Author: News Desk Benkiyabale

ತುಮಕೂರು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಅಮಾನುಷ ಹತ್ಯೆ ಖಂಡಿಸಿ ಶ್ರೀದಿಗಂಬರ ಜೈನ ಶ್ರೀಪಾರ್ಶ್ವನಾಥ ಸ್ವಾಮಿ ಜೀನ ಮಂದಿರ(ರಿ), ತುಮಕೂರು ಜಿಲ್ಲಾ ಜೈನ ಒಕ್ಕೂಟ ಹಾಗೂ ಜೈನ ಸಮುದಾಯದ ವತಿಯಿಂದ ನಗರದಲ್ಲಿಂದು ಮೌನ ಪ್ರತಿಭಟನೆ ನಡೆಸಿ, ಕೊಲೆಗಡುಕರನ್ನು ಬಂಧಿಸುವAತೆ ಒತ್ತಾಯಿಸಿದ ಮನವಿಯನ್ನು ಸಲ್ಲಿಸಲಾಯಿತು. ನಗರದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಮಹಾವೀರ ಭವನದ ಮುಂಭಾಗದಲ್ಲಿ ಜಮಾಯಿಸಿದ ಜೈನ ಸಮುದಾಯದ ನರಸಿಂಹರಾಜಪುರದ ಶ್ರೀಲಕ್ಷಿö್ಮಸೇನ ಭಟ್ಟಾಕರಸ್ವಾಮಿಗಳ ನೇತೃತ್ವದಲ್ಲಿ ನಗರದ ಬಿ.ಹೆಚ್.ರಸ್ತೆ, ಎಂ.ಜಿ.ರಸ್ತೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಮೌನ ಮೆರವಣಿಗೆ ನಡೆಸಿ,ಶ್ರೀಕಾಮಕುಮಾರ ನಂದಿ ಸ್ವಾಮೀಜಿಗಳ ಹತ್ಯೆಯನ್ನು ಖಂಡಿಸಿ, ಕೂಡಲೇ ಕೊಲೆ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಸಮಾವೇಶಗೊಂಡ ಜೈನ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ನರಸಿಂಹರಾಜಪುರದ ಶ್ರೀಲಕ್ಷಿö್ಮಸೇನ ಭಟ್ಟಾಕರ ಸ್ವಾಮಿಗಳು,ಅತ್ಯಂತ ಅಹಿಂಸಾತ್ಮಕ ರೀತಿಯಲ್ಲಿ ಮುನಿಶ್ರೀಗಳ ಶರೀರವನ್ನು ವಿಕೃತಗೊಳಿಸಿ ಕೊಲೆ ಮಾಡಿರುವುದು ಅತ್ಯಂತ ಹೇಯ ಕೃತ್ಯ. ಇಂತಹ ಕೃತ್ಯವನ್ನು ಜೈನ ಸಮಾಜ ಹಾಗೂ ಜೈನಮಠಗಳು…

Read More

ಗುಬ್ಬಿ ಕಳೆದ ಒಂದು ವರ್ಷದಲ್ಲಿ ಕೊಬ್ಬರಿಧಾರಣೆ ಇಳಿಕೆ ಕಂಡು ರೈತರ ಬದುಕಿನಲ್ಲಿ ದೊಡ್ಡ ಆರ್ಥಿಕ ಪೆಟ್ಟು ನೀಡಿದಂತಾಗಿದೆ. ಕೊಬ್ಬರಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ ಕನಿಷ್ಠ ೨೦ ಸಾವಿರ ರೂಗಳನ್ನು ಬೆಂಬಲ ಬೆಳೆಯಾಗಿ ನೀಡಬೇಕು. ಕೂಡಲೇ ಕೊಬ್ಬರಿ ಬೆಲೆ ಇಳಿಕೆಗೆ ಕಾರಣವಾದ ಅಂಶಗಳನ್ನು ಗುರುತಿಸಿ ವರ್ಷ ಪೂರ್ತಿ ನಿಗದಿ ಬೆಲೆಗೆ ಕೊಬ್ಬರಿ ಖರೀದಿ ಮಾಡಬೇಕು. ಇವೆಲ್ಲಕ್ಕೂ ಸರ್ಕಾರ ಕೂಡಲೇ ಉತ್ತರಿಸಬೇಕು ಎಂದು ಆಗ್ರಹಿಸಿ ರೈತಸಂಘದ ನೂರಾರು ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣ ಬಳಿ ಪ್ರತಿಭಟನೆ ನಡೆಸಿದರು. ರಾಜ್ಯದ ೧೩ ಕ್ಕೂ ಅಧಿಕ ಜಿಲ್ಲೆಯಲ್ಲಿ ಕೃಷಿಕರ ಪ್ರಮುಖ ಬೆಳೆ ಎನಿಸಿರುವ ತೆಂಗು ಲಕ್ಷಾಂತರ ಕುಟುಂಬಕ್ಕೆ ಆಧಾರವಾಗಿದೆ. ಗುಬ್ಬಿ ತಾಲ್ಲೂಕಿನಲ್ಲಿ ೩೭ ಸಾವಿರ ಹೆಕ್ಟೇರ್ ಪ್ರದೇಶ ತೆಂಗು ಇದ್ದು, ೩೦ ಸಾವಿರಕ್ಕೂ ಅಧಿಕ ಕುಟುಂಬ ಕೊಬ್ಬರಿ ನಂಬಿ ಬದುಕು ನಡೆಸಿದೆ. ಅತಿವೃಷ್ಠಿ ಅನಾವೃಷ್ಟಿ, ರೋಗ ರುಜಿನಗಳಿಗೆ ತುತ್ತಾದ ತೆಂಗು ಕಡಿಮೆ ಇಳುವರಿ ನೀಡುತ್ತದೆ. ಇಂತಹ ಸಂದರ್ಭದಲ್ಲಿ ಕೊಬ್ಬರಿ ಬೆಲೆ ಕುಸಿತ ತೀವ್ರ ಸಂಕಷ್ಟ ತಂದಿದೆ.…

Read More

ತುಮಕೂರು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿರುವ ಎಲ್ಲಾ ೧೫೮೬ ಕುಡಿಯುವ ನೀರಿನ ಆರ್.ಓ. ಪ್ಲಾಂಟ್‌ಗಳನ್ನು ಸಂಬAಧಿಸಿದ ಗ್ರಾಮ ಪಂಚಾಯಿತಿಗಳೇ ನಿರ್ವಹಣೆ ಮಾಡಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿಯಲ್ಲಿ÷ ತಮ್ಮ ಕೊಠಡಿಯಲ್ಲಿ ಸೋಮವಾರ ಸಂಜೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಆರ್.ಓ. ಪ್ಲಾಂಟ್‌ಗಳನ್ನು ಖಾಸಗಿ ಏಜೆನ್ಸಿಗಳು ನಿರ್ವಹಣೆ ಮಾಡುತ್ತಿದ್ದಲ್ಲಿ ಕೂಡಲೇ ಆಯಾ ಗ್ರಾಮಪಂಚಾಯಿತಿಗೆ ಹಸ್ತಾಂತರಿಸಬೇಕು ಎಂದರಲ್ಲದೆ ಜಿಲ್ಲೆಯಲ್ಲಿರುವ ಆರ್.ಓ. ಪ್ಲಾಂಟ್‌ಗಳ ಸಣ್ಣ-ಪುಟ್ಟ ದುರಸ್ತಿಯನ್ನು ಸಂಬAಧಿಸಿದ ಪಂಚಾಯತಿಯವರೇ ನಿರ್ವಹಿಸಬೇಕು ಎಂದು ಸೂಚಿಸಿದರು. ಜಿಲ್ಲೆಯಲ್ಲಿ ಸಾಂಕ್ರಾಮಿಕವಲ್ಲದ ರೋಗ ಗಳನ್ನು ಪತ್ತೆ ಹಚ್ಚಲು ಆಶಾ/ಅಂಗನವಾಡಿ ಕಾರ್ಯಕರ್ತರನ್ನು ಬಳಸಿಕೊಂಡು ಮನೆ-ಮನೆ ಭೇಟಿ ನೀಡುವ ಕಾರ್ಯಕ್ರಮವನ್ನು ತಕ್ಷಣವೇ ಪ್ರಾರಂಭಿಸಬೇಕು. ಗ್ರಾಮೀಣ ಭಾಗದಲ್ಲಿ ಪ್ರತಿ ೩ ತಿಂಗಳಿಗೊಮ್ಮೆ ೩೦ ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಪೂರ್ಣ ಆರೋಗ್ಯ ತಪಾಸಣೆಯಾಗಬೇಕು ಎಂದು ತಾಕೀತು ಮಾಡಿದರಲ್ಲದೆ, ಈ ತಪಾಸಣೆಯಲ್ಲಿ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಹಾಗೂ…

Read More

ತುಮಕೂರು ಹನುಮಂತಪುರದ ಶ್ರೀಪೇಟೆಮಾತೆ ಕೊಲ್ಲಾಪುರದಮ್ಮ ಮತ್ತು ಶ್ರೀಕರುಗಲಮ್ಮ ಜಾತ್ರಾ ಮಹೋತ್ಸವ ಜುಲೈ ೧೦ ರಿಂದ ೧೪ರವರೆಗೆ ನಡೆಯಲಿದೆ ಎಂದು ಅಗ್ನಿಕುಲ ತಿಗಳ ಜನಾಂಗದ ಅಧ್ಯಕ್ಷರಾದ ಟಿ.ಹೆಚ್.ಹನುಮಂತರಾಜು ತಿಳಿಸಿದ್ದಾರೆ. ಹನುಮಂತಪುರದ ಶ್ರೀಕೊಲ್ಲಾಪುರದಮ್ಮ ದೇವಾಲಯದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಆಷಾಡ ಮಾಸದಲ್ಲಿ ಪೇಟೆ ಶ್ರೀಕೊಲ್ಲಾಪುರದಮ್ಮ ಮತ್ತು ಶ್ರೀಕರುಗಲಮ್ಮ ದೇವಿಯ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ.ಜುಲೈ ೧೦ ರಂದು ಮಧ್ಯಾಹ್ನ ೩ ಗಂಟೆಗೆ ಶ್ರೀರಾಮನಗರದಲ್ಲಿ ನೆಲೆಸಿರುವ ಪೇಟೆ ಶ್ರೀಕೊಲ್ಲಾಪುರ ದಮ್ಮ ಮತ್ತು ಕರುಗಲಮ್ಮ ದೇವಸ್ಥಾನದಿಂದ ೫೦ಕ್ಕೂ ಹೆಚ್ಚು ಕಲಾತಂಡಗಳ ಪ್ರದರ್ಶನ ಮತ್ತು ಮೆರವಣಿಗೆ ಮೂಲಕ ತಂದು ಹನುಮಂತಪುರದ ಕೊಲ್ಲಾಪುರದಮ್ಮ ದೇವಾಲಯಕ್ಕೆ ತರಲಾಗುವುದು.ದೇವಿಯ ಉತ್ಸವಕ್ಕೆ ಮಾಜಿ ಯಜಮಾನರಾದ ಟಿ.ಎಲ್.ಹನುಮಣ್ಣ,ಪತ್ರಕರ್ತರಾದ ಎಸ್.ನಾಗಣ್ಣ,ಉಪಮಹಾಪೌರರಾದ ಟಿ.ಕೆ.ನರಸಿಂಹಮೂರ್ತಿ,ಪಾಲಿಕೆ ಸದಸ್ಯರಾದ ಎ.ಶ್ರೀನಿವಾಸ್, ಲಲಿತಾ ರವೀಶ್, ಶಶಿಕಲಾ ಗಂಗಹನುಮಯ್ಯ, ಮಾಜಿ ಸದಸ್ಯರಾದ ಟಿ.ಹೆಚ್.ವಾಸುದೇವ, ಟಿ.ಹೆಚ್.ಬಾಲಕೃಷ್ಣ, ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್.ಸಿ.ಆಂಜನಪ್ಪ ಭಾಗವಹಿಸುವರು ಎಂದು ವಿವರ ನೀಡಿದರು. ತುಮಕೂರು ಉಪಮಹಾಪೌರ ಟಿ.ಕೆ.ನರಸಿಂಹಮೂರ್ತಿ ಮಾತನಾಡಿ,ಜುಲೈ ೧೧ರ ಮಂಗಳವಾರ ಸಂಜೆ ಐದು ಗಂಟೆಗೆ ಹನುಮಂತಪುರದ ಶ್ರೀಕೊಲ್ಲಾಪುರದಮ್ಮ…

Read More

ತುಮಕೂರು ಜಿಲ್ಲಾ ಭೋವಿ ಸಂಘ(ರಿ)ವತಿಯಿAದ ಜುಲೈ ೨೩ರ ಭಾನುವಾರ ಚಿಕ್ಕನಾಯಕನಹಳ್ಳಿ ಪಟ್ಟಣದ ಕನ್ನಡ ವೇದಿಕೆ ಸಭಾಂಗಣದಲ್ಲಿ ಭೋವಿ ಗುರುಪೀಠದ ಜಗದ್ಗುರು ಶ್ರೀಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ ೩೮ನೇ ಜನ್ಮ ವರ್ಧಂತಿಯ ಅಂಗವಾಗಿ ಗುರುವಂದನಾ ಮತ್ತು ಸಮುದಾಯದ ನೂತನ ಶಾಸಕರುಗಳಿಗೆ ಅಭಿನಂದನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಭೋವಿ ಸಂಘದ ಜಿಲ್ಲಾಧ್ಯಕ್ಷ ಓಂಕಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಕಲ್ಲು ಒಡೆಯುವ,ಮಣ್ಣಿನ ಕೆಲಸ ಮತ್ತಿತರರ ಶ್ರಮಿಕ ಕೆಲಸಗಳಲ್ಲಿ ನಿರತವಾಗಿರುವ ಭೋವಿ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ತುಮಕೂರು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನಮ್ಮ ಗುರುಗಳಾದ ಶ್ರೀಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿಗಳ ಗುರುವಂಧನಾ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದು,ಇದರ ಜೊತೆಗೆ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ ಶಾಸಕರು, ಸಚಿವರುಗಳನ್ನು ಅಭಿನಂದಿಸುವ ಹಾಗೂ ನಗದು ಪುರಸ್ಕಾರದೊಂದಿಗೆ ಪ್ರತಿಭಾನ್ವಿತ ಮಕ್ಕಳನ್ನು ಸಹ ಸನ್ಮಾನಿಸುವ ಮೂಲಕ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಜಿಲ್ಲಾ ಭೋವಿ ಸಂಘ ಹೊಂದಿದೆ ಎಂದರು. ತುಮಕೂರು ಜಿಲ್ಲಾ ಭೋವಿ ಸಂಘದವತಿಯಿAದ ೨೦೨೧ರಲ್ಲಿ ಗಾಜಿನಮನೆಯಲ್ಲಿ, ೨೦೨೨ರಲ್ಲಿ…

Read More

ತುಮಕೂರು ಶ್ರೀಮಠದಲ್ಲಿ ನಿರ್ಮಾಣವಾಗಲಿರುವ ವಿದ್ಯಾರ್ಥಿನಿಲಯದ ಕಟ್ಟಡದ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ನಗರದ ಸಿದ್ದಗಂಗಾ ಮಠದ ಆವರಣದಲ್ಲಿ ೯ ಕೋಟಿ ೯೦ ಲಕ್ಷ ರೂ. ವೆಚ್ಚದ ವಿದ್ಯಾರ್ಥಿನಿಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶ್ರೀಗಳು, ಸರ್ಕಾರ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣಕ್ಕೆ ೯.೯೦ ಕೋಟಿ ರೂ. ಅನುದಾನ ನೀಡಿದೆ. ಇದರಿಂದ ಬಡ ಮಕ್ಕಳ ವಿದ್ಯಾಭ್ಯಾಸ ಮತ್ತಷ್ಟು ಅನುಕೂಲವಾದಂತಾಗುತ್ತಿದೆ ಎಂದರು. ಹಾಸ್ಟೆಲ್ ಕಟ್ಟಡವನ್ನು ಗುಣಮಟ್ಟದ ಕಾಮಗಾರಿಯೊಂದಿಗೆ ನಿರ್ಮಿಸುವಂತೆ ಭವಿಷ್ಯ ಬಿಲ್ಡ್ ಕಾರ್ಕ್ನ ಶ್ರೀನಿವಾಸ್ ಅವರಿಗೆ ತಿಳಿಸಿದರು. ಶ್ರೀಮಠದಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆಗೆ ೯.೯೦ ಕೋಟಿ ಅನುದಾನ ನೀಡಿರುವ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಶಾಸಕರಾದ ಬಿ. ಸುರೇಶ್‌ಗೌಡ, ಜ್ಯೋತಿಗಣೇಶ್, ಮೈದಾಳ ಗ್ರಾ.ಪಂ. ಅಧ್ಯಕ್ಷೆ ಮಾಲಾ ಮಂಜುನಾಥ್, ಜಿ.ಪಂ. ಮಾಜಿ ಸದಸ್ಯ ಜಿ.ಎಸ್. ಶಿವಕುಮಾರ್, ಭವಿಷ್ಯ ಬಿಲ್ಡ್ ಕಾರ್ಕ್ನ ಶ್ರೀನಿವಾಸ್, ಹೊನ್ನೇಶಕುಮಾರ್ ಹಾಗೂ ಮತ್ತಿತರರ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ತುಮಕೂರು ಸಮಾಜದಲ್ಲಿ ಇರುವ ಪ್ರತಿಯೊಬ್ಬರೂ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ ಕೊಳ್ಳಬೇಕೆಂದು ಶ್ರೀ ಅಟವಿ ಜಂಗಮ ಸುಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಅಟವೀ ಶಿವಲಿಂಗ ಮಹಾಸ್ವಾಮಿಗಳು ಕರೆ ನೀಡಿದರು. ತಾಲೂಕಿನ ಚಿಕ್ಕತೊಟ್ಲುಕೆರೆ ಶ್ರೀ ಅಟವಿ ಜಂಗಮ ಸುಕ್ಷೇತ್ರದಲ್ಲಿ ಭಾನುವಾರ ಏರ್ಪಡಿಸಿದ್ದ ಭಕಿ ನಮನ ಹಾಗೂ ಗುರುರಕ್ಷೆ ಕಾರ್ಯಕ್ರಮದ ದಿವ್ಯ ಸಾನಿದ್ಯವಹಿಸಿ ನೆರೆದಿದ್ದ ಅಪಾರ ಭಕ್ತರಿಗೆ ಆಶೀರ್ವಚನ ನೀಡುತ್ತಾ ಸಮಾಜದಲ್ಲಿ ಮಾನವೀಯ ಮೌಲ್ಯಗಳೇ ಕಡಿಮೆ ಯಾಗುತ್ತಿದೆ ಅದು ಆಗದಂತೆ ಮಾನವೀಯತೆ ಎನ್ನುವುದನ್ನು ಯಾರೂ ಮರೆಯಬಾರದು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ನುಡಿದರು. ಹನ್ನೆರಡನೇ ಶತಮಾನದಲ್ಲಿ ಸಮಾಜದಲ್ಲಿ ಬದಲಾವಣೆ ತರಲು ಬಸವಣ್ಣ ನವರು ಸೇರಿದಂತೆ ಅನೇಕ ಶರಣರು ಪ್ರಯತ್ನ ಪಟ್ಟರು, ಕಾಯಕ ದಾಸೋಹದ ಮೂಲಕ ಸಮಾಜದಲ್ಲಿ ಸಮಸಮಾಜ ತರುವ ಪ್ರಯತ್ನ ನಡೆಸಿದರು, ಬಸವಣ್ಣ ನವರ ಹಾದಿಯಲ್ಲಿ ಅನೇಕ ಶರಣರು ಸಮಾಜವನ್ನು ಮುನ್ನೆಡಿಸಿದ್ದಾರೆ ಎಂದು ನುಡಿದರು. ಶ್ರೀ ಅಟವಿ ಜಂಗಮ ಮಠವು ನಾಡಿನ ಪ್ರಸಿದ್ಧ ಮಠಗಳಲ್ಲಿ ಒಂದಾಗಿದೆ, ಈ ಮಠಕ್ಕೆ ೬೦೦ ವರ್ಷಗಳ ಇತಿಹಾಸವಿದೆ, ಪ್ರಾಚೀನ…

Read More

ತುಮಕೂರು ರಾಜ್ಯದಲ್ಲಿ ಸಿದ್ದರಾಮಯ್ಯನವರು ೨ನೇ ಬಾರಿಗೆ ಮುಖ್ಯಮಂತ್ರಿಯಾಗಲಿ ಎಂದು ಸಂಕಲ್ಪ ಮಾಡಿದ್ದ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಗ್ರಾಮದ ಶ್ರೀ ಜಗದ್ಗುರು ರೇವಣ್ಣ ಸಿದ್ದೇಶ್ವರ ಸಿಂಹಾಸನ ಮಹಾಸಂಸ್ಥಾನ ಮಠಾಧ್ಯಕ್ಷರಾದ ಶ್ರೀ ಶರಭಯ್ಯ ಸ್ವಾಮೀಜಿ ತಮ್ಮ ಸಂಕಲ್ಪ ಈಡೇರಿರುವ ಹಿನ್ನೆಲೆಯಲ್ಲಿ ಮನಗೂಳಿಯಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ಕೈಗೊಂಡಿದ್ದಾರೆ. ಸಿದ್ದರಾಮಯ್ಯನವರು ಮತ್ತೊಮ್ಮೆ ಮುಖ್ಯಮಂತ್ರಿಯಾಗುವAತೆ ಶ್ರೀ ರೇವಣಸಿದ್ದೇಶ್ವರರಲ್ಲಿ ಮಾಡಿದ್ದ ಸಂಕಲ್ಪ ಈಡೇರಿರುವುದರಿಂದ ಹರಕೆ ತೀರಿಸುವ ಸಲುವಾಗಿ ಶ್ರೀಗಳು ಕೈಗೊಂಡಿರುವ ಪಾದಯಾತ್ರೆ ತುಮಕೂರು ತಲುಪಿದ್ದು, ನೆಲಮಂಗಲದ ಮೂಲಕ ಬೆಂಗಳೂರಿನತ್ತ ಹೆಜ್ಜೆ ಹಾಕಿದ್ದಾರೆ. ನಗರದ ಸಿರಾ ಗೇಟ್‌ನಲ್ಲಿರುವ ಕಾಳಿದಾಸ ಪ್ರೌಢಶಾಲೆಗೆ ಪಾದಯಾತ್ರೆಯಲ್ಲಿ ಆಗಮಿಸಿದ ಶ್ರೀಗಳನ್ನು ಬಿಂದುಶೇಖರ ಸ್ವಾಮೀಜಿಯವರು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮನಗೂಳಿಯ ಶ್ರೀ ಶರಭಯ್ಯ ಸ್ವಾಮೀಜಿ ಅವರು, ಸಿದ್ದರಾಮಯ್ಯನವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಗಳಾಗಬೇಕು ಎಂದು ಜಗದ್ಗುರು ರೇವಣಸಿದ್ದೇಶ್ವರರಲ್ಲಿ ಸಂಕಲ್ಪ ಮಾಡಿದ್ದೆವು. ಅವರ ಕೃಪಾಶೀರ್ವಾದದಿಂದ ಸಿದ್ದರಾಮಯ್ಯನವರು ೨ನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದಾರೆ. ಹಾಗಾಗಿ ಹರಕೆಯ ನಿಮಿತ್ತವಾಗಿ ಮನಗೂಳಿ ಮಠದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸುತ್ತಿರುವುದಾಗಿ ತಿಳಿಸಿದರು. ಮನಗೂಳಿಯಿಂದ…

Read More

ತುಮಕೂರು ವಿದ್ಯಾರ್ಥಿಗಳು ಪರಿಶ್ರಮದ ವ್ಯಾಸಂಗದೊAದಿಗೆ ತಮ್ಮ ಜೀವನವನ್ನು ಉತ್ತಮಪಡಿಸಿಕೊಂಡು ಒಳ್ಳೆಯ ಬದುಕು ರೂಪಿಸಿಕೊಳ್ಳಬೇಕು ಎಂದು ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವಲಿಂಗಪ್ಪ ಕರೆ ನೀಡಿದರು. ನಗರದ ಬಿ.ಹೆಚ್. ರಸ್ತೆ.ಯಲ್ಲಿರುವ ಸರ್ಕಾರಿ ಪ.ಪೂ. ಕಾಲೇಜಿಗೆ ಬೆಂಗಳೂರಿನ ಕೆ.ಪಿ.ಎಂ.ಜಿ. ಸಂಸ್ಥೆಯ ರೈಟ್ ಟು ಲೀವ್ ಸಂಸ್ಥೆಯ ಸಹಯೋಗದಲ್ಲಿ ಕೊಡುಗೆಯಾಗಿ ನೀಡಿದ ೩೦ ಲ್ಯಾಪ್‌ಟಾಪ್ ವಿತರಣೆ ಹಾಗೂ ಕಂಪ್ಯೂಟರ್ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಬಳಕೆ ಕುರಿತು ಹೆಚ್ಚಿನ ಜ್ಞಾನ ಸಂಪಾದನೆಯ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನ ಕೆ.ಪಿಎಂ.ಜಿ. ಸಂಸ್ಥೆಯ ರೈಟ್ ಟು ಲೀವ್ ಸಂಸ್ಥೆಯವರು ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ನೀಡುವ ಮೂಲಕ ಸಹಕಾರಿಯಾಗಿದ್ದಾರೆ. ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಉಚಿತವಾಗಿ ಲ್ಯಾಪ್‌ಟಾಪ್‌ಗಳನ್ನು ನೀಡಿದ ಬೆಂಗಳೂರಿನ ಕೆಪಿಎಂಜಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಕಾಂತ್ ಎನ್.ಡಿ. ಅವರು ಮಾತನಾಡಿ, ವಿದ್ಯಾರ್ಥಿಗಳು ಶ್ರದ್ಧೆ, ಪರಿಶ್ರಮದಿಂದ ವ್ಯಾಸಂಗ ಮಾಡಿ ಬದುಕಿನಲ್ಲಿ ತಮ್ಮ ಗುರಿ ಮುಟ್ಟಬೇಕು ಎಂದು…

Read More

ತುಮಕೂರು ನಗರದ ವಿಭಾಗದಲ್ಲಿಯೂ ಕಾರ್ಮಿಕರ ಕೊರತೆ ಇದೆ. ತಾಂತ್ರಿಕ ಸಿಬ್ಬಂದಿಗಳ ಕೊರತೆ- ಉತ್ತಮ ಗುಣ ಮಟ್ಟದ ಬಿಡಿಬಾಗಗಳು ಸಮಯಕ್ಕೆ ಸರಿಯಾಗಿ ಸರಬರಾಜು ಅಗಲ್ಲ. ಹಳೇ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಾರಿಗೆ ಕಾರ್ಮಿಕರ ಹೆಚ್ಚಿರುವ ಕೆಲಸದ ಹೊರೆಯನ್ನು ಪರಿಗಣಿಸದೆ.ಸೇಡಿನ ಕ್ರಮವಾಗಿ ಶಿಕ್ಷಿಸಲು, ಇಂಕ್ರಿಮೆAಟ್ ಕಡಿತ ಮಾಡಿಸೋದು ಗ್ಲಾಸ್ ಏರ್ ಕ್ರಾಕ್ ಆದಲ್ಲಿ ಚಾಲಕರನ್ನು ಹೊಣೆಗಾರರನ್ನಾಗಿ ಮಾಡಿ ರೂ. ೪೫೦೦ ದಿಂದ ೬೦೦೦ ದವರೆಗೆ ದಂಡ ಹಾಕಿ ಸಂಬಳದಲ್ಲಿ ಕಡಿತ ಮಾಡುತ್ತಾರೆ , ಫಾರಂ ೪ ನ್ನು ಪದೇ- ಪದೇ ಬದಲಾಯಿಸೋದು. ಂ/ಃ ಮಾರ್ಗಗಳನ್ನು ಕಡಿಮೆ ಮಾಡಿ ಕಾರ್ಮಿಕರಿಗೆ ಕೆಲಸದ ಒತ್ತಡ ಹೆಚ್ಚಳ ಮಾಡೋದು. ವಿರೋಧಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘ. ರಿ ಸಿಐಟಿಯು ತುಮಕೂರು ವಿಭಾಗಿಯ ಕಛೇರಿ ಎದುರು ದಿ; ೬-೦೭-೨೦೨೩ರಂದು ಬೆಳಿಗ್ಗೆ- ೧೧ ಗಂಟೆಗೆ ಪತ್ರಿಭಟನೆ ನಡೆಸಿದರು. ಪತ್ರಿಭಟನಾಕಾರರ ಮನವಿ ಸ್ವಿಕರಿದ ವಿಭಾಗಿಯ ನಿಯಂತ್ರಣಾಧಿಕಾರಿಗಳಾದ ಗಜೆಂದ್ರ ಕುಮಾರ್ ಅವರು ಸಮಸ್ಯೆಗಳ ಬಗೆಹರಿಸಲು ಜಂಟಿ ಸಭೆನಡೆಸುವುದಾಗಿ , ಅನ್ಯಾಯದ ಕ್ರಮಗಳು…

Read More