ತುಮಕೂರು ರಾಜ್ಯದ ತೋಟಗಾರಿಕಾ ಕ್ಷೇತ್ರಕ್ಕೆ ಎಂ.ಹೆಚ್.ಮರಿಗೌಡರ ಕೊಡುಗೆ ಅಪಾರ. ರಾಜ್ಯದ ೧೯ ಜಿಲ್ಲೆಗಳಲ್ಲಿ ೩೫೭ ಫಾರಂಗಳನ್ನು ತೆಗೆದು ತೋಟಗಾರಿಕೆಗೆ ಉತ್ತೇಜನ ನೀಡಿದ್ದರು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ. ತುಮಕೂರು ತಾಲೂಕು ಸಿರಿವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ತೋಟಗಾರಿಕಾ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟಿçÃಯ ತೋಟಗಾರಿಕಾ ದಿನಾಚರಣೆ ಹಾಗೂ ತೋಟಗಾರಿಕಾ ಭೀಷ್ಮ ಡಾ.ಎಂ.ಹೆಚ್. ಮರಿಗೌಡ ಜನ್ಮಜಯಂತಿ ಕಾರ್ಯಕ್ರಮಕ್ಕೆ ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡುತಿದ್ದ ಅವರು,.ಕೃಷಿಯ ಜೊತೆಗೆ, ತೋಟಗಾರಿಕಾ ಬೆಳೆಗಳ ಮೂಲಕ ಪರಿಸರದ ಜೊತೆಗೆ,ಕೃಷಿ ಇಲಾಖೆಯಿಂದ ತೋಟಗಾರಿಕೆಯನ್ನು ವಿಭಾಗೀಸಿ,ಪ್ರತ್ಯೇಕ ಇಲಾಖೆಯನ್ನಾಗಿಸಿ,ತೋಟಗಾರಿಕೆ ಬೆಳೆಗಳ ಬಗ್ಗೆ ಒತ್ತು ನೀಡಿದರು ಎಂದರು. ಬೆAಗಳೂರು, ಕೋಲಾರ, ತುಮಕೂರು ಹುಣಸೆ, ಹಲಸು, ಮಾವು ಬೆಳೆಯುವ ಮೂಲಕ ಬಂಜರು ಭೂಮಿಯನ್ನು ತೋಟವಾಗಿ ಪರಿವರ್ತಿಸಿ, ರೈತನನ್ನು ಆರ್ಥಿಕವಾಗಿ ಸದೃಢರನ್ನಾಗಿಸಿದರು. ಇದರ ಫಲವಾಗಿ ಸರಕಾರ ೧೯೯೩ನಲ್ಲಿ ಡಾ.ಎಂ.ಹೆಚ್.ಮರಿಗೌಡರಿಗೆ ತೋಟಗಾರಿಕಾ ರತ್ನ ಬಿರುದು ನೀಡಿ ಗೌರವಿಸಿತು ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದರು. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಹತ್ತನೇ ತರಗತಿ ನಂತರ ಮುಂದೇನು ಎಂಬ ವಿಷಯದ…
Author: News Desk Benkiyabale
ತುಮಕೂರು ವಿಶ್ವವಿದ್ಯಾನಿಲಯದ ೧೬ನೇ ವಾರ್ಷಿಕ ಘಟಿಕೋತ್ಸವವು ಆ.೭ ರಂದು ಸೋಮವಾರ ಬೆಳಗ್ಗೆ ೧೧-೦೦ ಗಂಟೆಗೆ ವಿಶ್ವವಿದ್ಯಾನಿಲಯದ ಡಾ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ ಸಭಾಂಗಣದಲ್ಲಿ ಜರುಗಲಿದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ತಿಳಿಸಿದರು. ತುಮಕೂರು ವಿಶ್ವವಿದ್ಯಾನಿಲಯದ ೧೬ನೇ ವಾರ್ಷಿಕ ಘಟಿಕೋತ್ಸವದ ಕುರಿತಂತೆ ನಡೆದ ಶನಿವಾರ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಅವರು ತಿಳಿಸಿದರು. ಕರ್ನಾಟಕದ ರಾಜ್ಯಪಾಲರೂ ತುಮಕೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಥಾವರ್ ಚಂದ್ ಗೆಹ್ಲೋಟ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ ಉನ್ನತ ಶಿಕ್ಷಣ ಸಚಿವರೂ ತುಮಕೂರು ವಿಶ್ವವಿದ್ಯಾನಿಲಯದ ಸಮಕುಲಾಧಿಪತಿಗಳೂ ಆಗಿರುವ ಡಾ. ಎಂ. ಸಿ. ಸುಧಾಕರ್ ಉಪಸ್ಥಿತರಿರುವರು. ಪ್ರೊ. ಸಾಂತಿಶ್ರೀ ಧೂಳಿಪುಡಿ ಪಂಡಿತ್, ಮಾನ್ಯ ಕುಲಪತಿಗಳು, ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ, ನವದೆಹಲಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು ಘಟಿಕೋತ್ಸವ ಭಾಷಣ ನೆರವೇರಿಸಲಿರುವರು ಎಂದರು. ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಎಂ. ವೆಂಕಟೇಶ್ವರಲು, ಕುಲಸಚಿವರಾದ ನಾಹಿದಾ ಜಮ್ ಜಮ್ ಉಪಸ್ಥಿತರಿರುವರು ಎಂದರು. ಸಮಾಜ ಸೇವಕ ಶ್ರೀ ಆರ್.…
ಹುಳಿಯಾರು ಶಾಲಾ ಮಕ್ಕಳ ಅಪೌಷ್ಠಿಕತೆ ತಡೆಯಲು ಸರ್ಕಾರ ಜಾರಿಗೆ ತಂದಿರುವ ಬಿಸಿಯೂಟವನ್ನು ಬೆಲೆ ಏರಿಕೆಯ ನಡುವೆ ಗುಣಮಟ್ಟದಿಂದ ನೀಡುವುದು ಸದ್ಯಕ್ಕೆ ಶಿಕ್ಷಕರಿಗಿರುವ ಸವಾಲಾಗಿದೆ. ಅಲ್ಲದೆ ೨ ತಿಂಗಳಿAದ ಬಿಸಿಯೂಟದ ಹಣ ಬಾರದಿರುವುದು ಸಮರ್ಪಕ ಜಾರಿಗೆ ಮತ್ತೊಷ್ಟು ತೊಡಕಾಗಿದೆ. ಸರ್ಕಾರ ಅಕ್ಷರ ದಾಸೋಹ ಇಲಾಖೆಯ ಮೂಲಕ ಬಿಸಿಯೂಟಕ್ಕಾಗಿ ಅಕ್ಕಿ, ಬೇಳೆ, ಅಡುಗೆ ಅನಿಲ, ಗೋಧಿ, ಎಣ್ಣೆ, ಸರಬರಾಜು ಮಾಡುತ್ತಿದೆ. ಇನ್ನು ಉಳಿದಂತೆ ಸಾಂಬಾರು ಪದಾರ್ಥಗಳು, ಉಪ್ಪು, ತರಕಾರಿ ಶಾಲೆಯವರೇ ಖರೀದಿಸಬೇಕಾಗಿದೆ. ಸರ್ಕಾರ ೧ ರಿಂದ ೫ ನೇ ತರಗತಿ ಒಂದು ಮಗುವಿಗೆ ೫.೪೫ ರೂ. ನೀಡುತ್ತಿದೆ. ೬ ರಿಂದ ೧೦ ನೇ ತರಗತಿ ಮಕ್ಕಳಿಗೆ ೮.೧೭ ರೂ. ನೀಡುತ್ತಿದೆ. ಆದರೆ ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ತರಕಾರಿ ಸೊಪ್ಪು ಬೆಲೆ ದುಪ್ಪಟ್ಟಾಗಿದೆ. ಅಲ್ಪ ಅನುದಾನದಲ್ಲಿ ಒಂದು ಮಗುವಿಗೆ ತರಕಾರಿ-ಸೊಪ್ಪು ಖರೀದಿಗೆ ಸರ್ಕಾರದ ಹಣ ಸಾಕಾಗುತ್ತಿಲ್ಲ. ಪರಿಣಾಮ ಬಿಸಿಯೂಟದ ಹೊಣೆ ಹೊತ್ತ ಶಿಕ್ಷಕರ ಜೇಬಿಗೆ ಕತ್ತರಿಯಾಗುತ್ತಿದೆ. ಪ್ರತಿದಿನ ಆಹಾರದಲ್ಲಿ ಬಳಕೆಯಾಗಲೇ ಬೇಕಾಗಿರುವ ಬೀನ್ಸ್, ಟೊಮೊಟೊ, ಹಸಿಮೆಣಸಿನಕಾಯಿ…
ತುಮಕೂರು ನಗರದ ರೇವತಿ ನೃತ್ಯ ಕಲಾಮಂದಿರ(ರಿ) ತುಮಕೂರು ಇದರ ೧೪ನೇ ವರ್ಷದ ಆಚಾರ್ಯ ನೃತ್ಯೋತ್ಸವ ಕಾರ್ಯಕ್ರಮ ಆಗಸ್ಟ್ ೦೫ರ ಸಂಜೆ ೪:೩೦ಕ್ಕೆ ಬಾಳನಕಟ್ಟೆಯ ಡಾ.ಗುಬ್ಬಿವೀರಣ್ಣ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ ಎಂದು ರೇವತಿ ನೃತ್ಯ ಕಲಾಮಂದಿರದ ಕಾರ್ಯದರ್ಶಿ ಸಹನಾ ಒಹಿಲೇಶ್ವರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೧೪ ವರ್ಷಗಳಿಂದ ತುಮಕೂರು ನಗರದ ಶಿರಾಗೇಟ್ ಮತ್ತು ವಿದ್ಯಾನಗರ,ಗುಬ್ಬಿಯಲ್ಲಿ ಶಾಖೆಗಳನ್ನು ತೆರದು ಭರತನಾಟ್ಯ ಮತ್ತು ಶಾಸ್ತಿçÃಯ ಸಂಗೀತವನ್ನು ಕಲಿಸುತ್ತಿರುವ ರೇವತಿ ನೃತ್ಯ ಕಲಾಮಂದಿ,ಪ್ರತಿವರ್ಷ ಪೌರಾಣಿಕ ಹಿನ್ನೆಲೆಯುಳ್ಳು ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಂಡು ಮಕ್ಕಳಿಂದ ಆಚಾರ್ಯ ನೃತ್ಯೋತ್ಸವ ಕಾರ್ಯಕ್ರಮವನ್ನು ಏರ್ಪಡಿಸಿಕೊಂಡು ಬರಲಾಗುತ್ತಿದೆ.ಕಳೆದ ವರ್ಷ ಸರ್ವಂ ಶಿವಂಮಯ ಎಂಬ ನೃತ್ಯ ರೂಪಕ ಪ್ರಸ್ತುತ ಪಡಿಸಲಾಗಿತ್ತು.ಈ ವರ್ಷ ಶ್ರೀನಿವಾಸ ಕಲ್ಯಾಣ ಎಂಬ ಕಥಾವಸ್ತುವನ್ನು ಒಳಗೊಂಡ ಸುಮಾರು ೧;೩೦ ಗಂಟೆಗಳ ಕಾಲದ ನೃತ್ಯ ಕಾರ್ಯಕ್ರಮಗಳ ನಡೆಯಲಿದೆ ಎಂದರು. ಆಗಸ್ಟ್ ೦೫ರ ಸಂಜೆ ೪:೩೦ಕ್ಕೆ ರೇವತಿ ನೃತ್ಯ ಕಲಾಮಂದಿರದ ನಾಲ್ಕುವರೆ ವರ್ಷದಿಂದ ನಲವತ್ತು ವರ್ಷದ ವರೆಗಿನ ಸುಮಾರು ೨೫೦ ಮಕ್ಕಳಿಂದ ನಟರಾಜ ಪೂಜೆಯೊಂದಿಗೆ ಆರಂಭವಾಗುವ…
ತುಮಕೂರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ “ಕರಾಮುವಿ ಶೈಕ್ಷಣಿಕ ಜಾಗೃತಿ ಪ್ರಚಾರ ಆಂದೋಲನ ವಾಹನಕ್ಕೆ ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ನಗರದ ಸಿದ್ದಗಂಗಾ ಮಠದಲ್ಲಿ ಚಾಲನೆ ನೀಡಿದರು. ಉನ್ನತ ಶಿಕ್ಷಣ ಮನೆ ಬಾಗಿಲಿಗೆ ನೀಡಲು ಕರಾಮುವಿಯ ಕುಲಪತಿ ಪ್ರೊ. ಶರಣಪ್ಪ.ವಿ. ಹಲಸೆ ಹಾಗೂ ಕುಲಸಚಿವರಾದ ಪ್ರೊ.ಕೆ.ಎಲ್.ಎನ್. ಮೂರ್ತಿ ರವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಕರಾಮುವಿಯು ಉನ್ನತ ಶಿಕ್ಷಣದ ಅವಕಾಶಗಳ ಬಗ್ಗೆ ಅರಿವು ಮೂಡಿಸುತ್ತಿರುವ ಕರಾಮುವಿ ಶೈಕ್ಷಣಿಕ ಜಾಗೃತಿ ಪ್ರಚಾರ ಆಂದೋಲನ ವಾಹನಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಶ್ರೀಗಳು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ವಿವಿಧ ಕಾರಣಗಳಿಂದ ಉನ್ನತ ಶಿಕ್ಷಣದಿಂದ ವಂಚಿತರಾದ ಸಮಾಜದ ವಿವಿಧ ವರ್ಗದ ಜನರಿಗೆ ವಿದ್ಯಾಭ್ಯಾಸ ಮುಂದುವರಿಸಲು, ಉದ್ಯೋಗಸ್ಥ ಜನರಿಗೆ, ಅಂಗವಿಕಲರಿಗೆ, ಮಹಿಳೆಯರಿಗೆ, ಜ್ಞಾನಾರ್ಜನೆ ಬಯಸುವ ಜನರಿಗೆ ಮನೆ ಬಾಗಿಲಿಗೆ ಕಡಿಮೆ ಶೈಕ್ಷಣಿಕ ವೆಚ್ಚದಲ್ಲಿ ಉತ್ತಮ ಶಿಕ್ಷಣ ನೀಡಲು ಶ್ರಮಿಸುತ್ತಿದ್ದು, ಈ ಸುವರ್ಣಾವಕಾಶವನ್ನು ತುಮಕೂರು ಜಿಲ್ಲಾ ವ್ಯಾಪ್ತಿಯ ಉದ್ಯೋಗಾಕಾಂಕ್ಷಿಗಳು ಮತ್ತು ವಿದ್ಯಾಸಕ್ತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.…
ಹುಳಿಯಾರು ಹುಟ್ಟಿದ ಮಗುವಿಗೆ ತಾಯಿಯ ಎದೆಹಾಲು ಮುಖ್ಯವಾಗಿದೆ, ಮೊದಲು ಬರುವ ಹಳದಿ ವರ್ಣದ ಗಟ್ಟಿಹಾಲು ಮಗುವಿಗೆ ಮೊದಲ ಲಸಿಕೆ ಇದ್ದಂತೆ. ಕೊಲೊಸ್ಟೊçÃಮ್‌ನಲ್ಲಿ ಪೌಷ್ಟಿಕಾಂಶ ಉತ್ಕöÈಷ್ಟವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತದೆ. ಮುಂಬರುವ ದೀರ್ಘಕಾಲಿನ ಕಾಯಿಲೆಗಳನ್ನು ತಡೆಗಟ್ಟುತ್ತದೆ. ಮಗುವಿನ ಜಠರ ಸ್ವಚ್ಛವಾಗುತ್ತದೆ. ೬ ತಿಂಗಳು ತುಂಬುವವರೆಗೂ ಕೇವಲ ಎದೆಹಾಲನ್ನೇ ಕೊಡಬೇಕು. ಎದೆಹಾಲನ್ನು ಹೊರತುಪಡಿಸಿ ಹರಳೆಣ್ಣೆ, ಜೇನುತುಪ್ಪ, ಪೌಡರ್ ಹಾಲು ಕೊಡಬಾರದು ಎಂದು ಹುಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಚಂದನಾ ಅವರು ತಿಳಿಸಿದರು. ಹುಳಿಯಾರು ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಗುವಿಗೆ ಎದೆ ಹಾಲು ನೀಡುವುದು ಪ್ರತಿಯೊಬ್ಬ ತಾಯಿಯ ಕರ್ತವ್ಯವಾಗಿದೆ. ಕೆಲವೊಬ್ಬರು ತಮ್ಮ ಸೌಂದರ್ಯ ಹಾಳಾಗುತ್ತದೆ ಎಂದು ಎದೆ ಹಾಲು ಕುಡಿಸುವುದನ್ನು ಬಿಡುತ್ತಾರೆ. ಆದರೆ ಹಾಗೆ ಮಾಡುವುದು ಸರಿಯಾದ ಕ್ರಮವಲ್ಲ. ಹೆರಿಗೆಯಾದ ಒಂದು ಗಂಟೆಯೊಳಗೆ ಮಗುವಿಗೆ ತಾಯಿಯ ಎದೆ ಹಾಲುಣಿಸಬೇಕು. ತಾಯಿಯು ೬…
ಚಿಕ್ಕನಾಯಕನಹಳ್ಳಿ ಗ್ರಾಮೀಣ ಭಾಗದ ಪ್ರತಿಯೊಬ್ಬ ವ್ಯಕ್ತಿಗೆ ಸರ್ಕಾರದಿಂದ ಶುದ್ಧ ಕುಡಿಯುವ ನೀರನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಜಲ ಜೀವನ್ ಮಿಷನ್ ( ಜೆಜೆಎಂ) ಮತ್ತು ಸ್ವಚ್ಛ ಭಾರತ್ ಮಿಷನ್ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಚಿಕ್ಕನಾಯಕನಹಳ್ಳಿ ಕ್ಷೇತ್ರದ ಮಾನ್ಯ ಶಾಸಕರಾದ ಸುರೇಶ್ ಬಾಬು ಅವರು ಸೂಚಿಸಿದರು. ನಗರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರದಂದು (೦೩-೦೮-೨೦೨೩) ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ , ತುಮಕೂರು ವಿಭಾಗ, ಜಲ ಜೀವನ್ ಮಿಷನ್ (ಜೆಜೆಎಂ) ಹಾಗೂ ಅನುಷ್ಠಾನ ಬೆಂಬಲ ಸಂಸ್ಥೆಯಾದ “ಸ್ನೇಹ ಜೀವನ ಫೌಂಡೇಷನ್ (ರಿ) ಸಹಯೋಗದೊಂದಿಗೆ “ ನೀರು ಮತ್ತು ನೈರ್ಮಲ್ಯ ಕುರಿತು ಕಾರ್ಯಗಾರ”ರ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈ ಯೋಜನೆ ಅಂಶಗಳ ಅನುಗುಣವಾಗಿ ಸಂಬAಧಿಸಿದ ಅಧ್ಯಕ್ಷರು ಹಾಗೂ ಪಂಚಾಯತಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಿಳಿಸಿದರು. ತಾಲ್ಲೂಕು ಪಂಚಾಯತ್ , ಕಾರ್ಯನಿರ್ವಾಹಕ ಅಧಿಕಾರಿಗಳಾದ ವಸಂತ್ ಕುಮಾರ್ ಅವರು ಮಾತನಾಡಿ, ಜಲಜೀವನ್ ಮಿಷನ್ ಎಂಬುದು ಮಹತ್ವಾಕಾಂಕ್ಷೆ ಹೊಂದಿರುವ ಯೋಜನೆಯಾಗಿದೆ. ಮೊದಲ…
ಆರ್. ರೂಪಕಲಾ ವಾರ್ತಾ ಇಲಾಖೆ, ತುಮಕೂರು ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ರಾಜ್ಯದಾದ್ಯಂತ ಉಚಿತವಾಗಿ ಪ್ರಯಾಣಿಸಲು ಮಹಿಳಾ ಪ್ರಯಾಣಿಕರಿಗಾಗಿ ಜೂನ್ ೧೧ ರಿಂದ ಜಾರಿಗೆ ತಂದಿರುವ ಮಹತ್ವಪೂರ್ಣ ಶಕ್ತಿ ಯೋಜನೆಯಿಂದ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ವಿಭಾಗವು ೨೪.೪೨ ಕೋಟಿ ರೂ. ಆದಾಯವನ್ನು ಗಳಿಸಿದೆ. ೨ ತಿಂಗಳಲ್ಲಿ ೨೪ ಕೋಟಿ ರೂ. ಆದಾಯ ಯೋಜನೆ ಜಾರಿಗೊಂಡ ದಿನದಿಂದ ಜೂನ್ ಮಾಹೆಯಲ್ಲಿ ನಿರ್ವಾಹಕರು ವಿತರಿಸಿರುವ ಶೂನ್ಯ(೦) ಟಿಕೇಟ್‌ಗಳಿಂದ ತುಮಕೂರು ವಿಭಾಗದ ವಾಹನಗಳಲ್ಲಿ ೨೯.೭೩ ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಸುಮಾರು ೮,೩೨,೯೯,೪೬೪ ರೂ.ಗಳಷ್ಟು ಸಾರಿಗೆ ಆದಾಯ ಹಾಗೂ ಜುಲೈ ಮಾಹೆಯಲ್ಲಿ ೫೭.೯೭ ಲಕ್ಷ ಮಹಿಳೆಯರು ಪ್ರಯಾಣಿಸಿದ್ದು, ಸುಮಾರು ೧೬,೦೯,೫೯,೪೬೦ ರೂ.ಗಳಷ್ಟು ಸಾರಿಗೆ ಆದಾಯ ಬಂದಿದೆ. ಒಟ್ಟಾರೆ ಜೂನ್ ಮತ್ತು ಜುಲೈ ಮಾಹೆಯಲ್ಲಿ ೮೭.೭೧ ಲಕ್ಷ ಮಹಿಳೆಯರು ಬಸ್ಸುಗಳಲ್ಲಿ ಪ್ರಯಾಣಿಸಿ ನಿಗಮಕ್ಕೆ ೨೪,೪೨,೫೮,೯೨೪ ರೂ.ಗಳಷ್ಟು ಆದಾಯ ತಂದುಕೊಟ್ಟಿದ್ದಾರೆ. ಯೋಜನೆ ಜಾರಿಗೆ ಬರುವ ಮುನ್ನ ಪ್ರತಿ ಮಾಹೆ ನಿಗಮಕ್ಕೆ ಪ್ರತೀ…
ತುಮಕೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿಗಳು ಮತ್ತು ಖಾಯಂ ಜನತಾ ನ್ಯಾಯಾಲಯಗಳಲ್ಲಿ ಜಿಲ್ಲೆಯಾದ್ಯಂತ ಸೆಪ್ಟಂಬರ್ ೧೧ ರಂದು ರಾಷ್ಟಿçÃಯ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಗೀತಾ ಕೆ.ಬಿ ಅವರು ತಿಳಿಸಿದರು. ಉಚ್ಚ ನ್ಯಾಯಾಲದ ನ್ಯಾಯಾಧೀಶರು ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ನ್ಯಾ.ಜಿ,ನರೇಂದರ್ ಇವರ ನಿರ್ದೇಶನಂತೆ ಜಿಲ್ಲೆಯಾದ್ಯಂತ ಎಲ್ಲಾ ನ್ಯಾಯಾಲಯಗಳಲ್ಲಿ ಹಮ್ಮಿಕೊಂಡಿರುವ ರಾಷ್ಟೀಯ ಜನತಾ ನ್ಯಾಯಾಲಯದ ಪ್ರಯುಕ್ತ ಇಂದು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು. ಪ್ರಾಚೀನ ಭಾರತ ಸಂಸ್ಕೃತಿಯಲ್ಲಿ ಲೋಕ ಆದಾಲತ್ ಪರಿಕಲ್ಪನೆ ಮೂಲ ಹುಡುಕಬಹುದಾಗಿದ್ದು, ಅಂದು ದೇಶದ ಎಲ್ಲಾ ಗ್ರಾಮಗಳಲ್ಲಿ ಪಂಚಾಯಿತಿ ವ್ಯವಸ್ಥೆ ಮೂಲಕ ಯಾವುದೇ ಶುಲ್ಕವಿಲ್ಲದೆ ತ್ವರಿತವಾಗಿ ತೀರ್ಪುಗಳನ್ನು ನೀಡಲಾಗುತ್ತಿತ್ತು, ಈ ವ್ಯವಸ್ಥೆ ಇಂದು ಕಾನೂನು ರೂಪ ಪಡೆದಿದೆ ಎಂದರು. ಸೆಪ್ಟಂಬರ್ ೧೧ ರಂದು ನಡೆಯುವ ಲೋಕ…
ತುಮಕೂರು ತುಮಕೂರು ಮೂಲಕ ಹಾದುಹೋಗುವ ಬೆಂಗಳೂರು-ಪುಣೆ ಮಾರ್ಗದ ನಡುವಿನ ರಾಷ್ಟ್ರೀಯ ಹೆದ್ದಾರಿ ೪೮ರಲ್ಲಿ ಕಳೆದ ಒಂದು ವರ್ಷದಲ್ಲಿ ೭೫೦ಕ್ಕೂ ಹೆಚ್ಚು ಅಪಘಾತ ಸಂಭವಿಸಿರುವ ಹಿನ್ನೆಲೆಯಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ರಸ್ತೆ ವೀಕ್ಷಿಸಿದರು. ತುಮಕೂರು ಜಿಲ್ಲೆಯಲ್ಲಿ ಸಂಚಾರ ವ್ಯವಸ್ಥೆಯ ಬಗ್ಗೆ ಸಾಕಷ್ಟು ದೂರುಗಳಿರುವ ಹಿನ್ನೆಲೆಯಲ್ಲಿ ಬುಧವಾರ ಜಿಲ್ಲೆಗೆ ಭೇಟಿ ನೀಡಿರುವ ಅವರು, ಪೊಲೀಸರಿಗೆ ಮಾರ್ಗದರ್ಶನ ನೀಡಿದರು. ದಂಡ ವಸೂಲಿಯೇ ಪ್ರಮುಖ ಕರ್ತವ್ಯವಾಗದೆ ಅಪಘಾತ ಪ್ರಕರಣಗಳನ್ನು ಕಡಿಮೆಯಾಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಪೊಲೀಸ್ ಅಧೀಕ್ಷಕ ರಾಹುಲ್‌ಕುಮಾರ್ ಷಹಪುರವಾಡ್ ಇದ್ದರು.











