಗೆ ಹರಿಯುತ್ತದೆ. ಮಳೆಗಾಲ ಆರಂಭವಾದಾಗಿನಿAದ ಇಲ್ಲಿನ ನಿವಾಸಿಗಳು…

Read More

ತುಮಕೂರು ತುಮಕೂರು ಭೂಮಿ ಕೇಂದ್ರದ ಆರ್ ಆರ್ ಟಿ ಶಿರಸ್ತೇದಾರ್ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು ಹಾಗೂ ಅವರ ಕುಟುಂಬ ಸರ್ಕಾರಿ ಗುಂಡುತೋಪು ನುಂಗಿರುವ ಆರೋಪ ಕೇಳಿ ಬಂದಿದ್ದು ಈ ಸಂಬAಧ ಕ್ಯಾತ್ಸಂದ್ರ ಠಾಣೆಯಲ್ಲಿ ದೂರು ದಾಖಲಾಗಿದೆ. ತುಮಕೂರು ತಾಲ್ಲೂಕು ಅನುಪನಹಳ್ಳಿ ಗ್ರಾಮದ ಸರ್ವೇ ನಂ ೩೫ರ ಪಿಯಲ್ಲಿದ್ದ ೦.೨೪ ಗುಂಟೆ ಹಾಗೂ ಸರ್ವೇ ನಂಬರ್ ೨೪/ಪಿ೯ರಲ್ಲಿದ್ದ ೬ ಗುಂಟೆ ಗುಂಡುತೋಪನ್ನು ನರಸಿಂಹರಾಜು ಅವರ ಕುಟುಂಬ ಅಕ್ರಮವಾಗಿ ಕಬಳಿಸಿ ಮಾರಾಟ ಮಾಡಿದ್ದಾರೆ ಎಂದು ದುರ್ಗದಹಳ್ಳಿ ಡಿ.ಪಿ.ತಿಮ್ಮರಾಜು ದೂರು ನೀಡಿದ್ದಾರೆ. ಅನುಪನಹಳ್ಳಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ನರಸಿಂಹಮೂರ್ತಿ( ನರಸಿಂಹರಾಜು ಅವರ ತಂದೆ) ಅವರು ಹೆಂಡತಿ ಪುಟ್ಟತಾಯಮ್ಮ ಅವರ ಹೆಸರಿಗೆ ಎಂ.ಆರ್.ಸAಖ್ಯೆ:೦೩/೯೨-೯೨, ಎಲ್.ಆರ್.ಡಿ.ಸಿ.ಆರ್ ಸಂಖ್ಯೆ: ೨೭೫/೯೦-೯೧ ರಂತೆ ನಕಲಿ ದಾಖಲೆ ಸೃಷ್ಟಿ ಕಬಳಿಸಿದ್ದಾರೆ. ನಂತರ ೨೦೦೫ರಲ್ಲಿ ಪುಟ್ಟತಾಯಮ್ಮ, ವಿಜಯ್ ಕುಮಾರ್, ನರಸಿಂಹರಾಜು ಅವರು ೪೮ ಸಾವಿರ ರೂಪಾಯಿಗೆ ಅನುಪನಹಳ್ಳಿ ಯ ನಾರಾಯಣಪ್ಪ ಅವರಿಗೆ ಮಾರಾಟ ಮಾರಾಟ ಮಾಡಿದ್ದಾರೆ, ಗುಂಡುತೋಪು ಪಕ್ಕದಲ್ಲಿ ಜಮೀನು ಹೊಂದಿರುವ…

Read More

ತುಮಕೂರು: ಕುಣಿಗಲ್ ರಸ್ತೆಯ ಬಿದರಕಟ್ಟೆ ಬಳಿ ಇರುವ ತುಮಕೂರು ವಿವಿ ನೂತನ ಕ್ಯಾಂಪಸ್ ಜ್ಞಾನಸಿರಿಗೆ ತುಮಕೂರು ನಗರದಿಂದ ವಿದ್ಯಾರ್ಥಿಗಳು ತೆರಳು ಆಗಿರುವ ಸಾರಿಗೆ ಸಮಸ್ಯೆ ಕುರಿತಂತೆ ಇಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಹಾಗೂ ವಿವಿಯ ಕುಲಪತಿ ಪ್ರೊ.ಎಂ.ವೆAಕಟೇಶ್ವರಲು ಅವರೊಂದಿಗೆ ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಜೊತೆ ಚರ್ಚೆ ನಡೆಸಿದರು. ಮಂಗಳವಾರ ಬೆಳಗ್ಗೆ ದೇವರಾಜ ಅರಸು ಬಸ್ ನಿಲ್ದಾಣದ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿಯಲ್ಲಿ ಭೇಟಿಯಾಗಿ ನೂತನ ಕ್ಯಾಂಪಸ್‌ಗೆ ತೆರಳಲು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಕುರಿತಂತೆ ಚರ್ಚೆ ನಡೆಸಿ, ಪರಿಹರಿಸುವಂತೆ ಮನವಿ ಮಾಡಿದರು. ಈ ವೇಳೆ ಮಾತನಾಡಿ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ,ತÀÄಮಕೂರು ವಿಶ್ವವಿದ್ಯಾಲಯದ ನೂತನ ಕ್ಯಾಂಪಸ್‌ನಲ್ಲಿ ಅಕ್ಟೋಬರ್ ೨೧ ರಿಂದ ವಿಜ್ಞಾನಕ್ಕೆ ಸಂಬAಧಿಸಿದ ೧೨ ವಿಷಯಗಳ ಪಾಠ ಪ್ರವಚನದ ಆರಂಭ ಗೊಂಡಿದೆ.ತÀÄಮಕೂರು ನಗರದಿಂದ ಜ್ಞಾನಸಿರಿ ಕ್ಯಾಂಪಸ್ ಸುಮಾರು ೧೮ ಕಿ.ಮಿ.ದೂರದಲ್ಲಿದ್ದು,ಕುಣಿಗಲ್ ತುಮಕೂರು ರಸ್ತೆಯ ನಾಗವಲ್ಲಿ ಗ್ರಾಮದಿಂದ ೨.೫.ಕಿ.ಮಿ ಇದೆ.ವಿವಿಗೆ ತನ್ನದೇ ಆದ ಸಾರಿಗೆ ವ್ಯವಸ್ಥೆ ಇಲ್ಲದ…

Read More

ಹುಳಿಯಾರು: ಹುಳಿಯಾರು ಹೋಬಳಿಯಲ್ಲಿ ಕಳೆದ ಮರ‍್ನಲ್ಕು ದಿನಗಳಿಂದ ಜೋರು ಮಳೆಯಾಗುತ್ತಿದ್ದರೂ ಯಾವುದೇ ಅವಘಡಗಳು ಸಂಬವಿಸಿರಲಿಲ್ಲ. ಆದರೆ ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ಕೆರೆಕಟ್ಟೆ ಭರ್ತಿಯಾಗುವ ಜೊತೆಗೆ ಅಲ್ಲಲ್ಲಿ ರಾಗಿ ಬೆಳೆ ನೆಲ್ಲಕಚ್ಚಿದೆ ಹಾಗೂ ಕೋಳಿಗಳನ್ನು ಬಲಿ ಪಡೆದುಕೊಂಡ ಘಟನೆ ನಡೆದಿದೆ. ಸೋಮವಾರ ರಾತ್ರಿ ೭ ಗಂಟೆಗೆ ಮಳೆ ಅಬ್ಬರ ಆರಂಭವಾಯಿತು. ಗುಡುಗು ಸಿಡಿಲಿನ ಅಬ್ಬರದ ಜೊತೆಗೆ ೨ ಗಂಟೆಗೆ ಹೆಚ್ಚು ಕಾಲ ಒಂದೇ ಸಮನೆ ಮಳೆ ಸುರಿಯಿತು. ಸ್ವಲ್ಪ ಹೊತ್ತು ಬಿಡುವು ನೀಡಿ ಮತ್ತೆ ಮಳೆಯಾಯಿತು. ಬಿರುಸಿನ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹುಳಿಯಾರಿನ ವಾಲ್ಮೀಕಿ ಸರ್ಕಲ್ ಬಳಿ ನ್ಯಾಷನಲ್ ಹೈವೆಯಲ್ಲಿ ಎರಡು ಅಡಿಗಳಿಗೂ ಹೆಚ್ಚು ನೀರು ತುಂಬಿಕೊAಡು ವಾಹನ ಚಾಲಕರು ಪರದಾಡಿದರು. ನೀರು ಹರಿಯಲು ಜಾಗವಿಲ್ಲದೆ ಸಮಸ್ಯೆ ಉಂಟಾಯಿತು. ಹಲವೆಡೆ ಚರಂಡಿಗಳಲ್ಲಿ ನೀರು ತುಂಬಿಕೊAಡು ತ್ಯಾಜ್ಯ ಸಮೇತ ರಸ್ತೆಗಳಲ್ಲಿ ಹರಿಯಿತು. ಹೋಬಳಿಯ ಬಹುತೇಕ ಕೆರೆಗಳಿಗೆ ನೀರು ಬಂದಿದೆ. ಚಿಕ್ಕಬಿದರೆ ಕೆರೆ ಕೋಡಿ ಬಿದ್ದಿದೆ. ಹಳ್ಳಿಗಳ ರಸ್ತೆಗಳು ಕೆಸರು…

Read More

ತುಮಕೂರು: ಆರಂಭದಲ್ಲಿ ಹೋಗಿ ಕೆಡಿಸಿದ ಮಳೆ, ಈಗ ವಿಪರೀತವಾಗಿ ರೈತರು ಬೆಳೆದ ಶೇಂಗಾ, ರಾಗಿ ಇನ್ನಿತರ ಕೃಷಿ ಉತ್ಪನ್ನಗಳು ಹಾಳಾಗಿದ್ದು, ಜಿಲ್ಲಾಡಳಿತ ಕೂಡಲೇ ಬೆಳೆ ನಷ್ಟ ಪರಿಹಾರ ಅಂದಾಜಿಸಿ, ವೈಜ್ಞಾನಿಕ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಒತ್ತಾಯಿಸಿದ್ದಾರೆ. ವಿಜ್ಞಾನ ಕೇಂದ್ರದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು,ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ರೈತರ ಹೊಲ,ಗದ್ದೆಗಳಲ್ಲಿ ಬೆಳೆದ ಬೆಳೆಯಲ್ಲದೆ,ಮನೆಗಳು,ಗುಡಿಸಲುಗಳು ನೆಲಕಚ್ಚಿವೆ.ಜನ ಜಾನುವಾರುಗಳಿಗೆ ತೀವ್ರ ಸ್ವರೂಪದ ತೊಂದರೆಯಾಗಿದೆ.ಆದರೆ ಇದುವರೆಗೂ ಜಿಲ್ಲಾಡಳಿತ ಮಳೆ ಹಾನಿಯನ್ನು ತೀವ್ರವಾಗಿ ಪರಿಗಣಿಸಿದಂತೆ ಕಂಡು ಬರುತ್ತಿಲ್ಲ. ಹಾಗಾಗಿ ಜಿಲ್ಲಾಡಳಿತ ಕೂಡಲೇ ಮಳೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ ಎಂದರು. ರೈತರು ಹತ್ತಾರು ವರ್ಷಗಳಿಂದ ಸರಕಾರಿ ಭೂಮಿಯನ್ನು ಉಳುಮೆ ಮಾಡುತ್ತಾ ಫಾರಂ ನಂ ೫೦,೫೩ ಮತ್ತು ೫೭ ಅಡಿಯಲ್ಲಿ ಸರಕಾರಕ್ಕೆ ಮಂಜೂರಾತಿಗಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದರೂ ಇದುವರೆಗೂ ಬಡವರಿಗೆ ಭೂಮಿ ಸಿಕ್ಕಿಲ್ಲ.ಆದರೆ ಉಳ್ಳುವರಿಗೆ ಭೂಮಿ ದೊರೆಯುತ್ತಿದೆ.ಈ ಬಗ್ಗೆ ಜಿಲ್ಲಾಧಿಕಾರಿಗಳೇ…

Read More

ತುಮಕೂರು ಜನಪ್ರತಿನಿಧಿಗಳು ಜಾತಿ ನಾಯಕ ರಾಗುವು ದರಿಂದ ಜನನಾಯಕರಾಗಲು ಸಾಧ್ಯವಿಲ್ಲ.ಎಲ್ಲ ವರ್ಗದ ಜನರ ವಿಶ್ವಾಸ ಗಳಿಸಿದಾಗ ಮಾತ್ರ ಹೆಚ್ಚು ದಿನ ರಾಜಕೀಯ ಅಧಿಕಾರ ಅನುಭವಿಸಲು ಸಾಧ್ಯ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ನಗರದ ಎಂಪ್ರೆಸ್ ಕೆಪಿಎಸ್ ಶಾಲೆ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ಧಿ ಸಂಘ (ರಿ) ,ಶ್ರೀ ವಾಲ್ಮೀಕಿ ವಿದ್ಯಾವರ್ಧಕ ಸಂಘ, ಜಿಲ್ಲ ನಾಯಕ ಮಹಿಳಾ ಸಮಾಜ, ಶಬರಿ ಮಹಿಳಾ ಪತ್ತಿನ ಸಹಕಾರ ಸಂಘ.ನಿ, ತುಮಕೂರು ವಾಲ್ಮೀಕಿ ಸಹಕಾರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ೨೦೨೩-೨೪ ನೇ ಸಾಲಿನ ವಾಲ್ಮೀಕಿ ಸಮಾಜದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ರಾಜಕೀಯ ಅಧಿಕಾರವೆಂಬುದು ಅತಿ ಮುಖ್ಯ ಅಂಗವಾಗಿದೆ.ಅಧಿಕಾರ ದೊರೆತ ಸಂದರ್ಭದಲ್ಲಿ ದ್ವನಿ ಇಲ್ಲದ ಸಮುದಾಯಗಳ ಪರವಾಗಿ ಕೆಲಸ ಮಾಡಿದಾಗ ಮಾತ್ರ ಜನರ ಪ್ರೀತಿಗಳಿಸಲು ಸಾಧ್ಯ ಎಂದರು. ನಾಯಕ ಸಮುದಾಯದ ಮಕ್ಕಳು ಜಿಲ್ಲಾಮಟ್ಟದಲ್ಲಿ ೨೫೦ ಕ್ಕೂ ಹೆಚ್ಚು ಮಕ್ಕಳು ಶೇ ೮೦…

Read More

ತುಮಕೂರು ತಮ್ಮ ಪ್ರಾಣದ ಹಂಗನ್ನು ತೊರೆದು ಸದಾ ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಶ್ಲಾಘನೀಯ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ. ಜಯಂತಕುಮಾರ್ ಹೇಳಿದರು. ನಗರದ ಬಿ.ಹೆಚ್. ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರ ಸ್ಮಾರಕದ ಪುತ್ಥಳಿಗೆ ಪುಷ್ಪಗುಚ್ಛ ಇರಿಸಿ ಗೌರವ ಸಲ್ಲಿಸಿ ಅವರು ಮಾತನಾಡಿದರು. ದೇಶದಲ್ಲಿ ನಾವುಗಳು ರಾತ್ರಿ ವೇಳೆ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಪೊಲೀಸರ ಸೇವೆಯೇ ಕಾರಣ. ಪೊಲೀಸರು ದೇಶಕ್ಕಾಗಿ, ಸಮಾಜಕ್ಕಾಗಿ ದಿನದ ೨೪ ಗಂಟೆಯೂ ಸಾಕಷ್ಟು ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೆಲ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಕಾರ್ಯನಿರ್ವಹಿಸುವ ಸನ್ನಿವೇಶಗಳು ಎದುರಾಗುತ್ತವೆ ಎಂದರು. ದೇಶ ಮತ್ತು ಸಮಾಜದ ರಕ್ಷಣೆಗಾಗಿ ಪ್ರತಿ ಕ್ಷಣವೂ ಸೇವೆ ಸಲ್ಲಿಸುತ್ತಿರುವ ಪೊಲೀಸರ ಕಾರ್ಯವನ್ನು ನಾವೆಲ್ಲರೂ ಸ್ಮರಿಸಬೇಕು. ಒಮ್ಮೊಮ್ಮೆ ತಮ್ಮ ಕುಟುಂಬದ ಹಿತವನ್ನು ಬದಿಗೊತ್ತಿ ಸಮಾಜದ ರಕ್ಷಣೆ ಕಾಪಾಡುವ ಪೊಲೀಸರ ಸೇವೆ ಶ್ಲಾಘನೀಯ ಎಂದರು. ೧೯೫೯ ರ ಅ.…

Read More